Eye Care Tips : ಗರಿಕೆಯ ಪೇಸ್ಟ್ ಮಾಡಿ ರಾತ್ರಿ ಮಲಗುವ ಮುನ್ನ ಕಣ್ಣಿನ ರೆಪ್ಪೆ ಮೇಲೆ ಹಚ್ಚಿಕೊಳ್ಳಿ ಕಣ್ಣು ಉರಿ ಮಾಯಾ
ಇತ್ತೀಚೆಗಿನ ದಿನಗಳಲ್ಲಿ ಕೂತರು ನಿಂತರೂ ಕಾಡುವ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ. ಸಣ್ಣ ಪುಟ್ಟ ಕಾಯಿಲೆಗಳನ್ನು ನಿರ್ಲಕ್ಷ ಮಾಡಿದರೆ, ಆದರಿಂದಾಗುವ ಪರಿಣಾಮಗಳು ದೊಡ್ಡ ಮಟ್ಟದಾಗಬಹುದು. ಹೆಚ್ಚಿನವರಿಗೆ ಕಣ್ಣಿನ ಉರಿ ಸಮಸ್ಯೆಯು ಕಾಡುತ್ತದೆ. ಕಣ್ಣು ತೆರೆಯುವುದಕ್ಕೂ ಕಷ್ಟ ಎನ್ನುವಂತಾಗುತ್ತದೆ. ಈ ಸಣ್ಣ ಪುಟ್ಟ ಸಮಸ್ಯೆಗಳನ್ನು ಮನೆ ಮದ್ದಿನ ಮೂಲಕ ಗುಣಪಡಿಸಿಕೊಳ್ಳಬಹುದು.
ಇತ್ತೀಚೆಗಿನ ದಿನಗಳಲ್ಲಿ ಲ್ಯಾಪ್‌ಟಾಪ್, ಕಂಪ್ಯೂಟರ್, ಮೊಬೈಲ್ ಬಳಕೆ ಮಾಡುತ್ತಿರುವವರ ಸಂಖ್ಯೆಯು ಹೆಚ್ಚಾಗುತ್ತಿದೆ. ಅದಲ್ಲದೇ ನಿದ್ದೆಯ ಕೊರತೆ ಹಾಗೂ ಒತ್ತಡ ಭರಿತ ಜೀವನ ಶೈಲಿಯ ಪರಿಣಾಮವಾಗಿ ಅನೇಕರಲ್ಲಿ ಕಣ್ಣು ಉರಿ ಅಥವಾ ಕಣ್ಣು ನೋವಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಇಂತಹ ಸಮಸ್ಯೆಗೆ ಸಿಂಪಲ್ ಆಗಿ ಮನೆ ಮದ್ದಿನ ಮೂಲಕ ಈ ಪರಿಹಾರ ಕಂಡುಕೊಳ್ಳಬಹುದು.
ಕಣ್ಣು ಉರಿಯ ಸಮಸ್ಯೆ ಕಾಡುತ್ತಿದೆಯೇ, ಈ ರೀತಿ ಪರಿಹಾರ ಕಂಡುಕೊಳ್ಳಿ
- ವಿಪರೀತವಾಗಿ ಕಣ್ಣು ಉರಿಯುತ್ತಿದ್ದರೆ ಕಣ್ಣನ್ನು ನೀರಿನಿಂದ ತೊಳೆಯಬೇಕು. ಇಲ್ಲವಾದರೆ ಸ್ವಲ್ಪ ಹೊತ್ತು ಮುಖವನ್ನು ತಣ್ಣೀರಿನಲ್ಲಿ ಇಟ್ಟುಕೊಳ್ಳುವುದರಿಂದ ಆರಾಮವೆನಿಸುತ್ತದೆ.
- ರೋಸ್ ವಾಟರ್ ನಿಂದ ಕಣ್ಣುಗಳನ್ನು ತೊಳೆಯುವುದು, ಇಲ್ಲವಾದರೆ ರಾತ್ರಿ ಮಲಗುವ ಮುಂಚಿತವಾಗಿ ಕಣ್ಣಿನ ಹೊರ ಭಾಗಕ್ಕೆ ರೋಸ್ ವಾಟರ್ ಹಚ್ಚುವುದರಿಂದ ಪರಿಣಾಮಕಾರಿಯಾಗಿದೆ.
- ಗರಿಕೆಯನ್ನು ಪೇಸ್ಟ್ ಮಾಡಿ ಅದನ್ನು ರಾತ್ರಿ ಮಲಗುವ ಮುನ್ನ ಕಣ್ಣಿನ ರೆಪ್ಪೆ ಮೇಲೆ ಲೇಪಿಸಿ ಸ್ವಲ್ಪ ಸಮಯದ ನಂತರ ತೊಳೆಯುವುದರಿಂದ ಕಣ್ಣಿನ ಉರಿಯು ಗುಣಮುಖವಾಗುತ್ತದೆ.
- ಸೌತೆಕಾಯಿಯನ್ನು ಹೋಳುಗಳನ್ನಾಗಿ ಮಾಡಿ, ಅವುಗಳನ್ನು ಕಣ್ಣಿನ ಮೇಲೆ ಇಟ್ಟುಕೊಂಡರೆ ಕಣ್ಣು ಉರಿ ಕಡಿಮೆಯಾಗುತ್ತದೆ.
- ದಾಳಿಂಬೆ ಗಿಡದ ಎಲೆಗಳನ್ನು ಪುಡಿ ಮಾಡಿ ನೀರು ಬೆರೆಸಿ ಪೇಸ್ಟ್ ತಯಾರಿಸಿ ಕಣ್ಣುಗಳ ಮೇಲೆ ಹಚ್ಚಿಕೊಂಡು ಸ್ವಲ್ಪ ಸಮಯದ ಬಳಿಕ ತೊಳೆದರೆ ಕಣ್ಣಿನ ಉರಿಯು ನಿವಾರಣೆಯಾಗುತ್ತದೆ.
- ತಣ್ಣನೆಯ ಹಾಲಿನಿಂದ ಕಣ್ಣುಗಳ ಭಾಗದಲ್ಲಿ ಮಸಾಜ್ ಮಾಡುವುದರಿಂದ ಕಣ್ಣು ಉರಿ ಕಡಿಮೆಯಾಗುತ್ತದೆ.
- ಹೆಸರು ಕಾಳಿನ ಪುಡಿಯನ್ನು ನೀರಲ್ಲಿ ಕಲಸಿ ಮುಖ ಮತ್ತು ರೆಪ್ಪೆಗೆ ಹಚ್ಚುತ್ತಿದ್ದರೆ ಕಣ್ಣುಗಳ ಉರಿ ಕಡಿಮೆಯಾಗುತ್ತದೆ.
- ಕೊತ್ತಂಬರಿ ಬೀಜದ ಕಷಾಯ ಮಾಡಿ, ಹತ್ತಿಯಲ್ಲಿ ನೆನೆಸಿ ಕಣ್ಣುಗಳ ಮೇಲೆ ಇಟ್ಟುಕೊಳ್ಳುವುದರಿಂದ ಕಣ್ಣಿನ ಉರಿಯು ಶಮನವಾಗುತ್ತದೆ.
ಈ ಮನೆಮದ್ದನ್ನು ಪ್ರಯತ್ನಿಸುವ ಮುನ್ನ ವೈದ್ಯರ ಸಲಹೆಯನ್ನು ಪಡೆಯುವುದು ಉತ್ತಮ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ