Free Sunscreen Cream: ಈ ದೇಶ ತನ್ನ ಪ್ರಜೆಗಳಿಗೆ ಉಚಿತ ಸನ್‌ಸ್ಕ್ರೀನ್ ನೀಡುತ್ತಿದೆ; ಆ ದೇಶ ಯಾವುದು ಹಾಗೂ ಕಾರಣ ಏನು? ಇಲ್ಲಿದೆ ವಿವರ

ಇಲ್ಲೊಂದು ದೇಶ ತನ್ನ ಪ್ರಜೆಗಳಿಗೆ ಉಚಿತವಾಗಿ ಸನ್‌ಸ್ಕ್ರೀನ್ ನೀಡುತ್ತಿದೆ. ಅಷ್ಟಕ್ಕೂ ಆ ದೇಶ ಯಾವುದು? ಯಾಕೆ ಉಚಿತವಾಗಿ ಸನ್‌ಸ್ಕ್ರೀನ್ ನೀಡುತ್ತಿದೆ? ಎಂಬ ಎಲ್ಲಾ ಪ್ರಶ್ನೆಗೆ ಉತ್ತರ ಇಲ್ಲಿದೆ.

Free Sunscreen Cream: ಈ ದೇಶ ತನ್ನ ಪ್ರಜೆಗಳಿಗೆ ಉಚಿತ ಸನ್‌ಸ್ಕ್ರೀನ್ ನೀಡುತ್ತಿದೆ; ಆ ದೇಶ ಯಾವುದು ಹಾಗೂ ಕಾರಣ ಏನು? ಇಲ್ಲಿದೆ ವಿವರ
ಉಚಿತ ಸನ್‌ಸ್ಕ್ರೀನ್ Image Credit source: Allure
Follow us
ಅಕ್ಷತಾ ವರ್ಕಾಡಿ
|

Updated on: Jun 18, 2023 | 10:40 AM

ನೆದರ್‌ಲ್ಯಾಂಡ್: ಸಾಮಾನ್ಯವಾಗಿ ಯಾವುದೇ ದೇಶ ಆರ್ಥಿಕವಾಗಿ ಹಿಂದುಳಿದ್ದಿದ್ದರೆ, ಆಹಾರ, ವಸತಿ ಹಾಗೂ ಇನ್ನಿತರ ಸೌಲಭ್ಯವನ್ನು ಉಚಿತವಾಗಿ ನೀಡುವುದನ್ನು ನೀವು ಕೇಳಿರುತ್ತೀರಿ ಅಥವಾ ನೀವೇ ಅದರ ಫಲಾನುಭಾವಿಗಳಾಗಿರುತ್ತೀರಿ. ಆದರೆ ಇಲ್ಲೊಂದು ದೇಶ ತನ್ನ ನಾಗರಿಕರಿಗೆ ಉಚಿತವಾಗಿ ಸನ್‌ಸ್ಕ್ರೀನ್ ನೀಡುತ್ತಿದೆ. ಇದೀಗಾ ಈ ಸುದ್ದಿ ಎಲ್ಲೆಡೆ ಭಾರೀ ವೈರಲ್​​ ಆಗಿದೆ. ಅಷ್ಟಕ್ಕೂ ಅಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಈ ಹೊಸ ಕಾನೂನನ್ನು ಜಾರಿಗೆ ತಂದಿದೆ. ಏನಿದು ಇಲ್ಲಿ ತಿಳಿದುಕೊಳ್ಳಿ. ದೇಶದಲ್ಲಿ ಹೆಚ್ಚುತ್ತಿರುವ ಚರ್ಮದ ಕ್ಯಾನ್ಸರ್ ನಿಭಾಯಿಸುವ ಪ್ರಯತ್ನದಲ್ಲಿ ನೆದರ್ಲ್ಯಾಂಡ್ಸ್ ತನ್ನ ನಾಗರಿಕರಿಗೆ ಉಚಿತವಾಗಿ ಸನ್ ಕ್ರೀಮ್ ನೀಡುತ್ತಿದೆ. ಇದಕ್ಕಾಗಿ ಸಾರ್ವಜನಿಕ ಸ್ಥಳಗಳು ಸೇರಿದಂತೆ ಶಾಲೆ, ವಿಶ್ವವಿದ್ಯಾನಿಲಯಗಳಲ್ಲಿ ಸನ್‌ಸ್ಕ್ರೀನ್ ಕ್ರೀಮ್ ವಿತರಕಗಳನ್ನು ನೇಮಿಸಲಾಗಿದೆ.

ಕಳೆದ ಎರಡು ದಶಕಗಳಲ್ಲಿ ಯುರೋಪಿನಾದ್ಯಂತ ಚರ್ಮದ ಕ್ಯಾನ್ಸರ್ ಪ್ರಮಾಣ ಹೆಚ್ಚುತ್ತಿದೆ. ನೆರೆಯ ಜರ್ಮನಿಯಲ್ಲಿ, 2001 ಮತ್ತು 2021 ರ ನಡುವೆ ಚರ್ಮದ ಕ್ಯಾನ್ಸರ್‌ನಿಂದ ಸಾವನ್ನಪ್ಪಿದವರ ಸಂಖ್ಯೆಯು ಶೇಕಡಾ 55 ರಷ್ಟು ಏರಿಕೆಯಾಗಿದೆ ಎಂದು ಫೆಡರಲ್ ಆಫೀಸ್ ಆಫ್ ಸ್ಟ್ಯಾಟಿಸ್ಟಿಕ್ಸ್ ತಿಳಿಸಿದೆ. ಹೆಚ್ಚುತ್ತಿರುವ ಚರ್ಮದ ಕಾಯಿಲೆಗಳಿಗೆ ಪ್ರಮುಖ ಕಾರಣ ಅತಿಯಾಗಿ ಸೂರ್ಯನ ಕಿರಣಕ್ಕೆ ಒಡ್ಡಿಕೊಳ್ಳುವುದು. ಆದ್ದರಿಂದ ಸೂರ್ಯನ ಕಿರಣದಿಂದ ಜನರಿಗೆ ರಕ್ಷಣೆ ನೀಡಲು ದೇಶದ ಮೂಲೆ ಮೂಲೆಗೂ ಸನ್‌ಸ್ಕ್ರೀನ್ ಕ್ರೀಮ್ ಉಚಿತವಾಗಿ ತಲುಪಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: ಗೊತ್ತಿಲ್ಲದೇ ಈ ಶಬ್ದಗಳಿರುವ ಟಿ ಶರ್ಟ್​ ಧರಿಸಿ ಆಧಾರ್​ ಕಾರ್ಡ್​ ಮಾಡಿಸಿದ ಯುವತಿ, ಫೋಟೊ ವೈರಲ್

ಸನ್‌ಸ್ಕ್ರೀಮ್ ಚರ್ಮದ ಕ್ಯಾನ್ಸರ್​​​ ವಿರುದ್ಧ ಅತ್ಯಂತ ಪರಿಣಾಮಕಾರಿ ರಕ್ಷಣೆ ಎಂದು ಸಾಬೀತಾಗಿದೆ. ಚಿಕ್ಕಂದಿನಿಂದಲೇ ಹಲ್ಲುಜ್ಜುವ ಹಾಗೆ ಸನ್‌ಸ್ಕ್ರೀನ್‌ ಹಚ್ಚುವ ಅಭ್ಯಾಸವನ್ನು ರೂಢಿಸಿಕೊಳ್ಳುವ ಮಹತ್ವವನ್ನು ತಜ್ಞರು ಒತ್ತಿ ಹೇಳಿದ್ದಾರೆ. ದೇಶದಲ್ಲಿ ಚರ್ಮದ ಕ್ಯಾನ್ಸರ್‌ನ ದಾಖಲೆಯ ಮಟ್ಟವನ್ನು ಎದುರಿಸಲು ರಾಷ್ಟ್ರವ್ಯಾಪಿ ಉಪಕ್ರಮದ ಭಾಗವಾಗಿ ನೆದರ್ಲೆಂಡ್ಸ್‌ನ ನಾಗರಿಕರು ಈ ಬೇಸಿಗೆಯಲ್ಲಿ ಉಚಿತ ಸೂರ್ಯನ ರಕ್ಷಣೆಯನ್ನು ಪಡೆಯುತ್ತಾರೆ ಎಂದು ಗಾರ್ಡಿಯನ್ ವರದಿ ಮಾಡಿದೆ.

ಮತ್ತಷ್ಟು ವೈರಲ್​​​ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ