ಮನುಷ್ಯನಿಗೆ ಕೋಪವು ಎನ್ನುವುದು ಒಂದು ಪ್ರಬಲವಾದ ಭಾವನೆ. ಅದು ಅನಿಯಂತ್ರಿತ. ಕಾಡಿನಲ್ಲಿ ಕಾಣುವ ಬೆಂಕಿಯಂತೆಯೇ, ಕೋಪ ನಿಯಂತ್ರಣ ಮೀರಿರುತ್ತದೆ. ಕೋಪಗೊಂಡ ವ್ಯಕ್ತಿ ಜೊತೆ ವ್ಯವಹರಿಸಲು ಸಾಕಷ್ಟು ಬುದ್ಧಿವಂತಿಕೆ ಅಗತ್ಯವಿದೆ. ಕೋಪಕ್ಕೆ ಕಾರಣವಾದ ಸಮಸ್ಯೆಗಳನ್ನು ಹೇಗೆ ನಿಭಾಯಿಸಬೇಕು ಅಥವಾ ಸಂಬಂಧದಲ್ಲಿ ಕೋಪ ಮತ್ತು ಹತಾಶೆಯನ್ನು ಹೇಗೆ ನಿಯಂತ್ರಿಸಬೇಕು ಎಂಬುದು ತಿಳಿದಿರಬೇಕು. ಇಲ್ಲವಾದಲ್ಲಿ ಈ ಕಾರಣದಿಂದ ಅನೇಕ ವಿವಾಹಗಳು ಮುರಿದು ಬೀಳುತ್ತವೆ.
ಕೋಪ ಮಾಡಿಕೊಳ್ಳುವ ವ್ಯಕ್ತಿಯನ್ನು ಮದುವೆಯಾದ ಮೇಲೆ ನೀವು ತೆಳುವಾದ ಗಾಜಿನ ಮೇಲೆ ನಿಂತಹಾಗೇ ಭಾಸವಾಗುತ್ತದೆ. ಕೋಪಗೊಂಡ ವ್ಯಕ್ತಿ ಆತನ ಆಕ್ರಮಣಶೀಲತೆಯ ಹಿಂದೆ ನೋವು, ದುರ್ಬಲತೆಯನ್ನು ಮರೆಮಾಚುತ್ತಿರಬಹುದು, ಹಾಗಾಗಿ ಕೋಪದ ಹಿಂದಿನ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಅವರು ಶಾಂತವಾಗಿರುವಾಗ ಅವರೊಂದಿಗೆ ಸಂಭಾಷಣೆ ನಡೆಸಿ ಸಮಸ್ಯೆಗಳನ್ನು ಕಂಡುಹಿಡಿಯಬೇಕು. ಇವೆಲ್ಲವೂ ಸಂಗಾತಿಗೆ ಆರೋಗ್ಯಕರ ಸಂಬಂಧವನ್ನು ನಿರ್ಮಾಣ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಕೋಪ ಸಾಮಾನ್ಯವಾಗಿ ನೋವಿನಿಂದ ಹುಟ್ಟಿಕೊಳ್ಳುತ್ತದೆ ಅಲ್ಲದೆ ಅತಿಯಾಗಿ ಕೋಪಮಾಡಿಕೊಳ್ಳುವವರಿಗೆ ಸಾಕಷ್ಟು ಪ್ರೀತಿಯ ಅಗತ್ಯವಿರುತ್ತದೆ ಏಕೆಂದರೆ ಅವರು ತಮ್ಮನ್ನು ತಾವು ಏಕಾಂಗಿ ಎಂದು ಭಾವಿಸಿರುತ್ತಾರೆ. ಮಾತ್ರವಲ್ಲ, ಹೆಚ್ಚು ಹೆಚ್ಚು ಕೋಪದ ಮಾಡಿಕೊಳ್ಳುವವರು ತಮ್ಮ ಬಗ್ಗೆ, ತಮ್ಮ ಸುತ್ತಮುತ್ತಲಿನ ಬಗ್ಗೆ ನಕಾರಾತ್ಮಕವಾಗಿಯೇ ಮೊದಲು ಯೋಚಿಸುತ್ತಾರೆ. ಹಾಗಾಗಿ ಸಾಧ್ಯವಾದಷ್ಟು ಪ್ರೀತಿ ಕೊಡಿ.
ಕೋಪ ನಿಯಾಂತ್ರಿಸುವುದು ಕಷ್ಟ. ಏನು ಹೇಳಬೇಕು. ಯಾವ ಕ್ಷಣದಲ್ಲಿ ಏನು ಮಾತನಾಡಬೇಕು? ಎನ್ನುವುದು ತಲೆಗೆ ತೋಚುವುದೇ ಇಲ್ಲ. ಆಗ ನೀವು ಕೈ ಚೆಲ್ಲಿ ಕುಳಿತುಕೊಳ್ಳುವುದಕ್ಕಿಂತ ನಿಮ್ಮ ಸಂಬಂಧದ ಮೇಲೆ ನಂಬಿಕೆ, ವಿಶ್ವಾಸ ಮೂಡಿಸಬಹುದು. ಆಗ ಅದು ಖಂಡಿತವಾಗಿಯೂ ಬಲಗೊಳ್ಳುತ್ತದೆ.ಕೋಪ ಸಾಕಷ್ಟು ನಕಾರಾತ್ಮಕತೆಯನ್ನು ಹುಟ್ಟುಹಾಕುತ್ತದೆ ಆದರೆ ಅದನ್ನು ನೀವು ಪ್ರೀತಿಯಿಂದ ನಿರ್ವಹಿಸಬೇಕು. ಆಗ ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಬಂಧ ಉತ್ತಮವಾಗಿ ಬದಲಾಗುವುದು ಖಚಿತ.
ಇದನ್ನೂ ಓದಿ: ತಂಪು ಪ್ರದೇಶದಲ್ಲಿ ವಾಸಿಸುವ ಪುಟ್ಟ ಪೆಂಗ್ವಿನ್ ಜಗತ್ತು ಬಲು ವಿಸ್ಮಯ
ಕೋಪಗೊಂಡ ಗಂಡನೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದು ಒಂದು ರಹಸ್ಯವಿದ್ದಂತೆ ಅದನ್ನು ಕಲಿಯಬೇಕು. ಈ ರಹಸ್ಯ ತುಂಬಾ ಸರಳ. ಹಾಗಾಗಿ ನಿಮ್ಮ ಶಾಂತತೆ ಮತ್ತು ಸಂಯಮವನ್ನು ಕಾಪಾಡಿಕೊಳ್ಳಿ. ಇದನ್ನುಕಾಪಾಡಿಕೊಳ್ಳುವುದು ಸುಲಭವಲ್ಲ. ವಿಶೇಷವಾಗಿ ನೀವು ಕೋಪಗೊಂಡ ಸಂಗಾತಿಯೊಂದಿಗೆ ವ್ಯವಹರಿಸುವಾಗ ಮತ್ತು ಅವರು ನಿಮ್ಮ ಮೇಲೆ ವಾಗ್ದಾಳಿ ನಡೆಸುತ್ತಿರುವಾಗ ನೀವು ಶಾಂತವಾಗಿರಲು ಸಾಧ್ಯವಾದರೆ, ನಿಮ್ಮ ಸಂಗಾತಿಯು ಆ ಪ್ರಕೋಪದಿಂದ ಬೇಗನೆ ಹೊರಬರುತ್ತಾರೆ. ಶಾಂತವಾಗಿರುವುದು ಆ ಕ್ಷಣದ ತಾತ್ಕಾಲಿಕ ತಂತ್ರವಾಗಿದೆ. ಪರಸ್ಪರ ಕಿರುಚಿ ಕೂಗಾಡಿದರೆ ಒಳ್ಳೆಯ ಪ್ರತಿಫಲ ಖಂಡಿತ ದೊರೆಯುವುದಿಲ್ಲ.
ಕೋಪಗೊಂಡ ಸಂಗಾತಿಯೊಂದಿಗೆ ನೀವು ಅದೇ ರೀತಿಯಲ್ಲಿ ಕೋಪಮಾಡಿಕೊಂಡು ವ್ಯವಹರಿಸುವುದು ಇಬ್ಬರಿಗೂ ಒಳ್ಳೆಯದಲ್ಲ. ನಿಮ್ಮ ಸಂಗಾತಿಯ ಕೋಪಕ್ಕೆ ಪ್ರತಿಕ್ರಿಯೆಯಾಗಿ ಕೋಪಗೊಳ್ಳುವುದು ನಿಜವಾಗಿಯೂ ಪ್ರತಿಕೂಲ ಪರಿಣಾಮ ಬೀರುತ್ತದೆ. ಹೇಗೆ ನೀವು ಬೆಂಕಿಗೆ ತುಪ್ಪ ಸೇರಿಸಿದರೆ ಅದು ಹೆಚ್ಚು ಹೆಚ್ಚು ಉರಿಯುತ್ತದೆಯೋ ಹಾಗೆ ಅದರ ಕಿಚ್ಚು ಹೆಚ್ಚು ನೋವುಂಟು ಮಾಡುತ್ತದೆ. ಹಾಗಾಗಿ ನಿಮ್ಮ ಸಂಗಾತಿಯನ್ನು ಏಕಾಂಗಿಯಾಗಿ ಕೋಪಗೊಳ್ಳಲು ಬಿಡಿ. ಆಗ ನಿಮ್ಮ ಶಾಂತತೆ ಸಂಗಾತಿಯನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.
ಇಲ್ಲಿ ನೀವು ಪ್ರಾಮಾಣಿಕರಾಗಿರಬೇಕು. ನಿಮ್ಮ ಸಂಗಾತಿಯ ಕೋಪವನ್ನು ಪ್ರಚೋದಿಸುವ ಅಥವಾ ಹದಗೆಡಿಸುವ ಯಾವುದನ್ನಾದರೂ ನೀವು ಮಾಡುತ್ತಿದ್ದೀರಾ? ಎಂದು ಯೋಚಿಸಿ. ಕೋಪಗೊಂಡ ವ್ಯಕ್ತಿಯ ಸ್ವಾಭಾವಿಕ ಪ್ರವೃತ್ತಿಯೆಂದರೆ ತಮ್ಮ ಪ್ರಕೋಪಗಳಿಗೆ ನಿಮ್ಮನ್ನು ಅಥವಾ ಬೇರೊಬ್ಬರನ್ನು ದೂಷಿಸುವುದು, ಆದ್ದರಿಂದ ಅವರು ಸ್ವಇಚ್ಛೆಯಿಂದ ಹೊರಿಸುವ ಎಲ್ಲಾ ದೂಷಣೆಗಳನ್ನು ನೀವು ಹೇರಿಕೊಳ್ಳದಂತೆ ಜಾಗರೂಕರಾಗಿರಬೇಕು. ನೆನಪಿಡಿ, ನೀವು ನಿಮ್ಮ ಸ್ವಂತ ಕ್ರಿಯೆಗಳಿಗೆ ಮಾತ್ರ ಜವಾಬ್ದಾರರಾಗಿದ್ದೀರಿ.
ನಿಮ್ಮ ಸಂಬಂಧದಲ್ಲಿ ಕೋಪದಿಂದ ಬಿರುಕುಂಟಾದಾಗ ನೀವು ಕೆಲವು ದೃಢವಾದ ಗಡಿಗಳನ್ನು ಮಾಡಿಕೊಳ್ಳುವುದು ಬಹಳ ಮುಖ್ಯ. ನಿಮ್ಮ ಸಂಗಾತಿಯ ಕೋಪವನ್ನು ನೀವು ಎಷ್ಟು ಸಹಿಸಿಕೊಳ್ಳಲು ಸಿದ್ಧರಿದ್ದೀರಿ? ಅದಕ್ಕೆ ಅನುಗುಣವಾಗಿ ನಿಮ್ಮ ಸಂಗಾತಿಗೆ ತಿಳಿಸಿ ಮತ್ತು ಆ ಗಡಿಯನ್ನು ಬಿಟ್ಟು ಹೋಗಬೇಡಿ. ಇಬ್ಬರಿಗೂ ಪರಸ್ಪರ ಗೌರವ ಅಗತ್ಯವಿದೆ. ನಿಮ್ಮ ಇತಿ, ಮಿತಿ ಸ್ವಾರ್ಥದ ಜೀವನಕ್ಕೆ ಅಲ್ಲದೆ ಆರೋಗ್ಯಕರವಾಗಿ ನಿರ್ಮಾಣವಾಗಬೇಕು.
ಕೋಪಗೊಂಡ ಸಂಗಾತಿಯೊಂದಿಗೆ ಹೇಗೆ ವ್ಯವಹರಿಸಬೇಕು ಎಂಬ ನಿಮ್ಮ ನಿಲುವು ಅಗೌರವ ಮತ್ತು ನಿಂದನೆಯ ಅಂಶದ ಬಗ್ಗೆ ಖಂಡಿತವಾಗಿಯೂ ಸ್ಪಷ್ಟವಾಗಿರಬೇಕು. ಮಾತಿನಂತೆ, ನಿಂದನೆಗೆ ಯಾವುದೇ ನೆಪವಿಲ್ಲ.ಕೋಪಗೊಂಡಾಗ, ನಿಮ್ಮನ್ನು ಕೀಳಾಗಿ ಕಾಣುತ್ತಿದ್ದರೆ ಅಥವಾ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಮಾಡುತ್ತಿದ್ದರೆ ಆಗ ನೀವು ಯಾವುದೇ ರೀತಿಯ ನಿಂದನೆಗೆ ಒಳಗಾಗಬೇಡಿ.
ಕೋಪದ ಸಮಸ್ಯೆಗಳನ್ನು ಹೊಂದಿರುವ ಸಂಗಾತಿಯೊಂದಿಗೆ ಹೇಗೆ ವ್ಯವಹರಿಸಬೇಕೆಂದು ನೀವು ಯೋಚಿಸುತ್ತಿದ್ದರೆ, ಕೋಪಗೊಂಡ ವ್ಯಕ್ತಿಯು ಹೆಚ್ಚಾಗಿ ನೊಂದುಕೊಂಡಿದ್ದರೆ ನೀವು ಭಾವನಾತ್ಮಕವಾಗಿ ಭದ್ರತೆಯ ಭಾವನೆಯನ್ನು ಸೃಷ್ಟಿಸಬೇಕು ಇದರಿಂದ ಅವರಿಗೂ ಧೈರ್ಯ ಬರುತ್ತದೆ. ಅದರ ಜೊತೆ ಇದನ್ನು ತಾಳ್ಮೆ ಮತ್ತು ಸಹಾನುಭೂತಿಯ ಮೂಲಕವೂ ಮಾಡಬಹುದು, ಇಂತಹ ಸಮಯದಲ್ಲಿ ಅಪಹಾಸ್ಯ ಅಥವಾ ವ್ಯಂಗ್ಯ ಮಾಡದಿರುವುದು ಒಳ್ಳೆಯದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 2:07 pm, Tue, 25 April 23