Summer Precautions: ಬೇಸಿಗೆ ಕಾಲದಲ್ಲಿ ಸುಡುವ ಬಿಸಿಲಿನಿಂದ ಹೀಗಿರಲಿ ನಿಮ್ಮ ರಕ್ಷಣೆ

|

Updated on: Mar 06, 2023 | 7:00 AM

ಸೂರ್ಯನಿಗೆ ಒಡ್ಡಿಕೊಳ್ಳುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇದಕ್ಕಾಗಿ ನೀವು ಪೂರ್ವಭಾವಿಯಾಗಿ ಸಿದ್ಧತೆ ಹೀಗಿರಲಿ.

Summer Precautions: ಬೇಸಿಗೆ ಕಾಲದಲ್ಲಿ ಸುಡುವ ಬಿಸಿಲಿನಿಂದ ಹೀಗಿರಲಿ ನಿಮ್ಮ ರಕ್ಷಣೆ
ಪ್ರಾತಿನಿಧಿಕ ಚಿತ್ರ
Image Credit source: publictv.in
Follow us on

ಮಾರ್ಚ್​​ ತಿಂಗಳಿನಿಂದಲೇ ಉರಿ ಬಿಸಿಲು (Summer) ಶುರುವಾಗಿದೆ. ಈಗಲೇ ಇಷ್ಟೊಂದು ಬಿಸಿಲಿರುವಾಗಿ ಇನ್ನು ಏಪ್ರಿಲ್, ಮೇ ತಿಂಗಳಲ್ಲಿ ಹೇಗಿರುತ್ತೆ ಎಂಬ ಆತಂಕ ಹಲವರದ್ದು. ಕಳೆದ 100 ವರ್ಷಗಳಲ್ಲಿ ಕಾಣದ ಬಿಸಿಲನ್ನು ನಾವು 2022ರಲ್ಲಿ ನೋಡಿದ್ದೇವೆ. ಈಗಾಗಲೇ ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಜನರು ತಂಪು ಪಾನೀಯ, ಛತ್ರಿಗಳ ಮೊರೆ ಹೋಗುತ್ತಿದ್ದಾರೆ. ಬಿಸಿಲು ಮತ್ತು ಬೆವರು ಇವೆರಡು ತ್ವಚೆಯನ್ನು ಹಾಳು ಮಾಡುತ್ತದೆ. ಇದರ ಜೊತೆಗೆ ತ್ವಚೆಯನ್ನು ಸೂರ್ಯನ ಬೆಳಕಿನಿಂದ ಕಾಪಾಡಿಕೊಳ್ಳುವುದು ಸಹ ತುಂಬಾ ಮುಖ್ಯವಾಗಿದೆ. ಸೂರ್ಯನಿಗೆ ಒಡ್ಡಿಕೊಳ್ಳುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇದಕ್ಕಾಗಿ ನೀವು ಪೂರ್ವಭಾವಿಯಾಗಿ ಸಿದ್ಧತೆಯನ್ನು ಮಾಡಿಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ: International Women’s Day 2023: ಮಹಿಳೆಯರೇ…! ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ

ಬಿಸಿಲಿನಿಂದ ರಕ್ಷಿಸಿಕೊಳ್ಳುವ ಮಾರ್ಗಗಳು

  1. ನಿರ್ಜಲೀಕರಣವನ್ನು ತಪ್ಪಿಸಲು ಬಾಯಾರಿಕೆಯಿಲ್ಲದಿದ್ದರೂ ಆಗಾಗ ನೀರು ಕುಡಿಯಿರಿ.
  2. ಮನೆಯಲ್ಲಿ ತಯಾರಿಸಿದ ಪಾನೀಯಗಳಾದ ನಿಂಬೆ ರಸ, ಮಜ್ಜಿಗೆ/ಲಸ್ಸಿ, ಹಣ್ಣಿನ ರಸಗಳನ್ನು ಸ್ವಲ್ಪ ಉಪ್ಪು ಸೇರಿಸಿ ಸೇವಿಸಿ.
  3. ತೆಳುವಾದ, ಸಡಿಲವಾದ, ಹತ್ತಿ ಬಟ್ಟೆಗಳನ್ನು ಧರಿಸಿ. ಹಾಗೆಯೇ ಹೊರಗೆ ಹೋಗುವಾಗ ಛತ್ರಿ, ಟೋಪಿ, ಟವೆಲ್ ಬಳಸಿ. ಮತ್ತು ಬಿಸಿಲು ನೇರವಾಗಿ ತಾಗದಂತೆ ನೋಡಿಕೊಳ್ಳಿ.
  4. ಬಿಸಿಲಿನ ಅವಧಿಯಲ್ಲಿ ಅಡುಗೆ ಮಾಡುವುದನ್ನು ತಪ್ಪಿಸಿ. ಅಡುಗೆ ಪ್ರದೇಶವನ್ನು ಸಮರ್ಪಕವಾಗಿ ಗಾಳಿ ಮಾಡಲು ಬಾಗಿಲು ಮತ್ತು ಕಿಟಕಿಗಳನ್ನು ತೆರೆದಿಡಿ.
  5. ಆಲ್ಕೋಹಾಲ್, ಚಹಾ, ಕಾಫಿ, ಕಾರ್ಬೊನೇಟೆಡ್ ತಂಪು ಪಾನೀಯಗಳು ಮತ್ತು ಹೆಚ್ಚಿನ ಪ್ರಮಾಣದ ಸಕ್ಕರೆಯೊಂದಿಗೆ ಪಾನೀಯಗಳನ್ನು ಕುಡಿಯುವುದನ್ನು ತಪ್ಪಿಸಿ. ಇವುಗಳು ಹೆಚ್ಚು ದೇಹದ ದ್ರವವನ್ನು ಕಳೆದುಕೊಳ್ಳಲು ಕಾರಣವಾಗಬಹುದು.
  6. ನಿಲ್ಲಿಸಿದ ವಾಹನದಲ್ಲಿ ಮಕ್ಕಳನ್ನು ಅಥವಾ ಸಾಕುಪ್ರಾಣಿಗಳನ್ನು ಬಿಡಬೇಡಿ. ಏಕೆಂದರೆ ವಾಹನದೊಳಗಿನ ತಾಪಮಾನವು ಅವರ ಜೀವಕ್ಕೆ ಅಪಾಯಕಾರಿ.
  7. ವಾಕರಿಕೆ ಅಥವಾ ವಾಂತಿ, ತಲೆನೋವು, ವಿಪರೀತ ಬಾಯಾರಿಕೆ, ಕಡು ಹಳದಿ ಮೂತ್ರದ ಜೊತೆಗೆ ಮೂತ್ರ ವಿಸರ್ಜನೆ ಕಡಿಮೆಯಾಗುವುದು, ತ್ವರಿತ ಉಸಿರಾಟ, ತ್ವರಿತ ಹೃದಯ ಬಡಿತದಂತಹ ಲಕ್ಷಣಗಳು ಕಂಡುಬಂದರೆ, ತಕ್ಷಣ ಹತ್ತಿರದ ವೈದ್ಯರನ್ನು ಸಂಪರ್ಕಿಸಿ.

ಮತ್ತಷ್ಟು ಜಿವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.