ಕಳೆದ ಕೆಲವು ದಿನಗಳಿಂದ ಬಿಸಿಲಿನ ಧಗೆಯು ಹೆಚ್ಚಾಗುತ್ತಿದ್ದು, ಹೀಗಾಗಿ ಹೊರಗಡೆ ಕಾಲಿಡಲು ಸಾಧ್ಯವಾಗುತ್ತಿಲ್ಲ. ಈ ಬಿಸಿಲಿನ ಝಳಕ್ಕೆ ದೇಹವನ್ನು ತಂಪಾಗಿಸುವ ಪಾನೀಯ (Drinks) ಗಳನ್ನು ಸೇವಿಸುವ ಬಯಕೆಯಾಗುವುದು ಸಹಜ. ಹೀಗಾಗಿ ಹೆಚ್ಚಿನವರು ಮಾರುಕಟ್ಟೆಯಲ್ಲಿ ಸಿಗುವ ಪಾನೀಯಗಳ ಮೊರೆ ಹೋಗುತ್ತಾರೆ. ಆದರೆ ಮನೆಯಲ್ಲಿ ಸೋರೆಕಾಯಿ (Bottle Gourd) ಯಿದ್ದರೆ ಈ ಬೇಸಿಗೆಗೆ ಇದರ ಜ್ಯೂಸ್ ಮಾಡಿ ಕುಡಿಯುವುದು ಒಳ್ಳೆಯದು. ಈ ತರಕಾರಿಯ ಜ್ಯೂಸ್ (Juice) ದೇಹವನ್ನು ತಂಪಾಗಿಸುವುದಲ್ಲದೆ, ರಕ್ತದೊತ್ತಡ (Blood Pressure) ವನ್ನು ಕಡಿಮೆ ಮಾಡುತ್ತದೆ ಹೀಗೆ ಹತ್ತಾರು ಆರೋಗ್ಯ ಪ್ರಯೋಜನಗಳಿವೆ. ಹಾಗಾದ್ರೆ ಮನೆಯಲ್ಲೇ ಸುಲಭವಾಗಿ ಸೋರೆಕಾಯಿ ಜ್ಯೂಸ್ ಮಾಡುವ ಸಿಂಪಲ್ ವಿಧಾನ ಇಲ್ಲಿದೆ.
* ಒಂದು ಕಪ್ ಸೋರೆಕಾಯಿ
* ಒಂದು ಹಿಡಿ ಪುದೀನ
* ಅರ್ಧ ಚಮಚ ಜೀರಿಗೆ ಪುಡಿ
* ಅರ್ಧ ಚಮಚ ಕಾಳು ಮೆಣಸಿನ ಪುಡಿ
* ಒಂದು ಇಂಚು ಶುಂಠಿ
* ರುಚಿಗೆ ತಕ್ಕಷ್ಟು ಉಪ್ಪು
* ಎರಡು ಚಮಚ ನಿಂಬೆ ರಸ
* ನೀರು
* ಮಂಜುಗಡ್ಡೆ
ಇದನ್ನೂ ಓದಿ: ಸ್ಲೀಪ್ ಡೈವೋರ್ಸ್ ನಲ್ಲಿ ಚೀನಾ, ದಕ್ಷಿಣ ಕೊರಿಯಾವನ್ನೇ ಹಿಂದಿಕ್ಕಿದ ಭಾರತ
* ಮೊದಲನೆಯದಾಗಿ ಒಂದು ಮಿಕ್ಸಿ ಜಾರಿಗೆ ಒಂದು ಕಪ್ ಸಿಪ್ಪೆ ಸುಲಿದು ಕತ್ತರಿಸಿದ ಸೋರೆಕಾಯಿಯನ್ನು ಹಾಕಿ ಕೊಳ್ಳಿ.
* ತದನಂತರ ಒಂದು ಹಿಡಿ ಪುದೀನಾ, ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ, ಒಂದು ಇಂಚು ಶುಂಠಿ, ನಿಂಬೆ ರಸ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ನೀರನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
* ಒಂದು ಲೋಟಕ್ಕೆ ಈ ಸೋರೆಕಾಯಿ ಮಿಶ್ರಣ ಸುರಿದು, ಐಸ್ ಕ್ಯೂಬ್ ಸೇರಿಸಿಕೊಂಡರೆ ಸೋರೆಕಾಯಿ ಜ್ಯೂಸ್ ಸಿದ್ಧ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:22 am, Mon, 24 March 25