ಕಚೇರಿಯಲ್ಲಿ ಆಲಸ್ಯವೇ?, ನಿದ್ರೆ ಬಂದಂಗೆ ಆಗುತ್ತಾ, ಕಾರಣಗಳು ಇಲ್ಲಿವೆ

ಕಚೇರಿಯಲ್ಲಿ ಕೆಲಸ ಮಾಡುತ್ತಿರುವಾಗ ಮಧ್ಯಾಹ್ನ ಆಗುತ್ತಿದ್ದಂತೆ ಆಲಸ್ಯ ಶುರುವಾಗುತ್ತಾ, ನಿದ್ರೆ ಬಂದಂಗೆ ಅನ್ನಿಸುತ್ತಾ. ಊಟದ ನಂತರದ ಆಯಾಸ ಮತ್ತು ನಿದ್ರೆಯನ್ನು ತಪ್ಪಿಸಲು ಏನು ಮಾಡಬೇಕು.

ಕಚೇರಿಯಲ್ಲಿ ಆಲಸ್ಯವೇ?, ನಿದ್ರೆ ಬಂದಂಗೆ ಆಗುತ್ತಾ, ಕಾರಣಗಳು ಇಲ್ಲಿವೆ
ನಿದ್ರೆ

Updated on: Jan 22, 2023 | 1:22 PM

ಕಚೇರಿಯಲ್ಲಿ ಕೆಲಸ ಮಾಡುತ್ತಿರುವಾಗ ಮಧ್ಯಾಹ್ನ ಆಗುತ್ತಿದ್ದಂತೆ ಆಲಸ್ಯ ಶುರುವಾಗುತ್ತಾ, ನಿದ್ರೆ ಬಂದಂಗೆ ಅನ್ನಿಸುತ್ತಾ. ಊಟದ ನಂತರದ ಆಯಾಸ ಮತ್ತು ನಿದ್ರೆಯನ್ನು ತಪ್ಪಿಸಲು ಏನು ಮಾಡಬೇಕು. ಆದರೆ ಸಾಮಾನ್ಯವಾಗಿ ಜನರು ತಮ್ಮ ಸುಸ್ತು ಮತ್ತು ಆಲಸ್ಯಕ್ಕೆ ನಿಜವಾದ ಕಾರಣ ಅವರು ಆಹಾರವನ್ನು ಸೇವಿಸುವ ಸಮಯ ಎಂದು ತಿಳಿದಿರುವುದಿಲ್ಲ. ಇದು ತುಂಬಾ ಆಶ್ಚರ್ಯ ಎನಿಸಿದರೂ ಇದು ಸತ್ಯ. ವಾಸ್ತವವಾಗಿ, ದಿನವಿಡೀ ಕಚೇರಿಯಲ್ಲಿ ಕೆಲಸ ಮಾಡುವವರು ಹೆಚ್ಚು ಕ್ರಿಯಾಶೀಲರಾಗಿರುವ ಸಮಯವಿರುತ್ತದೆ, ಆದರೆ ಅವರು ಆಯಾಸವನ್ನು ಅನುಭವಿಸುವ ಸಮಯವೂ ಇರುತ್ತದೆ. ಒಂದು ಸಮೀಕ್ಷೆಯ ಪ್ರಕಾರ, ಕಚೇರಿಯಲ್ಲಿ ಜನರು ಬೆಳಗ್ಗೆ 10.22 ರ ನಡುವೆ ಹೆಚ್ಚು ಕೆಲಸ ಮಾಡುತ್ತಿರುತ್ತಾರೆ. ಆದರೆ ಮಧ್ಯಾಹ್ನ 1.27 ಅವರು ಸುಸ್ತಾಗುವ ಮತ್ತು ನಿದ್ದೆ ಬರುವ ಸಮಯ.

ಈ ಸಮೀಕ್ಷೆಯನ್ನು ಬ್ರಿಟನ್‌ನ ಬಾಡಿಗೆ ಏಜೆನ್ಸಿ ಕಂಪನಿ ಆಫೀಸ್ ಫ್ರೀಡಮ್ ಮಾಡಿದೆ. 2 ಸಾವಿರ ಜನರ ಮೇಲೆ ಸಮೀಕ್ಷೆ ನಡೆಸಿದೆ.

ಆಲಸ್ಯ ಯಾವಾಗ ಪ್ರಾರಂಭವಾಗುತ್ತದೆ?
ಮಧ್ಯಾಹ್ನ 1.27 ಆದ ಬಳಿಕ ಹಸಿವು ಹಾಗೂ ಆಲಸ್ಯ ಎರಡೂ ಶುರುವಾಗುತ್ತದೆ. ಮತ್ತು ಅದು ಸುಮಾರು 2.06 ರವರೆಗೆ ಮುಂದುವರಿಯುತ್ತದೆ. ಜೊತೆಗೆ, 60 ಪ್ರತಿಶತ ಉದ್ಯೋಗಿಗಳು ಉತ್ಪಾದಕತೆಯ ಸಮಯದಲ್ಲಿ ಹೆಚ್ಚಿನ ಮತ್ತು ಕಡಿಮೆ ಹಂತಗಳನ್ನು ಅನುಭವಿಸದೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ.

ತಿನ್ನುವುದನ್ನು ಹೊರತುಪಡಿಸಿ, ಆಲಸ್ಯಕ್ಕೆ ಇತರ ಕಾರಣಗಳು ಯಾವುವು?

ಕಂಪ್ಯೂಟರ್ ಮುಂದೆ ಹೆಚ್ಚು ಸಮಯ ಕಳೆಯುವುದು, ಕೆಲಸದ ಸಮಯದಲ್ಲಿ ಬಿಡುವು ತೆಗೆದುಕೊಳ್ಳದಿರುವುದು, ಯಾರೊಂದಿಗೂ ಮಾತನಾಡದೆ ಸುಮ್ಮನೆ ಕುಳಿತುಕೊಂಡಿರುವುದು ಕೂಡ ಆಲಸ್ಯಕ್ಕೆ ಕಾರಣವಾಗಿರಬಹುದು. ಈ ಕಾರಣದಿಂದಾಗಿ, ಒಬ್ಬ ವ್ಯಕ್ತಿಯು ಕೆಲಸದ ಮೇಲೆ ಕೇಂದ್ರೀಕರಿಸಲು ಸಾಧ್ಯವಿಲ್ಲ.

ಭಾಗವಹಿಸುವವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಮನೆಯಿಂದಲೇ ಕೆಲಸ ಮಾಡುವುದಕ್ಕಿಂತ ಕಚೇರಿಯಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ. 10 ರಲ್ಲಿ 4 ಭಾಗವಹಿಸುವವರು ಕಚೇರಿಯಲ್ಲಿ ತಮ್ಮ ಉತ್ಪಾದಕತೆ ಹೆಚ್ಚಾಗಿದೆ ಎಂದು ಒಪ್ಪಿಕೊಂಡಿದ್ದಾರೆ.

Published On - 1:22 pm, Sun, 22 January 23

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us