Kannada News Lifestyle Sleeping Pattern : What are the health effects of getting up late in the morning? Lifestyle News SIU
Health Care Tips:ಮುಂಜಾನೆ ತಡವಾಗಿ ಎದ್ದೇಳುತ್ತೀರಾ? ಈ ಆರೋಗ್ಯ ಸಮಸ್ಯೆ ಬರಬಹುದು ಜೋಪಾನ!
ಒಬ್ಬ ವ್ಯಕ್ತಿಯು ಆರೋಗ್ಯವಂತನಾಗಿರಬೇಕಾದರೆ ಪೌಷ್ಟಿಕಾಂಶಯುಕ್ತ ಆಹಾರದೊಂದಿಗೆ ನಿದ್ದೆ ಕೂಡ ಅಷ್ಟೇ ಅಗತ್ಯವಾಗುತ್ತದೆ. ಆದರೆ ಕೆಲವರು ರಾತ್ರಿ ಹನ್ನೆರಡು ಗಂಟೆಯಾದರೂ ಮಲಗುವುದೇ ಇಲ್ಲ. ರಾತ್ರಿ ತಡವಾಗಿ ಮಲಗಿ ಬೆಳಗ್ಗೆ ಕೂಡ ತಡವಾಗಿಯೆ ಎದ್ದೇಳುತ್ತಾರೆ. ಇಂತಹ ಅಭ್ಯಾಸವಿದ್ದರೆ ಇದು ಅನೇಕ ರೀತಿಯ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು.
Sleeping Pattern
Follow us on
ಮನುಷ್ಯನ ಆರೋಗ್ಯಕ್ಕೆ ನಿದ್ರೆ ತುಂಬಾ ಅವಶ್ಯಕ. ಒಬ್ಬ ವ್ಯಕ್ತಿಯು ಆರೋಗ್ಯಕರವಾಗಿರಬೇಕಾದರೆ ಕನಿಷ್ಠ ಏಳೆಂಟು ಗಂಟೆಗಳ ಕಾಲವಾದರೂ ನಿದ್ರಿಸಲೇಬೇಕು. ದೇಹಕ್ಕೆ ಅತಿಯಾದ ನಿದ್ದೆಯು ಒಳ್ಳೆಯದಲ್ಲ. ಕೆಲವರಿಗೆ ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವ ಅಭ್ಯಾಸವಿರುತ್ತದೆ. ಬೆಳಗ್ಗೆ ಬೇಗ ಏಳುವ ಅಭ್ಯಾಸ ಆರೋಗ್ಯಕ್ಕೆ ಉತ್ತಮವಾಗಿದೆ. ಆದರೆ ರಾತ್ರಿ ತಡವಾಗಿ ಮಲಗಿ ಬೆಳಗ್ಗೆ ತಡವಾಗಿ ಏಳುವುದರಿಂದ ಆರೋಗ್ಯವೂ ಹಾಳಾಗುವುದಂತು ಖಂಡಿತ.
ರಾತ್ರಿ ತಡವಾಗಿ ಮಲಗುವುದು ಮತ್ತು ಬೆಳಿಗ್ಗೆ ತಡವಾಗಿ ಏಳುವುದು ಒತ್ತಡ ಮತ್ತು ಮೂಡ್ ಸ್ವಿಂಗ್‌ಗಳಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಈ ರೀತಿಯ ಅಭ್ಯಾಸವು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದಲ್ಲ.
ಬೆಳಗಿನ ಜಾವದವರೆಗೆ ಮಲಗಿದರೆ ಬೆಳಗಿನ ಉಪಾಹಾರ ಮತ್ತು ಊಟದ ಸಮಯದಲ್ಲಿ ಬದಲಾವಣೆಯಾಗುತ್ತದೆ. ಇದರಿಂದ ಚಯಾಪಚಯ ಕ್ರಿಯೆಯಲ್ಲಿ ಬದಲಾವಣೆಯಾಗಿ ತೂಕ ಹೆಚ್ಚಾಗಬಹುದು.
ಪ್ರತಿ ದಿನ ಬೆಳಗ್ಗೆ ತಡವಾಗಿ ಏಳುವುದರಿಂದ ಇಡೀ ದಿನ ಭಾರವೆನಿಸುತ್ತದೆ. ತಡವಾಗಿ ಏಳುವುದರಿಂದ ಆಯಾಸ, ಸುಸ್ತು ಎನಿಸಬಹುದು. ಈ ಅಭ್ಯಾಸವು ದಿನದ ಕೆಲಸದ ಮೇಲೆ ಪರಿಣಾಮ ಬೀರುತ್ತದೆ.
ಬೆಳಗ್ಗಿನ ದಿನವನ್ನು ತಡವಾಗಿ ಏಳುವ ಮೂಲಕ ಪ್ರಾರಂಭ ಮಾಡುವುದರಿಂದ ಕರುಳಿನ ಕೆಲಸವು ಸಮಯಕ್ಕೆ ಸರಿಯಾಗಿ ಆಗುವುದಿಲ್ಲ. ಹೀಗಾಗಿ ಮಲಬದ್ಧತೆ ಮತ್ತು ಹೊಟ್ಟೆ ಉಬ್ಬರದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಮುಂಜಾನೆ ತಡವಾಗಿ ಎದ್ದರೆ ಮಾನಸಿಕ ಆತಂಕ, ಒತ್ತಡ, ಖಿನ್ನತೆ, ಸಿಡುಕು, ಕೋಪ ಹೀಗೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ.
ಬೆಳಗ್ಗೆ ತಡವಾಗಿ ಏಳುವುದರಿಂದ ದಿನಚರಿಯೇ ಬದಲಾಗುತ್ತದೆ. ಈ ರೀತಿಯ ಅಭ್ಯಾಸದಿಂದ ಮಧುಮೇಹ ಮತ್ತು ಹೃದ್ರೋಗದ ಅಪಾಯವು ಹೆಚ್ಚಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ