ರಾತ್ರಿ ತಡವಾಗಿ ಮಲಗುವುದರಿಂದ ಡಯಾಬಿಟಿಸ್ ಬರಬಹುದು ಎಚ್ಚರ!

|

Updated on: Sep 13, 2023 | 1:45 PM

ರಾತ್ರಿಯಲ್ಲಿ ಬೇಗನೆ ಮಲಗಲು ಸಾಧ್ಯವಾಗದ ಅನೇಕ ಜನರು ಧೂಮಪಾನ, ಕಡಿಮೆ ದೈಹಿಕ ಚಟುವಟಿಕೆ ಅಥವಾ ಅತಿಯಾದ ಮದ್ಯಪಾನದಂತಹ ಅನಾರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುತ್ತಾರೆ. ಹೀಗಾಗಿ, ಅಂಥವರಲ್ಲಿ ಮಧುಮೇಹದ ಸಮಸ್ಯೆಗಳು ಹೆಚ್ಚಾಗುತ್ತಿವೆ.

ರಾತ್ರಿ ತಡವಾಗಿ ಮಲಗುವುದರಿಂದ ಡಯಾಬಿಟಿಸ್ ಬರಬಹುದು ಎಚ್ಚರ!
ನಿದ್ರೆ
Image Credit source: iStock
Follow us on

ಹಗಲಿಡೀ ಆಫೀಸ್ ಕೆಲಸ, ಮನೆಗೆಲಸದಲ್ಲಿ ಮುಳುಗಿರುವವರು ರಾತ್ರಿ ಮೊಬೈಲ್ ನೋಡುತ್ತಲೋ, ಟಿವಿ ನೋಡುತ್ತಲೋ ಅರ್ಧ ರಾತ್ರಿಯವರೆಗೂ ಎದ್ದಿರುತ್ತಾರೆ. ಮೊದಲೆಲ್ಲ ರಾತ್ರಿ 10 ಗಂಟೆಗೆ ಮನೆಯ ಲೈಟ್ ಸ್ವಿಚ್ ಆಫ್ ಆಗಿರುತ್ತಿತ್ತು. ಆದರೀಗ ಮಧ್ಯರಾತ್ರಿ 1 ಗಂಟೆಯಾದರೂ ಕೆಲವರು ನಿದ್ರೆಯನ್ನೇ ಮಾಡುವುದಿಲ್ಲ. ಈ ಅಭ್ಯಾಸ ಕೇವಲ ನಿಮ್ಮ ದಿನನಿತ್ಯದ ರೊಟೀನ್​ಗೆ ಮಾತ್ರವಲ್ಲದೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ರಾತ್ರಿ ಬಹಳ ಹೊತ್ತು ಎಚ್ಚರವಿದ್ದರೆ ಡಯಾಬಿಟಿಸ್ ಬರುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು ತಿಳಿಸಿದೆ.

ಹೊಸ ಅಧ್ಯಯನದ ಪ್ರಕಾರ, ಕ್ರೊನೊಟೈಪ್ ಎಂದು ಕರೆಯಲ್ಪಡುವ ಈ ನಿದ್ರೆಯ ಮಾದರಿಯು ಟೈಪ್ 2 ಡಯಾಬಿಟಿಸ್‌ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಅನಾರೋಗ್ಯಕರ ಜೀವನಶೈಲಿಗೆ ಸಂಬಂಧಿಸಿದ ಈ ಸಮಸ್ಯೆ ಆರೋಗ್ಯಕ್ಕೆ ದೊಡ್ಡ ಸಂಕಷ್ಟ ತಂದಿಡಬಹುದು.

ಆನಲ್ಸ್ ಆಫ್ ಇಂಟರ್ನಲ್ ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು, ರಾತ್ರಿಯಲ್ಲಿ ಬೇಗನೆ ಮಲಗಲು ಸಾಧ್ಯವಾಗದ ಅನೇಕ ಜನರು ಧೂಮಪಾನ, ಕಡಿಮೆ ದೈಹಿಕ ಚಟುವಟಿಕೆ ಅಥವಾ ಅತಿಯಾದ ಮದ್ಯಪಾನದಂತಹ ಅನಾರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುತ್ತಾರೆ. ಹೀಗಾಗಿ, ಅಂಥವರಲ್ಲಿ ಮಧುಮೇಹದ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ತಿಳಿಸಿದೆ.

ಇದನ್ನೂ ಓದಿ: Chia Seeds: ಬೀಜ ಚಿಕ್ಕದಾದರೂ ಪ್ರಯೋಜನ ಅದ್ಭುತ; ನಿಮ್ಮ ಡಯೆಟ್​​ನಲ್ಲಿರಲಿ ಚಿಯಾ ಸೀಡ್ಸ್​

ನಾವೆಲ್ಲರೂ ಸಿರ್ಕಾಡಿಯನ್ ರಿದಮ್ ಎಂದು ಕರೆಯಲ್ಪಡುವ ಜೈವಿಕ ಗಡಿಯಾರವನ್ನು ಹೊಂದಿದ್ದೇವೆ. ಅದು ನಿದ್ರೆಯನ್ನು ಪ್ರಚೋದಿಸುವ ಹಾರ್ಮೋನ್ ಆದ ಮೆಲಟೋನಿನ್ ಅನ್ನು ಬಿಡುಗಡೆ ಮಾಡುತ್ತದೆ. ಆದರೆ, ರಾತ್ರಿ ತಡವಾಗಿ ಮಲಗುವುದರಿಂದ ಈ ಹಾರ್ಮೋನುಗಳಲ್ಲೂ ವ್ಯತ್ಯಾಸವಾಗುತ್ತದೆ. ಈ ಹಾರ್ಮೋನು ಬೆಳಗಿನ ಜಾವದಲ್ಲಿ ಹೆಚ್ಚು ಜಾಗರೂಕವಾಗಿರುತ್ತವೆ. ಇದರಿಂದ ಬೆಳಗ್ಗೆ ಸರಿಯಾಗಿ ನಿದ್ರೆ ಮಾಡಲು ಆಗುವುದಿಲ್ಲ. ಹೀಗಾಗಿ, ನಿದ್ರಾಹೀನತೆಯ ತೊಂದರೆಯೂ ಉಂಟಾಗುತ್ತದೆ ಎನ್ನಲಾಗಿದೆ.

ರಾತ್ರಿ ತಡವಾಗಿ ಮಲಗುವವರಲ್ಲಿ ತಡವಾಗಿ ಮೆಲಟೋನಿನ್ ಹಾರ್ಮೋನು ಸ್ರವಿಕೆಯಾಗುತ್ತದೆ. ಇದರ ಪರಿಣಾಮವಾಗಿ ಮುಂಜಾನೆ ಗಡಸುತನ ಮತ್ತು ದಿನವಿಡೀ ಆಲಸ್ಯ ಉಂಟಾಗುತ್ತದೆ. ನಮ್ಮ ದೇಹದ ಪ್ರತಿಯೊಂದು ಕೋಶವು ತನ್ನದೇ ಆದ ಸಿರ್ಕಾಡಿಯನ್ ಲಯಕ್ಕೆ ಬದ್ಧವಾಗಿದೆ. ಹಸಿವು, ಕರುಳಿನ ಚಲನೆ, ವ್ಯಾಯಾಮ ಮತ್ತು ರೋಗನಿರೋಧಕ ಶಕ್ತಿಯನ್ನು ಇದು ನಿರ್ದೇಶಿಸುತ್ತದೆ.

ಇದನ್ನೂ ಓದಿ: Anjeer Benefits: ಅಂಜೂರ ತಿನ್ನುವುದರಿಂದ ಆಗುವ 8 ಪ್ರಯೋಜನಗಳಿವು

ನಿದ್ರೆಯು ಈ ಎಲ್ಲ ವ್ಯವಸ್ಥೆಯನ್ನೂ ಅಡ್ಡಿಪಡಿಸಿದಾಗ ನಮ್ಮ ದೇಹದಲ್ಲಿ ಅವ್ಯವಸ್ಥೆ ಉಂಟಾಗುತ್ತದೆ. ಹಾರ್ಮೋನ್ ಸ್ರವಿಸುವಿಕೆಯು ಬದಲಾಗಿ, ನಮ್ಮ ದೇಹದ ಎಲ್ಲ ಕೆಲಸಗಳಲ್ಲೂ ವ್ಯತ್ಯಾಸ ಉಂಟಾಗುತ್ತದೆ. ಇದು ನಮ್ಮಲ್ಲಿ ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಹಾಗೇ, ಹೃದಯರಕ್ತನಾಳದ ಕಾಯಿಲೆ ಮತ್ತು ಇತರ ದೀರ್ಘಕಾಲದ ಕಾಯಿಲೆಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಹೀಗಾಗಿಯೇ ಅಧ್ಯಯನಕ್ಕೆ ಒಳಗಾದ ನೈಟ್ ಶಿಫ್ಟ್​ನಲ್ಲಿ ಕೆಲಸ ಮಾಡುವವರಲ್ಲಿ ಮಧುಮೇಹದ ಪ್ರಮಾಣ ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಬೆಳಗ್ಗೆ ಬೇಗನೆ ಏಳುವವರು ಶೈಕ್ಷಣಿಕವಾಗಿಯೂ ಬಹಳ ಚುರುಕಾಗಿರುತ್ತಾರೆ, ದಿನವಿಡೀ ಚಟುವಟಿಕೆಯಿಂದಿರುತ್ತಾರೆ ಎಂದು ಅಧ್ಯಯನ ತಿಳಿಸಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ