Health Tips : ಡಯಟ್ ಹೆಸರಿನಲ್ಲಿ ಅತಿಯಾಗಿ ಮುಳ್ಳು ಸೌತೆ ಸೇವಿಸುತ್ತೀರಾ, ಹಾಗಾದ್ರೆ ಈ ಬಗ್ಗೆಯೂ ತಿಳಿದಿರಲಿ!
ದಿನನಿತ್ಯ ಬಳಸುವ ತರಕಾರಿಗಳಲ್ಲಿ ಮುಳ್ಳು ಸೌತೆ ಕೂಡ ಒಂದು. ಕೆಲವರು ಮುಳ್ಳು ಸೌತೆಕಾಯಿಯನ್ನು ಹಾಗೆ ತಿನ್ನಲು ಇಷ್ಟ ಪಡುವವರೇ ಹೆಚ್ಚು. ಆದರೆ ಇದರ ಅತಿಯಾದ ಸೇವನೆಯಿಂದ ಆರೋಗ್ಯ ಪ್ರಯೋಜನಗಳಿಗಿಂತ ಅಡ್ಡಪರಿಣಾಮಗಳೇ ಹೆಚ್ಚು. ಹೀಗಾಗಿ ಸೌತೆ ಕಾಯಿ ಸೇವನೆಯು ಇತಿ ಮಿತಿಯಲ್ಲಿದ್ದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು

Side effect of Cucumber
ಸೌಂದರ್ಯ ವರ್ಧಕಗಳ ತಯಾರಿಕೆಯಲ್ಲಿ ಈ ಮುಳ್ಳು ಸೌತೆಕಾಯಿಯನ್ನು ಹೇರಳವಾಗಿ ಬಳಸಲಾಗುತ್ತದೆ. ಈ ಸೌತೆಕಾಯಿಯಲ್ಲಿ ವಿಟಮಿನ್ ಕೆ, ಬಿ1 ,ಬಿ5, ಬಿ7 ತಾಮ್ರ , ಪೊಟೇಷಿಯಮ್ , ವಿಟಮಿನ್ ಸಿ ಹಾಗು ಮೆಗ್ನೇಷಿಯಂ, ಬೀಟಾ -ಕೆರೋಟಿನ್ ನಂತಹ ಪೋಷಕಾಂಶಗಳು ಹೇರಳವಾಗಿದೆ. ಡಯಟ್ ಮಾಡುವವರು ಹೆಚ್ಚಾಗಿ ಈ ಮುಳ್ಳು ಸೌತೆಯನ್ನು ಸೇವಿಸುತ್ತಾರೆ. ಇದು ಉರಿಮೂತ್ರ ಹಾಗು ನೈಸರ್ಗಿಕ ಮೈ ಬಣ್ಣ ಕಾಂತಿಗೊಳಿಸುವುದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದರ ಸೇವನೆಯು ಆರೋಗ್ಯಕ್ಕೆ ಒಳ್ಳೆಯದು ಎಂದು ಅತಿಯಾಗಿ ಸೇವಿಸಿದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುವುದೇ ಹೆಚ್ಚು.
ಮುಳ್ಳು ಸೌತೆ ಸೇವನೆಯಿಂದ ಆರೋಗ್ಯದ ಮೇಲಾಗುವ ಅಡ್ಡಪರಿಣಾಮಗಳು:
- ಡಯಟ್ ಹೆಸರಿನಲ್ಲಿ ದಿನಕ್ಕೆ ಏಳರಿಂದ ಎಂಟು ಮುಳ್ಳುಸೌತೆಯನ್ನು ಸೇವಿಸುವುದು ಒಳ್ಳೆಯದಲ್ಲ. ಇದರಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಕುಕುರ್ಬಿಟೈನ್ ಎಂಬ ವಿಷಕಾರಿ ಅಂಶವಿರುತ್ತದೆ. ಅದಲ್ಲದೇ, ದೇಹದಲ್ಲಿ ಟಾಕ್ಸಿಕ್ ಅಂಶ ಸೇರುತ್ತದೆ. ಇದರಿಂದಾಗಿ ಲಿವರ್, ಪ್ಯಾಂಕ್ರಿಯಾಟಿಕ್ ಹಾಗೂ ಮೂತ್ರಪಿಂಡ ಊತಗಳಿಗೂ ಕಾರಣವಾಗುವ ಸಾಧ್ಯತೆಯೂ ಅಧಿಕವಾಗಿದೆ.
- ಮುಳ್ಳು ಸೌತೆಕಾಯಿ ಬೀಜಗಳಲ್ಲಿ ಕುಕುರ್ಬಿಟಾಸಿನ್ ಮತ್ತು ಕೊಬ್ಬಿನ ಎಣ್ಣೆ ಹೇರಳವಾಗಿದ್ದು , ಇದು ಮೂತ್ರ ವರ್ಧಕ ಗುಣಗಳನ್ನು ಹೊಂದಿದೆ. ಇದರ ಅತಿಯಾದ ಸೇವನೆಯಿಂದಾಗಿ ಮೂತ್ರ ವಿಸರ್ಜನೆ ಹೆಚ್ಚಿಸಿ ದೇಹದಲ್ಲಿ ನಿರ್ಜಲೀಕರಣಕ್ಕೂ ಕಾರಣವಾಗಬಹುದು.
- ಮುಳ್ಳು ಸೌತೆಕಾಯಿಯ ಸೇವನೆಯಿಂದ ಮಲಬದ್ಧತೆ ಸಮಸ್ಯೆಯು ದೂರವಾಗುತ್ತದೆ. ಆದರೆ ಅತಿಯಾದ ಸೇವನೆಯು ಗ್ಯಾಸ್ಟಿಕ್ ಗೆ ಕಾರಣವಾಗುತ್ತದೆ.
- ಮುಳ್ಳು ಸೌತೆ ಕಾಯಿ ದೇಹಕ್ಕೆ ತಂಪು ಎನ್ನುವುದು ಎಲ್ಲರಿಗೂ ತಿಳಿದಿದೆ ಆದರೆ ಸೈನಸ್ ಕಾಯಿಲೆಯಿಂದ ಬಳಲುವವರು ಇದರ ಸೇವನೆಯಿಂದ ದೂರವಿರುವುದು ಒಳ್ಳೆಯದು. ಅತಿಯಾಗಿ ತಿನ್ನುವುದರಿಂದ ಮೂಗಿನ ದಾರಿಯ ಉರಿಯೂತಕ್ಕೆ ದಾರಿ ಮಾಡಿಕೊಡುತ್ತದೆ.
- ದೇಹಕ್ಕೆ ತಂಪು ನೀಡುವ ಕಾರಣ ಈ ಮುಳ್ಳು ಸೌತೆಯನ್ನು ಕಫ ಶೀತ ನೆಗಡಿ ಸಮಸ್ಯೆಯಿದ್ದವರು ಸೇವಿಸಲೇಬಾರದು.
- ಅತಿಯಾಗಿ ಮುಳ್ಳು ಸೌತೆಯನ್ನು ತಿನ್ನುವುದರಿಂದ ಚರ್ಮದ ಅಲರ್ಜಿಯು ಕಾಡುವ ಸಾಧ್ಯತೆಯೇ ಹೆಚ್ಚು. ತುರಿಕೆ, ಮುಖ ಅಥವಾ ಬಾಯಿಯ ಊತ, ಗಂಟಲಿನ ಸೋಂಕುಗಳಿಗೂ ಕಾರಣವಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:45 am, Sat, 30 March 24




