Success Mantra: ಮುಖೇಶ್‌ ಅಂಬಾನಿಯವರಿಂದ ಕಲಿಯಬೇಕಾದ ಯಶಸ್ಸಿನ ಪಾಠಗಳಿವು

ಜೀವನದಲ್ಲಿ ಪ್ರತಿಯೊಬ್ಬರು ಯಶಸ್ಸು ಸಾಧಿಸಬೇಕು ಎಂದು ಬಯಸುತ್ತಾರೆ. ಅದರಲ್ಲಿ ಕೆಲವರು ಅನೇಕ ಸಮಸ್ಯೆ, ಸಂಕಷ್ಟಗಳು ಎದುರಾಗುವ ಕಾರಣದಿಂದ ಗುರಿ ಸಾಧನೆಯ ಮಾರ್ಗವನ್ನೇ ಬಿಟ್ಟು ಬಿಡುತ್ತಾರೆ. ಆದರೆ ಕಠಿಣ ಪರಿಶ್ರಮ, ಧನಾತ್ಮಕ ಆಲೋಚನೆಗಳಿಲ್ಲದೆ ಎಂದಿಗೂ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ. ನೀವು ಕೂಡಾ ಲೈಫಲ್ಲಿ ಸಕ್ಸಸ್‌ ಆಗ್ಬೇಕು, ಏನಾದ್ರೂ ಸಾಧನೆ ಮಾಡ್ಬೇಕು ಅಂತ ಅಂದುಕೊಂಡಿದ್ದೀರಾ? ಹಾಗಿದ್ರೆ ಏಷ್ಯಾದ ಶ್ರೀಮಂತ ವ್ಯಕ್ತಿಯಾದ ಮುಖೇಶ್‌ ಅಂಬಾನಿಯವರ ಯಶಸ್ಸಿನ ಮಂತ್ರವನ್ನು ಫಾಲೋ ಮಾಡುವ ಮೂಲಕ ನೀವು ಕೂಡಾ ಸಾಧನೆಯ ಹಾದಿಯಲ್ಲಿ ಸಾಗಿ.

Success Mantra: ಮುಖೇಶ್‌ ಅಂಬಾನಿಯವರಿಂದ ಕಲಿಯಬೇಕಾದ ಯಶಸ್ಸಿನ ಪಾಠಗಳಿವು
ಮುಕೇಶ್‌ ಅಂಬಾನಿ
Image Credit source: Getty Images

Updated on: May 13, 2025 | 7:04 PM

ಮುಕೇಶ್‌ ಅಂಬಾನಿ (Mukesh Ambani) ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ, ಖ್ಯಾತ ಉದ್ಯಮಿ, ರಿಲಯನ್ಸ್‌ ಇಂಡಸ್ಟ್ರೀಸ್‌ನ  ಮುಖ್ಯಸ್ಥ ಮುಕೇಶ್‌ ಅಂಬಾನಿ ಭಾರತ ಮಾತ್ರವಲ್ಲ ಏಷ್ಯಾದ ಶ್ರೀಮಂತ ವ್ಯಕ್ತಿ. ಇವರು ತಮ್ಮ ವ್ಯವಹಾರ ಮಾತ್ರವಲ್ಲದೆ ವೈಯಕ್ತಿಕ ಬದುಕಿನ ಕಾರಣದಿಂದಲೂ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಇವರು ಕಠಿಣ ಪರಿಶ್ರಮ, ಸಮರ್ಪಿತ ಮನೋಭಾವನೆ ಸಾಧಿಸುವ ಹಂಬಲದಿಂದಲೇ  ಇಂದು ಯಶಸ್ವಿ ಉದ್ಯಮಿಯಾಗಿ ಬೆಳೆದು ನಿಂತಿದ್ದು, ಇವರಂತೆಯೇ ತಾವು ಕೂಡಾ ಜೀವನದಲ್ಲಿ ಯಶಸ್ಸು ಗಳಿಸಬೇಕು ಎಂದು ಹಲವರು ಬಯಸುತ್ತಾರೆ. ನೀವು ಕೂಡಾ ಜೀವನದಲ್ಲಿ ಯಶಸ್ಸನ್ನು (Success) ಸಾಧಿಸಬೇಕು ಅಂದುಕೊಂಡಿದ್ದೀರಾ? ಹಾಗಿದ್ರೆ ಮುಕೇಶ್‌ ಅಂಬಾನಿಯವರ ಸಕ್ಸಸ್‌ ಮಂತ್ರಗಳನ್ನು ತಪ್ಪದೆ ಪಾಲಿಸಿ.

ಮುಖೇಶ್‌ ಅಂಬಾನಿಯವರಿಂದ ಕಲಿಯಬೇಕಾದ ಯಶಸ್ಸಿನ ಪಾಠಗಳಿವು:

ಗುರಿಯತ್ತ ಯಾವಾಗಲೂ ಗಮನವಿರಲಿ: ಜೀವನದಲ್ಲಿ ಅನೇಕ ಸಮಸ್ಯೆಗಳು, ಸಂಕಷ್ಟಗಳು ಬರುತ್ತವೆ. ಇದರಿಂದಾಗಿ ಜನರು ತಮ್ಮ ಗುರಿಯನ್ನು ಮರೆತುಬಿಡುತ್ತಾರೆ ಅಥವಾ ಕಷ್ಟಗಳನ್ನು ಎದುರಿಸಲಾಗದೆ ಗುರಿಯಿಂದ ದೂರ ಸರಿಯಲು ಪ್ರಾರಂಭಿಸುತ್ತಾರೆ. ಹೀಗೆ ಮಾಡುವುದರಿಂದ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ನಿಮ್ಮ ಗಮನ ಯಾವಾಗಲೂ ಗುರಿಯತ್ತ ಇದ್ದಾಗ ಮಾತ್ರ ನೀವು ಯಶಸ್ಸು ಸಾಧಿಸಲು ಸಾಧ್ಯ. ಮುಖೇಶ್ ಅಂಬಾನಿಯವರ ಯಶಸ್ಸಿನ ಹಿಂದಿನ ದೊಡ್ಡ ರಹಸ್ಯವೆಂದರೆ ಅವರು ಆರಂಭದಲ್ಲಿಯೇ ತಾವು ಏನು ಮಾಡಬೇಕೆಂದು ನಿರ್ಧರಿಸಿದ್ದರು ಮತ್ತು ಅವರು ತಮ್ಮ  ಗುರಿಯತ್ತ ಸಾಗಲು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ. ಇವರಂತೆ ನೀವು ಕೂಡ ಶ್ರೀಮಂತರಾಗಲು ಮತ್ತು ಯಶಸ್ವಿಯಾಗಲು ಬಯಸಿದರೆ, ಮೊದಲು ನಿಮ್ಮ ಗುರಿಯನ್ನು ಹೊಂದಿಸಿಕೊಳ್ಳಿ ಮತ್ತು ಅದರ ಮೇಲೆ ನಿರಂತರವಾಗಿ ಕೆಲಸ ಮಾಡುತ್ತಿರಿ.

 ಸಕಾರಾತ್ಮಕ ಚಿಂತನೆಯನ್ನು ರೂಢಿಸಿಕೊಳ್ಳಿ: ಯಾವುದೇ ಕೆಲಸದ ಬಗ್ಗೆ ನಿಮ್ಮ ಆಲೋಚನೆ ಸಕಾರಾತ್ಮಕವಾಗಿದ್ದಾಗ ಮಾತ್ರ ನೀವು ಆ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ನನ್ನಿಂದ ಈ ಕೆಲಸ ಸಾಧ್ಯವೆ, ಇದು ನನ್ನಿಂದ ಸಾಧ್ಯವೇ ಅಂತೆಲ್ಲಾ ನೀವು ನಕಾರಾತ್ಮಕವಾಗಿ ಯೋಚನೆ ಮಾಡಿದರೆ ನೀವು ಎಂದಿಗೂ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಆದ್ದರಿಂದ, ನಕಾರಾತ್ಮಕ ವಿಷಯಗಳಿಗೆ ಗಮನ ಕೊಡುವ ಬದಲು, ಅವುಗಳಿಂದ ದೂರವಿರಿ. ಮತ್ತು ನಾನು ಸಕಾರಾತ್ಮಕ ಆಲೋಚನೆಯನ್ನು ಬೆಳೆಸಿಕೊಳ್ಳುವ ಮೂಲಕ ಜೀವನದಲ್ಲಿ ಯಶಸ್ಸನ್ನು ಸಾಧಿಸುವತ್ತ ಹೆಜ್ಜೆಯಿಡಿ.

ಇದನ್ನೂ ಓದಿ
ನಿಮ್ಮಿಷ್ಟದ ಬಣ್ಣದ ಲೆಹೆಂಗಾದಿಂದ ತಿಳಿಯಿರಿ ನಿಮ್ಮ ವ್ಯಕ್ತಿತ್ವ
7 ದಿನ ರಾತ್ರಿ ವೈ-ಫೈ ರೂಟರ್ ಮಾಡಿದ್ರೆ ತಲೆನೋವು ಬರುವುದಿಲ್ಲ
ಮದುವೆಯ ಬಳಿಕ ತೂಕ ಹೆಚ್ಚಾಗಬಾರದೆಂದರೆ ಹೀಗೆ ಮಾಡಿ
ಪತಂಜಲಿಯ ಈ ಔಷಧಿಯ ಸೇವನೆಯಿಂದ ಕೊಲೆಸ್ಟ್ರಾಲ್‌ನಿಂದ ಮುಕ್ತಿಪಡೆಯಬಹುದಂತೆ

ಹೊಸ ವಿಷಯಗಳನ್ನು ಕಲಿಯುತ್ತಿರಿ: ನಿಮ್ಮ ಸುತ್ತಮುತ್ತಲಿನವರಿಂದ ಮತ್ತು ಅನುಭವಿ ವ್ಯಕ್ತಿಗಳಿಂದ  ಯಾವಾಗಲೂ ಹೊಸ ವಿಷಯಗಳನ್ನು ಕಲಿಯುತ್ತಿರಿ. ಆಗ ಮಾತ್ರ ನೀವು ನಿಮ್ಮನ್ನು ಯಾವಾಗಲೂ ಪ್ರಗತಿಯ ಹಾದಿಯಲ್ಲಿ ಇರಿಸಿಕೊಳ್ಳಲು ಸಾಧ್ಯವಾಗುತ್ತದೆ. ನಾನು ಏಕೆ ಇತರರಿಂದ ಕಲಿಯಬೇಕು ಎಂಬ ಅಹಂಕಾರದ ಭಾವನೆಯನ್ನು ಹೊಂದಿರಬಾರದು.

ಇದನ್ನೂ ಓದಿ: ಮಹಾಭಾರತ ಕಾಲದಲ್ಲಿ ಅಖಂಡ ಭಾರತ ಹೇಗಿತ್ತು ಗೊತ್ತಾ?

ಎಂದಿಗೂ ಅಹಂಕಾರ ಪಡದಿರಿ: ನಿಮ್ಮ ಅಧಿಕಾರ ಮತ್ತು ಹಣ ಹೆಚ್ಚಾದಂತೆ, ನಿಮ್ಮ ಅಹಂಕಾರವೂ ಹೆಚ್ಚಾದರೆ, ನಿಮ್ಮ ವ್ಯಕ್ತಿತ್ವಕ್ಕೆ ಅದೊಂದು ಕಪ್ಪು ಚುಕ್ಕೆಯಂತೆ. ಆದ್ದರಿಂದ ಅಹಂಕಾರ ಪಡದೆ ಮುಕೇಶ್‌ ಅಂಬಾನಿಯವರಂತೆ ಎಲ್ಲರೊಂದಿಗೆ ಉದಾರ ಮನೋಭಾವದಿಂದ ವರ್ತಿಸಿ. ಈ ಗುಣ ಖಂಡಿತವಾಗಿಯೂ ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುವುದು ನಿಜ.

ವೈಫಲ್ಯಗಳಿಗೆ ಹೆದರಬೇಡಿ: ಯಶಸ್ಸು ಎನ್ನುವುದು ರಾತ್ರೋರಾತಿ ಸಿಗುವುದಿಲ್ಲ ಅಥವಾ ಒಂದೇ ಪ್ರಯತ್ನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಿಲ್ಲ. ಈ ಸಾಧನೆಯ ಹಾದಿಯಲ್ಲಿ ಸಾಕಷ್ಟು ಅಡೆತಡೆ, ವೈಫಲ್ಯಗಳು ಎದುರಾಗುತ್ತವೆ. ಈ ವೈಫಲ್ಯಗಳಿಗೆ ಹೆದರದೆ ಮುನ್ನುಗ್ಗಿದರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ.

ಸೂಕ್ತ ಜೀವನ ಸಂಗಾತಿಯನ್ನು ಆರಿಸಿ: ಮದುವೆಯ ನಂತರ ವೃತ್ತಿಜೀವನದಲ್ಲಿ ಇನ್ನಷ್ಟು ಏಳಿಗೆಯಾಗಬೇಕು ಎಂದು ಬಯಸಿದರೆ ಮೊದಲು ನೀವು ನಿಮಗೆ ಬೆಂಬಲವಾಗಿ ನಿಲ್ಲುವ ಸೂಕ್ತ ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ಮುಖ್ಯ.  ಮುಖೇಶ್ ಅಂಬಾನಿಯವರ ವ್ಯವಹಾರವು ಎಷ್ಟೇ ಏರಿಳಿತಗಳನ್ನು ಎದುರಿಸಿದರೂ, ನೀತಾ ಅಂಬಾನಿ ಯಾವಾಗಲೂ ಅವರ ಬೆಂಬಲವಾಗಿ ನಿಂತಿದ್ದಾರೆ. ಹೀಗೆ ನಿಮ್ಮ ಯಶಸ್ಸಿನಲ್ಲಿ ನಿಮ್ಮ ಜೀವನ ಸಂಗಾತಿಯ ಪಾತ್ರವೂ ಅಪಾರ. ಆದ್ದರಿಂದ, ನಿಮ್ಮ ಜೀವನ ಸಂಗಾತಿಯನ್ನು ಬಹಳ ಎಚ್ಚರಿಕೆಯಿಂದ ಆರಿಸಿಕೊಳ್ಳುವುದು ಬಹಳ ಮುಖ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:02 pm, Tue, 13 May 25