ವಿಪರೀತ ಕಿವಿ ನೋವಿನಿಂದ ಬಳಲುತ್ತಿದ್ದೀರಾ? ನೋವು ನಿವಾರಣೆಗೆ ಇಲ್ಲಿವೆ ಮನೆ ಮದ್ದುಗಳು

ಕಿವಿ ನೋವು ಬಂದವರಿಗೆ ಗೊತ್ತು ನೋವಿನ ಪ್ರಮಾಣವು ಎಷ್ಟಿರುತ್ತದೆ ಎಂದು. ಈ ಕಿವಿನೋವು ಶುರುವಾದರಂತೂ ಕಿವಿಯೊಳಗೆ ವಿಪರೀತವಾದ ಸೆಳೆತ, ರಾತ್ರಿ ಮಲಗಲು ಆಗುವುದಿಲ್ಲ. ಹೀಗಾಗಿ ಈ ನೋವಿನ ಕಾರಣವನ್ನು ಕಂಡು ಹಿಡಿದು, ಆರಂಭಿಕ ಹಂತದಲ್ಲಿ ಸರಿಯಾದ ಚಿಕಿತ್ಸೆಯನ್ನು ಪಡೆದು ಗುಣ ಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಗಂಭೀರ ಸಮಸ್ಯೆಗೆ ದಾರಿ ಮಾಡಿಕೊಟ್ಟಂತೆಯಾಗುತ್ತದೆ. ಈ ಸಂದರ್ಭದಲ್ಲಿ ನೋವು ನಿವಾರಕಗಳ ಮೊರೆ ಹೋಗದೇ ಮನೆ ಮದ್ದಿನ ಮೂಲಕ ಕಾಡುವ ನೋವಿನಿಂದ ಮುಕ್ತಿ ಪಡೆಯಬಹುದು.

ವಿಪರೀತ ಕಿವಿ ನೋವಿನಿಂದ ಬಳಲುತ್ತಿದ್ದೀರಾ? ನೋವು ನಿವಾರಣೆಗೆ ಇಲ್ಲಿವೆ ಮನೆ ಮದ್ದುಗಳು
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 21, 2024 | 2:32 PM

ಇತ್ತೀಚೆಗಿನ ದಿನಗಳಲ್ಲಿ ಹವಾಮಾನದಲ್ಲಿಯಾಗುವ ಬದಲಾವಣೆಯಿಂದಾಗಿ ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳು ಕಾಡುತ್ತಲೇ ಇರುತ್ತದೆ. ಹೆಚ್ಚಿನವರಿಗೆ  ಶೀತ, ನೆಗಡಿ ಸಂಬಂಧಿತ ಅನಾರೋಗ್ಯ ಸಮಸ್ಯೆಗಳು ಸಾಮಾನ್ಯವಾಗಿರುತ್ತದೆ. ಸಹಜವಾಗಿ ಶೀತವಾದಾಗ ಕಿವಿ ನೋವು ಕಾಣಿಸಿಕೊಳ್ಳುತ್ತದೆ. ಕಿವಿ ನೋವಿಗೆ ಇನ್ನಿತ್ತರ ಕಾರಣಗಳು ಇರಬಹುದು. ಆ ತಕ್ಷಣವೇ ಮನೆಯಲ್ಲಿರುವ ಪದಾರ್ಥಗಳಿಂದ ಹಾಗೂ ಮನೆಯ ಸುತ್ತ ಮುತ್ತಲಿನಲ್ಲಿ ಗಿಡಮೂಲಿಕೆಗಳಿಂದ ಮನೆ ಮದ್ದು ತಯಾರಿಸಿ ನೋವಿನಿಂದ ಪಾರಾಗುವುದು ಮುಖ್ಯ.

ಕಿವಿ ನೋವಿಗೆ ಇಲ್ಲಿದೆ ಸುಲಭ ಮನೆ ಮದ್ದುಗಳು

* ಬೆಳ್ಳುಳ್ಳಿಯ ಎಸಳನ್ನು ಹರಳೆಣ್ಣೆಯಲ್ಲಿ ಹುರಿದು, ಆರಿದ ಬಳಿಕ ಕಿವಿಗೆ ಈ ಎಣ್ಣೆ ಬಿಡುವುದರಿಂದ ಕಿವಿ ನೋವು ಶಮನವಾಗುತ್ತದೆ.

* ಕಿವಿಯೊಳಗೆ ಸಣ್ಣಕ್ರಿಮಿ ಕೀಟಗಳು ಹೋದರೆ, ಆ ತಕ್ಷಣವೇ ಅಡುಗೆಯ ಉಪ್ಪನ್ನು ಸ್ವಲ್ಪ ನೀರಿಗೆ ಬೆರಸಿ ಕಿವಿಗೆ ಬಿಡುವುದರಿಂದ ಸಣ್ಣಕ್ರಿಮಿ ಕೀಟಗಳು ಸಾಯುತ್ತವೆ.

* ದಿನನಿತ್ಯ ಹಸಿ ಮೂಲಂಗಿಯ ಸೇವನೆಯಿಂದ ಕಿವಿನೋವು ಶಮನವಾಗುತ್ತದೆ.

* ಕಿವಿಯಲ್ಲಿ ಹುಣ್ಣಾಗಿದ್ದು ಸೋರುತ್ತಿದ್ದರೆ, ತುಳಸಿ ರಸವನ್ನು ಕಿವಿಯೊಳಗೆ ಹಿಂಡುವುದರಿಂದ ಕಿವಿ ನೋವು ಗುಣಮುಖವಾಗುತ್ತದೆ.

* ಬೇವಿನ ಸೊಪ್ಪನ್ನು ನೀರಿನಲ್ಲಿ ಕುದಿಸಿ, ಇದರ ಹಬೆಯನ್ನು ಕಿವಿಯೊಳಗೆ ಬಿಡುವುದು ಈ ನೋವಿಗೆ ಉತ್ತಮವಾದ ಔಷಧಿ.

* ಕಿವಿನೋವು ಇದ್ದಲ್ಲಿ ಈರುಳ್ಳಿ ರಸವನ್ನು ಹಿಂಡುತ್ತಿದ್ದರೆ ನೋವು ಶಮನವಾಗುತ್ತದೆ.

* ಬಾಣಂತಿಯರು ಬೆಳ್ಳುಳ್ಳಿಯ ಚೂರುಗಳನ್ನು ಹತ್ತಿಯಲ್ಲಿ ಸುತ್ತಿ ಕಿವಿಯೊಳಗೆ ಇಟ್ಟುಕೊಳ್ಳುವುದರಿಂದ, ಶೀತದಿಂದ ಕಾಡುವ ಕಿವಿ ನೋವು ಹಾಗೂ ಕಿವಿ ಕಿವುಡಾಗುವ ಸಮಸ್ಯೆಯಿಂದ ಮುಕ್ತರಾಗಬಹುದು.

ಇದನ್ನೂ ಓದಿ: ಸಕರಾತ್ಮಕ ಚಿಂತನೆಯಿಂದ ಜೀವನದ ಯಶಸ್ಸಿಗೆ ದಾರಿ ಸುಲಭ

* ಸ್ವಲ್ಪ ಓಮ ಕಾಳನ್ನು ಕೊಬ್ಬರಿ ಎಣ್ಣೆಯಲ್ಲಿ ಕುದಿಸಿ ಈ ಎಣ್ಣೆಯನ್ನು ಕಿವಿಯೊಳಗೆ ಬಿಡುವುದರಿಂದ ನೋವು ಕಡಿಮೆಯಾಗುತ್ತದೆ.

* ಕಿವಿ ನೋವಿದ್ದರೆ ಮಾವಿನ ಎಲೆಗಳ ರಸವನ್ನು ತೆಗೆದು ಕಿವಿಗೆ ಹಾಕುವುದರಿಂದ ನೋವು ಶಮನವಾಗುತ್ತದೆ.

* ಶುಂಠಿ ರಸಕ್ಕೆ ಆಲಿವ್ ಎಣ್ಣೆಯನ್ನು ಸೇರಿಸಿ ಕಿವಿಗೆ ಹಾಕುವುದು ಈ ಸಮಸ್ಯೆಗೆ ಪರಿಣಾಮಕಾರಿಯಾಗಿದೆ.

* ಆಲಿವ್ ಎಣ್ಣೆಯನ್ನು ಬಿಸಿ ಮಾಡಿ, ಎಣ್ಣೆ ತಣ್ಣಗಾದ ನಂತರ ಕಿವಿಗೆ ಹಾಕುವುದರಿಂದಕುವುದರಿಂದ ನೋವು ಶಮನವಾಗುತ್ತದೆ.

* ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ, ತಣ್ಣಗಾದ ಬಳಿಕ ಕಿವಿಗೆ ಬಿಡುತ್ತಿದ್ದರೆ ನೋವು ಮಾಯವಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ