Travel: ಮನಸ್ಸಿನ ಪ್ರಶಾಂತತೆಗೆ ಈ ಕ್ಷೇಮ ಕೇಂದ್ರಿತ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ

ಮನಸ್ಸಿನ ನೆಮ್ಮದಿಯನ್ನು ಕಂಡುಕೊಳ್ಳಲು ಹಾಗೂ ವೈಯಕ್ತಿಕ ಕ್ಷೇಮವನ್ನು ಕಾಪಾಡಿಕೊಳ್ಳಲು ಹೆಚ್ಚಿನ ಜನರು ಕ್ಷೇಮ ಕೆಂದ್ರಿತ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲು ಬಯಸುತ್ತಾರೆ. ಇಂತಹ ಸ್ಥಳಗಳು ನಮ್ಮ ಒಟ್ಟಾರೆ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.

Travel: ಮನಸ್ಸಿನ ಪ್ರಶಾಂತತೆಗೆ ಈ ಕ್ಷೇಮ ಕೇಂದ್ರಿತ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ
ಫಜ್ಲಾನಿ ನೇಚರ್ಸ್ ನೆಸ್ಟ್
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 25, 2023 | 11:57 AM

ಮನಸ್ಸಿಗೆ ನೆಮ್ಮದಿಯನ್ನು ಕಂಡುಕೊಳ್ಳುವ ಸಲುವಾಗಿ ಅನೇಕ ಜನರು ಪ್ರವಾಸಕ್ಕೆ ತೆರಳುತ್ತಾರೆ. ಒತ್ತಡದ ಜೀವನ ಶೈಲಿಯಿಂದ ನಲುಗಿ ಹೋಗಿರುವ ಅನೇಕರು ಹೀಲಿಂಗ್ ರಜಾದಿನಗಳನ್ನು ಕಳೆಯಲು ಬಯಸುತ್ತಾರೆ. ಅದರ ಸಲುವಾಗಿ ಜನದಟ್ಟಣೆಯಿರದ ಶಾಂತಿಯುತವಾದ ಪ್ರದೇಶಗಳಿಗೆ ಹೋಗಿ ಪ್ರಕೃತಿ ಮಡಿಲಲ್ಲಿ ಕಾಲ ಕಳೆಯುತ್ತಾ, ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಬಯಸುತ್ತಾರೆ ಕ್ಷೇಮ-ಕೇಂದ್ರಿತ ಪ್ರವಾಸಿ ಸ್ಥಳಗಳಿಗೆ ಹೋಗಲು ಬಯಸುವ ಜನರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಜನರು ತಮ್ಮ ಒತ್ತಡದ ದಿನಚರಿಯಿಂದ ಸ್ವಲ್ಪ ವಿರಾಮವನ್ನು ತೆಗೆದುಕೊಂಡು ಕೇರಳ ಮತ್ತ ಉತ್ತರಖಂಡದಂತಹ ಪ್ರಾಕೃತಿಕ ತಾಣಗಳಿಗೆ ಹೋಗಲು ಬಯಸುತ್ತಿದ್ದಾರೆ ಎಂದು ಟ್ರಯಲ್ ಬ್ಲೇಜರ್ ಟರ್ಸ್ ಇಂಡಿಯಾ ಲಿಮಿಟೆಡ್​​ನ ಹಿರಿಯ ಉಪಾಧ್ಯಕ್ಷ ಮಲಯಾನಿಲ್ ಸಿಂಗ್ ಹೇಳುತ್ತಾರೆ.

ಪ್ರವಾಸವು ಜೀವನಶೈಲಿಯ ಬದಲಾವಣೆಗಾಗಿ ವಿಕಸನಗೊಂಡಿದೆ, ಇದರಲ್ಲಿ ಜನರು ತಮ್ಮ ಆರೋಗ್ಯದ ತೊಂದರೆಗಳನ್ನು ಪರಿಹರಿಸಲು, ತಮ್ಮನ್ನು ತಾವು ಗುಣಪಡಿಸಿಕೊಳ್ಳಲು ಮತ್ತು ವಿಶ್ರಾಂತಿ ಪಡೆಯಲು ಬಯಸುತ್ತಾರೆ. ಪರಿಣಾಮವಾಗಿ ಕ್ಷೇಮ ಪ್ರವಾಸೋದ್ಯಮದಲ್ಲಿ ಇದು ಹೆಚ್ಚಾಗಿ ಕಂಡುಬಂದಿದೆ. ಕ್ಷೇಮ ಪ್ರವಾಸೋದ್ಯಮವು ಸಾಮಾನ್ಯವಾಗಿ ಜನರ ದೈಹಿಕ, ಮಾನಸಿಕ, ಆಧ್ಯಾತ್ಮಿಕ, ಭಾವನಾತ್ಮಕ ಮತ್ತು ಒಟ್ಟಾರೆ ಯೋಗಕ್ಷೇಮದ ಗುರಿಯೊಂದಿಗೆ ಸಂಪರ್ಕ ಹೊಂದಿದೆ ಎಂದು ಈಸ್ ಮೈ ಟ್ರಿಪ್ ನ ಸಹ ಸಂಸ್ಥಾಪಕ ರಿಕಾಂತ್ ಪಿಟ್ಟಿ ಹೇಳುತ್ತಾರೆ.

ಇದನ್ನೂ ಓದಿ:Travel: ಬೇಸಿಗೆಯಲ್ಲಿ ದಕ್ಷಿಣ ಭಾರತ ಈ ಪ್ರದೇಶಗಳಿಗೆ ಫ್ಯಾಮಿಲಿ ಜತೆ ಪ್ರವಾಸ ಮಾಡಿ

ಭಾರತದ ಕೆಲವು ಕ್ಷೇಮ ಕೇಂದ್ರಿತ ಪ್ರವಾಸಿ ತಾಣಗಳು

ವೆಲ್ ನೆಸ್ ರೆಸಾರ್ಟ್ ಮಹಾರಾಷ್ಟ್ರ: ಕುದುರೆ ನೆರವಿನ ಚಿಕಿತ್ಸೆಯ ಅನುಭವವನ್ನು ಪಡೆಯಲು ಈ ರೆಸಾರ್ಟ್ ಗೆ ಪ್ರವಾಸ ಕೈಗೊಳ್ಳಬಹುದು. ಈ ಚಿಕಿತ್ಸೆಯು ಸ್ವಾಭಿಮಾನ, ಸ್ವಯಂ ಅರಿವು, ಆತ್ಮ ವಿಶ್ವಾಸ ಮತ್ತು ಸಹಾನುಭೂತಿಯನ್ನು ಸುಧಾರಿಸಲು ಕುದುರೆಗಳೊಂದಿಗೆ ಸಮಯ ಕಳೆಯುವ ಒಂದು ಉತ್ತಮ ಕ್ಷೇಮ ಅಭ್ಯಾಸವಾಗಿದೆ. ವ್ಯಕ್ತಿಗಳು ಉತ್ತಮ ಸಂಬಂಧಗಳನ್ನು ನಿರ್ಮಿಸಲು, ಗಡಿಗಳನ್ನು ಸ್ಥಾಪಿಸಲು ಮತ್ತು ಸಂವಹನ ಕೌಶಲ್ಯಗಳನ್ನು ಸುಧಾರಿಸಲು ಇರುವ ಭಾವನಾತ್ಮಕ ಚಿಕಿತ್ಸಾ ವಿಧಾನವಾಗಿದೆ.

ನಮ್ಮ ರೆಸಾರ್ಟ್​​ನ ಕುದುರೆ ನೆರವಿನ ಚಿಕಿತ್ಸಾ ಕಾರ್ಯಕ್ರಮವನ್ನು ಕುದುರೆಗಳೊಂದಿಗೆ ಕೆಲಸ ಮಾಡುವ ಚಿಕಿತ್ಸಕ ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳುವ ಅನುಭವಿ ವೃತ್ತಿಪರರು ವಿನ್ಯಾಸಗೊಳಿಸಿದ್ದಾರೆ ಮತ್ತು ಅವರೇ ಅದನ್ನು ಮುನ್ನಡೆಸುತ್ತಿದ್ದಾರೆ ಎಂದು ಮಹಾರಾಷ್ಟ್ರದ ಲೋನಾವಾಲಾ ಬಳಿಯ ವಾಂಡ್ ಗಾವ್ ನಲ್ಲಿರುವ ವೆಲ್ ನೆಸ್ ರೆಸಾರ್ಟ್ನ ಫಜ್ಲಾನಿ ನೇಚರ್ ನೆಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಆಸಿಫ್ ಫಜ್ಲಾನಿ ಹೇಳುತ್ತಾರೆ. ಪ್ರಶಾಂತ ವಾತಾವರಣದಲ್ಲಿ ಪ್ರವಾಸಿಗರು ಆಯುರ್ವೇದ, ಯೋಗ, ನ್ಯಾಚುರೋಪತಿ, ಫಿಸಿಯೋಥೆರಪಿ ವಿವಿಧ ರೀತಿಯ ಚಿಕಿತ್ಸೆಗಳನ್ನು ಇಲ್ಲಿ ಅಯ್ಕೆ ಮಾಡಬಹುದು. ಮನಸ್ಸಿನ ಪ್ರಶಾಂತತೆಗೆ ಚಿಕಿತ್ಸೆಯನ್ನು ಪಡೆಉಲು ಬಯಸುವವರು ವೆಲ್ ನೆಸ್ ರೆಸಾರ್ಟ್ ಗೆ ಪ್ರವಾಸ ಕೈಗೊಳ್ಳಿ.

ತತ್ವ ಹಿಲ್ಸ್ ಉತ್ತರಾಖಂಡ: ಸಾವಯವ ಕೃಷಿಯ ಅನುಭವ ಮತ್ತು ಸಾವಯವ ಆಹಾರವನ್ನು ಸವಿಯಲು ಬಯಸುವವರು ಇಲ್ಲಿಗೆ ಭೆಟಿ ನೀಡಬಹುದು. ಉತ್ತರಾಖಂಡದ ರಾಣಿಖೆತ್ ನಲ್ಲಿರುವ ಪರ್ವತಗಳ ಹೃದಯಭಾಗದಲ್ಲಿ ನೆಲೆಗೊಂಡಿರುವ ಈ ಸ್ಥಳವು ಪ್ರವಾಸಿಗರಿಗೆ ಒಂದೊಳ್ಳೆ ವಾಸ್ತವ್ಯವನ್ನು ನೀಡುತ್ತದೆ. ನಮ್ಮ ತೋಟಗಳಲ್ಲಿ ತರಕಾರಿಗಳು, ಹಣ್ಣುಗಳು ಮತ್ತು ಗಿಡಮೂಲಿಕೆಗಳನ್ನು ಬೆಳೆಸಲು ನಾವು ಸಾಂಪ್ರಾದಾಯಿಕ ಮತ್ತು ಆಧುನಿಕ ವಿಧಾನಗಳ ಸಂಯೋಜನೆಯನ್ನು ಬಳಸುತ್ತೇವೆ. ಮತ್ತು ಸಾವಯಕ ಕೃಷಿಯನ್ನು ಅವಲಂಬಿಸಿದ್ದೇವೆ ಎಂದು ತತ್ವ ಹಿಲ್ಸ್ ಸಂಸ್ಥಾಪಕ ರಂಜನ್ ಚೋಪ್ರಾ ಹೇಳುತ್ತಾರೆ. ಇಲ್ಲಿಗೆ ಬರುವ ಪ್ರವಾಸಿಗರು ಜಮೀನಿನಲ್ಲಿ ಕೆಲಸ ಮಾಡುವ ಅನುಭವಗಳನ್ನು ಪಡೆಯಬಹುದು. ಜೊತೆಗೆ ಸಾವಯಕ ರೀತಿಯಲ್ಲಿ ಬೆಳೆದ ಆಹಾರಗಳಲ್ಲಿ ಊಟವನ್ನು ತಯಾರಿಸಬಹುದು. ತಾಜಾ ಟೊಮೆಟೊಗಳ ಕೊಯ್ಲು ಮಾಡುವುದರಿಂದ ಹಿಡಿದು ಗಿಡಮೂಳಿಕೆಗಳ ಕೊಯ್ಲು ಮಾಡುವವರೆಗೆ ಸಾವಯವ ಕೃಷಿಯ ಅನುಭವವನ್ನು ನೆರವಾಗಿ ಪಡಿಯುವ ಅವಕಾಶ ಇಲ್ಲಿದೆ.

ಕಣ್ಣೂರಿನ ಸೇಫ್ರಾನ್ ಸ್ಟೇಸ್ ಅಮಯಾ ಎಸ್ಟೇಟ್: ವಾರಿಯರ್ ಮಸಾಜ್ ನೊಂದಿಗೆ ವಿಶ್ರಾಂತಿ ಪಡೆಯಲು ಬಯಸಿದರೆ ನೀವು ಈ ಸ್ಥಳಕ್ಕೆ ಕಂಡಿತವಾಗಿಯೂ ಭೇಟಿ ನೀಡಿ. ಇಲ್ಲಿ ಪೂರ್ಣ ದೇಹ ಮಸಾಜ್ ಮಾಡಲಾಗುತ್ತದೆ. ಇಲ್ಲಿಗೆ ಭೇಟಿ ನೀಡುವ ಮೂಲಕ ಯೋಗಕ್ಷೇಮವನ್ನು ಸುಧಾರಿಸಬಹುದು. ಮೆಟ್ಟಿಲು ಕೊಳ ಮತ್ತು ಸಾಂಪ್ರದಾಯಿಕ ಕೇರಳ ಶೈಲಿಯ ಸ್ಪಾ ಅನುಭವವನ್ನು ಹೊಂದಿರುವ ಈ ಐತಿಹಾಸಿಕ ಎಸ್ಟೇಟ್ ಪ್ರವಾಸಿಗರು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಮತ್ತು ವಿಶ್ರಾಂತಿಯನ್ನು ಪಡೆಯಲು ಅವಕಾಶ ಮಾಡಿಕೊಡುತ್ತದೆ. ಇಲ್ಲಿ ಪರಿಣಿತ ಸ್ಥಳೀಯ ಗುರುಗಳಿಂದ ಕಲರಿ ಮಸಾಜ್ ಮಾಡಲಾಗುತ್ತದೆ ಎಂದು ಸೇಫ್ರಾನ್ ಸ್ಟೇಸ್ ಸಂಸ್ಥಾಪಕ ದೇವೇಂದ್ರ ಪುರುಕಲೇರ್ ಹೇಳುತ್ತಾರೆ.

ಮೋಕ್ಷ ಹಿಮಾಲಯ ಸ್ಪಾ ರೆಸಾರ್ಟ್: ಪ್ರಾಚೀನ ಹಮಾಮ್ ಅನುಭವವನ್ನು ಪಡೆಯಲು ಬಯಸಿದರೆ ಈ ರೆಸಾರ್ಟ್ ಗೆ ಭೇಟಿ ನೀಡಿ. ಹಮಾಮ್ ಸಾಂಪ್ರದಾಯಿಕವಾದ ಉಗಿ ಸ್ನಾನವಾಗಿದೆ. ಇದು ಸಮಗ್ರ ಸ್ನಾನದ ಅಭ್ಯಾಸಗಳೊಂದಿಗೆ ಸಮಬಮಧಿಸಿದೆ. ಈ ರೆಸಾರ್ಟ್ ನಲ್ಲಿ ಮನಸ್ಸು, ದೇಹ ಮತ್ತು ಆತ್ಮವನ್ನು ಪುನರುಜ್ಜೀವನಗೊಳಿಸಲು ಮತ್ತು ಯೋಗಕ್ಷೇಮವನ್ನು ಗುಣಪಡಿಸಲು ಇಲ್ಲಿ ನೀವು ಹಮಾಮ್ ಅನುಭವವನ್ನು ಆನಂದಿಸಬಹುದು. ಪ್ರವಾಸಿಗರು ಪ್ರಾಚೀನ ಹಮಾಮ್ ಆಚರಣೆಯಲ್ಲಿ ಪಾಲ್ಗೊಳ್ಳಬಹುದು. ಇದು ದೇಹಕ್ಕೆ ಶುದ್ಧೀಕರಣಗೊಳಿಸುತ್ತದೆ. ಕಾಫಿ ಸ್ಕ್ರಬ್, ಗುಲಾಬಿ ಎಣ್ಣೆಯಿಂದ ಅರೋಮಾಥೆರಪಿ ಮಸಾಜ್, ತಲೆ ಮಸಾಜ್ ಮುಂತಾತ ಐಷಾರಾಮಿ ಅನುಭವವನ್ನು ಪಡೆಯಬಹುದು” ಎಂದು ಮೋಕ್ಷ ಹಿಮಾಲಯ ಸ್ಪಾ ರೆಸಾರ್ಟ್ ನ ವ್ಯವಸ್ಥಾಪಕ ನಿರ್ದೇಶಕ ಆಕಾಶ್ ಗಾರ್ಗ್ ಹೇಳುತ್ತಾರೆ. ಇಲ್ಲಿ ಆಯುರ್ವೇದ ಯೋಗ, ಮತ್ತು ಸ್ಪಾ ಚಿಕಿತ್ಸೆಗಳಂತಹ ಪುರಾತನ ಅಭ್ಯಾಸಗಳ ಆಧಾರದ ಮೇಲೆ ವಿವಿಧ ಕ್ಷೇಮ ಚಿಕಿತ್ಸೆಗಳನ್ನು ನೀಡಲಾಗುತ್ತದೆ.

ಕನ್ಹಾ ಶಾಂತಿ ವನಂ: ಧ್ಯಾನದಿಂದ ಮನಸ್ಸಿನ ಸ್ಥಿತಿಯನ್ನು ಸುಧಾರಿಸಲು ಈ ಸ್ಥಳಕ್ಕೆ ಭೇಟಿ ನೀಡಿ. ಹೈದರಬಾದಿನ ಹೊರವಲಯದಲ್ಲಿರುವ ಕನ್ಹಾ ಶಾಂತಿ ವನಂನ ಪ್ರಧಾನ ಕಛೇರಿಯು ವಿಶ್ವದ ಅತೀ ದೊಡ್ಡ ಆಧ್ಯಾತ್ಮಿಕ ಮತ್ತು ಕ್ಷೇಮ ವಿಶ್ರಾಂತಿ ಕೇಂದ್ರಗಳಲ್ಲಿ ಒಂದಾಗಿದೆ. ಈ ವಿಶಾಲವಾದ ಸ್ಥಳವು ಹಚ್ಚ ಹಸಿರಿನಿಂದ ಕೂಡಿದ್ದು, ಇದು ಮಳೆಕಾಡುಗಳು, ಜಲಾಶಯಗಳು, ವಲಸೆ ಪಕ್ಷಿಗಳನ್ನು ಹೊಂದಿದೆ. ಇಲ್ಲಿ ಜನರು ಪ್ರಕೃತಿಯ ಮಡಿಲಲ್ಲಿ ಸಮಯವನ್ನು ಕಳೆಯಬಹುದು. ಜನರು ವಾರಾಂತ್ಯ ಅಥವಾ ಒಂದು ತಿಂಗಳ ಕಾಲ ಇಲ್ಲಿ ಉಳಿಯಲು ಆನ್ ಲೈನ್ ನೋಂದಾವಣೆ ಮಾಡಿಸಿಕೊಳ್ಳಬಹುದು, ನುರಿತ ತರಬೇತುದಾರರಿಂದ ಇಲ್ಲಿ ಧ್ಯಾನದ ಮಾರ್ಗದರ್ಶನವನ್ನು ಪಡೆಯಬಹುದು. ಜೊತೆಗೆ ಯೋಗ ತರಗತಿಗಳು, ಆಯುರ್ವೇದ ಚಿಕಿತ್ಸೆಗಳು, ಹೋಮಿಯೋಪತಿ ಚಿಕಿತ್ಸೆಗಳಂತಹ ಕ್ಷೇಮ ಚಿಕಿತ್ಸೆಗಳನ್ನು ಪಡೆಯಬಹುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:57 am, Tue, 25 April 23

ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು