ನಿಮ್ಮ ಡಯೆಟ್​ನಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಸೇರಿಸುವುದರಿಂದ ಏನೇನು ಪ್ರಯೋಜನ?

| Updated By: ನಯನಾ ರಾಜೀವ್

Updated on: Aug 22, 2022 | 6:02 PM

ನಿಮ್ಮ ಆಹಾರಕ್ರಮದಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಸೇರಿಸುವುದು ದೇಹದ ದ್ರವ್ಯರಾಶಿಯ ನಷ್ಟವನ್ನು ತಪ್ಪಿಸಲು ಸಹಾಯ ಮಾಡುತ್ತದೆ ಮತ್ತು ಉತ್ತಮ ಆಹಾರ ಆಯ್ಕೆಗಳಿಗೆ ಕಾರಣವಾಗುತ್ತದೆ.

ನಿಮ್ಮ ಡಯೆಟ್​ನಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಸೇರಿಸುವುದರಿಂದ ಏನೇನು ಪ್ರಯೋಜನ?
Protein
Follow us on

ನಿಮ್ಮ ಆಹಾರಕ್ರಮದಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಸೇರಿಸುವುದು ದೇಹದ ದ್ರವ್ಯರಾಶಿಯ ನಷ್ಟವನ್ನು ತಪ್ಪಿಸಲು ಸಹಾಯ ಮಾಡುತ್ತದೆ ಮತ್ತು ಉತ್ತಮ ಆಹಾರ ಆಯ್ಕೆಗಳಿಗೆ ಕಾರಣವಾಗುತ್ತದೆ. ಪ್ರೋಟೀನ್ ಆರೋಗ್ಯಕ್ಕೆ ಮುಖ್ಯವಾದ ಒಂದು ಅವಶ್ಯಕ ಅಂಶವಾಗಿದೆ. ಇದು ಸ್ನಾಯುಗಳು ಮತ್ತು ಮೂಳೆಗಳಿಗೆ ಪ್ರಯೋಜನವನ್ನು ನೀಡುತ್ತದೆ. ಮಾತ್ರವಲ್ಲ ಚರ್ಮದ ಆರೋಗ್ಯವನ್ನು ಸುಧಾರಿಸಬಹುದು.

ತೂಕ ನಿರ್ವಹಣೆ: ಪ್ರೋಟೀನ್ ಅನ್ನು ಕುಡಿಯುವುದರಿಂದ ನೀವು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ, ಇದು ಆಗಾಗ್ಗೆ ತಿಂಡಿಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಆಗಾಗ ತಿಂಡಿ ತಿನ್ನುವ ಅಭ್ಯಾಸದಿಂದ ತೂಕ ಹೆಚ್ಚುತ್ತದೆ. ಪ್ರೊಟೀನ್ ಶೇಕ್ ಕುಡಿಯುವುದರಿಂದ ಇದು ತಪ್ಪುತ್ತದೆ.

– ಕೋಳಿ, ಸಂಸ್ಕರಿಸದ ಕೆಂಪು ಮಾಂಸ, ಮೀನು, ದ್ವಿದಳ ಧಾನ್ಯಗಳು ಮತ್ತು ಡೈರಿಗಳಂತಹ ನೇರ ಪ್ರೋಟೀನ್‌ಗೆ ಸಮನಾಗಿ ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳನ್ನು ಕೂಡ ಬಳಸಬಹುದು.

ಸ್ನಾಯುಗಳ ಬೆಳವಣಿಗೆ: ಆಹಾರದಲ್ಲಿ ಪ್ರೋಟೀನ್ ಸೇರಿಸುವುದರಿಂದ ನಿಮ್ಮ ಸ್ನಾಯುಗಳ ಬೆಳವಣಿಗೆ ಉತ್ತಮವಾಗುತ್ತದೆ.
ಹೆಚ್ಚುವರಿ ಪೋಷಣೆ: ಪ್ರೋಟೀನ್ ನಿಮ್ಮ ಆಹಾರದಲ್ಲಿ ಕೊರತೆಯಿರುವ ನಿಮ್ಮ ದೇಹಕ್ಕೆ ಹೆಚ್ಚುವರಿ ಪೌಷ್ಟಿಕಾಂಶವನ್ನು ನೀಡುತ್ತದೆ. ಇದು ಸೇವಿಸಲು ಹೆಚ್ಚು ಅನುಕೂಲಕರವಾಗಿದೆ.

-ಹಾಗೆಯೇ ಡಯೆಟ್ ಮಾಡುವವರು ತಮ್ಮ ಆಹಾರದಲ್ಲಿ ಪ್ರೋಟೀನ್ ಹೆಚ್ಚಿಸಿದಾಗ ನಿಮ್ಮ ಬಾಡಿ ಮಾಸ್ ಕಡಿಮೆಯಾಗುತ್ತದೆ.

-ತೂಕ ಇಳಿಕೆ ಮಾಡಿಕೊಳ್ಳುವವರು ಹೆಚ್ಚು ಕ್ಯಾಲೊರಿ ಭರಿತ ಆಹಾರವನ್ನು ಸೇವಿಸುವುದಿಲ್ಲ, ಅಂಥವರು ತಮ್ಮ ಡಯೆಟ್​ನಲ್ಲಿ ಪ್ರೋಟೀನ್​ ಅನ್ನು ಸೇರಿಸಿಕೊಳ್ಳಬಹುದು.

ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

ಜೀವನಶೈಲಿಗೆ  ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ