Protein Powder: ಜಿಮ್​ ಮಾಡುವವರು ಪ್ರೋಟೀನ್ ಪೌಡರ್​ನ್ನು ತೆಗೆದುಕೊಳ್ಳಲೇಬೇಕಾ? ಈ ಕುರಿತು ಆರೋಗ್ಯ ತಜ್ಞರು ಹೇಳುವುದು ಏನು?

ಜಿಮ್‌ನಲ್ಲಿ ಪ್ರೋಟೀನ್ ಪೌಡರ್ ತೆಗೆದುಕೊಳ್ಳುವುದನ್ನು ನೀವು ಅನೇಕರನ್ನು ನೋಡಿರಬೇಕು. ಇದು ದೇಹವನ್ನು ನಿರ್ಮಾಣ ಮಾಡುತ್ತದೆ ಎಂದು ಜನರು ಭಾವಿಸುತ್ತಾರೆ. ಅದು ಅಪಾಯಕಾರಿಯೂ ಹೌದು. ಈ ಬಗ್ಗೆ ಫಿಟ್ನೆಸ್ ತಜ್ಞರು ಏನು ಹೇಳುತ್ತಾರೆಂದು ತಿಳಿಯಿರಿ.

Protein Powder: ಜಿಮ್​ ಮಾಡುವವರು ಪ್ರೋಟೀನ್ ಪೌಡರ್​ನ್ನು ತೆಗೆದುಕೊಳ್ಳಲೇಬೇಕಾ? ಈ ಕುರಿತು ಆರೋಗ್ಯ ತಜ್ಞರು ಹೇಳುವುದು ಏನು?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jul 01, 2022 | 7:10 AM

Protein Powder Effect on Health: ಪ್ರತಿಯೊಬ್ಬರು ವ್ಯಾಯಾಮ ಮಾಡುವ ಮೂಲಕ ತಮ್ಮ ದೇಹವನ್ನು ದಂಡಿಸಿ ಫಿಟ್ (Fitness)​ ಆಗಿಟ್ಟುಕೊಳ್ಳಲು ಬಯಸುತ್ತಾರೆ. ಅದಕ್ಕಾಗಿ ಹಲವರು ಜಿಮ್‌ (Gym) ಸೇರುವುದು ಕೂಡ ಉಂಟು. ಜಿಮ್​ಗಳಲ್ಲಿ ಬಹುಬೇಗ ನಮಗೆ ದೇಹ ಬರಲಿ ಎಂದು ಕೆಲವರು ಪ್ರೋಟೀನ್ ಪೌಡರ್ ಸೇರಿದಂತೆ ಅನೇಕ ಪೂರಕಗಳನ್ನು ಬಳಸುತ್ತಾರೆ. ತಜ್ಞರ ಪ್ರಕಾರ, ಈ ಪ್ರೋಟೀನ್ ಪೌಡರ್​ನ್ನು ಬಹಳ ಜಾಗರುಕತೆಯಿಂದ ಬಳಸಬೇಕು. ಈ ವಿಷಯದಲ್ಲಿ ಅಜಾಗರೂಕರಾದರೇ, ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಬಹುದು. ನೀವು ಜಿಮ್‌ನಲ್ಲಿ ಪ್ರೋಟೀನ್ ಪೌಡರ್ ತೆಗೆದುಕೊಳ್ಳುತ್ತಿದ್ದರೆ ಅಥವಾ ಅದರ ಬಗ್ಗೆ ಗೊತ್ತಿಲ್ಲವೆಂದರೆ ಅದಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳನ್ನು ನೀವು ತಿಳಿದುಕೊಳ್ಳುವುದು ಒಳ್ಳೆದು. ನೀವು ಈ ವಿಷಯಗಳನ್ನು ಅನುಸರಿಸಿದರೆ, ನಿಮ್ಮನ್ನು ಫಿಟ್ ಆಗಿ ಮತ್ತು ಆರೋಗ್ಯಕರವಾಗಿರಿಸಿಕೊಳ್ಳಬಹುದು.

ಫಿಟ್ನೆಸ್ ತಜ್ಞರು ಹೇಳುವುದು ಏನು?

ಫಿಟ್ನೆಸ್ ತರಬೇತುದಾರ ಅರುಣ್ ಸಿಂಗ್ ಅವರ ಪ್ರಕಾರ, ಜಿಮ್ ಸಮಯದಲ್ಲಿ ನೈಸರ್ಗಿಕ ರೀತಿಯಲ್ಲಿ ಪ್ರೋಟೀನ್ ಪೌಡರ್​ನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳಲು ಜನರಿಗೆ ಸಲಹೆ ನೀಡಲಾಗುತ್ತದೆ. ಒಬ್ಬ ವ್ಯಕ್ತಿಗೆ ಪ್ರತಿ ಕಿಲೋಗ್ರಾಂ ತೂಕದ 1 ಗ್ರಾಂ ಪ್ರೋಟೀನ್ ಅಗತ್ಯವಿದೆ. ಮೊಟ್ಟೆ, ಮಾಂಸ, ಚೀಸ್, ಮೀನು, ಕೋಳಿ, ಹಾಲು, ಮೊಸರು ಮತ್ತು ಹಣ್ಣುಗಳನ್ನು ಆಹಾರದೊಂದಿಗೆ ಸೇವಿಸುವವರು ಅಗತ್ಯಕ್ಕೆ ಅನುಗುಣವಾಗಿ ಪ್ರೋಟೀನ್ ಪಡೆದುಕೊಳ್ಳಬೇಕು. ಕೆಲವರು ಎಷ್ಟೇ ಜಿಮ್ ಮಾಡಿದರು ಅವರ ದೇಹ ಬರುವುದಿಲ್ಲ. ಅಂತಹ ಸಯಮದಲ್ಲಿ ಕೆಲವೊಮ್ಮೆ ಪ್ರೋಟೀನ್ ಪೌಡರ್​ನ್ನು ಬಳಸಲು ಸಲಹೆ ನೀಡಲಾಗುತ್ತದೆ. ಆದಾಗ್ಯೂ, ಪ್ರೋಟೀನ್ ಪೌಡರ್​ನ್ನು ಅತ್ಯಂತ ಎಚ್ಚರಿಕೆಯಿಂದ ಬಳಸಬೇಕು.

ಕೆಲ ಜನರು ಪ್ರೋಟೀನ್ ಪುಡಿಯನ್ನು ತೆಗೆದುಕೊಳ್ಳಬಾರದು:

ಲಿವರ್ ಸಮಸ್ಯೆಯಿಂದ ಬಳಲುತ್ತಿರುವವರು ಪ್ರೊಟೀನ್ ಪೌಡರ್ ಸೇವಿಸಬಾರದು ಎಂದು ಅರುಣ್ ಸಿಂಗ್ ಸಲಹೆ ನೀಡುತ್ತಾರೆ. ಇದಲ್ಲದೆ, ಮೂತ್ರಪಿಂಡ ಮತ್ತು ಇತರ ಆಂತರಿಕ ಕಾಯಿಲೆಗಳ ರೋಗಿಗಳಿಗೆ ಯಾವುದೇ ರೀತಿಯ ಪೌಡರ್​​ನ್ನು ತೆಗೆದುಕೊಳ್ಳುವುದು ಸಹ ಹಾನಿಕಾರಕವೆನ್ನುತ್ತಾರೆ. ವೈದ್ಯರು ಎಂದಿಗೂ ಪ್ರೋಟೀನ್ ಪೌಡರ್​ನ್ನು ಶಿಫಾರಸು ಮಾಡುವುದಿಲ್ಲ ಎಂದು ಫಿಟ್ನೆಸ್ ತರಬೇತುದಾರರು ಹೇಳುತ್ತಾರೆ. ನೀವು ಪ್ರೋಟೀನ್ ತೆಗೆದುಕೊಳ್ಳಲು ಬಯಸಿದರೆ, ಅದನ್ನು ನಿಮ್ಮ ವೈದ್ಯರೊಂದಿಗೆ ಚರ್ಚಿಸಬಹುದು. ಜೊತೆಗೆ ಅರ್ಹ ತರಬೇತುದಾರರ ಸೂಚನೆಯಂತೆ ಜಿಮ್ ಮಾಡಬೇಕು.

ಉತ್ತಮ ಆಹಾರ ಬಹಳ ಮುಖ್ಯ:

ಫಿಟ್ನೆಸ್ ಕೋಚ್ ಪ್ರಕಾರ, ಜಿಮ್ ಮಾಡುವಾಗ ಎಲ್ಲಾ ಜನರು ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳಬೇಕು. ನೀವು ಅದರೊಂದಿಗೆ ಸರಿಯಾಗಿ ವ್ಯಾಯಾಮ ಮಾಡಿದರೆ, ನೀವು ಯಾವುದೇ ಪೂರಕವನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಪೂರಕಗಳು ಆರೋಗ್ಯಕ್ಕೆ ಹಾನಿಕಾರಕವಾಗಿರಬಹುದು. ಆದ್ದರಿಂದ ದೇಹದ ನಿರ್ಮಾಣವನ್ನು ಅತ್ಯಂತ ಎಚ್ಚರಿಕೆಯಿಂದ ಮಾಡಬೇಕು.

ಇದನ್ನೂ ಓದಿ: Relationship: ಮನಸ್ಸಿನಲ್ಲೇ ಬಚ್ಚಿಟ್ಟಿರುವ ನಿರೀಕ್ಷೆಗಳು ಸಂಗಾತಿ ಜತೆ ಭಿನ್ನಾಭಿಪ್ರಾಯ ಸೃಷ್ಟಿಸಬಹುದು

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್