AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

White Rice Benefits: ಬೆಳ್ತಿಗೆ ಅನ್ನ ಸೇವಿಸುವ ಮೊದಲು ಈ ಟಿಪ್ಸ್​​ ಫಾಲೋ ಮಾಡಿ

ಇತ್ತೀಚೆಗೆ, ಪೌಷ್ಟಿಕತಜ್ಞರಾದ ರಾಶಿ ಚೌಧರಿ ಗೋಧಿಯ ಬದಲಾಗಿ ಬಿಳಿ ಅಕ್ಕಿಯನ್ನು ಆಯ್ದುಕೊಂಡಾಗ ಕೆಲವು ಪ್ರಮುಖ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಮುಖ್ಯ ಎಂದು ಸಲಹೆ ನೀಡಿದ್ದಾರೆ.

White Rice Benefits: ಬೆಳ್ತಿಗೆ ಅನ್ನ ಸೇವಿಸುವ ಮೊದಲು ಈ ಟಿಪ್ಸ್​​ ಫಾಲೋ ಮಾಡಿ
ಬೆಳ್ತಿಗೆ ಅನ್ನ Image Credit source: NYT Cooking
ಅಕ್ಷತಾ ವರ್ಕಾಡಿ
|

Updated on: Jun 18, 2023 | 6:34 AM

Share

ನಿಮ್ಮ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮದ ವಿಚಾರಕ್ಕೆ ಬಂದಾಗ ನಿಮ್ಮ ಆಹಾರ ಕ್ರಮ ಯಾವ ರೀತಿ ಇದೆ ಎಂಬುದು ಮುಖ್ಯವಾಗಿರುತ್ತದೆ. ನಿಮ್ಮ ಆಹಾರ ಮತ್ತು ದೈನಂದಿನ ದೈಹಿಕ ವ್ಯಾಯಾಮದ ಮಟ್ಟಗಳು ನಿಮ್ಮ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಇತ್ತೀಚೆಗೆ, ಖ್ಯಾತ ಪೌಷ್ಟಿಕತಜ್ಞ ರಾಶಿ ಚೌಧರಿ ಬಿಳಿ ಅಕ್ಕಿ ಅನ್ನವು ಗೋಧಿಯ ಆಹಾರಗಳಿಗಿಂತ ಎಷ್ಟು ಸೂಕ್ತವಾಗಿದೆ ಎಂಬುದರ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಗೋಧಿಯ ಬದಲಾಗಿ ಅಕ್ಕಿಯನ್ನು ಆಯ್ದುಕೊಂಡಾಗ ಕೆಲವು ಪ್ರಮುಖ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಮುಖ್ಯ ಎಂದು ರಾಶಿ ಚೌಧರಿ ಹೇಳುತ್ತಾರೆ.

ತರಕಾರಿಗಳು ಅಥವಾ ಪ್ರೋಟೀನ್‌ನೊಂದಿಗೆ ಜೋಡಿಸಿ:

ಬಿಳಿ ಅಕ್ಕಿಯ ಅನ್ನದ ಜೊತೆಗೆ ಸಾಕಷ್ಟು ತರಕಾರಿಗಳು ಅಥವಾ ಪ್ರೋಟೀನ್ ಅನ್ನು ಸೇರಿಸುವುದನ್ನು ಖಚಿತಪಡಿಸಿಕೊಳ್ಳಿ. ಈ ಸಂಯೋಜನೆಯು ಒಟ್ಟಾರೆ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ ಎಂದು ಹೇಳುತ್ತಾರೆ.

ಇದನ್ನೂ ಓದಿ: ಫಿಟ್​​​​ನೆಸ್​​​​​​​​​ ವಿಚಾರದಲ್ಲಿ ನಿಮ್ಮ ಆಹಾರದ ಆಯ್ಕೆಯಲ್ಲಿ ಮಾಡುವ ಕೆಲವೊಂದಿಷ್ಟು ತಪ್ಪುಗಳು ಇಲ್ಲಿವೆ

ಕುಚ್ಚಲಕ್ಕಿಗಿಂತ ಬಿಳಿ ಅಕ್ಕಿಯನ್ನು ಆರಿಸಿ:

ಕಂದು ಅಕ್ಕಿಯಲ್ಲಿ ಕಂಡುಬರುವ ಆರ್ಸೆನಿಕ್ ಮಟ್ಟಗಳಿಂದ ಕಂದು ಬದಲಿಗೆ ಬಿಳಿ ಅಕ್ಕಿಯನ್ನು ಆರಿಸಿ. ದೇಹದಲ್ಲಿನ ವಿಷವನ್ನು ಕಡಿಮೆ ಮಾಡಲು ಬಿಳಿ ಅಕ್ಕಿಯನ್ನು ಸಾಮಾನ್ಯವಾಗಿ ಉತ್ತಮವೆಂದು ಪರಿಗಣಿಸಲಾಗುತ್ತದೆ ಎಂದು ಸಲಹೆ ನೀಡಿದ್ದಾರೆ.

ಉತ್ತಮ ಗುಣಮಟ್ಟದ ಕೊಬ್ಬನ್ನು ಬಳಸಿ:

ನಿಮ್ಮ ಬಿಳಿ ಅಕ್ಕಿಯನ್ನು ಬೇಯಿಸುವಾಗ, ಆರೋಗ್ಯಕರ ಕೊಬ್ಬು ಅಂದರೆ ತುಪ್ಪ, ತೆಂಗಿನ ಎಣ್ಣೆ, ಬೆಣ್ಣೆ, ಆವಕಾಡೊ ಎಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಬಳಸಿ. ಈ ಕೊಬ್ಬುಗಳು ಪರಿಮಳವನ್ನು ಮಾತ್ರವಲ್ಲದೆ ವಿವಿಧ ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ.

ಭಯವಿಲ್ಲದೆ ಬಿಳಿ ಅಕ್ಕಿಯನ್ನು ಸ್ವೀಕರಿಸಿ:

ಅನೇಕ ಜನರು ತಮ್ಮ ಆಹಾರದಲ್ಲಿ ಬಿಳಿ ಅಕ್ಕಿಯನ್ನು ಬಳಸಲು ಹಿಂದೇಟು ಹಾಕುತ್ತಾರೆ. ಈ ಭಯವನ್ನು ಹೋಗಲಾಡಿಸಲು ಮತ್ತು ಸಮತೋಲಿತ ಮತ್ತು ಆರೋಗ್ಯಕರ ಜೀವನಶೈಲಿಯ ಭಾಗವಾಗಿ ಬಿಳಿ ಅನ್ನವನ್ನು ಆನಂದಿಸಲು ಪ್ರೋತ್ಸಾಹಿಸುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Follow Us
Akshatha Vorkady
Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು