ತೂಕ ನಿಯಂತ್ರಣಕ್ಕೆ ಕಹ್ವಾ ಟೀ ಟ್ರೈ ಮಾಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 09, 2023 | 3:07 PM

ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಹ್ವಾ ಟೀ ಸೇವಿಸುವ ಮೂಲಕ ನಿಮ್ಮ ತೂಕ ಇಳಿಕೆಯ ಪ್ರಯಾಣದಲ್ಲಿ ಸಕಾರಾತ್ಮಕ ಪರಿಣಾಮವನ್ನು ನಿರೀಕ್ಷಿಸಬಹುದು. ಜೊತೆಗೆ ಇದು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಹಾಗಾಗಿ ನೀವು ಇದನ್ನು ಪ್ರತಿದಿನ ಸೇವನೆ ಮಾಡಬಹುದು. ಹಾಗಾದರೆ ಇದನ್ನು ಮಾಡುವುದು ಹೇಗೆ? ಯಾವ ಯಾವ ಸಾಮಗ್ರಿಗಳನ್ನು ಬಳಸಬೇಕು? ಇಲ್ಲಿದೆ ಮಾಹಿತಿ.

ತೂಕ ನಿಯಂತ್ರಣಕ್ಕೆ ಕಹ್ವಾ ಟೀ ಟ್ರೈ ಮಾಡಿ
ತೂಕ ನಿಯಂತ್ರಣಕ್ಕೆ ಕಹ್ವಾ ಟೀ
Follow us on

ಕಾಶ್ಮೀರಿ ಕಹ್ವಾ ಸಾಂಪ್ರದಾಯಿಕ ಗ್ರೀನ್ ಟೀ ಆಗಿದ್ದು, ಇದು ಪಶ್ಚಿಮ ಘಟ್ಟಗಳು, ಮಲಬಾರ್ ಪ್ರದೇಶ ಮತ್ತು ಕಾಶ್ಮೀರದಲ್ಲಿ ಜನಪ್ರಿಯವಾದ ಪಾನೀಯವಾಗಿದೆ. ಈಗ ಎಲ್ಲೆಡೆ ಇದರ ಪ್ರಸಿದ್ಧಿ ಹೆಚ್ಚುತ್ತಿದೆ. ಏಕೆಂದರೆ ಇದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಕಹ್ವಾವನ್ನು ಪ್ರತಿದಿನ ಸೇವಿಸಲು ಹಲವು ಕಾರಣಗಳಿವೆ. ನೀವು ಹೆಚ್ಚು ಊಟ ಮಾಡಿದಾಗ ಈ ಕಹ್ವಾ ನಿಮ್ಮ ದೇಹಕ್ಕೆ ಹಗುರವಾದ ಅನುಭವವನ್ನು ನೀಡುತ್ತದೆ ಮತ್ತು ಕರುಳಿನ ಆರೋಗ್ಯದಲ್ಲಿ ಸುಧಾರಣೆಯನ್ನು ತರುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವ ಮೂಲಕ ನಿಮ್ಮ ತೂಕ ಇಳಿಕೆಯ ಪ್ರಯಾಣದಲ್ಲಿ ಸಕಾರಾತ್ಮಕ ಪರಿಣಾಮವನ್ನು ನಿರೀಕ್ಷಿಸಬಹುದು. ಜೊತೆಗೆ ಇದು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಹಾಗಾಗಿ ನೀವು ಇದನ್ನು ಪ್ರತಿದಿನ ಸೇವನೆ ಮಾಡಬಹುದು. ಹಾಗಾದರೆ ಇದನ್ನು ಮಾಡುವುದು ಹೇಗೆ? ಯಾವ ಯಾವ ಸಾಮಗ್ರಿಗಳನ್ನು ಬಳಸಬೇಕು? ಇಲ್ಲಿದೆ ಮಾಹಿತಿ.

ಕಹ್ವಾ ಟೀ ಮಾಡಲು ಬೇಕಾಗುವ ಸಾಮಗ್ರಿಗಳು:

1/2 ಚಮಚ ಜೀರಿಗೆ

1/2 ಚಮಚ ಏಲಕ್ಕಿ

ಕೇಸರಿ ದಳ

ಶುಂಠಿ

2 ಚಮಚ ಸೋಂಪು

1/2 ಚಮಚ ಅಜ್ವೈನ್

1/2 ಚಮಚ ಮೆಂತ್ಯ

1 ದಾಲ್ಚಿನ್ನಿ ತುಂಡು

ಕೆಲವು ಕತ್ತರಿಸಿದ ಬಾದಾಮಿ

ಜೇನುತುಪ್ಪ (ಬೇಕಾದಲ್ಲಿ ಮಾತ್ರ)

ತಾಜಾ ನಿಂಬೆ ರಸ (ಬೇಕಾದಲ್ಲಿ ಮಾತ್ರ)

ವಿಡಿಯೋ ಇಲ್ಲಿದೆ ನೋಡಿ:

ಮಾಡುವ ವಿಧಾನ:

ಒಂದು ಪಾತ್ರೆಯಲ್ಲಿ 2 ಗ್ಲಾಸ್ ನಷ್ಟು ನೀರು ಹಾಕಿ ಬಳಿಕ ಸಣ್ಣ ಕುದಿ ಬರುವಾಗ ಅದಕ್ಕೆ 1/2 ಚಮಚ ಜೀರಿಗೆ, 1/2 ಚಮಚ ಏಲಕ್ಕಿ, ಕೇಸರಿ ದಳ, ಶುಂಠಿ, 2 ಚಮಚ ಸೋಂಪು, 1/2 ಚಮಚ ಅಜ್ವೈನ್, 1/2 ಚಮಚ ಮೆಂತ್ಯ, 1 ದಾಲ್ಚಿನ್ನಿ ತುಂಡು ಸೇರಿಸಿ ಬಳಿಕ ನೀರು ಒಂದು ಕಪ್​​​ನಷ್ಟು ಆಗುವವರೆಗೆ ಕುದಿಸಿಕೊಳ್ಳಿ. ಬಳಿಕ ಅದನ್ನು ಒಂದು ಲೋಟಕ್ಕೆ ಸೋಸಿಕೊಂಡು ಅದಕ್ಕೆ ಸ್ವಲ್ಪ ಜೇನುತುಪ್ಪ ಮತ್ತು ನಿಂಬೆ ರಸ ಸೇರಿಸಿಕೊಂಡು ಅದಕ್ಕೆ ಕತ್ತರಿಸಿಟ್ಟುಕೊಂಡ ಬಾದಾಮಿ ಹಾಕಿ ಕುಡಿಯಿರಿ. ಜೇನುತುಪ್ಪ ಮತ್ತು ನಿಂಬೆ ರಸ ಐಚ್ಛಿಕವಾಗಿದ್ದು ಬೇಕಾದಲ್ಲಿ ಮಾತ್ರ ಸೇರಿಸಿಕೊಳ್ಳಿ.

ಇದನ್ನೂ ಓದಿ:  ಹೃದಯದ ಆರೋಗ್ಯಕ್ಕೆ ನೆಟಲ್ ಟೀ ಕುಡಿಯಿರಿ

ಈ ವಿಡಿಯೋವನ್ನು Meghna’s Food Magic ಎಂಬ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ತುಂಬಾ ಒಳ್ಳೆಯ ಮತ್ತು ಆರೋಗ್ಯಕರ ಪಾನೀಯವಾಗಿದೆ ಎಂದು ಹಲವಾರು ಜನ ತಮ್ಮ ಅನಿಸಿಕೆ ವ್ಯಕ್ತ ಪಡಿಸಿದ್ದು, ಇನ್ನು ಕೆಲವರು ತೂಕ ಇಳಿಕೆಗೆ ಒಂದು ಪಾನೀಯದ ರೆಸಿಪಿ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದ ತಿಳಿಸಿದ್ದಾರೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ