ದಿನವೂ ಮಧ್ಯರಾತ್ರಿ ನಂತರ ಮಲಗಿದರೆ ಏನಾಗುತ್ತದೆ?

ಕೆಲವರಿಗೆ ನಡುರಾತ್ರಿಯಾದ ನಂತರವೇ ನಿದ್ರೆ ಮಾಡಿ ಅಭ್ಯಾಸವಿರುತ್ತದೆ. ಮಧ್ಯರಾತ್ರಿ 12 ಗಂಟೆ ದಾಟುವವರೆಗೂ ಮೊಬೈಲ್ ನೋಡುತ್ತಾ ಕುಳಿತುಕೊಳ್ಳುವುದು ಹಲವರ ಅಭ್ಯಾಸ. ಆದರೆ, ಈ ಅಭ್ಯಾಸದಿಂದ ಆರೋಗ್ಯದ ಮೇಲೆ ಹಲವು ರೀತಿಯಲ್ಲಿ ಕೆಟ್ಟ ಪರಿಣಾಮ ಬೀರುತ್ತದೆ. ನಾವು ಮಲಗುವ ಸಮಯ ಕೂಡ ನಮ್ಮ ಆರೋಗ್ಯದ ಮೇಲೆ ಪರಿಣಾಮ ಉಂಟುಮಾಡುತ್ತದೆ.

ದಿನವೂ ಮಧ್ಯರಾತ್ರಿ ನಂತರ ಮಲಗಿದರೆ ಏನಾಗುತ್ತದೆ?
ನಿದ್ರೆ
Image Credit source: iStock

Updated on: Feb 06, 2024 | 6:40 PM

ಕೆಲವರಿಗೆ ಮಧ್ಯರಾತ್ರಿಯಾದ ನಂತರವೇ ಮಲಗುವ ರೂಢಿ ಇರುತ್ತದೆ. ರಾತ್ರಿ ತಡವಾಗಿ ಮಲಗಿ ಬೆಳಗ್ಗೆ ತಡವಾಗಿ ಏಳುವ ಅಭ್ಯಾಸ ನಿಮಗಿದ್ದರೆ ಅದನ್ನು ಬದಲಿಸಿಕೊಳ್ಳುವುದು ಒಳ್ಳೆಯದು. ಹಗಲಿನ ವೇಳೆ ಎಷ್ಟೇ ನಿದ್ರೆ (Sleeping Problem) ಮಾಡಿದರೂ ರಾತ್ರಿಯ ನಿದ್ರೆಯಷ್ಟು ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹೀಗಾಗಿ, ನೈಟ್ ಶಿಫ್ಟ್​ನಲ್ಲಿ (Night Shift) ಕೆಲಸ ಮಾಡುವವರ ಆರೋಗ್ಯದಲ್ಲಿ ಆಗಾಗ ಏರುಪೇರಾಗುವುದು ಸಹಜ. ರಾತ್ರಿಯ ಕತ್ತಲು, ಆ ನಿಶ್ಯಬ್ಧತೆಯಲ್ಲಿ ನಿದ್ರೆ ಮಾಡುವುದರಿಂದ ನಮ್ಮ ದೇಹಕ್ಕೆ ಸೂಕ್ತ ರೀತಿಯ ವಿಶ್ರಾಂತಿ ಸಿಗುತ್ತದೆ. ನಮ್ಮ ದೇಹ ನಿದ್ರೆ ಮತ್ತು ಎಚ್ಚರದ ಸೈಕಲ್​ಗೆ ಹೊಂದಿಕೊಂಡಿರುತ್ತದೆ.

ದಿನವೂ ಮಧ್ಯರಾತ್ರಿಯ ನಂತರ ಮಲಗುವ ಅಭ್ಯಾಸವು ಅನೇಕ ರೀತಿಯಲ್ಲಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ನಮ್ಮ ದೀರ್ಘಕಾಲೀನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಈ ಬಗ್ಗೆ ಯಶೋದಾ ಹಾಸ್ಪಿಟಲ್ಸ್ ಹೈದರಾಬಾದ್‌ನ ಹಿರಿಯ ಕನ್ಸಲ್ಟೆಂಟ್ ಡಾ. ದಿಲೀಪ್ ಗುಡೆ ಮಾಹಿತಿ ನೀಡಿದ್ದು, ಪ್ರತಿದಿನ ತಡವಾಗಿ ಮಲಗುವುದರಿಂದ ಒತ್ತಡ ಮತ್ತು ಚಯಾಪಚಯ ಸಮಸ್ಯೆಗಳು ಹೆಚ್ಚಾಗುತ್ತದೆ. ಇದು ಹೆಚ್ಚಿದ ಆತಂಕ, ಖಿನ್ನತೆ ಮತ್ತು ಬೈಪೋಲಾರ್ ಡಿಸಾರ್ಡರ್‌ಗಳಂತಹ ವಿವಿಧ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಯಾವ ಭಂಗಿಯಲ್ಲಿ ನಿದ್ರೆ ಮಾಡಬೇಕು: ಯಾವ ಮಲಗುವ ಭಂಗಿಯು ಆರೋಗ್ಯಕ್ಕೆ ಒಳ್ಳೆಯದು?

ಜನರು ಮಲಗಿದಾಗ ನಿದ್ರೆಯ ಸಮಯದಲ್ಲಿ ನಮ್ಮ ದೇಹದ ಎಲ್ಲ ಅಂಗಗಳಿಗೂ ವಿಶ್ರಾಂತಿ ಸಿಗುತ್ತದೆ. ದೀರ್ಘಕಾಲದಿಂದ ನಿದ್ರಾಹೀನತೆ ಮತ್ತು ತಡವಾಗಿ ಮಲಗುವವರಲ್ಲಿ ಜೀವಿತಾವಧಿಯು ಕಡಿಮೆಯಾಗುತ್ತದೆ ಎಂದು ವೈದ್ಯರು ಇಂಡಿಯನ್​ ಎಕ್ಸ್​ಪ್ರೆಸ್​ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ನೀವು ಎದುರಿಸಬಹುದಾದ ದೀರ್ಘಕಾಲೀನ ಸಮಸ್ಯೆಗಳು ಯಾವುವು?:

– ದಿನವೂ ಮಧ್ಯರಾತ್ರಿಯ ನಂತರ ಮಲಗುವುದು ದೇಹದ ನೈಸರ್ಗಿಕ ಸಿರ್ಕಾಡಿಯನ್ ಲಯವನ್ನು ಅಡ್ಡಿಪಡಿಸುತ್ತದೆ. ಇದು ಹಾರ್ಮೋನ್ ಬಿಡುಗಡೆ, ಚಯಾಪಚಯ ಮತ್ತು ದೇಹದ ಉಷ್ಣತೆಯಂತಹ ಅಗತ್ಯ ಕಾರ್ಯಗಳ ನಿಯಂತ್ರಣದ ಮೇಲೆ ಪರಿಣಾಮ ಬೀರುತ್ತದೆ.

– ದೀರ್ಘಕಾಲದವರೆಗೆ ತಡರಾತ್ರಿಯಲ್ಲಿ ನಿದ್ರೆ ಮಾಡುವುದರಿಂದ ಅರಿವಿನ ಕಾರ್ಯ ದುರ್ಬಲಗೊಳ್ಳುತ್ತದೆ. ಇದು ಏಕಾಗ್ರತೆ ಮತ್ತು ಒಟ್ಟಾರೆ ಮಾನಸಿಕ ತೊಂದರೆಗಳಿಗೆ ಕಾರಣವಾಗುತ್ತದೆ.

– ತಡರಾತ್ರಿಯ ನಿದ್ರೆಯು ಕಾರ್ಟಿಸೋಲ್‌ನಂತಹ ಒತ್ತಡದ ಹಾರ್ಮೋನ್‌ಗಳ ಜೊತೆಗೆ ಸಂಬಂಧ ಹೊಂದಿದೆ. ಇದು ಹೆಚ್ಚಿದ ಒತ್ತಡ, ಆತಂಕ ಮತ್ತು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.

– ದೀರ್ಘಕಾಲದ ನಿದ್ರೆಯ ಕೊರತೆ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ದೇಹವು ಅನಾರೋಗ್ಯ ಮತ್ತು ಸೋಂಕುಗಳಿಗೆ ಹೆಚ್ಚು ಒಳಗಾಗುತ್ತದೆ.

ಇದನ್ನೂ ಓದಿ: ನಿಮ್ಮ ಮಗು ಸರಿಯಾಗಿ ನಿದ್ರೆ ಮಾಡುತ್ತಿಲ್ಲವೇ?; ನಿರ್ಲಕ್ಷ್ಯ ಮಾಡಬೇಡಿ

– ಮಧ್ಯರಾತ್ರಿಯ ನಂತರ ನಿದ್ರಿಸುವುದು ದೇಹದ ಚಯಾಪಚಯವನ್ನು ಅಡ್ಡಿಪಡಿಸಬಹುದು. ಇದು ತೂಕ ಹೆಚ್ಚಾಗಲು, ಇನ್ಸುಲಿನ್ ಪ್ರತಿರೋಧಕ್ಕೆ ಮತ್ತು ಚಯಾಪಚಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ತಡವಾಗಿ ನಿದ್ರಿಸುವುದು ಹಗಲಿನಲ್ಲಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ. ಇದು ಒಟ್ಟಾರೆ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಕೊಲೆಸ್ಟ್ರಾಲ್ ಹೆಚ್ಚಳ ಮತ್ತು ಅಧಿಕ ರಕ್ತದೊತ್ತಡದ ಅಪಾಯ ಉಂಟಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ