ಕಾಫಿ, ಟೀ ಬದಲಾಗಿ ಈ ಪಾನೀಯಗಳನ್ನು ಸೇವಿಸಿದರೆ ಆರೋಗ್ಯ ವೃದ್ಧಿ ಗ್ಯಾರಂಟಿ

ಆರೋಗ್ಯವೇ ಭಾಗ್ಯ, ಹೀಗಾಗಿ ಇದ್ದಷ್ಟು ದಿನ ಪೌಷ್ಟಿಕ ಆಹಾರಗಳನ್ನು ಸೇವಿಸುತ್ತ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಆದರೆ ಇತ್ತೀಚೆಗಿನ ದಿನಗಳಲ್ಲಿ ಜೀವನ ಶೈಲಿ ಹಾಗೂ ಆಹಾರ ಕ್ರಮದಲ್ಲಿ ಬದಲಾವಣೆಗಳಾಗಿವೆ. ಊಟ ತಿಂಡಿ, ನಿದ್ದೆಗೆ ಸರಿಯಾದ ಸಮಯ ಎನ್ನುವುದಿಲ್ಲ. ಸಿಕ್ಕ ಸಿಕ್ಕ ಆಹಾರವನ್ನು ಸೇವಿಸಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುವವರೇ ಹೆಚ್ಚು. ಕೆಲವರಂತೂ ದಿನದಲ್ಲಿ ಮೂರು ನಾಲ್ಕು ಬಾರಿಯಾದರೂ ಕಾಫಿ ಟೀಯನ್ನು ಸೇವಿಸುತ್ತಾರೆ. ಈ ರೀತಿಯ ಅಭ್ಯಾಸವು ಬೇಡದ ತೊಂದರೆಗಳಿಗೆ ಕಾರಣವಾಗಬಹುದು. ಹೀಗಾಗಿ ಈ ಕಾಫಿ ಟೀ ಬದಲಾಗಿ ಈ ಐದು ಜ್ಯೂಸ್ ಸೇವನೆ ಮಾಡುವುದು ಆರೋಗ್ಯಕ್ಕೆ ಹಿತಕರವಾಗಿದೆ.

ಕಾಫಿ, ಟೀ ಬದಲಾಗಿ ಈ ಪಾನೀಯಗಳನ್ನು ಸೇವಿಸಿದರೆ ಆರೋಗ್ಯ ವೃದ್ಧಿ ಗ್ಯಾರಂಟಿ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 21, 2024 | 4:42 PM

ಭಾರತೀಯರು ಟೀ ಕಾಫಿ ಪ್ರಿಯರು. ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ ಕಾಫಿ ಅಥವಾ ಟೀ ಇರಲೇ ಬೇಕು. ಆಗಿದ್ದರೇನೇ ಮನಸ್ಸಿಗೆ ಏನೋ ನೆಮ್ಮದಿ. ಈ ಕಾರಣದಿಂದಲೇ ಹೆಚ್ಚಿನವರು ಟೀ ಕಾಫಿಗೆ ಎಡಿಕ್ಟ್ ಆಗಿದ್ದಾರೆ. ಸಾಮಾನ್ಯವಾಗಿ ಒತ್ತಡದಲ್ಲಿದ್ದಾಗ ಈ ಕಾಫಿ ಹಾಗೂ ಟೀ ಸೇವನೆ ಮಾಡುವುದರಿಂದ ರಿಲ್ಯಾಕ್ಸ್ ಅನುಭವವನ್ನು ತಂದುಕೊಡುತ್ತದೆ. ಇದರ ಸೇವನೆಯೂ ಅತಿಯಾದರೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಕೆಫಿನ್ ಅಂಶ ಹೇರಳವಾಗಿರುವ ಈ ಕಾಫಿ ಟೀ ಸೇವನೆ ಬದಲಾಗಿ ತಂಪು ಪಾನೀಯವನ್ನು ಸೇವನೆಯತ್ತ ಗಮನ ಹರಿಸಿದರೆ ಆರೋಗ್ಯ ಲಾಭಗಳು ಅಧಿಕ.

ಎಳನೀರು : ಎಳನೀರು ಪೊಟ್ಯಾಸಿಯಮ್, ಸೋಡಿಯಂ, ಮೆನ್ನೀಸಿಯಮ್‌, ಕ್ಯಾಲೋರಿಗಳು, ಕೊಬ್ಬುಗಳು ಮತ್ತು ಕೊಲೆಸ್ಟ್ರಾಲ್ ಹೇರಳವಾಗಿದೆ. ಇದು ದೇಹವನ್ನು ಹೈಡೀಕರಿಸುವಲ್ಲಿ ಸಹಾಯ ಮಾಡುತ್ತದೆ. ಹೀಗಾಗಿ ಈ ಎಳನೀರನ್ನು ಸಮತೋಲಿತ ಆಹಾರದೊಂದಿಗೆ ಸೇರಿಸಿಕೊಳ್ಳಬಹುದು.

ಬೀಟ್ರೂಟ್ ಜ್ಯೂಸ್ : ದಿನನಿತ್ಯ ಕಾಫಿ ಟೀ ಸೇವನೆಯ ಬದಲಾಗಿ ನಿಯಮಿತವಾಗಿ ಬೀಟ್ರೂಟ್ ಜ್ಯೂಸ್ ಸೇವನೆಯಿಂದ ಆರೋಗ್ಯಕಾರಿ ಪ್ರಯೋಜನಗಳು ಹಲವಾರಿದೆ. ಇದರಲ್ಲಿ ವಿಟಮಿನ್ B9, ಅಥವಾ ಫೋಲೇಟ್ ಹೇರಳವಾಗಿದೆ. ಜ್ಯೂಸ್ ಕುಡಿಯುವುದರಿಂದ ಜೀವಕೋಶದ ಬೆಳವಣಿಗೆಗೆ ಸಹಕಾರಿಯಾಗಿದೆ. ಬೀಟ್ ರೂಟ್ ನಲ್ಲಿ ನೈಸರ್ಗಿಕ ರಾಸಾಯನಿಕವಾಗಿರುವ ನೈಟ್ರೇಟ್ ಇದೆ. ಇದು ಪ್ರಕ್ರಿಯೆಗೆ ಒಳಪಟ್ಟು, ನೈಟ್ರಿಕ್ ಆಕ್ಸೈಡ್ ಆಗಿ ಬದಲಾಗುತ್ತದೆ. ಹೀಗಾಗಿ ದೇಹದಲ್ಲಿನ ರಕ್ತ ಸಂಚಾರವನ್ನು ಸುಗಮಗೊಳಿಸುವುದಲ್ಲದೆ ನಾನಾ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

ಇದನ್ನೂ ಓದಿ: ವಿಪರೀತ ಕಿವಿ ನೋವಿನಿಂದ ಬಳಲುತ್ತಿದ್ದೀರಾ? ನೋವು ನಿವಾರಣೆಗೆ ಇಲ್ಲಿವೆ ಮನೆ ಮದ್ದುಗಳು

ಗ್ರೀನ್ ಟೀ – ಜನಪ್ರಿಯ ಡಿಟಾಕ್ಸ್ ಪಾನೀಯವೆಂದರೆ ಅದುವೇ ಗ್ರೀನ್ ಟೀ. ಗ್ರೀನ್ ಟೀ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು, ಇದು ದೇಹವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಈ ಗ್ರೀನ್ ಟೀ ಸೇವನೆಯಿಂದ ಅನಾರೋಗ್ಯ ಸಮಸ್ಯೆಗಳನ್ನು ನಿಯಂತ್ರಣದಲ್ಲಿಡಬಹುದು.

ನಿಂಬೆ ರಸ : ನಿಮ್ಮ ಆಹಾರದಲ್ಲಿ ನಿಯಮಿತವಾಗಿ ನಿಂಬೆ ರಸವನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆ. ನಿಂಬೆಯಲ್ಲಿರುವ ಪೋಷಕಾಂಶಗಳು: ತಾಮ್ರ, ಮೆಗ್ನೀಸಿಯಮ್, ವಿಟಮಿನ್ ಬಿ6, ಪೊಟ್ಯಾಸಿಯಮ್, ಸತು, ಆಂಟಿಆಕ್ಸಿಡೆಂಟ್ಗಳು ಸೇರಿದಂತೆ ಅನೇಕ ಪೋಷಕಾಂಶಗಳು ನಿಂಬೆಯಲ್ಲಿ ಹೇರಳವಾಗಿ ಕಂಡುಬರುತ್ತವೆ. ಇದು ದೇಹವನ್ನು ಸದೃಢಗೊಳಿಸುವುದಲ್ಲದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ರೋಗಗಳು ಬಾರದಂತೆ ನೋಡಿಕೊಳ್ಳುತ್ತದೆ.

* ದಾಲ್ಚಿನ್ನಿ ಮತ್ತು ಜೇನುತುಪ್ಪದ ಪಾನೀಯ: ದಾಲ್ಚಿನ್ನಿ ಮತ್ತು ಜೇನುತುಪ್ಪದ ಪಾನೀಯವನ್ನು ಸೇವನೆ ಮಾಡುವುದರಿಂದ ವಾಯು ನಿವಾರಣೆಗೆ ಸಹಾಯ ಮಾಡುತ್ತದೆ. ಜೇನುತುಪ್ಪ ಮತ್ತು ದಾಲ್ಚಿನ್ನಿ ಯಲ್ಲಿ ಆಂಟಿಬ್ಯಾಕ್ಟಿರಿಯಲ್ ಉತ್ಕರ್ಷಣ ನಿರೋಧಕ ಗುಣಗಳು ಹೇರಳವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಕಾರಿಯಾಗಿದೆ. ಅನಾರೋಗ್ಯವನ್ನು ತಡೆಯಲು ಸಹಾಯಕವಾಗಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ