ಟಿವಿ ನೋಡುತ್ತಾ ಮಲಗುವ ಅಭ್ಯಾಸ ನಿಮಗೂ ಇದೆಯೇ? ಹಾಗಿದ್ದರೆ ಅಪಾಯವನ್ನೂ ತಿಳಿದುಕೊಳ್ಳಿ

|

Updated on: Jan 09, 2024 | 5:08 PM

ಟಿವಿ ನೋಡುತ್ತಾ ನಿದ್ರಿಸುವುದು ಹಾನಿಕಾರಕ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಹೊಸ ಅಧ್ಯಯನದ ಪ್ರಕಾರ, ಈ ಅಭ್ಯಾಸವು ನಿಮ್ಮ ಆರೋಗ್ಯವನ್ನು ಗಂಭೀರವಾಗಿ ಹಾನಿಗೊಳಿಸುತ್ತದೆ. ಜೊತೆಗೆ ನಿದ್ರೆಯ ಮಾದರಿಯ ಮೇಲೆ ಪರಿಣಾಮ ಬೀರಿ, ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಸಂಶೋಧನೆ ಹೇಳುತ್ತದೆ.

ಟಿವಿ ನೋಡುತ್ತಾ ಮಲಗುವ ಅಭ್ಯಾಸ ನಿಮಗೂ ಇದೆಯೇ? ಹಾಗಿದ್ದರೆ ಅಪಾಯವನ್ನೂ ತಿಳಿದುಕೊಳ್ಳಿ
Sleeping With TV On
Follow us on

ಇತ್ತೀಚಿನ ವರ್ಷಗಳಲ್ಲಿ,ಕೋವಿಡ್-19 ಸಾಂಕ್ರಾಮಿಕದ ನಂತರ, ನೆಟ್‌ಫ್ಲಿಕ್ಸ್‌ನಂತಹ OTT ಪ್ಲಾಟ್‌ಫಾರ್ಮ್‌ಗಳ ಕ್ರೇಜ್ ಪ್ರಪಂಚದಾದ್ಯಂತ ಗಮನಾರ್ಹವಾಗಿ ಬೆಳೆದಿದೆ. ಇದರಿಂದಾಗಿ ಸಾಕಷ್ಟು ಜನರು ತಮ್ಮ ಬಿಡುವಿನ ಸಮಯದಲ್ಲಿ ಟಿವಿ ಪರದೆಯ ಮುಂದೆಯೇ ಸಮಯ ಕಳೆಯುತ್ತಾರೆ. ಸಂಶೋಧನೆಯೊಂದರ ಪ್ರಕಾರ, ಟಿವಿ ನೋಡುತ್ತಾ ಮಲಗುವ ಅಭ್ಯಾಸವನ್ನು ಹೊಂದಿರುವ ಜನರಲ್ಲಿ ಇನ್ಸುಲಿನ್ ಮಟ್ಟದಲ್ಲಿ ತೊಂದರೆಯುಂಟಾಗುತ್ತದೆ. ಈ ಕಾರಣದಿಂದಾಗಿ, ದೇಹದಲ್ಲಿನ ಸಕ್ಕರೆಯ ಪ್ರಮಾಣವು ಹೆಚ್ಚಾಗಬಹುದು. ಈ ನಿದ್ರೆಯ ಮಾದರಿಯು ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತದೆ. ಬಿಪಿ, ಶುಗರ್ ಮತ್ತು ತೂಕ ಹೆಚ್ಚಾಗುವುದರಿಂದ ಹೃದ್ರೋಗಗಳ ಅಪಾಯವು ಗಮನಾರ್ಹವಾಗಿ ಹೆಚ್ಚಾಗುತ್ತದೆ ಎಂದು ತಿಳಿದುಬಂದಿದೆ.

ಚಿಕಾಗೋದ ನಾರ್ತ್‌ವೆಸ್ಟರ್ನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ 2022ರಲ್ಲಿ ನಡೆಸಿದ ಸಂಶೋಧನೆಯೊಂದರ ಫಲಿತಾಂಶ ಇದೀಗಾ ಬಹಿರಂಗಗೊಂಡಿದೆ. ಈ ಸಂಶೋಧನೆಯಲ್ಲಿ ಟಿವಿ ನೋಡುತ್ತಾ ಮಲಗುವ ಅಭ್ಯಾಸ ಹೊಂದಿರುವ ಸುಮಾರು 550 ಜನರನ್ನು ಒಳಪಡಿಸಲಾಗಿತ್ತು. ಅಧ್ಯಯನದ ಫಲಿತಾಂಶದ ಪ್ರಕಾರ, ಈ ರೀತಿಯ ಅಭ್ಯಾಸವು ತೂಕ ಹೆಚ್ಚಾಗುವುದು, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಇದಲ್ಲದೇ ಸ್ನಾಯು ನೋವು ಅಥವಾ ಇತರ ಸ್ನಾಯು ಸಂಬಂಧಿತ ಸಮಸ್ಯೆಗಳಿಗೂ ಕಾರಣವಾಗುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ರಾತ್ರಿ ಚಳಿಗೆ ಸ್ವೆಟರ್ ಹಾಕಿಕೊಂಡು ಮಲಗುತ್ತೀರಾ? ಹಾಗಿದ್ರೆ ಅಪಾಯವನ್ನೂ ತಿಳಿದುಕೊಳ್ಳಿ

ಆದ್ದರಿಂದ ಪ್ರತಿದಿನ ಚೆನ್ನಾಗಿ ನಿದ್ರೆ ಮಾಡಲು ಧ್ಯಾನವನ್ನು ಅಭ್ಯಾಸ ಮಾಡಿಕೊಳ್ಳಿ. ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿ. ಜೊತೆಗೆ ಆರೋಗ್ಯಕರ ಆಹಾರ ಮತ್ತು ಹೆಚ್ಚು ಹೆಚ್ಚು ನೀರು ಕುಡಿಯುವಂತಹ ಆರೋಗ್ಯಕರ ಅಭ್ಯಾಸಗಳು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಎಂದು ತಜ್ಞರು ಸಲಹೆ ನೀಡುತ್ತಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ