ಸಾಂದರ್ಭಿಕ ಚಿತ್ರ
Image Credit source: Getty Images
ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಾಗೂ ವಿವಿಧ ಉದ್ದೇಶಗಳ ಕಾರಣದಿಂದಾಗಿ ಪ್ರತಿ ತಿಂಗಳಲ್ಲೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ಅದೇ ರೀತಿ ವರ್ಷದ 9 ನೇ ತಿಂಗಳಾಗಿರುವ ಸೆಪ್ಟೆಂಬರ್ (September) ತಿಂಗಳು ವಿವಿಧ ರಾಷ್ಟ್ರೀಯ-ಅಂತಾರಾಷ್ಟ್ರೀಯ ಆಚರಣೆಗಳಿಂದ ತುಂಬಿದ ತಿಂಗಳು. ಶಿಕ್ಷಕರ ದಿನ, ಅಂತಾರಾಷ್ಟ್ರೀಯ ಸಾಕ್ಷರತಾ ದಿನ, ವಿಶ್ವ ಪ್ರಥಮ ಚಿಕಿತ್ಸಾ ದಿನ, ಎಂಜಿನಿಯರ್ ದಿನ ಸೇರಿದಂತೆ ಹತ್ತು ಹಲವು ವಿಶೇಷ ದಿನಾಚರಣೆಗಳನ್ನು ಈ ತಿಂಗಳು ಆಚರಿಸಲಾಗುತ್ತದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಆಚರಿಸಲಾಗುವ ದಿನಾಚರಣೆಗಳಾವುವು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ಆಚರಿಸಲಾಗುವ ರಾಷ್ಟ್ರೀಯ-ಅಂತಾರಾಷ್ಟ್ರೀಯ ದಿನಾಚರಣೆಗಳು:
- ಸೆಪ್ಟೆಂಬರ್ 1, 2025 – ರಾಷ್ಟ್ರೀಯ ಪೌಷ್ಟಿಕಾಂಶ ವಾರ
- ಸೆಪ್ಟೆಂಬರ್ 2, 2025 – ವಿಶ್ವ ತೆಂಗು ದಿನ
- ಸೆಪ್ಟೆಂಬರ್ 3, 2025 – ಗಗನಚುಂಬಿ ಕಟ್ಟಡಗಳ ದಿನ
- ಸೆಪ್ಟೆಂಬರ್ 5, 2025 – ಶಿಕ್ಷಕರ ದಿನಾಚರಣೆ
- ಸೆಪ್ಟೆಂಬರ್ 5, 2025 – ಅಂತಾರಾಷ್ಟ್ರೀಯ ದತ್ತಿ ದಿನ
- ಸೆಪ್ಟೆಂಬರ್ 5, 2025 – ಓಣಂ
- ಸೆಪ್ಟೆಂಬರ್ 8, 2025 – ಅಜ್ಜ-ಅಜ್ಜಿಯರ ದಿನ
- ಸೆಪ್ಟೆಂಬರ್ 8, 2025 – ಅಂತಾರಾಷ್ಟ್ರೀಯ ಸಾಕ್ಷರತಾ ದಿನ
- ಸೆಪ್ಟೆಂಬರ್ 10, 2025 – ವಿಶ್ವ ಆತ್ಮಹತ್ಯೆ ತಡೆ ದಿನ
- ಸೆಪ್ಟೆಂಬರ್ 11, 2025 – ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ
- ಸೆಪ್ಟೆಂಬರ್ 13, 2025 – ವಿಶ್ವ ಪ್ರಥಮ ಚಿಕಿತ್ಸಾ ದಿನ
- ಸೆಪ್ಟೆಂಬರ್ 13 , 2025 – ಅಂತಾರಾಷ್ಟ್ರೀಯ ಚಾಕೊಲೇಟ್ ದಿನಾಚರಣೆ
- ಸೆಪ್ಟೆಂಬರ್ 14, 2025 – ಹಿಂದಿ ದಿವಸ
- ಸೆಪ್ಟೆಂಬರ್ 15, 2025 – ಎಂಜಿನಿಯರ್ ದಿನ
- ಸೆಪ್ಟೆಂಬರ್ 15, 2025 – ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ
- ಸೆಪ್ಟೆಂಬರ್ 16, 2025 – ವಿಶ್ವ ಓಝೋನ್ ದಿನ
- ಸೆಪ್ಟೆಂಬರ್ 18, 2025 – ವಿಶ್ವ ಬಿದಿರು ದಿನ
- ಸೆಪ್ಟೆಂಬರ್ 20, 2025 – ಅಂತಾರಾಷ್ಟ್ರೀಯ ಕೆಂಪು ಪಾಂಡಾ ದಿನ
- ಸೆಪ್ಟೆಂಬರ್ 21, 2025 – ಅಂತಾರಾಷ್ಟ್ರೀಯ ಶಾಂತಿ ದಿನ
- ಸೆಪ್ಟೆಂಬರ್ 21, 2025 – ವಿಶ್ವ ಅಲ್ಝೈಮರ್ ದಿನ
- ಸೆಪ್ಟೆಂಬರ್ 22, 2025 – ರೋಸ್ ಡೇ (ಕ್ಯಾನ್ಸರ್ ರೋಗಿಗಳ ಕಲ್ಯಾಣ ದಿನ)
- ಸೆಪ್ಟೆಂಬರ್ 22, 2025 – ವಿಶ್ವ ಘೇಂಡಾಮೃಗ ದಿನ
- ಸೆಪ್ಟೆಂಬರ್ 26, 2025 – ವಿಶ್ವ ಗರ್ಭನಿರೋಧಕ ದಿನ
- ಸೆಪ್ಟೆಂಬರ್ 26, 2025 – ವಿಶ್ವ ಪರಿಸರ ಆರೋಗ್ಯ ದಿನ
- ಸೆಪ್ಟೆಂಬರ್ 27, 2025 – ವಿಶ್ವ ಪ್ರವಾಸೋದ್ಯಮ ದಿನ
- ಸೆಪ್ಟೆಂಬರ್ 28, 2025 – ವಿಶ್ವ ನದಿಗಳ ದಿನ
- ಸೆಪ್ಟೆಂಬರ್ 28, 2025 – ವಿಶ್ವ ಪ್ರವಾಸೋದ್ಯಮ ದಿನ
- ಸೆಪ್ಟೆಂಬರ್ 29, 2025 – ವಿಶ್ವ ಹೃದಯ ದಿನ
- ಸೆಪ್ಟೆಂಬರ್ 30, 2025 – ಅಂತಾರಾಷ್ಟ್ರೀಯ ಅನುವಾದ ದಿನ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ