ಸಾಮಾನ್ಯವಾಗಿ ನೀವು ನಿಮ್ಮ ಇಷ್ಟದಂತೆ ನಗುತ್ತೀರಿ. ನಗುವಿಗೆ ಯಾವುದೇ ತರಬೇತಿಯ ಅವಶ್ಯಕತೆ ಇಲ್ಲ. ನಿಮ್ಮ ನಗುವಿನಿಂದಲೇ ಜನರನ್ನು ಗೆಲ್ಲುವ ಶಕ್ತಿ ನಗುವಿಗಿದೆ. ಆದರೆ ಇಲ್ಲೊಂದು ದೇಶದಲ್ಲಿ ನಗುವುದು ಹೇಗೆ? ಯಾವ ರೀತಿ ನಗಬೇಕು ಎಂಬುದನ್ನು ಕಲಿಯಲಿ ವಿಶೇಷ ತರಬೇತಿಯನ್ನು ನೀಡಲಾಗುತ್ತದೆ. ನಗುವುದು ಹೇಗೆಂದು ಕಲಿಯಲು ತರಗತಿಗಳನ್ನು ಯಾಕೆ ತೆರೆಯಲಾಯಿತು ಎಂಬುದಕ್ಕೂ ಇಲ್ಲಿ ಉತ್ತರವಿದೆ.
ಕೊರೊನಾ ಸಾಂಕ್ರಾಮಿಕ ರೋಗದ ನಂತರ, ಜಪಾನ್‌ನಲ್ಲಿ ಅನೇಕ ಜನರು ಹೇಗೆ ನಗುವುದು ಎಂಬುದನ್ನು ಮರೆತಿದ್ದಾರೆ. ಮನೆಯಲ್ಲಿಯೇ ಬಂಧಿಯಾದ ನಂತರ ಹೊರಗಡೆ ಜನರೊಂದಿಗೆ ಸಂವಹನ ನಡೆಸುವಾಗ ಯಾವ ರೀತಿ ನಿಮ್ಮ ನಡವಳಿಕೆ ಇರಬೇಕು ಎಂಬುದನ್ನು ಕಲಿಸಲಿ ವಿಶೇಷ ತರಬೇತಿಯನ್ನು ನೀಡಲಾಗುತ್ತದೆ.
ಇದನ್ನೂ ಓದಿ: ತಾನು ಮದುವೆಯಾಗುವ ಹುಡುಗನಿಗೆ ದೊಡ್ಡ ಹೊಟ್ಟೆ ಇರಲೇ ಬೇಕು ಎಂದ ಯುವತಿ
ಜಪಾನ್‌ನ ವಿದ್ಯಾರ್ಥಿಗಳು ಮಾಸ್ಕ್ ಧರಿಸುವುದನ್ನು ಅಭ್ಯಾಸ ಮಾಡಿದ ನಂತರ ಹೇಗೆ ನಗುವುದು ಎಂದು ತಿಳಿಯಲು ವೃತ್ತಿಪರ ಬೋಧಕರಿಂದ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.ಸರ್ಕಾರವು ಲಾಕ್‌ಡೌನ್ ಮತ್ತು ಮಾಸ್ಕ್ ಧರಿಸುವ ಕಟ್ಟುನಿಟ್ಟಾದ ನಿಯಮಗಳನ್ನು ತೆಗೆದ ನಂತರ, ದೇಶಾದ್ಯಂತ ಇಂತಹ ತರಬೇತಿ ತರಗತಿಗಳಿಗೆ ಬೇಡಿಕೆ ಹೆಚ್ಚಿದೆ.
ಕೀಕೊ ಕವಾನೊ, ಜಪಾನ್‌ನಲ್ಲಿ ಸ್ಮೈಲ್ ಎಜುಕೇಶನ್ ಎಂಬ ಕಂಪನಿಯನ್ನು ನಡೆಸುತ್ತಿರುವ ಸ್ಮೈಲ್ ತರಬೇತುದಾರರಲ್ಲಿ ಒಬ್ಬರು. ಅವರು ತನ್ನ ವಿದ್ಯಾರ್ಥಿಗಳಿಗೆ “ಹಾಲಿವುಡ್ ಸ್ಟೈಲ್ ಸ್ಮೈಲಿಂಗ್ ಟೆಕ್ನಿಕ್” ಸಹಿ ಜೊತೆಗೆ “ಕ್ರೆಸೆಂಟ್ ಕಣ್ಣುಗಳು” ಮತ್ತು “ದುಂಡನೆಯ ಕೆನ್ನೆಗಳನ್ನು” ಒಳಗೊಂಡಂತೆ ವಿವಿಧ ರೀತಿಯ ಸ್ಮೈಲ್‌ಗಳನ್ನು ಕಲಿಸುತ್ತಾರೆ ಎಂದು ವರದಿಯಿಂದ ತಿಳಿದು ಬಂದಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: