AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship Tips: ನಿಮ್ಮ ನಿರೀಕ್ಷೆಗೆ ತಕ್ಕಂತೆ ಸಂಗಾತಿಯಿಂದ ಸ್ಪಂದನೆ ಇಲ್ಲದಿದ್ದಾಗ ಏನು ಮಾಡಬೇಕು? ಇಲ್ಲಿದೆ ಮಾಹಿತಿ

ನಿಮ್ಮ ಸಂಗಾತಿಯಿಂದ ಅಸಹಜ ನಿರೀಕ್ಷೆಗಳು ನಿಮ್ಮ ಮಧ್ಯ ಸಂಘರ್ಷಗಳಿಗೆ ಕಾರಣವಾಗಬಹುದು ಮತ್ತು ಸಂವಹನದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು" ಎಂದು ತಿಳಿದು ಬಂದಿದೆ.

Relationship Tips: ನಿಮ್ಮ ನಿರೀಕ್ಷೆಗೆ ತಕ್ಕಂತೆ ಸಂಗಾತಿಯಿಂದ ಸ್ಪಂದನೆ ಇಲ್ಲದಿದ್ದಾಗ ಏನು ಮಾಡಬೇಕು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on:Apr 20, 2023 | 5:48 PM

Share

ನೀವು ಧ್ವನಿ ಎತ್ತದೆಯೇ ನಿಮ್ಮ ಸಂಗಾತಿ ನೀವು ಅನುಭವಿಸುತ್ತಿರುವ ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಾರೆ ಎಂದು ನೀವು ನಿರೀಕ್ಷಿಸುತ್ತೀರಾ? ಅಥವಾ ಅವರು ನಿಮ್ಮನ್ನು ಬದಲಾಯಿಸುತ್ತಾರೆ, ಅದು ನಿಮ್ಮನ್ನು ಪ್ರೀತಿಸುವ ಸಂಕೇತವೇ? ಎಂದೆಲ್ಲ ಯೋಚಿಸುತ್ತೀರಾ? ಬಳಿಕ ನೀವು ಇವುಗಳನ್ನು ಸಾಮಾನ್ಯ ವಿಷಯಗಳು ಎಂದು ಭಾವಿಸುತ್ತಿರಿ, ಆದರೆ ತಜ್ಞರು ಅವುಗಳನ್ನು ‘ಅವಾಸ್ತವಿಕ ನಿರೀಕ್ಷೆಗಳು’ ಅಥವಾ ಅಸಹಜ ಎಂದು ಬಣ್ಣಿಸುತ್ತಾರೆ. ಇದು ದೀರ್ಘಾವಧಿಯಲ್ಲಿ ನಿಮ್ಮ ಸಂಬಂಧವನ್ನು ಹಾಳುಮಾಡುತ್ತದೆ. ಬದಲಾಗಿ, ನಿಮ್ಮ ಸಂಗಾತಿಯ ಮಿತಿಗಳನ್ನು ಅರ್ಥಮಾಡಿಕೊಂಡಲ್ಲಿ ತೃಪ್ತಿದಾಯಕ ಸಂಬಂಧ ನಿಮ್ಮದಾಗಬಹುದು.

ಸಂಬಂಧದಲ್ಲಿ ಅವಾಸ್ತವಿಕ ನಿರೀಕ್ಷೆಗಳು ಹೇಗಿರುತ್ತವೆ? ಇಲ್ಲಿದೆ ಉದಾಹರಣೆ

-ಅವರು ನಿಮಗಾಗಿ ಬದಲಾಗುತ್ತಾರೆ ಎಂದು ಭಾವಿಸುವುದು.

-ನಿಮಗೆ ಏನು ಬೇಕು ಎಂದು ಅವರು ತಿಳಿದಿರಬೇಕು ಎಂದು ಯೋಚಿಸುವುದು (ನೀವು ಅದನ್ನು ಹೇಳದೆ).

-ನೀವು ಪರಸ್ಪರ ಇಬ್ಬರೂ ಪ್ರತಿಯೊಂದು ವಿಷಯವನ್ನು ಪ್ರೀತಿಸಬೇಕು ಎಂದು ಯೋಚಿಸುವುದು.

– ನೀವು ತಾಳ್ಮೆಯಿಂದ ಕಾಯುತ್ತಿದ್ದ ಸಂತೋಷವನ್ನು ಅವರೇ ಒದಗಿಸುತ್ತಾರೆ ಎಂದು ಯೋಚಿಸುವುದು.

ಪ್ರತಿಯೊಬ್ಬ ವ್ಯಕ್ತಿಯು ತನ್ನ ಸಂಗಾತಿಯಿಂದ ನಿರೀಕ್ಷೆ ಇಟ್ಟುಕೊಳ್ಳುವುದು ಸಾಮಾನ್ಯ. ಆದಾಗ್ಯೂ, ಇತರ ಜವಾಬ್ದಾರಿಗಳನ್ನು ಗಮನದಲ್ಲಿಟ್ಟುಕೊಳ್ಳದೆ ಹೊದರೇ, ಅವು ಅವಾಸ್ತವಿಕವಾಗಬಹುದು ಏಕೆಂದರೆ ಇನ್ನೊಂದು ಬದಿಯಲ್ಲಿರುವ ವ್ಯಕ್ತಿಗೆ ಅವುಗಳನ್ನು ಪೂರೈಸಲು ಸಾಧ್ಯವಾಗದಿರಬಹುದು.

ಇದನ್ನೂ ಓದಿ: Relationships Tips: ನಿಮ್ಮಲ್ಲಿ ಈ ಗುಣವಿದ್ದರೆ ಮಾತ್ರ ನಿಮ್ಮ ಪ್ರೀತಿ ನಿಜವಾಗಿರಲು ಸಾಧ್ಯ

ನಿಮ್ಮ ಸಂಗಾತಿಯಿಂದ ನೀವು ಅವಾಸ್ತವಿಕ ನಿರೀಕ್ಷೆಗಳನ್ನು ಹೊಂದಿದ್ದರೆ ಏನಾಗುತ್ತೆ?

ನಿರೀಕ್ಷೆಗಳು ಅವಾಸ್ತವಿಕವಾದಾಗ ಅದು ಅತೃಪ್ತಿ, ನಿರಾಶೆ ಮತ್ತು ಅದರ ಪರಿಣಾಮವಾಗಿ ಅಸಮಾಧಾನ, ಕೋಪ ಹಾಗೂ ಅತೃಪ್ತಿಗೆ ಕಾರಣವಾಗಬಹುದು. ಇದು ದಂಪತಿ ಮಧ್ಯೆ ಸಂಘರ್ಷಗಳಿಗೆ ಕಾರಣವಾಗಬಹುದು. ಕೆಲವೊಮ್ಮೆ ಸಂದರ್ಭಗಳು ಎಲ್ಲದಕ್ಕೂ ಕಾರಣವಾಗುತ್ತದೆ. ಹಾಗಾಗಿ ನೀವು ಅವರನ್ನು ಅರ್ಥ ಮಾಡಿಕೊಳ್ಳುವುದು ಒಳ್ಳೆಯದು.

ಅವಾಸ್ತವಿಕ ನಿರೀಕ್ಷೆಗಳನ್ನು ಬಾರದಿರಲು ಏನು ಮಾಡಬಹುದು?

– ನಿಮ್ಮ ನಿರೀಕ್ಷೆಗಳನ್ನು ಮೌಲ್ಯಮಾಪನ ಮಾಡಲು ಸಿದ್ಧರಾಗಿ. ಅಂದರೆ ಸರಿಯೋ ತಪ್ಪೋ ಯೋಚಿಸಿ.

– ಇತರ ವ್ಯಕ್ತಿಯ ಸಾಮರ್ಥ್ಯ ಏನು ಎಂದು ಯೋಚಿಸಿ, ಇನ್ನೊಬ್ಬರೊಂದಿಗೆ ಹೋಲಿಕೆ ಮಾಡ ಬೇಡಿ.

– ನಿಮ್ಮ ಸಂತೋಷ ಕ್ಕಾಗಿ ಇನ್ನೊಬ್ಬರಿಗೆ ಹೊರೆಯಾಗಲು ಬಿಡಬೇಡಿ.

– ಅವರು ನಿಮಗಾಗಿ ಏನು ಮಾಡಬಹುದು ಎಂಬುದನ್ನುಅರ್ಥಮಾಡಿಕೊಳ್ಳಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 5:48 pm, Thu, 20 April 23

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್