ಕೊವಿಡ್ ಸಾಂಕ್ರಾಮಿಕ ರೋಗ ಎಲ್ಲರ ಮನಸ್ಥಿತಿಯನ್ನು ಕೆಡಿಸಿಬಿಟ್ಟಿತು. ಮಾನಸಿಕ ಹಾಗೂ ದೈಹಿಕ ಒತ್ತಡ ಜನರಲ್ಲಿ ಕಾಡತೊಡಗಿತು. ಹೀಗಿರುವಾಗ ಜನರು ಅನಗತ್ಯ ಚಿಂತೆಯನ್ನು ಬಿಟ್ಟು, ಧೈರ್ಯದಿಂದ ಸಮಸ್ಯೆಯನ್ನು ಎದುರಿಸಬೇಕು. ಜತೆಗೆ ಮಾನಸಿಕ ಒತ್ತಡದಿಂದ ಪರಿಹಾರ ಕಂಡುಕೊಳ್ಳಲೇ ಬೇಕು. ಯೋಗದ ಕೆಲವು ಆನಸಗಳು ನಿಮ್ಮ ಮಾನಸಿಕ ಒತ್ತಡವನ್ನು ಸುಧಾರಿಸುತ್ತದೆ. ಆರೋಗ್ಯದ ಸುರಕ್ಷತೆಗಾಗಿ ನಟಿ ಶಿಲ್ಪಾ ಶೆಟ್ಟಿ ಯೋಗಾಭ್ಯಾಸವನ್ನು ಮಾಡುತ್ತಾರೆ. ಇತರರಿಗೆ ಸ್ಪೂರ್ತಿ ನೀಡುವಂತಹ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಯೋಗ ಭಂಗಿಗಳನ್ನು ಮಾಡುವ ಮೂಲಕ ಇನಸ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ನಟಿ ಶಿಲ್ಪಾ ಶೆಟ್ಟಿ ಕೆಲವು ಯೋಗಗಳ ಆಸನಗಳನ್ನು ತಮ್ಮ ಇನ್ಸ್ಟಾಗ್ರಾಮ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ, ಇವುಗಳು ನಿಮ್ಮ ಮಾನಸಿಕ ಮತ್ತು ದೇಹದ ಒತ್ತಡವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಬರೆದುಕೊಂಡಿದ್ದಾರೆ.
ನಮ್ಮ ಮನಸ್ಸು ಶಾಂತಿಯಿಂದಿರಲು ಯೋಗಾಸನವು ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದರ ಜತೆಗೆ ನಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಯೋಗಾಸನ ಸಹಾಯಕವಾಗಿದೆ. ದೈಹಿಕ ಒತ್ತಡ ಮತ್ತು ಮಾನಸಿಕ ಆತಂಕವನ್ನು ನಿವಾರಿಸಲು ಈ ಆಸನ ಸಹಾಯ ಮಾಡುತ್ತದೆ. ಈ ಯೋಗಾಸನದ ಹೆಸರು ಪಾರ್ಶ್ವ ಸುಖಾಸನ. ದೈಹಿಕವಾಗಿ ನಿಮ್ಮ ಕುತ್ತಿಗೆ, ಭುಜಗಳು, ಬೆನ್ನಿನ ಭಾಗವನ್ನು ಹಿಗ್ಗಿಸಲು ಇದು ಸಹಾಯ ಮಾಡುತ್ತದೆ ಎಂದು ತಿಳಿಸುವ ಮೂಲಕ ಪೋಸ್ಟ್ ಹಂಚಿಕೊಂಡಿದ್ದಾರೆ.
ನಿಮಗೆ ಸಾಧ್ಯವಾದಾಗ ಸ್ವಲ್ಪ ವಿರಾಮ ತೆಗೆದುಕೊಳ್ಳಿ. ನಿಮ್ಮ ಮನಸ್ಸು ಶಾಂತವಾಗಿರಲಿ ಮತ್ತು ದೇಹವನ್ನು ಸಡಿಲವಾಗಿ ಬಿಡಿ. ಈ ಆಸನವನ್ನು ನಿಧಾನವಾಗಿ ಅಭ್ಯಾಸ ಮಾಡಿ.. ನಿಮ್ಮ ಮನಸ್ಸು ಮತ್ತು ದೇಹವು ಸಡಿಲವಾಗಿರಲಿ ಎಂದು ಹೇಳಿದ್ದಾರೆ.
ಪಾರ್ಶ್ವ ಸುಖಾಸನ ಮಾಡುವ ವಿಧಾನ
* ನೆಲದ ಮೇಲೆ ಚಾಪೆಯನ್ನು ಹಾಸಿಕೊಂಡು ಆರಾಮವಾಗಿ ಪದ್ಮಾಸನದಲ್ಲಿ ಕುಳಿತುಕೊಳ್ಳಿ
*ನಿಮ್ಮ ಎಡ ಬದಿಯ ಕೈಯನ್ನು(ಮೊಣಕೈ ಬಾಗಿರಲಿ) ಎಡಭಾಗದ ಕಾಲಿನ ಪಕ್ಕಕ್ಕೆ ಬಾಗಿಸಿ ನೆಲಕ್ಕೆ ಊರಿ
*ನಿಮ್ಮ ಬಲಭಾಗದ ಕೈಯನ್ನು ಮೇಲಕ್ಕೆ ಎತ್ತಿ ಎಡಭಾಗಕ್ಕೆ ಬಾಗಿ- 30 ಸೆಕೆಂಡುಗಳ ಕಾಲ ಹಾಗೆಯೇ ಇರಿ
*ಇದೇ ರೀತಿ ಬಲಭಾಗದ ಕೈಗಳನ್ನು ನೆಲಕ್ಕೆ ಊರಿ, ಎಡಗೈಯನ್ನು ಮೇಲಕ್ಕೆತ್ತಿ ಬಲ ಭಾಗದ ಕಡೆಗೆ ಬಾಗಿರಿ
*ಕನಿಷ್ಠ 5 ಬಾರಿಯಾದರೂ ಈ ಆಸನವನ್ನು ಮಾಡಿ
*ಮೊದಲಿಗೆ ಪ್ರಯಯತ್ನಿಸುವಾಗ ಬಹಳ ಎಚ್ಚರಿಕೆಯಿಂದರಿ
*ಯೋಗಸಾನ ಮಾಡುವಾಗ ಗಡಿಬಿಡಿ ಬೇಡ
*ಪ್ರತಿಯೊಂದು ಯೋಗ ಭಂಗಿಗಳಿಗೂ ಅದರದೇ ಆದ ಶೈಲಿಯಿದೆ. ಹಾಗಿರುವಾಗ ಆ ಆಸನದ ಕುರಿತಾಗಿ ಸಂಪೂರ್ಣವಾಗಿ ತಿಳಿದುಕೊಂಡು ನಂತರ ಯೋಗಾಭ್ಯಾಸ ಮಾಡುವುದು ಅತ್ಯವಶ್ಯಕ
ಇದನ್ನೂ ಓದಿ: