ಪ್ರೀತಿಯಲ್ಲಿ ಒಡಕುಂಟಾಗಿ ಒಬ್ಬರಿಂದೊಬ್ಬರು ದೂರವಿದ್ದೀರಾ, ಈ ಬ್ರೇಕ್‌ಅಪ್ ನಿಮ್ಮ ಮನಸ್ಸಿನಲ್ಲಿ ನಿಮ್ಮ ಪ್ರೇಮಿಯನ್ನು ಸಾಯಿಸುವಷ್ಟು ಕೋಪವನ್ನು ಹುಟ್ಟುಹಾಕುತ್ತದೆ. ಈ ಕೋಪದಿಂದ ಹೊರಬರುವ ಮಾರ್ಗಗಳು ಇಲ್ಲಿವೆ. ಪ್ರೇಮಿಗಳ ಮಧ್ಯೆ ಗೊಂದಲ ಹಾಗೂ ಕೆಲವೊಂದು ಅನಿರೀಕ್ಷಿತ ಘಟನೆಗಳಿಂದಾಗಿ ಅವರಿಬ್ಬರ ಪ್ರೀತಿಯ ಮಧ್ಯೆ ಬಿರುಕು ಮೂಡಿ ಬ್ರೇಕ್‌ಅಪ್ ಆಗುತ್ತದೆ. ಈ ಘಟನೆಗಳು ತೀವ್ರವಾದ ಕೋಪ, ಅಸಹಾಯಕತೆ ಮತ್ತು ಅಪನಂಬಿಕೆಯ ಭಾವನೆಯನ್ನು ಪ್ರಚೋದಿಸುತ್ತದೆ. ಈ ಕಷ್ಟಕರ ಸಂದರ್ಭಗಳಲ್ಲಿ ನಿಮ್ಮ ಭಾವನೆಗಳನ್ನು ನಿಯಂತ್ರಿಸುವುದು ತುಂಬಾ ಕಷ್ಟಕರವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ನೀವು ಮನಸ್ಸಿನಲ್ಲಿರುವ ಕೋಪವನ್ನು ಹೊರ ಹಾಕಲು ಪ್ರಯತ್ನಿಸುತ್ತಿದ್ದರೆ, ಆ ಕೋಪವನ್ನು ಮನಸ್ಸಿನಿಂದ ಹೊರ ಹಾಕಲು ಸರಿಯಾದ ಮಾರ್ಗವಿದೆ. ನಿಮ್ಮ ಮಾಜಿ ಸಂಗಾತಿಗೆ ಕಪಾಳಮೋಕ್ಷ ಮಾಡಲು ಅಥವಾ ಅವರಿಗೆ ಹಿಂಸಿಸಲು ನೀವು ಭಾವಿಸಿದರೂ ಸಹ, ನಿಮ್ಮ ಆಪ್ತ ಸ್ನೇಹಿತರೊಂದಿಗೆ ಮಾತನಾಡುವ ಮೂಲಕ ಅಥವಾ ಜರ್ನಲ್‌ಗಳನ್ನು ಬರೆಯುವ ಮೂಲಕ ಮನಸ್ಸಿನಲ್ಲಿರುವ ಕೋಪವನ್ನು ತೆಗೆದುಹಾಕಬಹುದು.
ಪ್ರೇಮಿಗಳ ದಿನವಂತೂ ಬಹುತೇಕ ಮುಗಿದಿದೆ. ಹಾಗೂ ಆಂಟಿ- ವ್ಯಾಲೆಂಟೈನ್ಸ್ ವೀಕ್ ಸ್ಲ್ಯಾಪ್ ಡೇ ಇಂದಿನಿಂದ ಆರಂಭವಾಗಲಿದೆ. ಇದು ನೀವು ಪ್ರೀತಿಯಲ್ಲಿ ಅನುಭವಿಸಿದ ನೋವನ್ನು ಕಡಿಮೆ ಮಾಡಲು ಇರುವ ಪರಿಪೂರ್ಣ ಸಮಯವಾಗಿದೆ. ಕೋಪ ಮತ್ತು ದ್ವೇಷವನ್ನು ಹೊಂದುವುದು ಸಹಜ ಆದರೆ ತೀವ್ರವಾದ ಕೋಪವು ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇಂತಹ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಸ್ವಯಂ ವಿಶ್ಲೇಷಿಸುವುದು ಹೆಚ್ಚು ನೋವುಂಟು ಮಾಡುವುದನ್ನು ಹಾಗೂ ಕಷ್ಟಕರವಾದ ಬ್ರೇಕ್‌ಅಪ್‌ನ್ನು ನಿಭಾಯಿಸಲು ಸಹಾಯ ಮಾಡುತ್ತದೆ ಎಂದು ವೋಕಾರ್ಡ್ ಆಸ್ಪತ್ರೆಯ ಮನೋವೈದ್ಯರಾದ ಡಾ. ಸೋನಾಲ್ ಆನಂದ್ ಹೇಳುತ್ತಾರೆ. ಬ್ರೇಕ್‌ಅಪ್ ನಂತರದ ಕೋಪವನ್ನು ನಿಭಾಯಿಸುವ ಮಾರ್ಗಗಳನ್ನು ಕೂಡಾ ಅವರು ಸೂಚಿಸಿದ್ದಾರೆ.
ಇದನ್ನೂ ಓದಿ: ಇಂದು Breakup Day, ಪ್ರೇಮಿಗಳ ವಿರೋಧಿ ದಿನ ಯಾಕೆ ಗೊತ್ತಾ?
ನಿಮ್ಮ ಮಾಜಿ ಪ್ರೇಮಿಯ ಜೊತೆ ತಕ್ಷಣ ಮಾತನಾಡಬೇಡಿ: ನೀವು ಸ್ವಲ್ಪ ಸವಯ ಕಾಯಿರಿ. ಹಾಗೂ ನೀವು ಮಾಜಿ ಪ್ರೇಮಿಯ ಜೊತೆ ಏನು ಮಾತನಾಡಲಿದ್ದೀರಿ ಮತ್ತು ನಿಮ್ಮಿಬ್ಬರ ಸಂಭಾಷಣೆಯಲ್ಲಿ ನಿಮ್ಮ ನೋವನ್ನು ಹೇಗೆ ವ್ಯಕ್ತಪಡಿಸುತ್ತೀರಿ ಎಂಬುದರ ಕುರಿತು ಯೋಚಿಸಿ. ಮತ್ತು ಇದರ ಕುರಿತು ನಿಮ್ಮ ವಿಶ್ವಾಸಾರ್ಹ ಸ್ನೇಹಿತರಿಂದ ಸಹಾಯವನ್ನು ಪಡೆಯಿರಿ.
ಕಿಕ್ ಬಾಕ್ಸಿಂಗ್, ಯೋಗ ಹಾಗೂ ಧ್ಯಾನ ಮಾಡಿ: ದೈಹಿಕ ವ್ಯಾಯಾಮವು ನೋವಿನಿಂದ ಹೊರಬರಲು ಮತ್ತು ನಮ್ಮ ಮೂಡ್ ಸಮತೋಲನವನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ. ಕಿಕ್ ಬಾಕ್ಸಿಂಗ್, ಯೋಗ ಮತ್ತು ಧ್ಯಾನದಂತಹ ಚಟುವಟಿಕೆಯು ಪ್ರಚೋದನೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಅದು ನಮ್ಮ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ.
ಸಾಮಾಜಿಕ ಮಾಧ್ಯಮಗಳಿಂದ ದೂರವಿರಿ: ಸ್ವಲ್ಪ ಸಮಯದವರೆಗೆ ಸಾಮಾಜಿಕ ಮಾಧ್ಯಮಗಳಿಂದ ಆದಷ್ಟು ದೂರವಿರಲು ಪ್ರಯತ್ನಿಸಿ. ನಿಮ್ಮ ಮಾಜಿ ಪ್ರೇಮಿಯ ಸಾಮಾಜಿಕ ಮಾಧ್ಯಮ ಪೋಸ್ಟ್ಗಳನ್ನು ನೋಡುವುದರಿಂದ ನಿಮಗೆ ಅದು ನೋವುಂಟುಮಾಡಬಹುದು. ಆದ್ದರಿಂದ ಸಾಮಾಜಿಕ ಮಾಧ್ಯಮಗಳಿಂದ ದೂರವಿರಿ.
ನಿಮ್ಮನ್ನು ನೀವು ಕ್ಷಮಿಸಿಬಿಡಿ: ನಿಮ್ಮ ಭಾವನೆಗಳು ಮತ್ತು ನಿಮ್ಮ ಅಗತ್ಯಗಳ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಿ. ನಿಮ್ಮ ಭಾವನೆಗಳನ್ನು ಸ್ವೀಕರಿಸಿ ನಿಮಗೆ ನೀವೆ ಸಮಧಾನ ಮಾಡಿಕೊಳ್ಳಿ ಮತ್ತು ನಿಮ್ಮನ್ನು ಕ್ಷಮಿಸಿ ಹೊಸ ಜೀವನವನ್ನು ಆರಂಭಿಸಿ.
Published On - 12:26 pm, Wed, 15 February 23