Travel: ಬೇಸಿಗೆಯಲ್ಲಿ ದಕ್ಷಿಣ ಭಾರತ ಈ ಪ್ರದೇಶಗಳಿಗೆ ಫ್ಯಾಮಿಲಿ ಜತೆ ಪ್ರವಾಸ ಮಾಡಿ

ಪ್ರವಾಸ ಕೈಗೊಳ್ಳುವುದು, ಹೊಸ ಸ್ಥಳಗಳನ್ನು ಅನ್ವೇಷಿಸುವುದು ಎಂದರೆ ಹೆಚ್ಚಿನವರಿಗೆ ತುಂಬಾ ಇಷ್ಟ. ಈ ಸುಡು ಬೇಸಿಗೆಯಲ್ಲಿ ಬಿಸಿಲಿನಿಂದ ದೂರವಿದ್ದು ಪ್ರಕೃತಿಯ ಮಡಿಲಿನಲ್ಲಿ ಕಾಲ ಕಳೆಯಬೇಕು ಎಂದು ಬಯಸಿದರೆ ದಕ್ಷಿಣ ಭಾರತದ ಈ ಕೆಲವು ಅದ್ಭುತ ಪ್ರಾಕೃತಿಕ ಸ್ಥಳಗಳಿಗೆ ನೀವು ಖಂಡಿತವಾಗಿಯೂ ಭೇಟಿ ನೀಡಬೇಕು.

Travel: ಬೇಸಿಗೆಯಲ್ಲಿ ದಕ್ಷಿಣ ಭಾರತ ಈ ಪ್ರದೇಶಗಳಿಗೆ ಫ್ಯಾಮಿಲಿ ಜತೆ ಪ್ರವಾಸ ಮಾಡಿ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 22, 2023 | 5:49 PM

ದಕ್ಷಿಣ ಭಾರತವು ವೈವಿಧ್ಯಮಯ ಸಂಸ್ಕೃತಿ, ಶ್ರೀಮಂತ ಪರಂಪರೆ ಮತ್ತು ರಮ್ಯರಮನೀಯ ನೈಸರ್ಗಿಕ ಸೌಂದರ್ಯದ ನೆಲೆಯಾಗಿದೆ. ಕಡಲ ತೀರಗಳು, ಹಿನ್ನೀರು, ಗಿರಿಧಾಮಗಳು, ವನ್ಯಜೀವಿ ಅಭಯಾರಣ್ಯಗಳು, ಪ್ರಾಚೀನ ದೇವಾಲಯಗಳು ಹೀಗೆ ಇನ್ನೂ ಅನೇಕ ಪ್ರವಾಸಿ ಸ್ಥಳಗಳು ದಕ್ಷಿಣ ಭಾರತದಲ್ಲಿದೆ. ಈ ಬೇಸಿಗೆಯ ಸಮಯದಲ್ಲಿ ಸ್ವಲ್ಪ ಬಿಡುವು ಮಾಡಿಕೊಂಡು ಮಕ್ಕಳು, ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಪ್ರವಾಸ ಹೋಗಬೇಕು, ಹೊಸ ಸ್ಥಳಗಳನ್ನು ಅನ್ವೇಷಿಸಬೇಕು ಎಂಬ ಬಯಕೆ ನಿಮಗಿದೆಯೇ? ಹಾಗಾದರೆ ದಕ್ಷಿಣ ಭಾರತದ ಈ ಕೆಲವೊಂದು ಸ್ಥಳಗಳಿಗೆ ಭೇಟಿ ನೀಡುವ ಮೂಲಕ ಪ್ರಕೃತಿಯ ಮಡಿಲಿನಲ್ಲಿ ಸಮಯ ಕಳೆಯುತ್ತಾ, ಮನಸ್ಸನ್ನು ಶಾಂತಗೊಳಿಸಿ.

ಅರಕು ಕಣಿವೆ ಆಂಧ್ರ ಪ್ರದೇಶ:

ಅರಕು ಕಣಿವೆ ಬೇಸಿಗೆಯಲ್ಲಿ ಭೇಟಿ ನೀಡಲು ಯೋಗ್ಯವಾದ ಸುಂದರ ಸ್ಥಳವಾಗಿದೆ. ಈ ಸ್ಥಳವು ತನ್ನ ರಮಣೀಯ ಸೌಂದರ್ಯ, ಸೊಂಪಾದ ಸಸ್ಯರಾಶಿ ಮತ್ತು ವನ್ಯಜೀವಿಗಳಿಗೆ ಹೆಸರುವಾಸಿಯಾಗಿದೆ. ಅರಕು ಕಣಿವೆಯು ಪೂರ್ವಘಟ್ಟಗಳಲ್ಲಿ ನೆಲೆಗೊಂಡಿರುವ ಒಂದು ಗಿರಿಧಾಮವಾಗಿದ್ದು, ಇದು ಆಂದ್ರ ಪ್ರದೇಶದ ವಿಶಾಖಪಟ್ಟಣ ನಗರದಿಂದ ಪಶ್ಚಿಮಕ್ಕೆ 120 ಕಿಮೀ ದೂರದಲ್ಲಿದೆ. ಕಾಫಿ ತೋಟಗಳು, ಕಾಡುಗಳು, ಹಸಿರು ಕಣಿವೆಗಳು, ಜಲಪಾತಗಳು, ಮಂಜಿನ ಮೋಡಗಳು ಇವೆಲ್ಲವು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಟ್ರೆಕ್ಕಿಂಗ್, ಮೀನು ಹಿಡಿಯುವುದು, ಹೊರಾಂಗಣ ಕ್ರೀಡೆ ಇತ್ಯಾದಿ ಚಟುವಟಿಕೆಗಳನ್ನು ನೀವು ಇಲ್ಲಿ ಮಾಡಬಹುದು. ಜೊತೆಗೆ ಅನೇಕ ಸ್ಥಳಗಳ ಅನ್ವೇಷಣೆಯನ್ನು ಮಾಡಬಹುದು.

ಕಾಫಿ ಮ್ಯೂಸಿಯಂ, ಪದ್ಮಾಪುರಂ ಗಾರ್ಡನ್ಸ್, ಗಲಿಕೊಂಡ ವ್ಯೂ ಪಾಯಿಂಟ್, ಕಟಿಕಿ ಜಲಪಾತ, ಅನಂತಗಿರಿ ಜಲಪಾತ, ಚಾಪರೈ ವಾಟರ್ ಕ್ಯಾಸ್ಕೇಡ್, ಇತ್ಯಾದಿ ರಮಣೀಯ ಸ್ಥಳಗಳನ್ನು ನೀವು ಇಲ್ಲಿ ಅನ್ವೇಷಿಸಬಹುದು.

ತಲುಪುವುದು ಹೇಗೆ: ವಿಶಾಖಪಟ್ಟಣದಿಂದ 106 ಕಿಮೀ ದೂರದಲ್ಲಿ ಈ ಅರಕು ಕಣಿವೆ ಇದೆ. ರಸ್ತೆ ಪ್ರಯಾಣ ಮಾಡುವ ಮೂಲಕ ಇಲ್ಲಿಗೆ ಸುಲಭವಾಗಿ ತಲುಪಬಹುದು. ವಿಶಾಖಪಟ್ಟಣದಿಂದ ರೈಲು ಪ್ರಯಾಣದ ಮೂಲಕವೂ ಈ ಸ್ಥಳವನ್ನು ತಲುಪಬಹುದು.

ಯೆರ್ಕಾಡ್ ತಮಿಳುನಾಡು:

ಯೆರ್ಕಾಡ್ ಗಿರಿಧಾಮ ಸ್ಥಳವಾಗಿದೆ. ಬೇಸಿಗೆಯಲ್ಲಿ ಭೇಟಿ ನೀಡಬಹುದಾದ ಅತ್ಯುತ್ತಮವಾದ ಸ್ಥಳ ಇದಾಗಿದೆ. ಏಳು ಕಾಡುಗಳ ನಾಡು ಎಂದು ಕರೆಯಲ್ಪಡುವ ಈ ಸ್ಥಳವು ಹಚ್ಚ ಹಸಿರಿನಿಂದ ಕೂಡಿದೆ. ಇಲ್ಲಿ ನೀವು ಬೆಟ್ಟಗಳು, ಗುಹೆಗಳು, ಜಲಪಾತಗಳು, ವಸಾಹತುಶಾಹಿ ಯುಗದ ವಾಸ್ತುಶಿಲ್ಪಗಳು, ಕಾಫಿ ಎಸ್ಟೆಟ್​​ಗಳನ್ನು ನೋಡಬಹುದು.

ಇಲ್ಲಿನ ಪ್ರಮುಖ ಆಕರ್ಷಣೀಯ ಕೇಂದ್ರಗಳೆಂದರೆ- ಯೆರ್ಕಾಡ್ ಸರೋವರ, ಬೋಟಾನಿಕಲ್ ಗಾರ್ಡನ್, ಲೇಡಿ ಸೀಟ್, ಪಗೋಡಾ ಪಾಯಿಂಟ್, ಅನ್ನಾ ಫಾರ್ಮ್, ಕಿಲಿಯೂರ್ ಫಾಲ್ಸ್.

ತಲುಪುವುದು ಹೇಗೆ: ಯೆರ್ಕಾಡ್​​ನ್ನು ತಮಿಳುನಾಡಿನಿಂದ ರಸ್ತೆ ಮಾಗ್ದ ಮೂಲಕ ಸುಲಭವಾಗಿ ತಲುಪಬಹುದು. ಈ ಸ್ಥಳ ಸೇಲಂ ನಗರದಿಂದ ಕೇವಲ 38 ಕಿಮೀ ದೂರದಲ್ಲಿದೆ. ಮತ್ತು ಹತ್ತಿರದ ರೈಲ್ವೆ ಮೂಲಕವೂ ಈ ಸ್ಥಳವನ್ನು ತಲುಪಬಹುದು.

ಇದನ್ನೂ ಓದಿ:Travel: ಪ್ರಕೃತಿ ಪ್ರೇಮಿಗಳು ಭೇಟಿ ನೀಡಲೇಬೇಕಾದ ದಕ್ಷಿಣ ಭಾರತದ ಅದ್ಭುತ ಪ್ರವಾಸಿ ತಾಣಗಳು

ಕುಟ್ಟ ಕರ್ನಾಟಕ:

ಬೇಸಿಗೆಯ ಸುಡು ಬಿಸಿಲಿನಿಂದ ಸ್ವಲ್ಪ ದಿನ ದೂರವಿದ್ದು, ಪ್ರಕೃತಿ ಮಡಿಲಿನಲ್ಲಿ ಸಮಯವನ್ನು ಕಳೆಯಬೇಕು ಎಂದು ಬಯಸಿದರೆ, ನೀವು ಖಂಡಿತವಾಗಿಯು ಕುಟ್ಟಗೆ ಭೇಟಿ ನೀಡಲೆಬೇಕು. ಕುಟ್ಟವು ಗೋಣಿಕೊಪ್ಪಲು ಬಳಿಯ ಒಂದು ಸಣ್ಣ ಹಳ್ಳಿಯಾಗಿದ್ದು, ಇದು ಕೊಡಗಿನ ಚಿಕ್ಕ ಗಡಿ ಪಟ್ಟಣವಾಗಿದೆ. ಮತ್ತು ಕೇರಳ ಮತ್ತು ಕರ್ನಾಟಕದ ಗಡಿಯಲ್ಲಿದೆ. ಈ ಸ್ಥಳವು ಶಾಂತಿಯುತ ವಾತಾವರಣಕ್ಕೆ ಹೆಸರುವಾಸಿಯಾಗಿದೆ. ಅನೇಕ ಹೋಂಸ್ಟೇಗಳು, ರೆಸಾರ್ಟ್​​ಗಳು ಇಲ್ಲಿವೆ.

ಕುಟ್ಟ ತನ್ನ ಸುತ್ತಲಿನ ಅನೇಕ ಪ್ರವಾಸಿ ಆಕರ್ಷಣೆಗಳನ್ನು ಸಂಪರ್ಕಿಸುತ್ತದೆ. ಈ ಸ್ಥಳದ ಸಮೀಪದಲ್ಲಿಯೇ ತೊಲ್ಪಟ್ಟಿ ವನ್ಯಜೀವಿ ಅಭಯಾರಣ್ಯವಿದೆ ಹೊರತಾಗಿ ನೀವು ಇರುಪ್ಪು ಜಲಪಾತ, ಕಬಿನಿ ಹಿನ್ನೀರಿನ ಪ್ರದೇಶಗಳಿಗೂ ಭೇಟಿ ನೀಡಬಹುದು.

ಥೇಣಿ ಕಣಿವೆ ತಮಿಳುನಾಡು

ಥೇಣಿಯು ತನ್ನ ಅದ್ಭುತವಾದ ನೈಸರ್ಗಿಕ ಪರಿಸರವನ್ನು ಒಳಗೊಂಡ ಸ್ಥಳವಾಗಿದೆ. ಬೇಸಿಗೆಯಲ್ಲಿ ಭೇಟಿ ನೀಡಲು ಯೋಗ್ಯವಾದ ಸ್ಥಳ ಇದಾಗಿದೆ. ಈ ಸ್ಥಳವನ್ನು ಭೂಮಿಯ ಹಿಡನ್ ಪ್ಯಾರಡೈಸ್ ಎಂದು ಕರೆಯಲಾಗುತ್ತದೆ. ತಮಿಳುನಾಡಿನಲ್ಲಿರುವ ಈ ಪ್ರದೇಶವು ಸೊಂಪಾದ ಸಸ್ಯರಾಶಿ ಮತ್ತು ಜಲಪಾತಗಳಿಂದ ಕೂಡಿದೆ.

ಬೆರಿಜಮ್ ಸರೋವರ, ವೈಗೈ ಅಣೆಕಟ್ಟು, ಸುರುಳಿ ಜಲಪಾತ, ಮೇಘಮಲೈ, ಚಿನ್ನಸುರುಳಿ ಜಲಪಾತ, ಕೂಚನೂರು, ಬೋಡಿನಾಯಕನೂರು, ಬೋಡಿ ಮೆಟ್ಟು, ಕೊಲುಕ್ಕುಮಲೈ ಟೀ ಎಸ್ಟೇಟ್, ಇತ್ಯಾದಿ ಸ್ಥಳಗಳಿಗೆ ನೀವು ಭೇಟಿ ನಿಡಬಹುದು.

Published On - 5:49 pm, Sat, 22 April 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್