
ಪ್ರತಿಯೊಬ್ಬರೂ ಕಾಂತಿಯುತ, ಆರೋಗ್ಯಕರ ತ್ವಚೆ ನಮ್ಮದಾಗಬೇಕೆಂದು ಬಯಸುತ್ತಾರೆ. ಆದರೆ ಹಗಲಿನ ಧೂಳು, ಮಾಲಿನ್ಯ, ಬೆವರು ಮತ್ತು ಮೇಕಪ್ ಮುಖದ ನೈಸರ್ಗಿಕ ಹೊಳಪನ್ನು ಕಡಿಮೆ ಮಾಡುತ್ತದೆ. ಹೀಗಿರುವಾಗ ರಾತ್ರಿ ಹೊತ್ತು ಚರ್ಮವನ್ನು ಸರಿಪಡಿಸಲು ಮತ್ತು ಗುಣಪಡಿಸಲು ಉತ್ತಮ ಸಮಯವಾಗಿದ್ದು, ಈ ಸಮಯದಲ್ಲಿ ಸರಿಯಾದ ರೀತಿಯಲ್ಲಿ ತ್ವಚೆಯ ಆರೈಕೆಯನ್ನು (skin care) ಮಾಡಿದರೆ ಖಂಡಿತವಾಗಿಯೂ ಮೃದು, ಕಾಂತಿಯುತ ತ್ವಚೆಯನ್ನು ಪಡೆಯಬಹುದು. ಹೀಗೆ ನಿಮ್ಮ ತ್ವಚೆಯೂ ಕಾಂತಿಯುತವಾಗಿರಬೇಕೆಂದು ಬಯಸಿದರೆ ರಾತ್ರಿ ಮಲಗುವ ಮುನ್ನ ಈ ಕೆಲವೊಂದು ಆರೋಗ್ಯಕರ ಅಭ್ಯಾಸಗಳನ್ನು ಚಾಚು ತಪ್ಪದೆ ಪಾಲಿಸಿ.
ಸಮಯಕ್ಕೆ ಸರಿಯಾಗಿ ಮಲಗುವ ಅಭ್ಯಾಸ ರೂಢಿಸಿಕೊಳ್ಳಿ: ನಮ್ಮ ಚರ್ಮವು ರಾತ್ರಿಯ ಸಮಯದಲ್ಲಿ ತನ್ನನ್ನು ತಾನೇ ಸರಿಪಡಿಸಿಕೊಳ್ಳುತ್ತದೆ. ಆದ್ದರಿಂದ, ರಾತ್ರಿ 10 ರಿಂದ 11 ರ ನಡುವೆ ಮಲಗಲು ಪ್ರಯತ್ನಿಸಿ. ನೀವು ನಿಯಮಿತವಾಗಿ ಸರಿಯಾದ ಸಮಯಕ್ಕೆ ಮಲಗಿದಾಗ, ನಿಮ್ಮ ಚರ್ಮವು ಆರೋಗ್ಯಕರವಾಗಿ ಮತ್ತು ಕಾಂತಿಯುತವಾಗಿ ಕಾಣುತ್ತದೆ.
ಮಲಗುವ ಮುನ್ನ ನೀರು ಕುಡಿಯಿರಿ: ನಮ್ಮ ಚರ್ಮಕ್ಕೆ ಸಾಕಷ್ಟು ಜಲಸಂಚಯನ ಬೇಕು. ಹೀಗಿರುವಾಗ ಮಲಗುವ ಒಂದು ಗಂಟೆ ಮೊದಲು ಒಂದು ಲೋಟ ನೀರು ಕುಡಿಯುವುದರಿಂದ ನಿಮ್ಮ ಚರ್ಮವು ಒಳಗಿನಿಂದ ತೇವಾಂಶದಿಂದ ಕೂಡಿರುತ್ತದೆ ಮತ್ತು ಶುಷ್ಕತೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ತ್ವಚೆಯ ಹೊಳಪನ್ನೂ ಹೆಚ್ಚಿಸುತ್ತದೆ.
ಮಲಗುವ ಮುನ್ನ ಮುಖವನ್ನು ಸ್ವಚ್ಛಗೊಳಿಸಿ: ದಿನವಿಡೀ ಮುಖ ಧೂಳು, ಬೆವರು ಮತ್ತು ಮೇಕಪ್‌ನಿಂದ ಆವೃತವಾಗಿರುತ್ತವೆ. ಹಾಗಾಗಿ ರಾತ್ರಿಯ ಹೊತ್ತು ಮುಖವನ್ನು ಸ್ವಚ್ಛಗೊಳಿಸುವುದು ತುಂಬಾನೇ ಮುಖ್ಯ. ರಾತ್ರಿಯಲ್ಲಿ ಮುಖ ತೊಳೆಯದಿದ್ದರೆ ತೊಳೆಯದೆ ರಂಧ್ರಗಳು ಮುಚ್ಚಿಹೋಗುತ್ತವೆ ಇದು ಚರ್ಮವು ಉಸಿರಾಡುವುದನ್ನು ತಡೆಯುತ್ತದೆ. ಆದ್ದರಿಂದ, ಮಲಗುವ ಮುನ್ನ ನಿಮ್ಮ ಮುಖವನ್ನು ಚೆನ್ನಾಗಿ ತೊಳೆಯುವುದು ಬಹಳ ಮುಖ್ಯ. ಇದಕ್ಕಾಗಿ, ಸೌಮ್ಯವಾದ ಫೇಸ್ ವಾಶ್ ಅಥವಾ ಸೌಮ್ಯವಾದ ಕ್ಲೆನ್ಸರ್ ಬಳಸಬಹುದು.
ಮಾಯಿಶ್ಚರೈಸರ್ ಹಚ್ಚಿ: ನಮ್ಮ ಚರ್ಮವು ರಾತ್ರಿಯಲ್ಲಿ ತೇವಾಂಶವನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಪ್ರತಿದಿನ ರಾತ್ರಿ ಮಲಗುವ ಮುನ್ನ ಹಗುರವಾದ ಮಾಯಿಶ್ಚರೈಸರ್ ಅಥವಾ ನೈಟ್ ಕ್ರೀಮ್ ಹಚ್ಚಿ. ಇದು ಶುಷ್ಕತೆಯನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಮರುದಿನ ಬೆಳಿಗ್ಗೆ ನಿಮ್ಮ ಚರ್ಮವನ್ನು ತಾಜಾ ಮತ್ತು ಹೊಳೆಯುವಂತೆ ಮಾಡುತ್ತದೆ.
ಇದನ್ನೂ ಓದಿ: ಆರೋಗ್ಯಕರ ಜೀವನಕ್ಕಾಗಿ ಬೆಳಗ್ಗೆ ಎದ್ದ ತಕ್ಷಣ ಈ ಆಯುರ್ವೇದ ನಿಯಮಗಳನ್ನು ಪಾಲಿಸಿ
ಫೋನ್ ಮತ್ತು ಲ್ಯಾಪ್‌ಟಾಪ್‌ನಿಂದ ದೂರವಿರಿ:ಮಲಗುವ ಮುನ್ನ ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್ ಬಳಸುವುದರಿಂದ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ನಿದ್ರೆ ಕಡಿಮೆಯಾದಾಗ ನಿಮ್ಮ ಚರ್ಮವು ದಣಿದಂತೆ ಕಾಣುತ್ತದೆ. ಆದ್ದರಿಂದ, ಮಲಗುವ ಕನಿಷ್ಠ ಒಂದು ಗಂಟೆ ಮೊದಲು ನಿಮ್ಮ ಫೋನ್ ಮತ್ತು ಲ್ಯಾಪ್‌ಟಾಪ್ ಅನ್ನು ದೂರವಿಡಲು ಪ್ರಯತ್ನಿಸಿ.
ಲಘು ಭೋಜನವನ್ನು ಸೇವಿಸಿ: ಭಾರವಾದ ಮತ್ತು ಎಣ್ಣೆಯುಕ್ತ ಆಹಾರಗಳು ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುವುದಲ್ಲದೆ, ನಿಮ್ಮ ಚರ್ಮವನ್ನು ದಣಿದಂತೆ ಕಾಣುವಂತೆ ಮಾಡುತ್ತದೆ. ಆದ್ದರಿಂದ, ರಾತ್ರಿಯಲ್ಲಿ ಸಲಾಡ್, ಸೂಪ್ ಅಥವಾ ಹಣ್ಣಿನಂತಹ ಹಗುರವಾದ ಮತ್ತು ಆರೋಗ್ಯಕರ ಊಟವನ್ನು ಸೇವಿಸಿ. ಇದು ನಿಮ್ಮ ಚರ್ಮವನ್ನು ತಾಜಾ ಮತ್ತು ಹೊಳೆಯುವಂತೆ ಮಾಡುತ್ತದೆ.
ಈ ಅಭ್ಯಾಸಗಳು ಸರಳವಾಗಿ ಕಾಣಿಸಬಹುದು, ಆದರೆ ನಿಮ್ಮ ರಾತ್ರಿಯ ದಿನಚರಿಯಲ್ಲಿ ಈ ಅಭ್ಯಾಸಗಳನ್ನು ಪಾಲಿಸಿದರೆ ಖಂಡಿತವಾಗಿಯೂ ಕೆಲವೇ ಕೆಲವು ದಿನಗಳಲ್ಲಿ ನಿಮ್ಮ ತ್ವಚೆಯು ಕಾಂತಿಯುತವಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ