Kannada News Lifestyle Relationship Tips : What is the best way to make your wife fall in love with you? Kannada News
Relationship Tips: ಹೆಂಡ್ತಿಗೆ ನಿಮ್ಮ ಮೇಲೆ ಪ್ರೀತಿ ಹೆಚ್ಚಾಗಲು ಈ ಕೆಲಸ ಮೊದ್ಲು ಮಾಡಿ
ಗಂಡ ಹೆಂಡಿರ ನಡುವಿನ ಸಂಬಂಧವು ಹಾಲು ಜೇನಿನಂತಿರಬೇಕು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಸಾಗಿದಾಗ ಸಂಸಾರದಲ್ಲಿ ಖುಷಿ ನೆಲೆಸಲು ಸಾಧ್ಯ. ಆದರೆ ಕೆಲವೊಮ್ಮೆ ಗಂಡ ಹೆಂಡತಿ ಈ ನಡವಳಿಕೆಗಳು ಸಂಸಾರದಲ್ಲಿನ ನೆಮ್ಮದಿಯನ್ನು ಹಾಳು ಮಾಡುತ್ತದೆ. ಆದರೆ ವಿವಾಹಿತ ಪುರುಷರು ಈ ಕೆಲಸಗಳನ್ನು ತಪ್ಪದೇ ಮಾಡಿದ್ರೆ ಹೆಂಡತಿಗೆ ತನ್ನ ಗಂಡನ ಮೇಲಿನ ಪ್ರೀತಿಯು ಹೆಚ್ಚಾಗುತ್ತದೆಯಂತೆ. ಹಾಗಾದ್ರೆ ಆ ಕೆಲವು ಸೂಕ್ಷ್ಮ ವಿಷಯಗಳ ಬಗೆಗಿನ ಮಾಹಿತಿ ಇಲ್ಲಿದೆ.
ಸಾಂದರ್ಭಿಕ ಚಿತ್ರ
Follow us on
ದಾಂಪತ್ಯ ಜೀವನವು ಸದಾ ಖುಷಿಯಿಂದ ಕೂಡಿರಬೇಕು ಎನ್ನುವುದಿರುತ್ತದೆ. ಗಂಡ ಹೆಂಡಿರಿಯರಿಬ್ಬರೂ ಜೊತೆಯಾಗಿ ಸುಂದರವಾದ ಬದುಕು ಕಟ್ಟಿಕೊಳ್ಳಲು ಹೊಂದಾಣಿಕೆಯು ಅತ್ಯಗತ್ಯ. ಆದರೆ ಕೆಲವೊಮ್ಮೆ ಸಂಗಾತಿಗಳಿಬ್ಬರ ನಡುವಿನ ಸಣ್ಣ ಪುಟ್ಟ ಜಗಳವು ಸಂಸಾರದಲ್ಲಿ ನೆಮ್ಮದಿಯಿಲ್ಲದಂತೆ ಮಾಡುತ್ತದೆ. ಪ್ರಾರಂಭದ ದಿನಗಳಲ್ಲಿ ಇದ್ದ ಪ್ರೀತಿಗೂ ವರ್ಷಗಳು ಉರುಳಿದಂತೆ ಇಬ್ಬರ ನಡುವಿನ ಪ್ರೀತಿಯಲ್ಲಿ ಸಾಕಷ್ಟು ವ್ಯತ್ಯಾಸವಿರುತ್ತದೆ. ಹೆಂಡತಿಗೆ ನಿಮ್ಮ ಮೇಲೆ ಪ್ರೀತಿ ತುಂಬಿರಲು ಈ ಕೆಲಸವನ್ನು ತಪ್ಪದೇ ಮಾಡಲೇಬೇಕು. ಈ ಕೆಲವು ವಿಚಾರಗಳು ಸಂಬಂಧವನ್ನು ಬಲಪಡಿಸಲು ಸಹಕಾರಿಯಾಗಿದೆ.
ಮನೆ ಕೆಲಸದಲ್ಲಿ ಸಹಾಯ ಮಾಡಿ : ಅನೇಕ ಮಹಿಳೆಯರು ಗೃಹಿಣಿಯಾಗಿ ಮನೆ ಮಕ್ಕಳು ಸಂಸಾರವನ್ನು ನಿಭಾಯಿಸಿಕೊಂಡು ಹೋಗುತ್ತಾರೆ. ಆದರೆ ಬಿಡುವಿನ ಸಮಯದಲ್ಲಿ ತನ್ನ ಗಂಡ ಕೂಡ ಮನೆಗೆಲಸದಲ್ಲಿ ಸಹಾಯ ಮಾಡಲಿ ಎನ್ನುವುದಿರುತ್ತದೆ. ಆದರೆ ಸದಾ ಆಫೀಸ್ ಕೆಲಸಗಳಲ್ಲಿ ಬ್ಯುಸಿಯಾಗಿರುವುದರಿಂದ ಇದು ದಾಂಪತ್ಯ ಜೀವನದಲ್ಲಿ ಅಂತರಕ್ಕೆ ಕಾರಣವಾಗುತ್ತದೆ. ಹೀಗಾಗಿ ಸಂಗಾತಿಯಾದವನು ಮನೆ ಕೆಲಸದಲ್ಲಿ ತನ್ನ ಪತ್ನಿಗೆ ಸಹಾಯ ಮಾಡುವುದರಿಂದ ಪತಿ-ಪತ್ನಿಯರ ನಡುವಿನ ಪ್ರೀತಿಯು ಹೆಚ್ಚಾಗುತ್ತದೆ. ಮನೆಕೆಲಸಗಳಲ್ಲಿ ಗಂಡನ ಪಾಲ್ಗೊಳ್ಳುವಿಕೆ ಹೆಚ್ಚಾದರೆ, ಹೆಂಡತಿ ಪತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧಳಿರುತ್ತಾಳೆ.
ಭಾವನೆಗಳನ್ನು ಅರ್ಥ ಮಾಡಿಕೊಳ್ಳಿ : ಪ್ರತಿಯೊಬ್ಬ ಹೆಣ್ಣು ಕೂಡ ತನ್ನ ಗಂಡ ತಾನು ಹೇಳದೇ ಇದ್ದರೂ ತನ್ನ ಭಾವನೆಗಳನ್ನು ಅರ್ಥ.ಮಾಡಿಕೊಳ್ಳಲಿ ಎಂದು ಬಯಸುತ್ತಾಳೆ. ಅಂತಹ ಸಂಗಾತಿ ಸಿಕ್ಕರೆ ನನಗಿಂತ ಅದೃಷ್ಟವಂತೆ ಬೇರೆ ಯಾರು ಇಲ್ಲ ಎಂದುಕೊಳ್ಳುತ್ತಾಳೆ. ಸಾಂಸಾರಿಕ ಜೀವನ ಸುಖಕರವಾಗಿರಬೇಕೆಂದರೆ ಹೆಂಡ್ತಿಯ ಭಾವನೆಯನ್ನು ಅರ್ಥಮಾಡಿಕೊಳ್ಳಿ. ಪತ್ನಿಯ ಕೆಲಸವನ್ನು ಶ್ಲಾಘಿಸಿ ಮತ್ತು ಅಭಿನಂದನೆ ತಿಳಿಸಿ. ಇದರಿಂದ ಪತ್ನಿಗೆ ನಿಮ್ಮ ಮೇಲೆ ಗೌರವ, ಪ್ರೀತಿ ಹೆಚ್ಚುತ್ತದೆ. ಅವರ ಸಣ್ಣ ಪುಟ್ಟ ಆಸೆ ಹಾಗೂ ಅಗತ್ಯಗಳನ್ನು ಪೂರೈಸಿದರೆ ಆಕೆ ಖುಷಿಯಾಗಿರುತ್ತಾಳೆ.
ಯಾವಾಗಲೂ ಪ್ರೀತಿ ತೋರಿಸಿ : ಪತ್ನಿಯು ತನ್ನ ಪತಿಯಿಂದ ಬಯಸುವುದು ಪ್ರೀತಿ, ಕಾಳಜಿ ಹಾಗೂ ಒಂದೊಳ್ಳೆ ಮಾತುಗಳು. ಹೀಗಾಗಿ ಮನೆ ಕೆಲಸದಲ್ಲಿ ಸಹಾಯ ಮಾಡುವ ಮೂಲಕ ಪ್ರೀತಿ ತೋರಿಸಿ, ಆಗಾಗ ತಬ್ಬಿಕೊಳ್ಳಿ, ಮುತ್ತು ನೀಡಿ, ಅವರ ಫೇವರಿಟ್ ತಿಂಡಿಯನ್ನು ನಿಮ್ಮ ಕೈಯಾರೆ ಮಾಡಿಕೊಡಿ. ಈ ರೀತಿ ಪ್ರೀತಿ ತೋರಿಸಿದರೆ ಯಾವ ಹೆಣ್ಣು ಕೂಡ ತನ್ನ ಗಂಡನ ಪ್ರೀತಿ ಕರಗುತ್ತಾಳೆ. ಇದು ದಾಂಪತ್ಯ ಜೀವನದಲ್ಲಿ ತನ್ನ ಪತಿಯ ಮೇಲೆ ಪತ್ನಿಗೆ ಪ್ರೀತಿ ಹೆಚ್ಚಾಗಲು ಕಾರಣವಾಗುತ್ತದೆ.
ಎಷ್ಟೇ ಬ್ಯುಸಿಯಿದ್ರು ಸಮಯ ಕೊಡಿ : ಸಂಬಂಧದಲ್ಲಿ ಪ್ರೀತಿ, ಕಾಳಜಿ ಹಾಗೂ ನಂಬಿಕೆ ಬಹಳ ಮುಖ್ಯ. ಅದರಂತೆ, ಒಬ್ಬರಿಗೊಬ್ಬರು ಸಮಯ ಮೀಸಲಿಡುವುದು ಅಷ್ಟೇ ಮುಖ್ಯವಾಗಿದೆ. ಪತಿಯಾದವನು ಎಷ್ಟೇ ಬ್ಯುಸಿಯಿದ್ರು ತನ್ನ ಪತ್ನಿಗಾಗಿ ಸಮಯ ಮೀಸಲಿಡಬೇಕು. ಆಕೆಯ ಇಷ್ಟ ಕಷ್ಟಗಳಿಗೆ, ಬೇಕು ಬೇಡಗಳಿಗೆ ಕಿವಿಯಾಗಬೇಕು. ಒಳ್ಳೆಯದು ಕೆಟ್ಟದ್ದನ್ನು ಕೇಳಿ ಆಕೆಯೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು. ಇದರಿಂದ ದಂಪತಿಗಳ ನಡುವಿನ ಬಾಂಧವ್ಯ ಹೆಚ್ಚುತ್ತದೆ. ಈ ಕೆಲವು ಸೂಕ್ಷ್ಮ ವಿಚಾರಗಳಿಂದ ಹೆಂಡ್ತಿಗೆ ಗಂಡನ ಮೇಲಿನ ಪ್ರೀತಿ ದುಪ್ಪಾಟ್ಟಾಗುತ್ತದೆ.