ಪ್ರೆಶರ್‌ ಕುಕ್ಕರ್‌ನಲ್ಲಿ ಬಹಳ ಈಸಿಯಾಗಿ ಮಾಡಬಹುದು ಖಡಕ್‌ ಚಹಾ‌

ರುಚಿಕರ ಸ್ವಾದಭರಿತ ಚಹಾ ತಯಾರಿಸುವುದು ಕೂಡ ಒಂದು ಕಲೆ. ಅದಕ್ಕಾಗಿಯೇ ಚಹಾ ಪ್ರಿಯರು ನಾರ್ಮಲ್‌ ಟೀ ಯನ್ನು ಸಹ ವಿಭಿನ್ನ ರುಚಿಗಳಲ್ಲಿ ತಯಾರಿಸುತ್ತಾರೆ. ಚಹಾದಲ್ಲಿ ಸಾಕಷ್ಟು ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಇದೀಗ ಚೆಫ್‌ ಯಮನ್‌ ಅಗರ್ವಾಲ್‌ ಎಂಬವರು ಪ್ರೆಶರ್‌ ಕುಕ್ಕರ್‌ನಲ್ಲಿ ಖಡಕ್‌ ಟೀ ತಯಾರಿಸಿದ್ದಾರೆ. ಕುಕ್ಕರ್‌ನಲ್ಲಿ ತಯಾರಿಸಿದ ಈ ಟೀ ರುಚಿ ಸಖತ್‌ ಟೇಸ್ಟಿಯಾಗಿದೆ ಎಂದು ಅವರು ವಿವರಿಸಿದ್ದಾರೆ. ಹಾಗಿದ್ರೆ ಕುಕ್ಕರ್‌ನಲ್ಲಿ ಟೀ ತಯಾರಿಸೋದು ಹೇಗೆ ಎಂಬುದನ್ನು ತಿಳಿಯಿರಿ.

ಪ್ರೆಶರ್‌ ಕುಕ್ಕರ್‌ನಲ್ಲಿ ಬಹಳ ಈಸಿಯಾಗಿ ಮಾಡಬಹುದು ಖಡಕ್‌ ಚಹಾ‌
ಖಡಕ್‌ ಚಹಾ‌
Image Credit source: Social Media

Updated on: Nov 15, 2025 | 5:34 PM

ಚಹಾ (tea) ಎಂದರೆ ಬಹುತೇಕ ಎಲ್ಲರ ನೆಚ್ಚಿನ ಪಾನೀಯವಾಗಿದೆ. ಹೆಚ್ಚಿನವರ ದಿನ ಆರಂಭವಾಗುವುದೇ ಒಂದು ಕಪ್‌ ಟೀ ಕುಡಿಯುವುದರೊಂದಿದೆ. ಸಾಮಾನ್ಯವಾಗಿ ಈ ಚಹಾವನ್ನು ಎಲ್ಲರೂ ಸಣ್ಣ ಪಾತ್ರೆ, ಕೆಟಲ್‌ನಲ್ಲಿ ತಯಾರಿಸುತ್ತಾರೆ. ಆದ್ರೆ ಏನ್‌ ಗೊತ್ತಾ, ಚಹಾವನ್ನು ಪ್ರೆಶರ್‌ ಕುಕ್ಕರ್‌ನಲ್ಲೂ ತಯಾರಿಸಬಹುದಂತೆ. ಬಾಣಸಿಗ ಯಮನ್‌ ಅಗರ್ವಾಲ್‌ ಈ ಪ್ರಯೋಗವನ್ನು ಮಾಡಿದ್ದು, ಇದು ಹೋಟೆಲ್‌ಗಳಲ್ಲಿ ಸಿಗುವ ಚಹಾಕ್ಕಿಂತ ರುಚಿಕರ ಮತ್ತು ಸ್ಟ್ರಾಂಗ್‌ ಆಗಿದೆ ಎಂದಿದ್ದಾರೆ. ನಿಮಗೇನಾದರೂ ಖಡಕ್‌ ಟೀ ಕುಡಿಯುವ ಆಸೆಯಾದ್ರೆ ಖಂಡಿತವಾಗಿ ಕುಕ್ಕರ್‌ನಲ್ಲಿ ಟೀ ತಯಾರಿಸಿ ಎಂದು ಸಲಹೆ ನೀಡಿದ್ದಾರೆ.

ಪ್ರೆಶರ್‌ ಕುಕ್ಕರ್‌ನಲ್ಲಿ ಟೀ ತಯಾರಿಸೋದು ಹೇಗೆ?

ಪ್ರೆಶರ್ ಕುಕ್ಕರ್‌ನಲ್ಲಿ ಚಹಾ ತಯಾರಿಸುವ ಬಗ್ಗೆ ಬಾಣಸಿಗ ಯಮನ್ ಅಗರ್ವಾಲ್ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಕುಕ್ಕರ್ ಒಳಗೆ ಒತ್ತಡ ಹೆಚ್ಚಾದಾಗ, ಚಹಾದ ಸುವಾಸನೆಯು ಪ್ರಕಾಶಮಾನ ರೂಪದಲ್ಲಿ ಹೊರಬರುತ್ತದೆ. ಇದು ಅದ್ಭುತ ಮತ್ತು ರುಚಿಕರವಾದ ಬಲವಾದ ಚಹಾವನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದ್ದಾರೆ.

ಈ ತಂತ್ರವು ಸಾಂಪ್ರದಾಯಿಕ ಚಹಾ ತಯಾರಿಸುವ ವಿಧಾನಕ್ಕಿಂತ  ಸಂಪೂರ್ಣವಾಗಿ ಭಿನ್ನವಾಗಿದೆಕಡಿಮೆ ಶಾಖದಲ್ಲಿ ಗಂಟೆಗಟ್ಟಲೆ ಚಹಾವನ್ನು ಕುದಿಸುವ ಬದಲು, ಕುಕ್ಕರ್‌ನಲ್ಲಿ ಎರಡೇ ಎರಡು ಸೀಟಿ ಕೂಗಿಸುವ ಮೂಲಕ ಸುಲಭವಾಗಿ ರುಚಿಕರ ಟೀ ತಯಾರಿಸಬಹುದು. ಉಗಿ ಒತ್ತಡವು ನೀರಿನ ಕುದಿಯುವ ಬಿಂದುವನ್ನು 100°C ಗಿಂತ ಹೆಚ್ಚಿಸುತ್ತದೆ. ಹೆಚ್ಚಿನ ತಾಪಮಾನವು ಚಹಾ ಎಲೆಗಳು ಮತ್ತು ಶುಂಠಿಯ ಸಾರವನ್ನು ತ್ವರಿತವಾಗಿ, ಆಳವಾಗಿ ಕರಗಿಸಲು ಸಹಾಯ ಮಾಡುತ್ತದೆ. ಹೆಚ್ಚಿನ  ತಾಪಮಾನ ಮತ್ತು ಒತ್ತಡದಿಂದಾಗಿ, ಚಹಾ ಎಲೆಗಳ ಬಣ್ಣ ಮತ್ತು ಶುಂಠಿಯ ಖಾರವು ಕೇವಲ ಎರಡು ಸೀಟಿಗಳಲ್ಲಿ ಸಂಪೂರ್ಣವಾಗಿ ಕರಗುತ್ತದೆ, ಇದು ಬಲವಾದ ಮತ್ತು ಶ್ರೀಮಂತ ಚಹಾ ರುಚಿಯನ್ನು ನೀಡುತ್ತದೆ.

ವಿಡಿಯೋ ಇಲ್ಲಿದೆ ನೋಡಿ:‌

ಪ್ರೆಶರ್ ಕುಕ್ಕರ್‌ನಲ್ಲಿ ಚಹಾ ತಯಾರಿಸಲು ಬೇಕಾಗುವ ಸಾಮಗ್ರಿಗಳು:

ಹಾಲು – 1.5 ಕಪ್
ಸಕ್ಕರೆ – 3 ಟೀ ಚಮಚ
ಚಹಾ ಪುಡಿ – 1 ರಿಂದ 1.5 ಟೀ ಚಮಚ
ಶುಂಠಿ – 1 ತುಂಡು
ನೀರು – 1/2 ಕಪ್

ಇದನ್ನೂ ಓದಿ: ನೀವು ಮಾಡೋ ಟೀ ರುಚಿಕರವಾಗಿ ಪರ್ಫೆಕ್ಟ್‌ ಆಗಿರ್ಬೇಕಂದ್ರೆ ಚಹಾ ಮಾಡುವಾಗ ಹಂತಗಳನ್ನು ಪಾಲಿಸಿ

ಪ್ರೆಶರ್ ಕುಕ್ಕರ್‌ನಲ್ಲಿ ಚಹಾ ತಯಾರಿಸುವ ವಿಧಾನ:

ಮೊದಲು, ಸಣ್ಣ ಗಾತ್ರದ ಪ್ರೆಶರ್ ಕುಕ್ಕರ್ ಅನ್ನು ಗ್ಯಾಸ್‌ ಸ್ಟವ್‌  ಮೇಲೆ ಇರಿಸಿ. ಎರಡು ಕಪ್ ಚಹಾ ತಯಾರಿಸಲು, ಮೊದಲು ಅರ್ಧ ಕಪ್ ನೀರು ಸೇರಿಸಿ, ಜಜ್ಜಿದ ಶುಂಠಿ, 3 ಟೀ ಚಮಚ ಸಕ್ಕರೆ ಸೇರಿಸಿ, ಚಹಾ ಪುಡಿ , ಹಾಲನ್ನು ಸೇರಿಸಿ ಮುಚ್ಚಳ ಮುಚ್ಚಿ. ಇಲ್ಲಿ ಸಾಂಪ್ರದಾಯಿಕ ವಿಧಾನದಲ್ಲಿ ಟೀ ಮಾಡುವಾಗ ಹಾಕುವಂತೆ ಹಂತ ಹಂತವಾಗಿ ಸಾಮಾಗ್ರಗಿಗಳನ್ನು ಹಾಕುವ ಅವಶ್ಯಕತೆಯಿಲ್ಲ, ಎಲ್ಲವನ್ನೂ ಒಟ್ಟಿಗೆ ಸೇರಿಸಬಹುದು. ಇದು ಎಲ್ಲಾ ಸುವಾಸನೆಗಳನ್ನು ಒಟ್ಟಿಗೆ ಮಿಶ್ರಣ ಮಾಡಲು ಅನುವು ಮಾಡಿಕೊಡುತ್ತದೆ. ಮಧ್ಯಮ ಉರಿಯಲ್ಲಿ ಎರಡು ಸೀಟಿ ಹೊಡೆಯುವವರೆಗೆ ಇದನ್ನು ಬೇಯಿಸಿ, ಬಳಿಕ ನಾಲ್ಕರಿಂದ ಐದು ನಿಮಿಷಗಳ ಕಾಲ ಕುಕ್ಕರನ್ನು ತಣ್ಣಗಾಗಲು ಬಿಟ್ಟು, ಚಹಾವನ್ನು ಒಂದು ಕಪ್‌ಗೆ ಸೋಸಿಕೊಂಡರೆ ಖಡಕ್‌ ಟೀ ಸವಿಯಲು ಸಿದ್ಧ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ