ಚುಮು ಚುಮು ಚಳಿಯಲ್ಲಿ ಮೃದು ಕೋಮಲ ತುಟಿಗಳಿಗೂ ಬೇಕು ಆರೈಕೆ, ಇಲ್ಲಿದೆ ಸಿಂಪಲ್ ಟಿಪ್ಸ್

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 16, 2024 | 12:42 PM

ಚಳಿಗಾಲವು ಆರಂಭವಾಗುತ್ತಿದ್ದಂತೆ ದೇಹವು ಹೊಸ ಹವಾಮಾನಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಈ ವೇಳೆಯಲ್ಲಿ ಆರೋಗ್ಯ ಸಮಸ್ಯೆಗಳು ಸೇರಿದಂತೆ ಇನ್ನಿತ್ತರ ಸಮಸ್ಯೆಗಳು ಕಾಡಬಹುದು. ಈ ಸಮಯದಲ್ಲಿ ತುಟಿಯ ಅಂದವು ಹಾಳಾಗುವುದು ಸಹಜ. ಮಹಿಳೆಯರಂತೂ ತುಟಿಗಳ ಅಂದಗೆಟ್ಟಾಗ ಹೆಚ್ಚು ಚಿಂತಿತರಾಗುತ್ತಾರೆ. ಹೀಗಾಗಿ ಚಳಿಗಾಲ ತುಟಿಗಳ ಅಂದವನ್ನು ಕಾಪಾಡಲು ವಿವಿಧ ಟಿಪ್ಸ್ ಗಳನ್ನು ಫಾಲೋ ಮಾಡಿ ತುಟಿಗಳ ಸೌಂದರ್ಯವನ್ನು ಕಾಪಾಡಬಹುದು.

ಚುಮು ಚುಮು ಚಳಿಯಲ್ಲಿ ಮೃದು ಕೋಮಲ ತುಟಿಗಳಿಗೂ ಬೇಕು ಆರೈಕೆ, ಇಲ್ಲಿದೆ ಸಿಂಪಲ್ ಟಿಪ್ಸ್
Follow us on

ಹೆಣ್ಣು ಮಕ್ಕಳ ಮುಖದಲ್ಲಿ ಎದ್ದು ಕಾಣುವುದೇ ಗುಲಾಬಿ ಬಣ್ಣದ ತುಟಿಗಳು. ಆದರೆ ಇದರ ಅಂದಗೆಟ್ಟರೆ ಏನು ಅಂದ ಅಲ್ವಾ. ಹೀಗಾಗಿ ಹೆಂಗಳೆಯರು ತುಟಿಗಳನ್ನು ಮೃದುವಾಗಿರುವಂತೆ ನೋಡಿಕೊಳ್ಳುವತ್ತ ಹೆಚ್ಚು ಗಮನ ಕೊಡುತ್ತಾರೆ. ಆದರೆ ಈ ಚಳಿಗಾಲ ಬಂತೆಂದರೆ, ತುಟಿಗಳ ಸೌಂದರ್ಯವು ಸಹಜವಾಗಿ ಕಡಿಮೆಯಾಗುತ್ತದೆ. ತುಟಿಗಳು ಡಲ್ ಆಗುತ್ತದೆ. ತುಟಿಗಳು ಸೂಕ್ಷ್ಮವಾಗಿರುವ ಕಾರಣ ಚಳಿಗಾಲದಲ್ಲಿ ತುಟಿಯಲ್ಲಿ ಬಿರುಕು, ಒಡೆಯುವುದು, ಒರಟಾಗುವುದು ಹೀಗೆ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಸೂಕ್ಷ್ಮವಾಗಿರುವ ತುಟಿಗಳ ರಕ್ಷಣೆ ಮಾಡಲು ಮಾರುಕಟ್ಟೆಯಲ್ಲಿ ಸಿಗುವ ನಾನಾ ರೀತಿಯ ಪ್ರಾಡಕ್ಟ್ ಗಳನ್ನು ಬಳಸುತ್ತಾರೆ. ಆದರೆ ಚಳಿಗಾಲದಲ್ಲಿ ತುಟಿಗಳ ಅಂದವನ್ನು ಕಾಪಾಡಲು ಏನೆಲ್ಲಾ ಟಿಪ್ಸ್​​​​ಗಳನ್ನು ಅನುಸರಿಸಬಹುದು ಎಂದು ತಿಳಿಯೋಣ.

ಚಳಿಗಾಲದಲ್ಲಿ ತುಟಿಗಳ ರಕ್ಷಣೆಗೆ ಈ ಟಿಪ್ಸ್​​​​​ಗಳನ್ನು ಅನುಸರಿಸಿ

* ಚಳಿಗಾಲದಲ್ಲಿ ತುಟಿಗಳು ಒಡೆದಿದ್ದರೆ ಪ್ರತಿದಿನ ಮಲಗುವ ಮುನ್ನ ಬಾದಾಮಿ ಎಣ್ಣೆಯನ್ನು ಹಚ್ಚಿ ತುಟಿಗಳನ್ನು 5 ನಿಮಿಷಗಳ ಕಾಲ ಮೃದುವಾಗಿ ಮಸಾಜ್ ಮಾಡಿ.

* ತುಟಿಗಳನ್ನು ಸ್ಕ್ರಬ್ ಮಾಡುವುದನ್ನು ತಪ್ಪಿಸಬೇಡಿ. ವಾರಕ್ಕೊಮ್ಮೆಯಾದರೂ ತುಟಿಗಳನ್ನು ಸ್ಕ್ರಬ್ ಮಾಡುವುದರಿಂದ ಒಣಚರ್ಮ ಹಾಗೂ ಸತ್ತ ಜೀವಕೋಶಗಳನ್ನು ತೆಗೆದು ಹಾಕುತ್ತವೆ. ಮನೆಯಲ್ಲಿಯೇ ಸಿಗುವ ಜೇನು ತುಪ್ಪವನ್ನು ಸಕ್ಕರೆಯೊಂದಿಗೆ ಬೆರೆಸಿ, ಆ ಮಿಶ್ರಣದಿಂದ ತುಟಿಗಳನ್ನು ಸ್ಕ್ರಬ್ ಮಾಡಿಕೊಳ್ಳಬಹುದು.

* ಚಳಿಗಾಲದ ಸಮಯದಲ್ಲಿ ಲಿಪ್‌ ಬಾಮ್‌ ಅನ್ನು ಇಟ್ಟುಕೊಂಡರೆ ತುಂಬಾ ಒಳ್ಳೆಯದು. ತುಟಿಗಳಿಗೆ ಹಚ್ಚಲು ಉತ್ತಮ ಗುಣಮಟ್ಟದ ಲಿಪ್‌ ಬಾಮ್‌ ಬಳಸುವತ್ತ ಗಮನ ಕೊಡಿ. ಲಿಪ್ ಬಾಯ್ ಬಳಕೆ ಮಾಡುವಾಗ ಪ್ಯಾರಾಬೆನ್‌ ಹಾಗೂ ಅಲ್ಕೋಹಾಲ್‌ ಮುಕ್ತ ಲಿಪ್‌ ಬಾಮ್‌ ಗಳನ್ನು ಬಳಸುವತ್ತ ಗಮನ ನೀಡಿ.

ಇದನ್ನೂ ಓದಿ:ಚಳಿಗಾಲದಲ್ಲಿ ಬಿಪಿ ಕಂಟ್ರೋಲ್ ಮಾಡಬೇಕಾ?; ಈ ಹಣ್ಣುಗಳನ್ನು ತಿನ್ನಿ

* ಚಳಿಗಾಲದಲ್ಲಿ ದೇಹಕ್ಕೆ ನೀರಿನ ಅಗತ್ಯವಿರುತ್ತದೆ. ಹೀಗಾಗಿ ದಿನನಿತ್ಯ ನೀರು ಕುಡಿಯುವುದನ್ನು ಮಾತ್ರ ತಪ್ಪಿಸಬೇಡಿ. ನೀರು ಕುಡಿಯುವ ಅಭ್ಯಾಸವು ದೇಹವನ್ನು ತಂಪಾಗಿರಿಸುವುದರೊಂದಿಗೆ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.

* ಚಳಿಗಾಲದಲ್ಲಿ ಬೆಣ್ಣೆ-ತುಪ್ಪ ಅಥವಾ ಹಾಲಿನ ಕೆನೆಯನ್ನು ತುಟಿಗಳಿಗೆ ಹಚ್ಚಿಕೊಳ್ಳುವುದನ್ನು ರೂಢಿಸಿಕೊಳ್ಳಿ. ಈ ಹಾಲು ಅಥವಾ ಬೆಣ್ಣೆಯಲ್ಲಿರುವ ಜಿಡ್ಡಿನ ಅಂಶ ತುಟಿಯನ್ನು ರಕ್ಷಿಸುತ್ತದೆ.

* ಲಾಂಗ್‌ ಲಾಸ್ಟಿಂಗ್‌ ಲಿಪ್‌ಸ್ಟಿಕ್ಸ್‌ ಹಾಗೂ ಮ್ಯಾಟ್‌ ಲಿಪ್‌ಸ್ಟಿಕ್ಸ್ ಬಳಕೆಯನ್ನು ಕಡಿಮೆ ಮಾಡಿದರೆ ಉತ್ತಮ. ಈ ಪ್ರಾಡಕ್ಟ್ ಗಳು ತುಟಿಗಳನ್ನು ಮತ್ತಷ್ಟು ಒಣಗಿಸುತ್ತದೆ. ಹೀಗಾಗಿ ಈ ಸಮಯದಲ್ಲಿ ಗ್ಲೊಸಿ ಲಿಪ್‌ಸ್ಟಿಕ್‌ ಬಳಕೆ ಮಾಡುವುದು ಸೂಕ್ತ.

* ತುಟಿಗಳಿಗೆ ಆಗಾಗ ನಾಲಿಗೆಯನ್ನು ತಾಕಿಸದಿರಿ, ನಾಲಿಗೆಯನ್ನು ತಾಕಿಸುತ್ತಿದ್ದರೆ ತುಟಿಗಳು ಮತ್ತಷ್ಟು ಒರಟಾಗುತ್ತವೆ.

ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ