AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numbness : ಕೈ ಕಾಲುಗಳು ಮರಗಟ್ಟಿದಂತಹ ಅನುಭವವಾಗುತ್ತಿದೆಯೇ, ಟೆನ್ಶನ್ ಬೇಡ ಮನೆಯಲ್ಲೇ ಇದೆ ಔಷಧಿ

ಮಾನವನ ದೇಹದ ಪ್ರತಿಯೊಂದು ಅಂಗವು ಸರಿಯಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಆ ವ್ಯಕ್ತಿಯನ್ನು ಆರೋಗ್ಯವಂತನಾಗಿದ್ದಾನೆ ಎನ್ನಬಹುದು. ಕೆಲವೊಮ್ಮೆ ಕಾಡುವ ಸಣ್ಣ ಪುಟ್ಟ ಸಮಸ್ಯೆಗಳು ಗಂಭೀರವಾಗುವುದಿಲ್ಲ. ಬಹುತೇಕರಿಗೆ ಕೂತಲ್ಲಿಯೇ ಕೂತಿದ್ದರೆ ಕಾಲುಗಳು ಮರಗಟ್ಟಿದ ಅನುಭವವಾಗಿರುತ್ತದೆ. ಇದನ್ನು ಜೋಮು ಹಿಡಿಯುವುದು ಎನ್ನಲಾಗುತ್ತದೆ. ಹೀಗಾದಾಗ ನಿಲ್ಲಲು ಆಗದೇ, ನಡೆಯಲು ಆಗದೇ ಕೆಲವು ನಿಮಿಷಗಳ ಕಾಲ ಸುಮ್ಮನೆ ಇರಬೇಕಾಗುತ್ತದೆ. ನಿಮಗೂ ಆಗಾಗ ಈ ಕೈ ಕಾಲುಗಳು ಜುಮ್ಮ್ ಎನ್ನುವ ಅನುಭವವಾಗುತ್ತಿದ್ದರೆ ಈ ಸರಳ ಮನೆ ಮದ್ದಿನಿಂದ ಸುಲಭ ಪರಿಹಾರ ಕಂಡುಕೊಳ್ಳಬಹುದು.

Numbness : ಕೈ ಕಾಲುಗಳು ಮರಗಟ್ಟಿದಂತಹ ಅನುಭವವಾಗುತ್ತಿದೆಯೇ, ಟೆನ್ಶನ್ ಬೇಡ ಮನೆಯಲ್ಲೇ ಇದೆ ಔಷಧಿ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Apr 03, 2024 | 1:05 PM

Share

ದೇಹದಲ್ಲಿರುವ ಪ್ರತಿಯೊಂದು ಅಂಗವು ಕಾರ್ಯ ನಿರ್ವಹಣೆಯಾಗಬೇಕಾದರೆ ರಕ್ತ ಪರಿಚಲನೆ ಸರಿಯಾಗಿ ಆಗಬೇಕು. ಕೆಲವೊಮ್ಮೆ ರಕ್ತ ಪರಿಚಲನೆಯಾಗದೇ ಇದ್ದಾಗ ನೋವು, ಸ್ನಾಯು ಸೆಳೆತ, ಕೈ ಕಾಲುಗಳು ಮರಗಟ್ಟುವಿಕೆ, ಪಾದಗಳಲ್ಲಿ ಜುಮ್ಮ್ ಎನ್ನುವುದು ಹೀಗೆ ನಾನಾ ರೀತಿಯ ಅನುಭವವಾಗುತ್ತದೆ. ಈ ಜೋಮು ಹಿಡಿಯುವ ಅಥವಾ ಮರಗಟ್ಟುವ ಅನುಭವವು ಕೆಲವೇ ನಿಮಿಷಗಳು ಆಗಿದ್ದರೂ ಆ ಕ್ಷಣವು ಕಿರಿಕಿರಿಯೆನಿಸುತ್ತದೆ. ನರಗಳ ಮೇಲೆ ಒತ್ತಡ ಬಿದ್ದಾಗ, ಕುಳಿತು ಕೊಳ್ಳುವ ಭಂಗಿಯೂ ಸರಿಯಿಲ್ಲದಿದ್ದಾಗ ಹೀಗಾಗುತ್ತದೆ. ಈ ವೇಳೆಯಲ್ಲಿ ಕೈ ಕಾಲುಗಳನ್ನು ಮುಟ್ಟಿದರೂ ಸ್ಪರ್ಶದ ಅನುಭವವಾಗುವುದೇ ಇಲ್ಲ, ಅಷ್ಟು ಭಾಗವು ಮರಗಟ್ಟಿದಂತಾಗಿರುತ್ತದೆ. ಸ್ವಲ್ಪ ಸಮಯ ಬಳಿಕ ಕೈ ಕಾಲುಗಳು ಯಥಾಸ್ಥಿತಿಗೆ ಮರಳುತ್ತದೆ.

ಕೈ ಕಾಲುಗಳ ಮರಗಟ್ಟುವಿಕೆಗೆ ಸರಳ ಮನೆ ಮದ್ದುಗಳು

  • ಒಂದು ಚಮಚ ಚಕ್ಕೆಯ ಪುಡಿ ಹಾಗೂ ಒಂದು ಚಮಚ ಜೇನುತುಪ್ಪ ಇವೆರಡನ್ನು ಬೆರೆಸಿ ಸೇವಿಸುವುದು ಈ ಸಮಸ್ಯೆಗೆ ಉತ್ತಮವಾದ ಔಷಧಿಯಾಗಿದೆ.
  • ವಿಟಮಿನ್ ಬಿ, ವಿಟಮಿನ್ ಬಿ6, ವಿಟಮಿನ್ ಬಿ12 ಹೇರಳವಾಗಿರುವ ಆಹಾರಗಳ ಸೇವನೆಯಿಂದ ಈ ಸಮಸ್ಯೆಯು ಬಾರದಂತೆ ನೋಡಿಕೊಳ್ಳಬಹುದು.
  • ಒಂದು ಬಕೆಟ್ ಬಿಸಿನೀರಿಗೆ ಎರಡು ಚಮಚ ಉಪ್ಪು ಹಾಕಿ ಕೆಲವು ನಿಮಿಷ ಕೈ ಕಾಲುಗಳನ್ನು ಇಟ್ಟರೆ ಜುಮ್ಮ್ ಎನ್ನುವ ಅನುಭವವು ದೂರವಾಗುತ್ತದೆ.
  • ವಾರಕ್ಕೊಮ್ಮೆ ಕೈ ಕಾಲುಗಳಿಗೆ ಎಳ್ಳೆಣ್ಣೆಯಿಂದ ನಿಧಾನವಾಗಿ ಮಸಾಜ್ ಮಾಡಿದರೆ ರಕ್ತ ಪರಿಚಲನೆ ಸರಿಯಾಗಿ ಜೋಮು ಹಿಡಿಯುವುದಿಲ್ಲ.
  • ಬೆಳಗ್ಗೆ ಒಂದು ಲೋಟ ಹಾಲಿಗೆ ಒಂದು ಚಮಚ ಅರಿಶಿನ ಹಾಕಿ ಕುಡಿಯುವುದು ಕೂಡ ಪರಿಣಾಮಕಾರಿಯಾಗಿದೆ.
  • ಅಶ್ವತ್ಥ ಮರದ ಮೂರು ನಾಲ್ಕು ತಾಜಾ ಎಲೆಗಳನ್ನು ಸಾಸಿವೆ ಎಣ್ಣೆಯಲ್ಲಿ ಬಿಸಿ ಮಾಡಿ, ಈ ಎಣ್ಣೆಯಿಂದ ಕೈ ಕಾಲುಗಳನ್ನು ಮಸಾಜ್ ಮಾಡುವುದರಿಂದ ಮರಗಟ್ಟುವಿಕೆ ಸಮಸ್ಯೆಯು ಶಮನವಾಗುತ್ತದೆ.
  • ಬೆಳಗ್ಗೆ ಸ್ವಲ್ಪ ಪ್ರಮಾಣದಲ್ಲಿ ಒಣ ಶುಂಠಿ, ಒಂದೆರಡು ಲವಂಗ ಹಾಗೂ ಬೆಳ್ಳುಳ್ಳಿಯನ್ನು ಅಗಿದು ತಿನ್ನುವುದರಿಂದ ಈ ಸಮಸ್ಯೆಯನ್ನು ದೂರವಾಗಿಸಬಹುದು.
  • ರಾತ್ರಿ ಮಲಗುವುದಕ್ಕೂ ಮೊದಲು ದೇಸಿ ತುಪ್ಪವನ್ನು ಸ್ವಲ್ಪ ಬಿಸಿ ಮಾಡಿ ಪಾದದ ಅಡಿಭಾಗಕ್ಕೆ ಹಾಗೂ ಕೈಗೆ ಮಸಾಜ್ ಮಾಡುವುದು ಪರಿಣಾಮಕಾರಿಯಾಗಿದೆ.

ಈ ಮನೆ ಮದ್ದನ್ನೊಮ್ಮೆ ತಯಾರಿಸುವ ಮುನ್ನ ತಜ್ಞರ ಸಲಹೆಗಳನ್ನು ಪಡೆದುಕೊಳ್ಳುವುದು ಉತ್ತಮ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ