Father’s Day 2023: ಮಗು ಜನಿಸಿದ ಮೇಲೆ ತಂದೆಯರಲ್ಲಿ ಕಂಡುಬರುವ ಖಿನ್ನತೆಯ ಲಕ್ಷಣಗಳೇನು? ಇಲ್ಲಿವೆ ಸಲಹೆಗಳು
ತಂದೆಯರಲ್ಲಿ ಪ್ರಸವಾನಂತರದ ಖಿನ್ನತೆ ಕಂಡುಬರುವುದು ವಾಸ್ತವವಾಗಿದೆ. 10ರಲ್ಲಿ 1 ತಂದೆ ಇದನ್ನು ಅನುಭವಿಸುತ್ತಾರೆ. ಇದರಿಂದ ಅವರು ತಾಯಿ ಮತ್ತು ಮಗುವಿನಿಂದ ಸಂಪರ್ಕಕಡಿತಗೊಳಿಸಿಕೊಳ್ಳಬಹುದು. ಹಾಗಾದರೆ ಇದರ ಲಕ್ಷಣಗಳನ್ನು ಗುರುತಿಸುವುದು ಹೇಗೆ? ಇದಕ್ಕೆ ಸಲಹೆಗಳೇನು? ಇಲ್ಲಿದೆ ಮಾಹಿತಿ.
ಹೊಸ ಮಗುವನ್ನು ಸ್ವಾಗತಿಸುವಾಗ ಮತ್ತು ಪಿತೃತ್ವದ ಹೊಸ ಜವಾಬ್ದಾರಿಗಳನ್ನು ಸ್ವೀಕರಿಸುವಾಗ, ತಾಯಂದಿರಂತೆ ಅಪ್ಪಂದಿರು ಸಹ ಮಾನಸಿಕ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುತ್ತಾರೆ ಎಂಬ ಬಗ್ಗೆ ನಿಮಗೆ ತಿಳಿದಿದೆಯಾ? ಹೌದು, 10 ರಲ್ಲಿ 1 ತಂದೆ ಪ್ರಸವಾ ನಂತರದ ಖಿನ್ನತೆ ಮತ್ತು ಆತಂಕದ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಈ ಖಿನ್ನತೆಯು ಅವರ ಸಂಗಾತಿಯೊಂದಿಗೆ ಸಂಬಂಧ ಹೊಂದಿರಬಹುದು ಅಥವಾ ಇಲ್ಲದಿರಬಹುದು. ಪ್ರತಿಯೊಬ್ಬ ಪೋಷಕರು ತಮ್ಮ ಪುಟ್ಟ ಮಗುವಿನ ಆಗಮನಕ್ಕಾಗಿ ಹೆಚ್ಚಿನ ಉತ್ಸಾಹದಿಂದ ಕಾಯುತ್ತಾರೆ, ಆದರೆ ಕೆಲವೊಮ್ಮೆ ಪ್ರಸವಾನಂತರದ ಖಿನ್ನತೆಯು ಮಗು ಮತ್ತು ತಂದೆಯ ನಡುವೆ ದೊಡ್ಡ ಅಡಚಣೆಯಾಗಬಹುದು.
ತಾಯಂದಿರಂತೆ, ಅಪ್ಪಂದಿರು ಸಹ ತಮ್ಮ ಮಗುವಿನ ಆಗಮನಕ್ಕೆ ಮುಂಚಿತವಾಗಿಯೇ ಪ್ರಸವಾನಂತರದ ಖಿನ್ನತೆಯ ರೋಗಲಕ್ಷಣಗಳನ್ನು ತೋರಿಸಲು ಪ್ರಾರಂಭಿಸಬಹುದು. ಮನಸ್ಥಿತಿ, ಹಸಿವು ಮತ್ತು ನಿದ್ರೆಯಲ್ಲಿನ ಬದಲಾವಣೆಗಳು ಅವರಿಗೆ ವೈದ್ಯಕೀಯ ಸಹಾಯದ ಅಗತ್ಯವಿದೆ ಎಂಬುದರ ಎಚ್ಚರಿಕೆಯ ಸಂಕೇತಗಳಾಗಿವೆ. 2019ರ ಅಧ್ಯಯನವು ಗರ್ಭಧಾರಣೆಯ ಸಮಯದಲ್ಲಿ ಖಿನ್ನತೆಯ ಅಪಾಯವು ಮೊದಲ ತ್ರೈಮಾಸಿಕದಲ್ಲಿ ಸಂಭವಿಸಿದೆ ಎಂದು ಕಂಡು ಹಿಡಿದಿದೆ. ಮಗುವಿಗೆ 3 ರಿಂದ 6 ತಿಂಗಳಾಗಿದ್ದಾಗ ಪ್ರಸವಾನಂತರದ ಖಿನ್ನತೆ ಪುರುಷರಲ್ಲಿ ಹೆಚ್ಚು ಎಂದು ಅಧ್ಯಯನವು ತೋರಿಸಿದೆ.
“ಪ್ರಸವಾನಂತರದ ಅವಧಿಯು ಮಗುವಿಗೆ, ತಂದೆಯರು ಮಾಡಬೇಕಾದ ಹಲವಾರು ಹೊಂದಾಣಿಕೆಗಳಿಗೆ ಸಂಬಂಧಿಸಿದಂತೆ ಬರಬಹುದು. ಇದು ಪಿತೃ ಪ್ರಸವಾನಂತರದ ಖಿನ್ನತೆ (ಪಿಪಿಡಿ) ಅಥವಾ ಅಪ್ಪಂದಿರ ದುಃಖಕ್ಕೆ ಕಾರಣವಾಗುತ್ತದೆ. ಅಲ್ಲದೆ ಇದು ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಪ್ರಸವಾನಂತರದ ಖಿನ್ನತೆಯನ್ನು ಸರಿಯಾದ ಸಮಯದಲ್ಲಿ ಸರಿಪಡಿಸಿಕೊಳ್ಳದಿದ್ದರೆ ಅದು ಕಾಲಾನಂತರದಲ್ಲಿ ದೀರ್ಘ ಕಾಲದ ಖಿನ್ನತೆಯಾಗಿ ಬದಲಾಗಬಹುದು” ಎಂದು ಖಾರ್ಘರ್ನ ಮದರ್ಹುಡ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ. ಪ್ರತಿಮಾ ತಾಮ್ಕೆ ಹೇಳಿದ್ದಾರೆ.
ಡಾ. ಥಾಮ್ಕೆ ಅವರ ಪ್ರಕಾರ ಅಪ್ಪಂದಿರಲ್ಲಿ ಪ್ರಸವಾನಂತರದ ಖಿನ್ನತೆಯ ಲಕ್ಷಣಗಳ ಬಗ್ಗೆ ಇಲ್ಲಿದೆ ಮಾಹಿತಿ:
-ಪುರುಷರು ಖಿನ್ನತೆಯ ವಿವಿಧ ಲಕ್ಷಣಗಳನ್ನು ತೋರ್ಪಡಿಸುತ್ತಾರೆ. ಜೊತೆಗೆ ಆಗಾಗ ನಿರಾಶೆ ಅಥವಾ ಕೋಪ, ಕಿರಿಕಿರಿ ಮತ್ತು ಆತಂಕಕ್ಕೆ ಒಳಗಾಗುತ್ತಾರೆ.
-ಇದೆಲ್ಲದರಿಂದ ಅವರಿಗೆ ಮಗುವಿನೊಂದಿಗೆ ಕಾಲಕಳೆಯಲು ಸಾಧ್ಯವಾಗುವುದಿಲ್ಲ. ಜೊತೆಗೆ ಯಾವುದೇ ಬಾಂಧವ್ಯವಿರುವುದಿಲ್ಲ, ಹಾಗಾಗಿ ಅವರು ಆಗಾಗ ಗೊಂದಲಕ್ಕೊಳಗಾಗುತ್ತಾರೆ, ಉದ್ವಿಗ್ನರಾಗುತ್ತಾರೆ, ಅಸಹಾಯಕರಾಗುತ್ತಾರೆ ಮತ್ತು ಪುಟ್ಟ ಮಗುವಿನ ಭವಿಷ್ಯದ ಬಗ್ಗೆ ಅನಿಶ್ಚಿತರಾಗುತ್ತಾರೆ.
-ಖಿನ್ನತೆ ಇರುವವರು ಸಂಗಾತಿಯೊಂದಿಗಿನ ಅವರ ಸಂಬಂಧವು ಅನ್ಯೋನ್ಯತೆಯಿಂದ ಕೂಡಿರುವುದಿಲ್ಲ. ಅವರು ಆಗಾಗ ಚಿಕ್ಕ ಚಿಕ್ಕ ವಿಷಯಕ್ಕೆ ಸಂಗಾತಿಯೊಂದಿಗೆ ಜಗಳ ಮಾಡಿಕೊಳ್ಳುತ್ತಾರೆ.
– ಪಿಪಿಡಿ ಇರುವ ಪುರುಷರು ಮಗುವಿನ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ನಿರಾಕರಿಸುತ್ತಾರೆ ಮತ್ತು ಮಗುವಿನ ಬಗ್ಗೆ ಯಾವುದೇ ಆಸಕ್ತಿಯನ್ನು ತೋರಿಸುವುದಿಲ್ಲ.
-ಇದಲ್ಲದರ ಜೊತೆ ಅವರು ತಾಯಿ, ಮಗುವಿನ ನಿಕಟತೆಯ ಬಗ್ಗೆಯೂ ಅಸೂಯೆ ಪಡುತ್ತಾರೆ.
-ತಂದೆ ಖಿನ್ನತೆಗೆ ಒಳಗಾಗಿದ್ದರೆ, ಅವರು ಆಗಾಗ ಸಂಗಾತಿಯೊಂದಿಗೆ ವಾದ ಮಾಡುತ್ತಾರೆ. ಮಾದಕ ದ್ರವ್ಯದ ದುರುಪಯೋಗ ಮತ್ತು ಕೌಟುಂಬಿಕ ಹಿಂಸಾಚಾರಕ್ಕೂ ಬಲಿಯಾಗಬಹುದು.
ಇದನ್ನೂ ಓದಿ: Fathers Day 2022: ನಿಮ್ಮ ತಂದೆಯೊಂದಿಗೆ ಉತ್ತಮ ಬಾಂಧವ್ಯ ಹೊಂದುವುದು ಹೇಗೆ?
ಪ್ರಸವಾನಂತರದ ಖಿನ್ನತೆಯ ಕಾರಣಗಳು
-ತಮ್ಮ ಸಂಗಾತಿಯ ಗರ್ಭಧಾರಣೆಯ ಸಮಯದಲ್ಲಿ ಮತ್ತು ನಂತರ ತಂದೆಯರು ಟೆಸ್ಟೋಸ್ಟೆರಾನ್ ಮತ್ತು ಇತರ ಹಾರ್ಮೋನುಗಳ ಬದಲಾವಣೆಗಳಲ್ಲಿ ಕುಸಿತ ವಾಗುತ್ತದೆ ಎಂದು ಅಧ್ಯಯನಗಳು ತೋರಿಸಿವೆ, ಇದು ಅವರ ಖಿನ್ನತೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ತಮ್ಮ ಹೆಂಡತಿಯೊಂದಿಗೆ ಸಮಯ ಕಳೆಯಲು ಸಾಧ್ಯವಾಗದಿರುವುದು ಅಥವಾ ತಮ್ಮ ಸಂಗಾತಿ ಮತ್ತು ಚಿಕ್ಕವರಿಂದ ಸಂಪರ್ಕ ಕಡಿದುಕೊಂಡ ಭಾವನೆ ಕೂಡ ಒಂದು ಕಾರಣವಾಗಿರಬಹುದು.
-ವೈವಾಹಿಕ ಸಂಬಂಧವು ಬದುಕಿನಲ್ಲಿ ಸಿಕ್ಕ ಬೆಂಬಲ ಮತ್ತು ಸಂಬಂಧದ ಇದ್ದ ತೃಪ್ತಿಯನ್ನುಸಹ ಒಳಗೊಂಡಿರುತ್ತದೆ. ಅನೇಕ ಬಾರಿ ಇವೆರಡೂ ತಂದೆಯ ಮನಸ್ಥಿತಿಯ ಮೇಲೆ ಪರಿಣಾಮ ಬೀರುವುದರಿಂದ, ಹೊಸ ಅಪ್ಪಂದಿರು ಶಿಶುಗಳನ್ನು ನೋಡಿಕೊಳ್ಳುವ ಬಗ್ಗೆ ಮತ್ತು ಶಿಶುಗಳನ್ನು ಹೇಗೆ ನಿಭಾಯಿಸಬೇಕು ಎಂಬುದರ ಬಗ್ಗೆ ತಿಳಿಯದೆಯೇ, ಮುಂದಿನ ದಿನಗಳಲ್ಲಿ ಮಗು ಹೇಗೆಲ್ಲಾ ಮಾಡುತ್ತದೆ ಎಂಬುದರ ಬಗ್ಗೆ ಯೋಚಿಸುತ್ತಾ ಆತಂಕಕ್ಕೊಳಗಾಗುತ್ತಾರೆ.
-ತಾಯಂದಿರಂತೆ, ಹಾರ್ಮೋನುಗಳ ಬದಲಾವಣೆಯಿಂದಾಗಿ ತಂದೆಯರು ಸಹ ಪ್ರಸವಾನಂತರದ ಖಿನ್ನತೆಗೆ ಒಳಗಾಗುವ ಸಾಧ್ಯತೆಯಿದೆ. ಟೆಸ್ಟೋಸ್ಟೆರಾನ್ ವ್ಯಾಸೊಪ್ರೆಸಿನ್ ನಂತಹ ಹಾರ್ಮೋನುಗಳು ಮಗುವಿನ ಜನನದ ನಂತರ ತಂದೆಯರಲ್ಲಿ ಬದಲಾಗಬಹುದು. 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ತಂದೆಯರು ಪ್ರಸವಾನಂತರದ ಖಿನ್ನತೆಯ ಅಪಾಯದಲ್ಲಿದ್ದಾರೆ. ಇದು ಮಾತ್ರವಲ್ಲ, ಆರ್ಥಿಕ ಸಮಸ್ಯೆಗಳು, ಆತಂಕ ಮತ್ತು ಖಿನ್ನತೆಯ ಇತಿಹಾಸವು ಸಹ ಪಿಡಿಡಿಯ ಅಪಾಯವನ್ನು ಹೆಚ್ಚಿಸುತ್ತದೆ. ಸಂಗಾತಿಯ ಬೆಂಬಲದ ಕೊರತೆ ಮತ್ತು ಸಾಮಾಜಿಕ ಮತ್ತು ನಡವಳಿಕೆಯ ಸಮಸ್ಯೆಗಳು ಸಹ ಪಿಡಿಡಿಗೆ ಕಾರಣವಾಗಬಹುದು” ಎಂದು ತಜ್ಞರು ಹೇಳುತ್ತಾರೆ.
ತಂದೆಯಲ್ಲಿ ಪ್ರಸವಾನಂತರದ ಖಿನ್ನತೆಯನ್ನು ನಿಭಾಯಿಸಲು ಸಲಹೆಗಳು
-ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ನಿಮಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಮಾತನಾಡಿ ಅಥವಾ ಬೆಂಬಲ ನೀಡುವ ಗುಂಪುಗಳಿಗೆ ಸೇರಿಕೊಳ್ಳಿ.
-ಖಿನ್ನತೆಯ ಲಕ್ಷಣಗಳಾದ ಹತಾಶೆ, ಆತಂಕ, ಒತ್ತಡ, ಉದ್ವೇಗ, ಚಿಂತೆ, ಮಗುವಿನ ವಿಷಯಕ್ಕೆ ಬಂದಾಗ ಆಸಕ್ತಿಯ ಕೊರತೆ ಮತ್ತು ಒಂಟಿತನವನ್ನು ಗಮನಿಸುವುದು ಮತ್ತು ತಕ್ಷಣದ ಆಧಾರದ ಮೇಲೆ ಫಿಸಿಯಾಟ್ರಿಸ್ಟ್ ಅನ್ನು ಸಂಪರ್ಕಿಸುವುದು ಕಡ್ಡಾಯವಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: