ಮದುವೆಯಾದ ಮೇಲೂ ಸ್ನೇಹಿತರೊಂದಿಗಿನ ನಂಟು ಉಳಿಸಿಕೊಳ್ಳುವುದು ಹೇಗೆ?

|

Updated on: Nov 28, 2023 | 3:36 PM

ಮದುವೆಗೂ ಮುನ್ನ ಎಷ್ಟೇ ಗೆಳೆಯ- ಗೆಳತಿಯರಿದ್ದರೂ ಮದುವೆಯಾದ ನಂತರ ಆ ಗೆಳೆತನವನ್ನು ಹಿಂದಿನಂತೆಯೂ ಮುಂದುವರೆಸಿಕೊಂಡು ಹೋಗುವುದು ಕಷ್ಟ. ಹಾಗಾದರೆ, ಮದುವೆಯಾದ ಬಳಿಕವೂ ಸ್ನೇಹಿತರೊಂದಿಗಿನ ಸಂಬಂಧವನ್ನು ಕಾಪಾಡಿಕೊಳ್ಳುವುದು ಹೇಗೆ? ನಿಮ್ಮ ಸ್ನೇಹದಿಂದ ವೈವಾಹಿಕ ಸಂಬಂಧಕ್ಕೆ ತೊಂದರೆಯಾಗದಂತೆ ಎರಡನ್ನೂ ಸರಿದೂಗಿಸುವುದು ಹೇಗೆ?

ಮದುವೆಯಾದ ಮೇಲೂ ಸ್ನೇಹಿತರೊಂದಿಗಿನ ನಂಟು ಉಳಿಸಿಕೊಳ್ಳುವುದು ಹೇಗೆ?
ಸಾಂದರ್ಭಿಕ ಚಿತ್ರ
Image Credit source: iStock
Follow us on

ಮದುವೆಯಾಗುವುದು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಪ್ರಮುಖ ಘಟನೆಗಳಲ್ಲಿ ಒಂದಾಗಿದೆ. ಆದರೆ, ಮದುವೆಯ ನಂತರದ ಜೀವನವು ಸಾಮಾನ್ಯವಾಗಿ ಚಲನಚಿತ್ರಗಳಲ್ಲಿ ತೋರಿಸುವಂತೆ ಹೂವಿನ ಹಾಸಿಗೆಯಾಗಿರುವುದಿಲ್ಲ. ಮದುವೆಯಾದ ಮೇಲೆ ಅನೇಕ ಜವಾಬ್ದಾರಿಗಳು ಬರುತ್ತವೆ. ನೀವು ಯಾರೊಂದಿಗೆ ಜೀವನ ಕಳೆಯಬೇಕೆಂದು ನಿರ್ಧಾರ ಮಾಡುತ್ತೀರೋ ಅವರೊಂದಿಗೆ ಜೀವಿಸುವುದರಿಂದ ನಿಮ್ಮ ಬೇರೆ ಸಂಬಂಧಗಳು ದೂರವಾಗದಂತೆ ನೋಡಿಕೊಳ್ಳುವುದು ಕೂಡ ಸವಾಲಿನ ಕೆಲಸವೇ.

ಮದುವೆಯ ನಂತರ ನೀವು ಸ್ನೇಹಿತರೊಂದಿಗೆ ಹ್ಯಾಂಗ್ ಔಟ್ ಮಾಡಲು ಅಥವಾ ಅವರೊಂದಿಗೆ ಸಂಪರ್ಕದಲ್ಲಿರಲು ಹೆಚ್ಚು ಸಮಯ ನೀಡಲು ಸಾಧ್ಯವಿಲ್ಲ. ಆದರೆ ಜೀವನದಲ್ಲಿ ಸ್ನೇಹಿತರಿಲ್ಲದೆ ನಾವು ಸಂತೋಷವಾಗಿರಲು ಸಾಧ್ಯವಿಲ್ಲ ಎಂದು ನಮಗೆಲ್ಲರಿಗೂ ತಿಳಿದಿದೆ. ಅಂತಹ ಜೀವನ ನೀರಸವಾಗಿರುತ್ತದೆ. ಆದ್ದರಿಂದ, ಮದುವೆಯ ನಂತರ ನಿಮ್ಮ ಸ್ನೇಹವನ್ನು ಹೇಗೆ ಸಮತೋಲನದಲ್ಲಿಡುವುದು ಎಂಬುದರ ಕುರಿತು ಸಲಹೆಗಳು ಇಲ್ಲಿವೆ.

ಇದನ್ನೂ ಓದಿ: Winter Skin Care: ಚಳಿಗಾಲದಲ್ಲಿ ಚರ್ಮ ಒಡೆಯದಂತೆ ತಡೆಯುವ ಸೂಪರ್​ಫುಡ್​ಗಳಿವು

ಮುಕ್ತ ಸಂವಹನ:

ನಿಮ್ಮ ಅಗತ್ಯತೆಗಳು ಮತ್ತು ಸ್ನೇಹಿತರ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಚರ್ಚಿಸಿ. ನೀವು ಸ್ನೇಹಿತರೊಂದಿಗೆ ಸಮಯ ಕಳೆಯಬೇಕೆಂಬುದರ ಬಗ್ಗೆ ಮುಕ್ತವಾಗಿ ಮಾತನಾಡಿ. ಇದು ಪರಸ್ಪರರ ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಹಳೆಯ ದಿನಗಳನ್ನು ಮೆಲುಕು ಹಾಕಿ:

ನೀವು ನಿಮ್ಮ ಸ್ನೇಹಿತರೊಂದಿಗೆ ಕಳೆದ ಹಳೆಯ ದಿನಗಳನ್ನು ನಿಮ್ಮ ಸಂಗಾತಿಯೊಂದಿಗೆ ಮೆಲುಕು ಹಾಕಿ. ನೀವು ಮತ್ತು ನಿಮ್ಮ ಸಂಗಾತಿ ಇಬ್ಬರೂ ಒಟ್ಟಿಗೆ ಆನಂದಿಸುವ ಸ್ನೇಹವನ್ನು ಬೆಳೆಸಿಕೊಳ್ಳಿ. ಹಾಗೇ, ನಿಮ್ಮ ಸಂಗಾತಿಯನ್ನೂ ಸೇರಿಸಿಕೊಂಡು ನಿಮ್ಮ ಗೆಳೆಯರೊಂದಿಗೆ ಟ್ರಿಪ್, ಗೆಟ್ ಟುಗೆದರ್, ಪಾರ್ಟಿಗಳನ್ನು ಪ್ಲಾನ್ ಮಾಡಿ. ಆಗ ನಿಮ್ಮ ಸ್ನೇಹಿತರ ಬಳಗದಲ್ಲಿ ನಿಮ್ಮ ಸಂಗಾತಿಯೂ ಸೇರಿಕೊಳ್ಳುತ್ತಾರೆ.

ವೈಯಕ್ತಿಕ ಸ್ನೇಹವನ್ನು ಗೌರವಿಸಿ:

ವೈಯಕ್ತಿಕ ಸ್ನೇಹವನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳಿ. ನಿಮ್ಮ ಸ್ನೇಹಿತರೊಂದಿಗೆ ನೀವು ಹೇಗೆ ಸಮಯ ಕಳೆಯಲು ಬಯಸುತ್ತೀರೋ ಹಾಗೇ ನಿಮ್ಮ ಸಂಗಾತಿಯೂ ಸ್ನೇಹಿತರೊಂದಿಗೆ ಇರಲು ಬಯಸುತ್ತಾರೆಂಬುದನ್ನು ಅರ್ಥ ಮಾಡಿಕೊಳ್ಳಿ. ಪರಸ್ಪರರು ಸ್ನೇಹವನ್ನು ಬೇರೆ ರೀತಿ ಅಪಾರ್ಥ ಮಾಡಿಕೊಳ್ಳದಂತೆ ಎಚ್ಚರ ವಹಿಸಿ. ಇಬ್ಬರಲ್ಲೂ ನಂಬಿಕೆ ಇದ್ದರೆ ಈ ರೀತಿಯ ಅಪಾರ್ಥ ಉಂಟಾಗುವುದಿಲ್ಲ.

ಇದನ್ನೂ ಓದಿ: ಒಂದು ಬಿಳಿಕೂದಲು ಕಿತ್ತರೆ ಸುತ್ತಲಿನ ಕೂದಲು ಬಿಳಿಯಾಗುತ್ತಾ?

ಅಗತ್ಯಗಳಿಗೆ ಆದ್ಯತೆ ನೀಡಿ:

ನಿಮ್ಮ ಸಂಗಾತಿಗೆ ಹೇಗೆ ನೀವು ಗುಣಮಟ್ಟದ ಸಮಯವನ್ನು ಮೀಸಲಿಡುತ್ತೀರೋ ಹಾಗೇ ಸ್ನೇಹಿತರಿಗೂ ಒಂದಷ್ಟು ಸಮಯ ಮೀಸಲಿಡಿ. ಈ ಮೂಲಕ ನಿಮಗೆ ಯಾವುದು ಅಗತ್ಯ ಎಂಬುದನ್ನು ನಿರ್ಧರಿಸಿ. ಸ್ನೇಹಿತರೊಂದಿಗೆ ಬೆರೆಯುವ ಮತ್ತು ನಿಮ್ಮ ವೈವಾಹಿಕ ಬಂಧವನ್ನು ಮೇಂಟೇನ್ ಮಾಡುವುದರ ನಡುವೆ ಸಮತೋಲನವನ್ನು ಸಾಧಿಸಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ