ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೈಕೆಯೂ ಬಹುಮುಖ್ಯ. ನಿಮ್ಮದು ಎಣ್ಣೆಯುಕ್ತ ಚರ್ಮವಾಗಿದ್ದರೆ ಅದರ ಶುಚಿತ್ವದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಏಕೆಂದರೆ ಎಣ್ಣೆಯುಕ್ತ ಚರ್ಮದ ಮೇಲೆ ಮೊಡವೆ, ಕಲೆಗಳು, ದೊಡ್ಡ ರಂಧ್ರಗಳ ಸಮಸ್ಯೆ ಕಾಡಬಹುದು. ಎಣ್ಣೆಯುಕ್ತ ಮುಖವನ್ನು ತೊಡೆದುಹಾಕಲು ಮನೆಯಲ್ಲಿ ತಯಾರಿಸಿದ ಕ್ಲೆನ್ಸರ್ ಅನ್ನು ಬಳಸಬಹುದು. ಇದು ತಕ್ಷಣವೇ ನಿಮಗೆ ಉತ್ತಮ ಪರಿಣಾಮವನ್ನು ನೀಡುತ್ತದೆ.
-ನಿತ್ಯ ಮಾಯ್ಚುರೈಸರ್ ಹಚ್ಚುವುದನ್ನು ಮರೆಯಬೇಡಿ
-ಸನ್ಸ್ಕ್ರೀನ್ ಲೋಷನ್ ಬಳಸಿ
-ಫೇಸ್ ಮಾಸ್ಕ್ ಬಳಸಿ
-ಟೋನರ್ ಬಳಕೆ ಮಾಡಿ
-ಬ್ಲಾಟಿಂಗ್ ಪೇಪರ್ ಸದಾ ಜತೆಗಿಟ್ಟುಕೊಂಡಿರಿ
ರೋಸ್ ವಾಟರ್: ರಾತ್ರಿ ಮಲಗುವ ಮುನ್ನ, ಹತ್ತಿಯ ಸಹಾಯದಿಂದ, ರೋಜ್ ವಾಟರ್ ಅನ್ನು ಮುಖಕ್ಕೆ ಹಚ್ಚಿ ಇಡೀ ರಾತ್ರಿ ಹಾಗೇ ಬಿಡಿ. ಮರುದಿನ ಬೆಳಿಗ್ಗೆ ಎದ್ದು ಶುದ್ಧ ನೀರಿನಿಂದ ಮುಖ ತೊಳೆಯಿರಿ. ಹೀಗೆ ಪ್ರತಿ ದಿನ ಮಾಡುತ್ತಾ ಬಂದರೆ ಉತ್ತಮ ಫಲಿತಾಂಶ ಸಿಗಲಿದೆ. ಮುಖದಲ್ಲಿರುವ ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು ರೋಸ್ ವಾಟರ್ ಅತ್ಯುತ್ತಮ ಪರಿಹಾರ.
ಸೌತೆಕಾಯಿ ಮತ್ತು ಟೊಮೆಟೊ : ಸೌತೆಕಾಯಿ ಮತ್ತು ಟೊಮೆಟೊ ಆಯಿಲಿ ಸ್ಕಿನ್ ಗೆ ಉತ್ತಮ ಕ್ಲೆನ್ಸರ್. ಅರ್ಧ ಸೌತೆಕಾಯಿ ಮತ್ತು 1 ಟೊಮೆಟೊವನ್ನು (Tomato) ರುಬ್ಬಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ, 15 ನಿಮಿಷಗಳ ನಂತರ ಮುಖವನ್ನು ತೊಳೆಯಿರಿ. ಪರಿಣಾಮ ತಿಳಿಯಲಿದೆ.
ನಿಂಬೆ ಮತ್ತು ಜೇನುತುಪ್ಪ : 1 ಟೀ ಚಮಚ ನಿಂಬೆ ರಸದಲ್ಲಿ 2 ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ ಮುಖಕ್ಕೆ ಮಸಾಜ್ ಮಾಡಿ. ನಿಂಬೆ ಮತ್ತು ಜೇನುತುಪ್ಪವನ್ನು (Honey) ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಆಯಿಲಿ ಸ್ಕಿನ್ ನಿಂದ ಮುಕ್ತಿ ಸಿಗುವುದಲ್ಲದೆ, ಮುಖದ ಕಾಂತಿಯೂ ಹೆಚ್ಚುತ್ತದೆ. ಮಸಾಜ್ ಮಾಡಿದ ನಂತರ ಅದನ್ನು 10 ನಿಮಿಷಗಳ ಕಾಲ ಮುಖದ ಮೇಲೆ ಬಿಟ್ಟು ನಂತರ ನೀರಿನಿಂದ ತೊಳೆಯಿರಿ. ರಾತ್ರಿ ಮಲಗುವ ಮುನ್ನ ಇದನ್ನು ಮಾಡುತ್ತಾ ಬಂದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ .
ಕಡಲೆ ಹಿಟ್ಟು ಹಾಗೂ ಅರಿಶಿನ : 1 ಟೀ ಚಮಚ ಕಡಲೆ ಹಿಟ್ಟು, ಅರ್ಧ ಟೀಚಮಚ ಅರಿಶಿನ ಮತ್ತು ಅರ್ಧ ಟೀ ಚಮಚ ಹೆಸರುಬೇಳೆಯ ಪುಡಿಯನ್ನು ತೆಗೆದುಕೊಂಡು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ. ಈ ಪೇಸ್ಟ್‌ನಿಂದ ಮುಖವನ್ನು ಸ್ಕ್ರಬ್ ಮಾಡಿ..10 ನಿಮಿಷಗಳ ಕಾಲ ಮುಖದ ಮೇಲೆ ಬಿಡಿ. ನಂತರ ಮುಖವನ್ನು ಸಾಮಾನ್ಯ ನೀರಿನಿಂದ ತೊಳೆಯಿರಿ.
ಹಾಲು : 1 ಟೀಚಮಚ ಕಿತ್ತಳೆ ಸಿಪ್ಪೆಯ ಪುಡಿಯನ್ನು 3 ಚಮಚ ಹಾಲಿನ (Milk) ಜೊತೆ ಬೆರೆಸಿ ಮಿಶ್ರಣ ಮಾಡಿ. ಈ ಪೇಸ್ಟ್‌ನಿಂದ ಮುಖದ ಮೇಲೆ ಕ್ಲಾಕ್ ವೈಸ್ ಮತ್ತು ಆಂಟಿ ಕ್ಲಾಕ್ ವೈಸ್ ಮಸಾಜ್ ಮಾಡಿ. 5 ನಿಮಿಷಗಳ ಕಾಲ ಹೀಗೆ ಮಾಡಿ ಒಣಗಲು ಬಿಡಿ. ಬಳಿಕ ಉಗುರು ಬೆಚ್ಚಗಿನ ನೀರಿನಿಂದ (Warm water) ಮುಖ ತೊಳೆಯಿರಿ. ಇದನ್ನ ಪ್ರತಿ ದಿನ ಮಾಡುತ್ತಾ ಬಂದರೆ ಆಯಿಲಿ ಸ್ಕಿನ್ ನಿಂದ ಪರಿಹಾರ ಸಿಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:01 pm, Wed, 25 May 22