ಇತ್ತೀಚೆಗಿನ ದಿನಗಳಲ್ಲಿ ಹವಾಮಾನದಲ್ಲಿಯಾಗುವ ಬದಲಾವಣೆಯಿಂದಾಗಿ ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳು ಕಾಡುತ್ತಲೇ ಇರುತ್ತದೆ. ಹೆಚ್ಚಿನವರಿಗೆ ಶೀತ, ನೆಗಡಿ ಸಂಬಂಧಿತ ಅನಾರೋಗ್ಯ ಸಮಸ್ಯೆಗಳು ಸಾಮಾನ್ಯವಾಗಿರುತ್ತದೆ. ಸಹಜವಾಗಿ ಶೀತವಾದಾಗ ಕಿವಿ ನೋವು ಕಾಣಿಸಿಕೊಳ್ಳುತ್ತದೆ. ಕಿವಿ ನೋವಿಗೆ ಇನ್ನಿತ್ತರ ಕಾರಣಗಳು ಇರಬಹುದು. ಆ ತಕ್ಷಣವೇ ಮನೆಯಲ್ಲಿರುವ ಪದಾರ್ಥಗಳಿಂದ ಹಾಗೂ ಮನೆಯ ಸುತ್ತ ಮುತ್ತಲಿನಲ್ಲಿ ಗಿಡಮೂಲಿಕೆಗಳಿಂದ ಮನೆ ಮದ್ದು ತಯಾರಿಸಿ ನೋವಿನಿಂದ ಪಾರಾಗುವುದು ಮುಖ್ಯ.
* ಬೆಳ್ಳುಳ್ಳಿಯ ಎಸಳನ್ನು ಹರಳೆಣ್ಣೆಯಲ್ಲಿ ಹುರಿದು, ಆರಿದ ಬಳಿಕ ಕಿವಿಗೆ ಈ ಎಣ್ಣೆ ಬಿಡುವುದರಿಂದ ಕಿವಿ ನೋವು ಶಮನವಾಗುತ್ತದೆ.
* ಕಿವಿಯೊಳಗೆ ಸಣ್ಣಕ್ರಿಮಿ ಕೀಟಗಳು ಹೋದರೆ, ಆ ತಕ್ಷಣವೇ ಅಡುಗೆಯ ಉಪ್ಪನ್ನು ಸ್ವಲ್ಪ ನೀರಿಗೆ ಬೆರಸಿ ಕಿವಿಗೆ ಬಿಡುವುದರಿಂದ ಸಣ್ಣಕ್ರಿಮಿ ಕೀಟಗಳು ಸಾಯುತ್ತವೆ.
* ದಿನನಿತ್ಯ ಹಸಿ ಮೂಲಂಗಿಯ ಸೇವನೆಯಿಂದ ಕಿವಿನೋವು ಶಮನವಾಗುತ್ತದೆ.
* ಕಿವಿಯಲ್ಲಿ ಹುಣ್ಣಾಗಿದ್ದು ಸೋರುತ್ತಿದ್ದರೆ, ತುಳಸಿ ರಸವನ್ನು ಕಿವಿಯೊಳಗೆ ಹಿಂಡುವುದರಿಂದ ಕಿವಿ ನೋವು ಗುಣಮುಖವಾಗುತ್ತದೆ.
* ಬೇವಿನ ಸೊಪ್ಪನ್ನು ನೀರಿನಲ್ಲಿ ಕುದಿಸಿ, ಇದರ ಹಬೆಯನ್ನು ಕಿವಿಯೊಳಗೆ ಬಿಡುವುದು ಈ ನೋವಿಗೆ ಉತ್ತಮವಾದ ಔಷಧಿ.
* ಕಿವಿನೋವು ಇದ್ದಲ್ಲಿ ಈರುಳ್ಳಿ ರಸವನ್ನು ಹಿಂಡುತ್ತಿದ್ದರೆ ನೋವು ಶಮನವಾಗುತ್ತದೆ.
* ಬಾಣಂತಿಯರು ಬೆಳ್ಳುಳ್ಳಿಯ ಚೂರುಗಳನ್ನು ಹತ್ತಿಯಲ್ಲಿ ಸುತ್ತಿ ಕಿವಿಯೊಳಗೆ ಇಟ್ಟುಕೊಳ್ಳುವುದರಿಂದ, ಶೀತದಿಂದ ಕಾಡುವ ಕಿವಿ ನೋವು ಹಾಗೂ ಕಿವಿ ಕಿವುಡಾಗುವ ಸಮಸ್ಯೆಯಿಂದ ಮುಕ್ತರಾಗಬಹುದು.
ಇದನ್ನೂ ಓದಿ: ಸಕರಾತ್ಮಕ ಚಿಂತನೆಯಿಂದ ಜೀವನದ ಯಶಸ್ಸಿಗೆ ದಾರಿ ಸುಲಭ
* ಸ್ವಲ್ಪ ಓಮ ಕಾಳನ್ನು ಕೊಬ್ಬರಿ ಎಣ್ಣೆಯಲ್ಲಿ ಕುದಿಸಿ ಈ ಎಣ್ಣೆಯನ್ನು ಕಿವಿಯೊಳಗೆ ಬಿಡುವುದರಿಂದ ನೋವು ಕಡಿಮೆಯಾಗುತ್ತದೆ.
* ಕಿವಿ ನೋವಿದ್ದರೆ ಮಾವಿನ ಎಲೆಗಳ ರಸವನ್ನು ತೆಗೆದು ಕಿವಿಗೆ ಹಾಕುವುದರಿಂದ ನೋವು ಶಮನವಾಗುತ್ತದೆ.
* ಶುಂಠಿ ರಸಕ್ಕೆ ಆಲಿವ್ ಎಣ್ಣೆಯನ್ನು ಸೇರಿಸಿ ಕಿವಿಗೆ ಹಾಕುವುದು ಈ ಸಮಸ್ಯೆಗೆ ಪರಿಣಾಮಕಾರಿಯಾಗಿದೆ.
* ಆಲಿವ್ ಎಣ್ಣೆಯನ್ನು ಬಿಸಿ ಮಾಡಿ, ಎಣ್ಣೆ ತಣ್ಣಗಾದ ನಂತರ ಕಿವಿಗೆ ಹಾಕುವುದರಿಂದಕುವುದರಿಂದ ನೋವು ಶಮನವಾಗುತ್ತದೆ.
* ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ, ತಣ್ಣಗಾದ ಬಳಿಕ ಕಿವಿಗೆ ಬಿಡುತ್ತಿದ್ದರೆ ನೋವು ಮಾಯವಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ