Father’s day 2023: ಸಿಂಗಲ್ ಪೇರೆಂಟ್ ತಂದೆಯಂದಿರಿಗೆ ಮಾನಸಿಕ ಆರೋಗ್ಯ ಸಲಹೆಗಳು

ಈ ಬಾರಿಯ ವಿಶ್ವ ಅಪ್ಪಂದಿರ ದಿನದ ಪ್ರಯುಕ್ತ, ಸಿಂಗಲ್ ಪೇರೆಂಟ್ ತಂದೆಯಂದಿರು ತಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ತಜ್ಞರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

Father’s day 2023: ಸಿಂಗಲ್ ಪೇರೆಂಟ್ ತಂದೆಯಂದಿರಿಗೆ ಮಾನಸಿಕ ಆರೋಗ್ಯ ಸಲಹೆಗಳು
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 17, 2023 | 4:48 PM

ಸಾಮಾನ್ಯವಾಗಿ, ಮಕ್ಕಳ ಪಾಲನೆಯಲ್ಲಿ ಪೋಷಕರಿಬ್ಬರೂ ಸಮಾನ ಪಾತ್ರವನ್ನು ವಹಿಸುತ್ತಾರೆ. ಆದರೆ ಏಕಪೋಷಕತ್ವದಲ್ಲಿ ತಾಯಿ ಅಥವಾ ತಂದೆ ಮಕ್ಕಳನ್ನು ಒಬ್ಬಂಟಿಯಾಗಿ ಬೆಳೆಸುವುದು ತುಂಬಾ ಕಷ್ಟಕರವಾಗಿರುತ್ತದೆ. ಸಹಜವಾಗಿ ಒಂಟಿ ತಾಯಿಗೆ ಮಕ್ಕಳನ್ನು ನೋಡಿಕೊಳ್ಳುವುದು ಸ್ವಲ್ಪ ಸುಲಭವಾಗಬಹುದು, ಆದರೆ ಒಬ್ಬ ತಂದೆಗೆ ಪರಿಪೂರ್ಣ ಪೋಷಕತ್ವವು ಸವಾಲಿನ ಕೆಲಸವಾಗಿದೆ. ಕೆಲಸ ಕಾರ್ಯ ಮತ್ತು ಪೋಷಕ ಜವಬ್ದಾರಿ ಇವೆಲ್ಲವನ್ನು ಸರಿಯಾಗಿ ತೂಗಿಸಿಕೊಂಡು ಹೋಗಬೇಕು. ಈ ಎಲ್ಲಾ ಒತ್ತಡಗಳು ಸಿಂಗಲ್ ಪೇರೆಂಟ್ ತಂದೆಯ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದ್ದರಿಂದ ಈ ಎಲ್ಲಾ ಒತ್ತಡದ ನಡುವೆ ಸಿಂಗಲ್ ಪೇರೆಂಟ್ ತಂದೆಯು ತನ್ನ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯವಾಗಿರುತ್ತದೆ. ಇದು ಅವರ ಮಕ್ಕಳ ಯೋಗಕ್ಷೇಮಕ್ಕೂ ಪ್ರಯೋಜನಕಾರಿಯಾಗಿದೆ. ಈ ಬಾರಿಯ ವಿಶ್ವ ಅಪ್ಪಂದಿರ ದಿನದ ಪ್ರಯುಕ್ತ ಏಕಪೋಷಕತ್ವದಲ್ಲಿ ಮಕ್ಕಳನ್ನು ಬೆಳೆಸುತ್ತಿರುವ ಅಪ್ಪಂದಿರು ತಮ್ಮ ಮಾನಸಿಕ ಯೋಗಕ್ಷೇಮವನ್ನು ಸರಿಯಾದ ರೀತಿಯಲ್ಲಿ ಕಾಪಾಡಿಕೊಳ್ಳಲು ತಜ್ಞರು ಕೆಲವೊಂದು ಮಾನಸಿಕ ಆರೋಗ್ಯ ಸಲಹೆಗಳನ್ನು ನೀಡಿದ್ದಾರೆ.

ವರ್ತೂರಿನ ಮಣಿಪಾಲ್ ಆಸ್ಪತ್ರೆಯ ಸಮಾಲೋಚಕ ಮನೋವೈದ್ಯೆ ಡಾ. ಪಲ್ಲವಿ ಜೋಶಿ ಹೆಚ್.ಟಿ ಲೈಫ್​​​ಸ್ಟೈಲ್​ಗೆ ನೀಡದ ಸಂದರ್ಶನದಲ್ಲಿ ಸಿಂಗಲ್ ಪೇರೆಂಟ್ ತಂದೆಯರಿಗಾಗಿ ಮಾಸಿಕ ಆರೋಗ್ಯದ ಸಲಹೆಗಳನ್ನು ನೀಡಿದ್ದಾರೆ.

ನಿಮಗಾಗಿ ಸಮಯ ಮಾಡಿಕೊಳ್ಳಿ:

ಮಕ್ಕಳ ಏಕಪೋಷಕತ್ವದಲ್ಲಿ ತೊಡಗಿರುವ ಅಪ್ಪಂದಿರು ತಮಗಾಗಿ ಸಮಯವನ್ನು ಮೀಸಲಿಡಬೇಕು. ಅದು ಪುಸ್ತಕ ಓದುವುದಾಗಲಿ, ಸ್ನೇಹಿತರೊಂದಿಗೆ ಸಮಯ ಕಳೆಯುವುದಾಗಲಿ ಮಾಡುತ್ತಿರಬೇಕು. ಅಥವಾ ಒಂದು ಕಪ್ ಕಾಫಿ ಕುಡಿಯುತ್ತಾ ಪ್ರಕೃತಿ ಸೌಂದರ್ಯವನ್ನು ಒಬ್ಬರೇ ಆನಂದಿಸಿ. ಜೀವನದ ದೃಷ್ಟಿಕೋನವನ್ನು ಪಡೆಯಲು ಈ ವೈಯಕ್ತಿಕ ಸಮಯವು ಬಹಳ ಅಮೂಲ್ಯವಾಗಿದೆ.

ಉತ್ತಮ ಪೋಷಕರಾಗಿ:

ಪರಿಪೂರ್ಣತೆಯ ಗುರಿಯನ್ನು ಹೊಂದುವ ಬದಲು ಪ್ರೀತಿಯ ಮತ್ತು ಉತ್ತಮ ತಂದೆಯಾಗಲು ಪ್ರಯತ್ನಿಸಿ. ಎಷ್ಟೇ ಕೆಲಸವಿದ್ದರೂ ನಿಮ್ಮ ಮಕ್ಕಳೊಂದಿಗೆ ಸಮಯ ಕಳೆಯಿರಿ. ಅವರಿಗಾಗಿ ದಿನದಲ್ಲಿ ಒಂದಿಷ್ಟು ಸಮಯವನ್ನು ಮೀಸಲಿಡಿ. ಮುಕ್ತ ಮತ್ತು ಪ್ರಾಮಾಣಿಕ ಸಂವಹನದ ಮೂಲಕ ನಿಮ್ಮ ಮಗುವಿನೊಂದಿಗೆ ಬಲವಾದ ಸಂಬಂಧವನ್ನು ರೂಪಿಸಿ. ಇದು ಮಕ್ಕಳ ಪರಿಪೂರ್ಣ ಬೆಳವಣಿಗೆಗೆ ಸಹಕಾರಿಯಾಗಿದೆ.

ಸಮತೋಲಿತ ಜೀವನ ಶೈಲಿಯನ್ನು ಕಾಪಾಡಿಕೊಳ್ಳಿ:

ನಿಯಮಿತ ವ್ಯಾಯಾಮ, ಪೌಷ್ಟಿಕಾಂಶಭರಿತ ಊಟ, ಆರೋಗ್ಯಕರ ನಿದ್ರೆಯನ್ನು ಮಾಡುವ ಮೂಲಕ ದೈಹಿಕ ಯೋಗಕ್ಷೇಮಕ್ಕೆ ಆದ್ಯತೆ ನೀಡಿ. ಸಮತೋಲಿತ ಜೀವನಶೈಲಿಯು ನಿಮ್ಮ ಒಟ್ಟಾರೆ ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಸುಧಾರಿಸುತ್ತದೆ.

ಅಗತ್ಯವಿದ್ದಲ್ಲಿ ವೃತ್ತಿಪರರ ಸಹಾಯವನ್ನು ಪಡೆದುಕೊಳ್ಳಿ:

ನೀವು ಅತಿಯಾಗಿ ಒತ್ತಡ, ಆತಂಕವನ್ನು ಅನುಭವಿಸುತ್ತಿದ್ದರೆ, ಮನೋವೈದ್ಯರು ಅಥವಾ ಮಾನಸಿಕ ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸಿ. ಸರಿಯಾದ ಮಾನಸಿಕ ಚಿಕಿತ್ಸೆಯು ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಮತ್ತು ನಿಮ್ಮ ಒಟ್ಟಾರೆ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಮಾನಸಿಕ ಆರೋಗ್ಯ ತಜ್ಞರಾದ ಸತ್ಯಜ್ಯೋತ್ ಅವರು ಸಿಂಗಲ್ ಪೇರೆಂಟ್ ತಂದೆಯರಿಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ಸಲಹೆಗಳನ್ನು ನೀಡಿದ್ದಾರೆ. ಹಾಗೂ ಅವರು ಹೇಳುತ್ತಾರೆ, ಸಿಂಗಲ್ ಪೇರೆಂಟ್ ತಂದೆ ಮಗುವಿನೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸಲು ಕಲಿಯಬೇಕು. ಸಾಮಾನ್ಯವಾಗಿ ತಾಯಂದಿರು ಮಕ್ಕಳೊಂದಿಗೆ ಸಂವಹನ ನಡೆಸುತ್ತಾರೆ ಮತ್ತು ತಂದೆಯಂದಿರು ಅಷ್ಟಾಗಿ ಮಕ್ಕಳೊಂದಿಗೆ ಸಮಯ ಕಳೆಯುವುದಿಲ್ಲ. ಆದರೆ ಈ ನೀತಿಯನ್ನು ಬದಲಾಯಿಸಬೇಕಿದೆ. ಉತ್ತಮ ಪೋಷಕತ್ವವನ್ನು ನಿರ್ವಹಿಸಬೇಕಾದರೆ ಪರಿಣಾಮಕಾರಿ ಸಂವಹನವು ಅತ್ಯಗತ್ಯ.”

ಸ್ವಯಂ ಆರೈಕೆಗೆ ಆದ್ಯತೆ ನೀಡಿ:

ನಿಮ್ಮ ದೈನಂದಿನ ದಿನಚರಿಯಲ್ಲಿ ನಿಮ್ಮ ಸ್ವಯಂ ಆರೈಕೆಯ ಬಗ್ಗೆ ಸ್ವಲ್ಪ ಗಮನ ಹರಿಸುವುದು ಮುಖ್ಯ. ವ್ಯಾಯಾಯ, ಧ್ಯಾನ ಮಾಡುವುದು, ಪುಸ್ತಕಗಳನ್ನು ಓದುವುದು ಮತ್ತು ಪ್ರಕೃತಿಯ ಜೊತೆಗೆ ಸಮಯ ಕಳೆಯುವುದು ಜೊತೆಗೆ ನಿಮಗೆ ಸಂತೋಷ ಮತ್ತು ವಿಶ್ರಾಂತಿಯನ್ನು ನೀಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಈ ರೀತಿಯ ಸ್ವಯಂ ಆರೈಕೆ ಚಟುವಟಿಕೆಗಳು ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಕಾರಿಯಾಗಿದೆ.

ಬೆಂಬಲವನ್ನು ಹುಡುಕುವುದು:

ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರಂತಹ ವಿಶ್ವಾಸಾರ್ಹ ಜನರೊಂದಿಗೆ ಬೆರೆಯಿರಿ. ಇಂತಹ ವಿಶ್ವಾಸಾರ್ಹ ಜನರು ನಿಮ್ಮ ಕಷ್ಟಕ್ಕೆ ಸ್ಪಂದಿಸುವುದರ ಜೊತೆಗೆ ನಿಮಗೆ ಭಾವನಾತ್ಮಕ ಬೆಂಬಲವನ್ನು ನೀಡುತ್ತಾರೆ. ನಿಮ್ಮ ಮಾನಸಿಕ ತೊಳಲಾಟವನ್ನು ಅವರ ಜೊತೆ ಹಂಚಿಕೊಳ್ಳುವ ಮೂಲಕ ಮನಸ್ಸನ್ನು ಹಗುರ ಮಾಡಿಕೊಳ್ಳಬಹುದು.

ಇದನ್ನೂ ಓದಿ:Fathers Day 2023: ಅಪ್ಪಂದಿರ ದಿನದಂದು ನಿಮ್ಮ ತಂದೆಗೆ ರುಚಿಕರವಾದ ಪಾಕಗಳನ್ನು ತಯಾರಿಸಿ!

ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಿ:

ಪೌಷ್ಟಿಕಾಂಶಭರಿತ ಹಾಗೂ ಆರೋಗ್ಯಕರ ಊಟದಿಂದ ನಿಮ್ಮನ್ನು ಪೋಷಿಸುವ ಮೂಲಕ ದೈಹಿಕ ಯೋಗಕ್ಷೇಮಕ್ಕೆ ಗಮನಕೊಡಿ. ಸಾಕಷ್ಟು ನಿದ್ರೆಯನ್ನು ಪಡೆಯಿರಿ, ನಿಯಮಿತ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಿ. ಈ ರೀತಿಯ ಆರೋಗ್ಯಕರ ಜೀವನಶೈಲಿಯು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಧನಾತ್ಮಕವಾಗಿ ಪ್ರಭಾವ ಬೀರುತ್ತದೆ. ಮತ್ತು ಒತ್ತಡವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ನಿಮ್ಮನ್ನು ಸಜ್ಜುಗೊಳಿಸುತ್ತದೆ.

ಒತ್ತಡವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ:

ಏಕಪೋಷಕತ್ವವು ಒತ್ತಡದಿಂದ ಕೂಡಿರುತ್ತದೆ. ಮಕ್ಕಳ ಪಾಲನೆಯಿಂದ ಹಿಡಿದು ಎಲ್ಲಾ ಜವಬ್ದಾರಿಗಳನ್ನು ನೀವೊಬ್ಬರೇ ನೋಡಿಕೊಳ್ಳಬೇಕಾಗಿರುತ್ತದೆ. ಹಾಗಾಗಿ ಧ್ಯಾನ, ಆಳವಾದ ಉಸಿರಾಟದ ವ್ಯಾಯಾಮಗಳು, ಪುಸ್ತಕ ಓದುವುದು, ಮನಸ್ಸಿನ ಶಾಂತತೆಯನ್ನು ಉತ್ತೇಜಿಸುವಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಒತ್ತಡವನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು.

ರಚನಾತ್ಮಕ ದಿನಚರಿಯನ್ನು ಸ್ಥಾಪಿಸಿ:

ನಿಮಗಾಗಿ ಮತ್ತು ನಿಮ್ಮ ಮಗುವಿಗಾಗಿ ರಚನಾತ್ಮಕ ದಿನಚರಿಯನ್ನು ರೂಪಿಸಿಕೊಳ್ಳಿ. ಊಟ, ಮಲಗುವ ಸಮಯ ಮತ್ತು ಇತರ ಚಟುವಟಿಕೆಗಳಿಗೆ ನಿಯಮಿತ ವೇಳಾಪಟ್ಟಿಯನ್ನು ಹೊಂದಿಸಿ. ಇದು ನಿಮ್ಮ ದೈನಂದಿನ ಜವಬ್ದಾರಿಯನ್ನು ಸರಾಗಗೊಳಿಸಲು ಸಹಾಯ ಮಾಡುತ್ತದೆ.

ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ನಿಮಗೆ ಮಾತ್ರವಲ್ಲದೆ ನಿಮ್ಮ ಮಕ್ಕಳ ಯೋಗಕ್ಷೇಮಕ್ಕೂ ಪ್ರಯೋಜನಕಾರಿಯಾಗಿದೆ. ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ ಮೂಲಕ ನಿಮ್ಮ ಏಕಪೋಷಕತ್ವದ ಪ್ರಯಾಣವನ್ನು ಉತ್ತಮವಾಗಿ ನಡೆಸಿಕೊಂಡು ಹೋಗಬಹುದು ಎಂದು ಸತ್ಯಜ್ಯೋತ್ ಹೇಳುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 4:47 pm, Sat, 17 June 23

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್