Womens Day 2023: ಮಹಿಳೆಯರಿಗೆ ಭರ್ಜರಿ ಕೊಡುಗೆ ನೀಡಿದ ಕರ್ನಾಟಕ ಪ್ರವಾಸೋದ್ಯಮ ಇಲಾಖೆ
48ನೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಮಹಿಳೆಯರಿಗೆ ಭರ್ಜರಿ ಕೊಡುಗೆಯನ್ನು ಘೋಷಿಸಿದೆ.
ಬೆಂಗಳೂರು: ಇದೇ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು (International Women’s Day) ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಮಹಿಳೆಯರಿಗೆ ಭರ್ಜರಿ ರಿಯಾಯಿತಿ ನೀಡಿದೆ. ಸರ್ಕಾರಿ ಹೋಟೆಲ್‌ಗಳಿಗೆ ಭೇಟಿ ನೀಡುವ ಮಹಿಳೆಯರಿಗೆ ವಿಶೇಷ ಕೊಡುಗೆಯನ್ನು ಪ್ರಕಟಿಸಿದ್ದು, ಹೋಟೆಲ್‌ಗಳ ರೂಮ್ ಬುಕ್ಕಿಂಗ್‌ಗಳಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ಘೋಷಿಸಿದೆ. ಇದರ ಜೊತೆಗೆ ಫುಡ್ ಮೇಲೂ ಸಹ ಶೇಕಡಾ 20 ರಷ್ಟು ಡಿಸ್ಕೌಂಟ್ ನೀಡಿದೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ(Women’s Day 2023) ಪ್ರಯುಕ್ತ ಕರ್ನಾಟಕ ಸರ್ಕಾರದ ಮಯೂರ ಗ್ರೂಪ್ ಆಫ್ ಹೊಟೇಲ್‌ಗಳಲ್ಲಿ ರೂಮ್ ಬುಕ್ಕಿಂಗ್‌ನಲ್ಲಿ ವಿಶೇಷ ಶೇಕಡಾ 50 ರಷ್ಟು ರಿಯಾಯಿತಿ ಮತ್ತು ಆಹಾರದ ಮೇಲೆ ಶೇಕಡಾ 20 ರಷ್ಟು ರಿಯಾಯಿತಿಯನ್ನು ಎಲ್ಲಾ ಮಹಿಳೆಯರಿಗೆ ನೀಡಲಾಗಿದೆ. ಮಾರ್ಚ್ 6 ರಿಂದ ಮಾರ್ಚ್ 10ರ ವರೆಗೆ ಈ ಕೊಡುಗೆಯನ್ನು ಸದುಪಯೋಗ ಪಡೆದುಕೊಳ್ಳಬಹುದು ಎಂದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ತಿಳಿಸಿದೆ.
ಇದನ್ನೂ ಓದಿ: Best Credit Cards for Women: ಮಹಿಳೆಯರಿಗೆ ಸೂಕ್ತವಾದ ಕ್ರೆಡಿಟ್ ಕಾರ್ಡ್ಗಳಿವು
ರಾಜ್ಯದ ಮೈಸೂರು, ಹಂಪಿ, ಶ್ರೀರಂಗಪಟ್ಟಣ, ಆಲಮಟ್ಟಿ, ಮಡಿಕೇರಿ, ನಂದಿ ಬೆಟ್ಟ, ವಿಜಯಪುರ ಹಾಗೂ ಊಟಿಯಲ್ಲೂ ಸಹ ಮಯೂರ ಹೋಟೆಲ್‌ಗಳಿವೆ. 06.03.2023 ರಿಂದ 10.03.2023 ರವರೆಗೆ ಈ ಆಫರ್ ಇರಲಿದ್ದು, ಸಿಂಗಲ್, ಕುಟುಂಬ ಅಥವಾ ಸ್ನೇಹಿತರೊಂದಿಗೆ ಪ್ರಯಾಣಿಸುವ ಮಹಿಳಾ ಪ್ರವಾಸಿಗರಿಗೆ 50% ರಿಯಾಯಿತಿ ನೀಡಲಾಗುತ್ತಿದೆ. ಆದ್ದರಿಂದ ಎಲ್ಲಾ ಮಹಿಳಾ ಪ್ರವಾಸಿಗರು ಈ ಸೌಲಭ್ಯವನ್ನು ಪಡೆದುಕೊಳ್ಳಲು ಎಂದು ಕೆಎಸ್‌ಟಿಡಿಸಿ ಮನವಿ ಮಾಡಿಕೊಂಡಿದೆ.