Stray Dog Attack: ಬೀದಿನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಈ ಉಪಾಯ ಅನುಸರಿಸಿ

ಬೀದಿನಾಯಿಗಳ ಹಾವಳಿ ಎಲ್ಲೆಂದರಲ್ಲಿ ಹೆಚ್ಚಾಗಿದೆ. ಇದರಿಂದ ಮಕ್ಕಳಿಂದ ಹಿಡಿದು ಎಲ್ಲರೂ ರಸ್ತೆಯಲ್ಲಿ ನೆಮ್ಮದಿಯಿಂದ ತಿರುಗಾಡಲು ಹೆದರುವಂತ ಪರಿಸ್ಥಿತಿ ಕೆಲವು ಪ್ರದೇಶಗಳಲ್ಲಿ ನಿರ್ಮಾಣವಾಗಿದೆ. ಇದಕ್ಕೆ ಪರಿಹಾರವಿದೆಯಾದರೂ ನಮ್ಮ ಜಾಗರೂಕತೆಯಲ್ಲಿ ನಾವಿರುವುದು ಉತ್ತಮ. ಹಾಗಾದರೆ ನಾಯಿ ದಾಳಿ ಮಾಡಿದಾಗ ಏನು ಮಾಡಬೇಕು? ಬೀದಿನಾಯಿಗಳಿಂದ ತಪ್ಪಿಸಿಕೊಳ್ಳುವುದು ಹೇಗೆ? ಈ ಲೇಖನದಲ್ಲಿದೆ ಸರಳ ಮಾಹಿತಿ.

Stray Dog Attack: ಬೀದಿನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಈ ಉಪಾಯ ಅನುಸರಿಸಿ
Stray Dog Attack
Updated By: ಅಕ್ಷತಾ ವರ್ಕಾಡಿ

Updated on: Jun 01, 2024 | 6:03 PM

ಇತ್ತೀಚಿನ ದಿನಗಳಲ್ಲಿ ಬೀದಿನಾಯಿಗಳ ಹಾವಳಿ ಎಲ್ಲೆಂದರಲ್ಲಿ ಹೆಚ್ಚಾಗಿದೆ. ಇದರಿಂದ ಮಕ್ಕಳಿಂದ ಹಿಡಿದು ಎಲ್ಲರೂ ರಸ್ತೆಯಲ್ಲಿ ನೆಮ್ಮದಿಯಿಂದ ತಿರುಗಾಡಲು ಹೆಣಗಾಡುವಂತಾಗಿದೆ. ಬೆಳಿಗ್ಗೆ, ಸಂಜೆ ನಡೆದಾಡಲು, ಮಕ್ಕಳು ಆಟವಾಡಲು ಎಲ್ಲದಕ್ಕೂ ಹೆದರುವಂತ ಪರಿಸ್ಥಿತಿ ಕೆಲವು ಪ್ರದೇಶಗಳಲ್ಲಿ ನಿರ್ಮಾಣವಾಗಿದೆ. ಇದಕ್ಕೆ ಪರಿಹಾರವಿದೆಯಾದರೂ ನಮ್ಮ ಜಾಗರೂಕತೆಯಲ್ಲಿ ನಾವಿರುವುದು ಉತ್ತಮ. ಹಾಗಾದರೆ ನಾಯಿ ದಾಳಿ ಮಾಡಿದಾಗ ಏನು ಮಾಡಬೇಕು? ಬೀದಿನಾಯಿಗಳಿಂದ ತಪ್ಪಿಸಿಕೊಳ್ಳುವುದು ಹೇಗೆ? ಈ ಲೇಖನದಲ್ಲಿದೆ ಸರಳ ಮಾಹಿತಿ.

ಬೀದಿನಾಯಿಗಳು ಸಾಮಾನ್ಯವಾಗಿ ರಸ್ತೆಯಲ್ಲಿ ಒಬ್ಬರೇ ಓಡಾಡುತ್ತಿದ್ದರೆ ಅಥವಾ ಪುಟ್ಟಮಕ್ಕಳ ಮೇಲೆ ಹೆಚ್ಚಾಗಿ ದಾಳಿ ಮಾಡುತ್ತದೆ. ಹಾಗಾಗಿ ಮಕ್ಕಳನ್ನು ಒಬ್ಬರೇ ಎಲ್ಲಿಗೂ ಹೋಗಲು ಬಿಡಬೇಡಿ. ಯಾರಾದರೂ ಅವರ ಜೊತೆಗಿರುವಂತೆ ನೋಡಿಕೊಳ್ಳಿ. ಈ ರೀತಿಯ ಸಂದರ್ಭದಲ್ಲಿ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವುದು ಒಂದು ಸಾಹಸ. ಹಾಗಾಗಿ ಈ ರೀತಿಯ ಪರಿಸ್ಥಿತಿಯಲ್ಲಿ ನಮ್ಮನ್ನು ನಾವು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಂಡಿರಬೇಕು.

ಬೀದಿನಾಯಿ ದಾಳಿ ಮಾಡಲು ಬಂದರೆ ಏನು ಮಾಡಬೇಕು?

ನೀವು ನಡೆದುಕೊಂಡು ಬರುತ್ತಿರುವಾಗ ನಾಯಿ ನಿಮ್ಮ ಬಳಿ ಬರುತ್ತಿದ್ದರೆ ಅದರ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಡಿ. ಅಥವಾ ಅದನ್ನು ನೋಡುತ್ತಾ ಹೆದರಿದವರಂತೆ ಮಾಡಬೇಡಿ. ಜೊತೆಗೆ ಅವುಗಳನ್ನು ನೋಡಿ ಓಡಬೇಡಿ.

ಹೇಗೆ ರಕ್ಷಿಸಿಕೊಳ್ಳುವುದು?

ನಾಯಿ ಕಡಿತದಿಂದ ರಕ್ಷಿಸಿಕೊಳ್ಳಲು ಉತ್ತಮ ತಂತ್ರವೆಂದರೆ ನಾಯಿಯ ಕಣ್ಣುಗಳ ಮೇಲೆ ನಿಮ್ಮ ಕೈಯಲ್ಲಿರುವ ವಸ್ತು ಅಥವಾ ಬಟ್ಟೆಯನ್ನು ಎಸೆಯಿರಿ. ಅಂದರೆ ನಿಮ್ಮ ದುಪ್ಪಟ್ಟಾ, ಜಾಕೆಟ್, ಶರ್ಟ್ ಅಥವಾ ಸ್ಕಾರ್ಫ್ ಅನ್ನು ಧರಿಸಿದ್ದರೆ ಅದನ್ನು ಎಸೆಯಬಹುದು. ಇದರಿಂದ ನೀವು ತಕ್ಷಣವೇ ಅಲ್ಲಿಂದ ತಪ್ಪಿಸಿಕೊಳ್ಳಬಹುದು. ಅಥವಾ ನಿಮಗೆ ಸಾಧ್ಯವಾದರೆ ನಾಯಿಯ ಬಾಯಿಯನ್ನು ಹಿಡಿದುಕೊಳ್ಳಿ ಇದರಿಂದ ಅದಕ್ಕೆ ನಿಮ್ಮನ್ನು ಕಚ್ಚಲು ಸಾಧ್ಯವಾಗುವುದಿಲ್ಲ ಆದರೆ ಇದು ಕಾರ್ಯಸಾಧ್ಯವಾಗದಿರಬಹುದು ಆದ್ದರಿಂದ ನಾಯಿಯ ಕಣ್ಣುಗಳನ್ನು ಮುಚ್ಚಲು ಬಟ್ಟೆಯನ್ನು ಎಸೆಯುವುದು ಉತ್ತಮ ಆಯ್ಕೆಯಾಗಿದೆ.

ನೀವು ಯಾರನ್ನಾದರೂ ರಕ್ಷಿಸಲು ಪ್ರಯತ್ನಿಸುವಾಗಲೂ ಕೂಡ ಕೈಯಲ್ಲಿ ನೀರು, ಬಟ್ಟೆ ಅಥವಾ ಕಲ್ಲನ್ನು ತೆಗೆದುಕೊಳ್ಳಿ. ಬರಿಗೈಯಲ್ಲಿ ಹೋಗಬೇಡಿ. ಕೆಲವು ನಾಯಿ ನೀರು ಎರಚಿದರೆ ಓಡಿಹೋಗುತ್ತದೆ. ಇದರ ಹೊರತಾಗಿ ನಾಯಿಯ ಮೂಗು ಅಥವಾ ಕಣ್ಣುಗಳನ್ನು ಬಟ್ಟೆಯಿಂದ ಮುಚ್ಚಲು ಪ್ರಯತ್ನಿಸಬೇಕು ಏಕೆಂದರೆ ಇದು ಅದರ ದುರ್ಬಲ ಅಂಶಗಳಾಗಿವೆ. ಈ ರೀತಿ ಮಾಡುವುದರಿಂದ ಅದನ್ನು ನೀವು ವಿಚಲಿತಗೊಳಿಸಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: