Sleeping Pills Side Effects: ದಿನ ರಾತ್ರಿ ನಿದ್ರೆ ಮಾತ್ರೆ ತೆಗೆದುಕೊಳ್ಳುತ್ತಿದ್ದೀರಾ ಹಾಗಾದರೆ ದೊಡ್ಡ ಅಪಾಯವೇ ನಿಮ್ಮ ಮುಂದಿದೆ
ಜೀವನ ಎಂದರೆ ಕಷ್ಟ, ಸುಖಗಳ ಸಮ್ಮಿಶ್ರಣ, ಒತ್ತಡದ ಬದುಕು, ಒಂದಷ್ಟು ಚಿಂತೆ, ಹೋರಾಟ ಎಲ್ಲವೂ ಇರುತ್ತದೆ. ಒಂದೆಡೆ ತೀವ್ರ ಒತ್ತಡದಲ್ಲಿರಬಹುದು, ಪ್ರೀತಿ ದೂರವಾಗಿರಬಹುದು,
ಜೀವನ ಎಂದರೆ ಕಷ್ಟ, ಸುಖಗಳ ಸಮ್ಮಿಶ್ರಣ, ಒತ್ತಡದ ಬದುಕು, ಒಂದಷ್ಟು ಚಿಂತೆ, ಹೋರಾಟ ಎಲ್ಲವೂ ಇರುತ್ತದೆ. ಒಂದೆಡೆ ತೀವ್ರ ಒತ್ತಡದಲ್ಲಿರಬಹುದು, ಪ್ರೀತಿ ದೂರವಾಗಿರಬಹುದು, ಹತ್ತಿರದವರನ್ನು ಕಳೆದುಕೊಂಡ ನೋವಿರಬಹುದು ಇದೆಲ್ಲದರಿಂದಾಗಿ ಸರಿಯಾದ ಸಮಯಕ್ಕೆ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ, ಒಂದೊಮ್ಮೆ ಮಲಗಲು ಪ್ರಯತ್ನಿಸಿದರೂ ನಿದ್ರೆ ಬರುವುದಿಲ್ಲ, ಹಾಗಾಗಿ ಇಂತಹ ಸಂದರ್ಭದಲ್ಲಿ ಕೆಲವರು ನಿದ್ರೆ ಮಾತ್ರೆಯನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆ.
ಆದರೆ ಈ ಅಭ್ಯಾಸದಿಂದ ಮುಂದೊಂದು ದಿನ ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಹೀಗಾಗಿ ನಿದ್ರೆ ಮಾತ್ರೆಯನ್ನು ನೀವು ತೆಗೆದುಕೊಳ್ಳುತ್ತಿದ್ದರೆ ತಕ್ಷಣವೇ ಈ ಅಭ್ಯಾಸವನ್ನು ಬಿಟ್ಟುಬಿಡಿ. ಈಗ ನಿದ್ದೆ ಮಾತ್ರೆ ಇಲ್ಲದೆ ಆರಾಮವಾಗಿ ನಿದ್ದೆ ಮಾಡುವುದು ಹೇಗೆ ಎಂದು ತಿಳಿಯೋಣ..
ಮೆದುಳಿನ ಮೇಲೆ ಪರಿಣಾಮ ಬೀರುತ್ತೆ ನಿದ್ರೆ ಮಾತ್ರೆ ತೆಗೆದುಕೊಳ್ಳುವ ಅಭ್ಯಾಸದಿಂದಾಗಿ ಕ್ರಮೇಣ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಸಂಶೋಧನೆಯೊಂದರಲ್ಲಿ ಈ ವಿಷಯ ಬಹಿರಂಗವಾಗಿದೆ.
ಈ ಆಂಟಿ-ಕೋಲಿನರ್ಜಿಕ್ ಮಾತ್ರೆಗಳು ಮತ್ತು ಮಲಗುವ ಮಾತ್ರೆಗಳು ಕ್ರಮೇಣ ನಿಮ್ಮ ಸ್ಮರಣೆಯನ್ನು ಕುಂಠಿತಗೊಳಿಸುತ್ತವೆ. ವ್ಯಕ್ತಿಯ ಆಲೋಚನೆ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯವೂ ಕಡಿಮೆಯಾಗುತ್ತದೆ. ಈ ಔಷಧಿಗಳು ತಮ್ಮದೇ ಆದ ಕೆಲಸ ಮಾಡುತ್ತವೆ. ಅಂತಹ ಮಾತ್ರೆಗಳನ್ನು ನೀವು ಸಹ ಬಳಸಿದರೆ, ಒಂದು ತಿಂಗಳೊಳಗೆ ಪರಿಣಾಮವನ್ನು ನೀವು ನೋಡುತ್ತೀರಿ ಎಂದು ತಜ್ಞರು ಹೇಳುತ್ತಾರೆ.
ನಿದ್ರೆ ಮಾತ್ರೆಗಳು ಅಪಾಯಕಾರಿ ನಿದ್ರೆ ಮಾತ್ರೆಯಿಂದಾಗಿ ಸಾವಿನ ಪ್ರಮಾಣವು ವಿಶ್ವಾದ್ಯಂತ ಹೆಚ್ಚಾಗಿದೆ. ನಿದ್ರೆ ಮಾತ್ರೆ ಸೇವಿಸದವರ ಸಂಖ್ಯೆ ಕಡಿಮೆ. ನಿದ್ರೆ ಮಾತ್ರೆ ಬಳಕೆಯು ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ನಿದ್ರೆ ಮಾತ್ರೆಗಳನ್ನು ತೆಗೆದುಕೊಳ್ಳುವ ಮೊದಲು ನೀವು ವೈದ್ಯರನ್ನು ಸಂಪರ್ಕಿಸಬೇಕು. ಮಲಬದ್ಧತೆ, ಸ್ಮರಣ ಶಕ್ತಿ, ಹೊಟ್ಟೆ ನೋವು, ದೌರ್ಬಲ್ಯ, ತಲೆತಿರುಗುವಿಕೆ ಸಮಸ್ಯೆಯು ಕೂಡ ಹೆಚ್ಚಾಗುತ್ತಿದೆ. ಆದ್ದರಿಂದ, ನೀವು ನಿದ್ರೆಗೆ ಸಹಾಯ ಮಾಡಲು ಈ ಸಲಹೆಗಳನ್ನು ಪ್ರಯತ್ನಿಸುವುದು ಉತ್ತಮ.
ತಡರಾತ್ರಿವರೆಗೆ ಮೊಬೈಲ್, ಟಿವಿ ನೋಡಬೇಡಿ : ನಿಮ್ಮ ಮೊಬೈಲ್ ಮತ್ತು ಟಿವಿ ನಿದ್ದೆ ಮಾಡದಿರುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಇದರ ಚಟದಿಂದ ಮುಕ್ತಿ ಹೊಂದಲು ಯೋಜನೆ ರೂಪಿಸಿ ಬೇಗ ಮಲಗಿಕೊಳ್ಳಿ.
ಸಕಾರಾತ್ಮಕ ಆಲೋಚನೆಗಳು: ನಿದ್ದೆ ಮಾಡುವಾಗ ಧನಾತ್ಮಕ ಆಲೋಚನೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಿ. ಆದ್ದರಿಂದ ನೀವು ಆರಾಮವಾಗಿ ಮಲಗಬಹುದು.
ಚಹಾ – ಕಾಫಿ ತಪ್ಪಿಸಿ: ಚಹಾ ಮತ್ತು ಕಾಫಿ ನಿದ್ರೆಯ ಶತ್ರುಗಳು. ಇದರ ಅತಿಯಾದ ಸೇವನೆಯು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ