Respect In Relationship: ಗೌರವವೆಂಬುದು ಆರೋಗ್ಯಕರ ಸಂಬಂಧದ ಅಡಿಪಾಯ, ಪರಸ್ಪರ ಗೌರವಿಸಿದರೆ ಸಾಕು ನಿಮ್ಮ ಬಾಳು ಬಂಗಾರವಾಗುವುದು

|

Updated on: Feb 07, 2023 | 9:00 AM

ಯಾವುದೇ ಸಂಬಂಧವನ್ನು ಗಟ್ಟಿಯಾಗಿಸಲು ಪ್ರೀತಿ, ವಿಶ್ವಾಸ, ನಂಬಿಕೆ ಜತೆಗೆ ಪರಸ್ಪರ ಗೌರವವನ್ನು ಹೊಂದಿರುವುದು ಕೂಡ ಮುಖ್ಯವಾಗುತ್ತದೆ. ಪರಸ್ಪರ ತಿಳಿವಳಿಕೆಯು ಬಲವಾದ ಸಂಬಂಧದ ಅಡಿಪಾಯವನ್ನು ಬಲಪಡಿಸುತ್ತದೆ.

Respect In Relationship: ಗೌರವವೆಂಬುದು ಆರೋಗ್ಯಕರ ಸಂಬಂಧದ ಅಡಿಪಾಯ, ಪರಸ್ಪರ ಗೌರವಿಸಿದರೆ ಸಾಕು ನಿಮ್ಮ ಬಾಳು ಬಂಗಾರವಾಗುವುದು
Relationship
Follow us on

ಯಾವುದೇ ಸಂಬಂಧವನ್ನು ಗಟ್ಟಿಯಾಗಿಸಲು ಪ್ರೀತಿ, ವಿಶ್ವಾಸ, ನಂಬಿಕೆ ಜತೆಗೆ ಪರಸ್ಪರ ಗೌರವವನ್ನು ಹೊಂದಿರುವುದು ಕೂಡ ಮುಖ್ಯವಾಗುತ್ತದೆ.
ಪರಸ್ಪರ ತಿಳಿವಳಿಕೆಯು ಬಲವಾದ ಸಂಬಂಧದ ಅಡಿಪಾಯವನ್ನು ಬಲಪಡಿಸುತ್ತದೆ. ಆದರೆ ಇಂದಿನ ದಿನಗಳಲ್ಲಿ ದಂಪತಿ ನಡುವೆ ತರಾತುರಿಯಲ್ಲಿ ನಡೆಯುವ ಪ್ರೇಮ, ವಿವಾಹವು ವಿಚ್ಛೇದನದಿಂದ ಅಂತ್ಯಗೊಳ್ಳುತ್ತದೆ. ಆದರೆ ಪರಸ್ಪರ ಗೌರವ ಕೊಡದೇ ಇರುವುದು ನಾನೇ ಮೇಲೆಂಬ ಇಗೋ ವಿಚ್ಛೇದನಕ್ಕೆ ಕಾರಣವಾಗುತ್ತದೆ. ನೀವು ದೀರ್ಘಾವಧಿಯವರೆಗೆ ಸಂಬಂಧದಲ್ಲಿರಲು ಬಯಸಿದರೆ, ಒಬ್ಬರನ್ನೊಬ್ಬರು ಗೌರವಿಸುವುದು ಅವಶ್ಯಕ.

ಭಯವಿಲ್ಲದೆ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ
ನೀವು ನಿಮ್ಮ ಸಂಬಂಧವನ್ನು ದೀರ್ಘಕಾಲದವರೆಗೆ ಕೊಂಡೊಯ್ಯ ಬಯಸಿದರೆ ನಿಮ್ಮ ನಿಲುವು, ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಮಾತನಾಡಲು ಹಿಂಜರಿಯಬೇಡಿ.

ಹೇಗಿರುತ್ತೋ ಹಾಗೆಯೇ ಸ್ವೀಕರಿಸಿ
ಆ ವ್ಯಕ್ತಿ ಹೇಗಿರುತ್ತಾರೋ ಹಾಗೆಯೇ ಸ್ವೀಕರಿಸಲು ಪ್ರಯತ್ನ ಪಡಿ, ನೀವು ಇಷ್ಟಪಟ್ಟಂತಿಲ್ಲ ಅಥವಾ ಅವರು ನಾವು ಏನು ಹೇಳಿದರೂ ಕೇಳುತ್ತಾರೆ ಎಂದು ತಿಳಿದು ಅವರ ಮುಗ್ಧತೆಯನ್ನು ದುರುಪಯೋಗಪಡಿಸಿಕೊಳ್ಳಬೇಡಿ. ಅವರನ್ನು ಇದ್ದಂತೆಯೇ ಸ್ವೀಕರಿಸಿ.

ನಿಂದಿಸುವುದು ಹಾಗೂ ಶಪಿಸುವುದನ್ನು ತಪ್ಪಿಸಿ
ಕೆಲವೊಮ್ಮೆ ಚಿಕ್ಕಪುಟ್ಟ ವಿಚಾರಗಳಿಗೂ ಸಂಗಾತಿಯನ್ನು ದೂರುತ್ತೇವೆ, ಅವರದ್ದೇ ತಪ್ಪು ಎಂಬಂತೆ ಬಿಂಬಿಸುತ್ತೇವೆ. ಅಂತಹ ಸಂದರ್ಭದಲ್ಲಿ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ. ಎಲ್ಲಾ ವಿಚಾರಗಳಿಗೂ ಗದರಿಸುತ್ತಿದ್ದರೆ ಅವರು ನಿಮ್ಮಿಂದ ದೂರವಾಗುತ್ತಾರೆ.

ಮತ್ತಷ್ಟು ಓದಿ: Relationship Tips: ಯುವ ಪೀಳಿಗೆ ದೀರ್ಘಕಾಲ ಸಂಬಂಧದಲ್ಲಿ ಆಸಕ್ತಿ ಇಲ್ಲ, ತಜ್ಞರ ಅಭಿಪ್ರಾಯ ಇಲ್ಲಿದೆ

ಸಂಬಂಧದಲ್ಲಿ ಗೌರವ ಏಕೆ ಮುಖ್ಯ
ಸಂಬಂಧ ಬಲವಾಗಿರುತ್ತದೆ
ನೀವು ಒಬ್ಬರನ್ನೊಬ್ಬರು ಅರಿತುಕೊಂಡು ಪರಸ್ಪರ ಬೆಂಬಲ ನೀಡಿದರೆ ನಿಮ್ಮ ಸಂಬಂಧ ಬಲವಾಗಿರುತ್ತದೆ, ಯಾರೋ ಮೂರನೆಯ ವ್ಯಕ್ತಿ ನಿಮ್ಮ ಮಧ್ಯೆ ಬಂದು ನಿಮ್ಮನ್ನು ದೂರ ಮಾಡಲು ಸಾಧ್ಯವಿಲ್ಲ, ನೀವು ಇತರರಿಗೂ ಮಾರ್ಗದರ್ಶಿಯಾಗಬಹುದು.

ಕುಟುಂಬದಲ್ಲಿ ಸಂತಸದ ವಾತಾವರಣ
ನಿಮ್ಮ ಕುಟುಂಬದಲ್ಲಿ ಸಂತಸದ ವಾತಾವರಣವಿರುತ್ತದೆ, ಜಗಳ ಕಡಿಮೆ ಇರುತ್ತದೆ. ನಿಮ್ಮ ಮಧ್ಯೆ ವೈಮನಸ್ಸಿದ್ದರೆ ಅದರ ಪರಿಣಾಮ ನಿಮ್ಮ ಮನೆಯ ವಾತಾವರಣದ ಮೇಲೂ ಕೂಡ ಪರಿಣಾಮ ಬೀರುತ್ತದೆ.

 

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ