ಸಾಂದರ್ಭಿಕ ಚಿತ್ರ
ಮದುವೆಯಾಗುವ ಯುವಕ ಯುವತಿಯರು ತಮ್ಮ ಸಂಗಾತಿಯ ಬಗ್ಗೆ ಕೆಲವು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ ಹೆಣ್ಣು ಮಕ್ಕಳು ನಿರೀಕ್ಷೆಗಳು ಸಣ್ಣ ಸಣ್ಣದಿದ್ದರೂ ಕೂಡ ಆಕೆಗೆ ಆ ನಿರೀಕ್ಷೆಗಳು ಈಡೇರಿದಾಗ ಆದರಿಂದ ಸಿಗುವ ಖುಷಿಯು ಬೇರೆ ಯಾವುದರಿಂದಲೂ ಸಿಗುವುದೇ ಇಲ್ಲ. ಆದರೆ ಗಂಡು ಅಂದುಕೊಳ್ಳುವುದು ತನ್ನ ಪ್ರೇಮಿ ಅಥವಾ ಸಂಗಾತಿಯನ್ನು ಖುಷಿಯಾಗಿಡಲು ದುಡ್ಡಿದರೆ ಸಾಕು. ಹೀಗಾಗಿ ಬಹುತೇಕ ಪುರುಷರು ಮಹಿಳೆಯರಿಗೆ ಐಷಾರಾಮಿ ಜೀವನವನ್ನು ಒದಗಿಸಲು ಒದ್ದಾಡುತ್ತಾರೆ. ಆದರೆ ಹೆಣ್ಣು ತನ್ನ ಸಂಗಾತಿಯಿಂದ ಹಣಕ್ಕಿಂತ ಹೆಚ್ಚಿನದ್ದನ್ನು ನಿರೀಕ್ಷಿಸುತ್ತಾಳೆ. ಪುರುಷರು ಈ ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡರೆ ಸಂಬಂಧವು ಗಟ್ಟಿಯಾಗಿರಲು ಸಾಧ್ಯ.
- ಗಂಡನು ತನ್ನನ್ನು ಗೌರವಿಸಬೇಕು : ಸಂಬಂಧವು ಗಟ್ಟಿಯಾಗಿರಲು ಗೌರವವು ಅತ್ಯಂತ ಮುಖ್ಯವಾದ ವಿಷಯವಾಗಿದೆ. ಪ್ರತಿಯೊಬ್ಬ ಹೆಂಡತಿ ಅಥವಾ ಪ್ರೇಮಿಯು ತಮ್ಮ ಸಂಗಾತಿಯನ್ನು ಗೌರವಿಸಬೇಕೆಂದು ನಿರೀಕ್ಷಿಸುತ್ತಾರೆ. ಅದರಲ್ಲಿಯು ಮಹಿಳೆಯರ ಬಗ್ಗೆ ವೈಯಕ್ತಿಕ ಮಾಹಿತಿಯನ್ನು ಬೇರೆ ಯಾರ ಬಳಿಯು ಹಂಚಿಕೊಳ್ಳದಿರುವುದು ಇದರಲ್ಲಿ ಸೇರಿರುತ್ತದೆ. ಇತರರ ಮುಂದೆ ತನ್ನೊಂದಿಗೆ ಜೋರಾಗಿ ಅಥವಾ ಕೋಪದಿಂದ ಮಾತನಾಡಬಾರದು ಎಂದು ಹೆಣ್ಣು ಮಕ್ಕಳು ಬಯಸುತ್ತಾರೆ.
- ಪಾಲುದಾರರಿಂದ ಭಾವನಾತ್ಮಕ ಬೆಂಬಲ : ಮಹಿಳೆಯರು ತಮ್ಮ ಪಾಲುದಾರರಿಂದ ಭಾವನಾತ್ಮಕ ಬೆಂಬಲವನ್ನು ಸದಾ ನಿರೀಕ್ಷಿಸುತ್ತಾರೆ. ತಮ್ಮ ಸಂಗಾತಿಯೊಂದಿಗೆ ದೈನಂದಿನ ಸಂಭಾಷಣೆಗಳೊಂದಿಗೆ ಸಂತೋಷ ಮತ್ತು ದುಃಖಗಳನ್ನು ಹಂಚಿಕೊಳ್ಳಲು ಇಷ್ಟಪಡುತ್ತಾರೆ. ಹೀಗಾಗಿ ತಮ್ಮ ಸಂಗಾತಿಯಲ್ಲಿ ಸ್ನೇಹಿತನನ್ನು ಕಾಣುತ್ತಾರೆ. ತನ್ನ ನೋವು ಹಾಗೂ ದುಃಖಗಳಿಗೆ ಸದಾ ಭಾವನಾತ್ಮಕ ಬೆಂಬಲವನ್ನು ನೀಡಬೇಕು ಅಂದುಕೊಳ್ಳುತ್ತಾರೆ.
- ಸದಾ ಸಮಯ ಕೊಡುವ ಸಂಗಾತಿಯಿರಬೇಕು: ಹುಡುಗಿಯರು ಹಣಕ್ಕಿಂತ ಹೆಚ್ಚಾಗಿ ಸಮಯಕ್ಕೆ ಬೆಲೆ ಕೊಡುತ್ತಾರೆ. ಬಿಡುವು ಸಿಕ್ಕಾಗಲೆಲ್ಲಾ ತನಗಾಗಿ ಸಮಯ ಕೊಡುವ ಸಂಗಾತಿಯು ಸಿಕ್ಕಿ ಬಿಟ್ಟರೆ ಅದಕ್ಕಿಂತ ಖುಷಿ ಬೇರೊಂದು ಇಲ್ಲ. ಇಬ್ಬರೂ ಜೊತೆಯಾಗಿ ಲಾಂಗ್ ಡ್ರೈವ್‌ಗೆ ಹೋಗುವುದು, ಪಾನಿಪುರಿ ಅಥವಾ ಐಸ್ ಕ್ರೀಂ ತಿನ್ನುವ ಸಣ್ಣಪುಟ್ಟ ವಿಷಯಗಳು ಹೆಣ್ಣು ಮಕ್ಕಳಿಗೆ ಖುಷಿ ಕೊಡುತ್ತವೆ.
- ವೃತ್ತಿ ಜೀವನಕ್ಕೂ ಪಾಲುದಾರನ ಬೆಂಬಲವಿರಲಿ : ಈಗಿನ ಕಾಲದಲ್ಲಿ ಮದುವೆಯಾದ ಮೇಲೂ ಉದ್ಯೋಗಕ್ಕೆ ತೆರಳುವ ಮಹಿಳೆಯರೇ ಹೆಚ್ಚು. ಹೀಗಾಗಿ ತಮ್ಮ ವೃತ್ತಿಜೀವನದಲ್ಲಿ ಮುನ್ನಡೆಯಲು ತಮ್ಮ ಪಾಲುದಾರರನ್ನು ಬೆಂಬಲ ನೀಡಬೇಕೆಂದು ಹೆಣ್ಣಾದವಳು ಬಯಸುತ್ತಾಳೆ. ಕೆಲವು ಮಹಿಳೆಯರು ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಉದ್ಯೋಗಕ್ಕೆ ತೆರಳುವುದನ್ನು ನಿಲ್ಲಿಸಿ ಬಿಡುತ್ತಾರೆ. ಆದರೆ ತನ್ನ ವೃತ್ತಿ ಬದುಕಿಗೆ ಬೆಂಬಲ ನೀಡುವ ಸಂಗಾತಿ ಸಿಕ್ಕಿ ಬಿಟ್ಟರೆ ಆಕೆಯು ಖುಷಿ ಖುಷಿಯಿಂದಲೇ ಜೀವನ ನಡೆಸುತ್ತಾಳೆ.
- ಮನೆಯ ಜವಾಬ್ದಾರಿಗಳನ್ನು ಹಂಚಿಕೊಳ್ಳುವ ಸಂಗಾತಿ : ಹೊರಗೆ ಹೋಗಿ ದುಡಿಯುವ ಹೆಣ್ಣು ಮಕ್ಕಳು ಮನೆಯನ್ನು ನಿಭಾಯಿಸಿಕೊಂಡು ಹೋಗಬೇಕಾಗುತ್ತದೆ. ಹಾಗಂತ ಮನೆಕೆಲಸಗಳಿಂದ ವಿರಾಮ ತೆಗೆದುಕೊಳ್ಳಲು ಮಹಿಳೆ ಯು ಎಂದಿಗೂ ಬಯಸುವುದಿಲ್ಲ. ಬದಲಾಗಿ ಮಹಿಳೆಯರು ತಮ್ಮ ಸಂಗಾತಿಯು ಕನಿಷ್ಠ ಮನೆಯ ಜವಾಬ್ದಾರಿಗಳಲ್ಲಿ ಸಹಾಯ ಮಾಡಬೇಕೆಂದು ಬಯಸುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ