Relationship Tips : ನೀವು ಅರೇಂಜ್ ಮ್ಯಾರೇಜ್ ಆಗ್ತಾ ಇದ್ದೀರಾ? ಮೊದಲ ಭೇಟಿಯಲ್ಲಿ ಈ ತಪ್ಪು ಮಾಡ್ಬೇಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 18, 2024 | 4:24 PM

ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ. ದೇವರು ಒಂದು ಗಂಡಿಗೆ ಈ ಹೆಣ್ಣು, ಒಂದು ಹೆಣ್ಣಿಗೆ ಈ ಗಂಡು ಅಂತ ಮೊದಲೇ ನಿಶ್ಚಯ ಮಾಡಿರುತ್ತಾನೆಯೇ ಎಂದು ಹೇಳುವುದಿದೆ. ಆದರೆ ಕೆಲವರು ತಾವೇ ಇಷ್ಟ ಪಟ್ಟ ಹುಡುಗ ಅಥವಾ ಹುಡುಗಿಯನ್ನು ಮದುವೆ ಮಾಡಿಕೊಂಡರೆ, ಇನ್ನು ಕೆಲವರು ಮನೆಯವರೇ ನೋಡಿದ ಹುಡುಗ ಅಥವಾ ಹುಡುಗಿಯ ಕೈ ಹಿಡಿಯುತ್ತಾರೆ. ಆದರೆ ವೈವಾಹಿಕ ಜೀವನಕ್ಕೆ ಕಾಲಿಡುವ ಮುನ್ನ ಮಾನಸಿಕವಾದ ಸಿದ್ಧತೆಯು ಕೂಡ ಅಷ್ಟೇ ಮುಖ್ಯ. ಹುಡುಗಿ ನೋಡಲು ಹೋದಾಗ ಅಥವಾ ಮೊದಲ ಭೇಟಿಯ ವೇಳೆ ಅಪ್ಪಿ ತಪ್ಪಿಯು ಈ ಕೆಲವು ತಪ್ಪುಗಳನ್ನು ಮಾಡದೇ ಇರುವುದು ಉತ್ತಮ.

Relationship Tips : ನೀವು ಅರೇಂಜ್ ಮ್ಯಾರೇಜ್ ಆಗ್ತಾ ಇದ್ದೀರಾ? ಮೊದಲ ಭೇಟಿಯಲ್ಲಿ ಈ ತಪ್ಪು ಮಾಡ್ಬೇಡಿ
ಸಾಂದರ್ಭಿಕ ಚಿತ್ರ
Follow us on

ಮದುವೆ ಎರಡು ಕುಟುಂಬಗಳ ಬೆಸುಗೆ ಮಾತ್ರವಲ್ಲದೇ ಎರಡು ಮನಸ್ಸುಗಳ ಸಮ್ಮಿಲನ. ಈ ಬಂಧದಿಂದ ಹೆಣ್ಣು ಗಂಡಿನ ಬದುಕಿನಲ್ಲಿ ಮಹತ್ತರದ ಬದಲಾವಣೆಯಾಗುತ್ತದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಪ್ರೀತಿಸಿ ಮದುವೆಯಾಗುವವರ ಸಂಖ್ಯೆ ಹೆಚ್ಚಾಗಿರುವ ಕಾರಣ ಅಂತಹದ್ದೇನು ಸಮಸ್ಯೆಯಾಗಲ್ಲ. ಆದರೆ ಗುರು ಹಿರಿಯರು ನಿಶ್ಚಯಿಸಿ, ಆದ ಮದುವೆಯಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಅದಲ್ಲದೇ ಗಂಡು ಹೆಣ್ಣು ಮೊದಲ ಬಾರಿಗೆ ಭೇಟಿಯಾಗುತ್ತಿದ್ದರೆ ಈ ಕೆಲವು ವಿಷಯಗಳಿಗೆ ಹೆಚ್ಚು ಗಮನ ಕೊಡುವುದು ಸೂಕ್ತ.

  • ತುಂಬಾ ಅಲಂಕಾರ ಮಾಡಿಕೊಳ್ಳಬೇಡಿ : ಹುಡುಗ ನೋಡಲು ಬರುತ್ತಿದ್ದಾನೆ ಎಂದರೆ ಹೆಣ್ಣು ಮಗಳು ಅತಿಯಾಗಿ ಅಲಂಕಾರ ಮಾಡಿಕೊಳ್ಳುವ ಅಗ್ಯತವಿಲ್ಲ. ಸೀರೆ, ಚೂಡಿದಾರ್, ಜೀನ್ಸ್ ಹೀಗೆ ನಿಮಗೆ ಯಾವುದು ಸೂಕ್ತ ಅನಿಸುತ್ತದೆಯೋ ಆ ಉಡುಗೆ ಧರಿಸುವುದು ಒಳ್ಳೆಯದು. ಅರೇಂಜ್ ಮ್ಯಾರೇಜ್‌ನಲ್ಲಿ ಮೊದಲ ಸಂಬಂಧವೇ ಓಕೆ ಆಗಿ ಮದುವೆವರೆಗೂ ತಲುಪುತ್ತದೆ ಎಂದು ಹೇಳಲು ಆಗುವುದಿಲ್ಲ. ಮದುಮಗಳ ರೀತಿ ಅಲಂಕಾರ ಮಾಡಿಕೊಂಡರೆ ಆ ಸಂಬಂಧವೂ ಮುಂದುವರೆಯದಿದ್ದರೆ ಮನಸ್ಸಿಗೆ ಬೇಸರವಾಗಬಹುದು.
  • ಫೋನ್ ನಂಬರ್ ಹಂಚಿಕೊಳ್ಳಬೇಡಿ : ಮೊದಲ ಭೇಟಿಯಲ್ಲೇ ಮೊಬೈಲ್ ನಂಬರ್ ಹಂಚಿಕೊಳ್ಳುವುದು ಸರಿಯಲ್ಲ. ಮನೆಯವರು ಸಂಪೂರ್ಣವಾಗಿ ಒಪ್ಪಿಗೆ ಸೂಚಿದರೆ ಮಾತ್ರ ಫೋನ್ ನಂಬರ್ ಹಂಚಿಕೊಳ್ಳಿ ಅಥವಾ ಸೋಶಿಯಲ್ ಮೀಡಿಯಾದಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ನಂಬರ್ ವಿನಿಮಯ ಮಾಡಿಕೊಳ್ಳಿ. ಮೊದಲ ಭೇಟಿಯಲ್ಲೇ ಫೋನ್ ನಂಬರ್ ಬದಲಾವಣೆ ಹಾಗೂ ಖಾಸಗಿ ವಿಷಯ ವಿನಿಮಯ ಮಾಡಿಕೊಳ್ಳುವುದನ್ನು ಆದಷ್ಟು ತಪ್ಪಿಸುವುದು ಉತ್ತಮ.
  • ಹಣಕಾಸಿನ ಮಾತುಕತೆ ಬೇಡ : ಸಾಮಾನ್ಯವಾಗಿ ಅರೇಂಜ್ ಮ್ಯಾರೇಜ್‌ನಲ್ಲಿ ಮನೆಯವರು ಹುಡುಗನ ಹಣ, ಆಸ್ತಿಯನ್ನು ನೋಡುತ್ತಾರೆ. ಅದಲ್ಲದೇ, ಹುಡುಗ ಸಂಬಳ ಎಷ್ಟು, ಹುಡುಗಿ ದುಡಿಯುತ್ತಿದ್ದರೆ ಅವಳಿಗೆ ಎಷ್ಟು ಸಂಬಳ ಬರುತ್ತದೆ ಎಂದು ಕೇಳುವುದನ್ನು ನೋಡಿರಬಹುದು. ಹುಡುಗಿ ನೋಡಲು ಹೋದ ಮೊದಲೇ ದಿನವೇ ಹಣಕಾಸಿಗೆ ಸಂಬಂಧ ಪಟ್ಟ ವಿಷಯಗಳ ಬಗ್ಗೆ ಮಾತನಾಡುವುದು ಸರಿಯಲ್ಲ. ಇದು ನಿಮ್ಮ ಜೊತೆಗೆ ಸಂಬಂಧ ಬೆಳೆಸುವ ಕುಟುಂಬಕ್ಕೆ ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆಯೇ ಹೆಚ್ಚು.
  • ಹಳೆಯ ಪ್ರೇಮದ ಪ್ರಸ್ತಾಪ ಬೇಡ : ಮನೆಯವರು ನೋಡಿದ ಹುಡುಗ ಅಥವಾ ಹುಡುಗಿಯನ್ನು ಮದುವೆಯಾಗುತ್ತೀರಿ ಎಂದಾದರೆ ಹಳೆಯ ಪ್ರೀತಿಯ ಬಗ್ಗೆ ಮೊದಲ ಭೇಟಿಯಲ್ಲೇ ಹೇಳಬೇಡಿ. ಈ ವಿಷಯದಿಂದಲೇ ಮದುವೆ ಪ್ರಸ್ತಾಪವೂ ಮುರಿದು ಬೀಳುವ ಸಾಧ್ಯತೆಯೇ ಹೆಚ್ಚು. ಹಾಗೆಂದ ಮಾತ್ರ ಈ ವಿಷಯವೂ ಮುಚ್ಚಿಡುವುದು ಸರಿಯಲ್ಲ. ಹೀಗಾಗಿ ಸರಿಯಾದ ಸಂದರ್ಭ ನೋಡಿಕೊಂಡು ಮದುವೆಗೂ ಮುಂಚೆಯೇ ಮುರಿದು ಹೋದ ಹಳೆಯ ಪ್ರೀತಿಯ ಬಗ್ಗೆ ತಿಳಿಸಿ. ಈ ವಿಷಯ ತಿಳಿದ ಬಳಿಕ ಎದುಗಿರುವ ವ್ಯಕ್ತಿಯು ಮದುವೆಯಾಗಲು ಓಕೆ ಎಂದರೆ ಖುಷಿಯಿಂದಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟು ಸುಖವಾಗಿ ಬದುಕಿ.
  • ಇಬ್ಬರೂ ಸೇರಿ ಬಿಲ್ ಪಾವತಿಸಿ : ಗುರು ಹಿರಿಯರು ನಿಶ್ಚಯಿಸಿದ ಸಂಬಂಧಗಳಲ್ಲಿ ಗಂಡು ಹೆಣ್ಣು ವೈಯುಕ್ತಿಕ ಮಾತುಕತೆಗಾಗಿ ರೆಸ್ಟೋರೆಂಟ್ ಅಥವಾ ಕಾಫಿ ಡೇಯಲ್ಲಿ ಭೇಟಿಯಾಗುವುದಿದೆ. ಈ ವೇಳೆ ಬಿಲ್ ಅನ್ನು ಒಬ್ಬರೇ ಪಾವತಿಸುವುದಕ್ಕಿಂತ ಇಬ್ಬರೂ ಹಂಚಿಕೊಳ್ಳಿ. ಇನ್ನು ಬಿಲ್ ಯಾವತ್ತೂ ಹುಡುಗ ಕೊಡಬೇಕೆಂದೇನಿಲ್ಲ. ಶೇರ್ ಮಾಡುವ ಎಂದು ಹೇಳುವ ಗುಣವೂ ಹುಡುಗಿಗೆ ಇರಬೇಕು. ಇದು ನೀವು ಹೇಗೆ ಎನ್ನುವುದನ್ನು ತಿಳಿಸುತ್ತದೆ.
  • ಮನಸ್ಸಿನಲ್ಲಿರುವ ಪ್ರಶ್ನೆಗಳನ್ನು ಕೇಳಿ : ಮದುವೆ ಎನ್ನುವುದು ಗಂಡು ಹೆಣ್ಣಿನ ಬದುಕಿನಲ್ಲಿ ತಿರುವಿನ ಘಟ್ಟ. ಮೊದಲ ಭೇಟಿಯಲ್ಲಿ, ಆತ ಅಥವಾ ಆಕೆಯಲ್ಲಿ ನಿಮ್ಮ ಸಂಗಾತಿಯಲ್ಲಿ ಬಯಸುವ ಗುಣಗಳಿವೆಯೇ ಎಂದು ತಿಳಿಯಲು ಪ್ರಶ್ನೆಗಳನ್ನು ಕೇಳಲು ಹಿಂಜರಿಯೇಡಿ. ಏನು ಓದಿದ್ದೀರಿ, ಎಲ್ಲಿ ಕೆಲಸ, ನಿಮ್ಮ ಆಸಕ್ತಿ ಏನು, ಗುರಿಯ ಕುರಿತು ಪ್ರಶ್ನೆಗಳನ್ನು ಕೇಳಿದರೆ ಎಲ್ಲಾ ಗೊಂದಲಗಳಿಗೂ ಉತ್ತರ ಸಿಗುತ್ತದೆ. ನಿಮ್ಮ ಸಂಗಾತಿಯ ಬಗ್ಗೆ ಏನು ಅರಿಯದೆ ಇದ್ದರೆ ಅವರೊಂದಿಗೆ ಜೀವನ ನಡೆಸಲು ಕಷ್ಟವಾಗಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ