
ಅಕ್ಕಿಯಲ್ಲಿ ಹಲವು ವಿಧಗಳಿವೆ. ಆದರೆ ಹೆಚ್ಚಾಗಿ ಎಲ್ಲರೂ ಬೆಳ್ತಿಗೆ ಅನ್ನವನ್ನು ತಿನ್ನುತ್ತಾರೆ. ಆದರೆ ಕೆಂಪು ಹಾಗೂ ಕಂದು ಬಣ್ಣದ ಅಕ್ಕಿಗಳಿಗೆ ಹೋಲಿಕೆ ಮಾಡಿದೆ ಬೆಳ್ತಿಗೆ ಅಕ್ಕಿಯಲ್ಲಿ ಫೈಬರ್ , ಪ್ರೊಟೀನ್ ಅಂಶಗಳು, ಜೀವಸತ್ವಗಳು ಹಾಗೂ ಖನಿಜದ ಪ್ರಮಾಣ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಇತ್ತೀಚಿನ ಸಂಶೋಧನೆಯ ಪ್ರಕಾರ ಕೆಂಪು ಅಕ್ಕಿಯನ್ನು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಈಗ ಕೆಂಪು ಅಕ್ಕಿಯನ್ನು ತಿನ್ನುವುದರಿಂದ ಆಗುವ ಲಾಭಗಳೇನು ಎಂದು ನೋಡೋಣ.
ಕೆಂಪು ಅಕ್ಕಿಯ ಅನ್ನ ತಿನ್ನುವುದರಿಂದ ಹೃದಯವು ಆರೋಗ್ಯಕರವಾಗಿರುತ್ತದೆ. ಈ ಅನ್ನ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಸ್ವತಂತ್ರ ರಾಡಿಕಲ್ಗಳ ವಿರುದ್ಧವೂ ರಕ್ಷಿಸುತ್ತದೆ. ಹೃದಯಕ್ಕೆ ಯಾವುದೇ ಅಡೆತಡೆಗಳಿಲ್ಲ.
ಕೆಂಪು ಅಕ್ಕಿಯ ಅನ್ನ ತಿನ್ನುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು. ಮಧುಮೇಹ ಇರುವವರಿಗೆ ಕೆಂಪು ಅಕ್ಕಿಯ ಅನ್ನ ತುಂಬಾ ಒಳ್ಳೆಯದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸದೆ ನಿಯಂತ್ರಿಸುತ್ತದೆ. ಮಧುಮೇಹ ಇರುವವರು ಈ ಅನ್ನವನ್ನು ಯಾವುದೇ ಸಂಶಯವಿಲ್ಲದೆ ತಿನ್ನಬಹುದು.
ಕೆಂಪು ಅಕ್ಕಿಯ ಅನ್ನದಲ್ಲಿ ಪ್ರೋಟೀನ್ ಮತ್ತು ಫೈಬರ್ ಇರುತ್ತದೆ. ಇದರಿಂದ ಇವುಗಳನ್ನು ಸ್ವಲ್ಪ ತಿಂದರೂ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಈ ಕಾರಣದಿಂದಾಗಿ, ಇತರ ಆಹಾರಗಳನ್ನು ತೆಗೆದುಕೊಳ್ಳಲಾಗುವುದಿಲ್ಲ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಸಹ ಕಡಿಮೆ ಮಾಡುತ್ತದೆ. ಕೆಂಪು ಅಕ್ಕಿಯನ್ನು ಹೀಗೆ ತಿಂದರೆ ಬೇಗ ತೂಕ ಇಳಿಸಿಕೊಳ್ಳಬಹುದು.
ಇದನ್ನೂ ಓದಿ: Weight Loss: ಋತುಬಂಧದ ಬಳಿಕ ಮಹಿಳೆಯರ ತೂಕ ಇಳಿಸುವುದು ಹೇಗೆ?
ಕೆಂಪು ಅಕ್ಕಿಯ ಅನ್ನದಲ್ಲಿ ಆಂಥೋಸಯಾನಿನ್ ಇರುತ್ತದೆ. ಇದು ಯುವಿ ಕಿರಣಗಳಿಂದ ರಕ್ಷಿಸುತ್ತಾರೆ. ಇದರಿಂದ ಚರ್ಮವು ಆರೋಗ್ಯಕರವಾಗಿರುತ್ತದೆ. ಇದು ವಯಸ್ಸಾಗುವುದನ್ನು ತಡೆಯುತ್ತದೆ. ಚರ್ಮದ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರು ಕೆಂಪು ಅಕ್ಕಿಯ ಅನ್ನ ತಿನ್ನುವುದರಿಂದ ಅವುಗಳನ್ನು ನಿಯಂತ್ರಿಸಬಹುದು. ಅಂತೆಯೇ ಜೀರ್ಣಕ್ರಿಯೆಯೂ ಸುಧಾರಿಸುತ್ತದೆ. ಅದೂ ಅಲ್ಲದೆ ಈ ಅನ್ನವನ್ನು ತಿನ್ನುವುದರಿಂದ ಸಂಧಿವಾತ ಮತ್ತು ಕೀಲು ನೋವು ಬರುವುದಿಲ್ಲ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ