Eye Health: ಸನ್​​​ ಗ್ಲಾಸ್​​ ಧರಿಸುವುದು ಎಷ್ಟು ಮುಖ್ಯ? ಇಲ್ಲಿದೆ ತಜ್ಞರ ಅಭಿಪ್ರಾಯ

ಸನ್ ಗ್ಲಾಸ್​​​ ಧರಿಸುವುದರಿಂದ ಕಣ್ಣುಗಳು ಆರೋಗ್ಯವಾಗಿರುವುದಲ್ಲದೆ, ಆರಂಭಿಕ ಕಣ್ಣಿನ ಪೊರೆ, ಕಾರ್ನಿಯಲ್ ಹಾನಿ, ಒಣ ಕಣ್ಣುಗಳು, ರೆಟಿನಾದ ಹಾನಿ ಮತ್ತು ಕಣ್ಣಿನ ಸುತ್ತ ಚರ್ಮದ ಕ್ಯಾನ್ಸರ್ ಬರುವ ಅಪಾಯವನ್ನು ಕಡಿಮೆ ಮಾಡಬಹುದು.

Eye Health: ಸನ್​​​ ಗ್ಲಾಸ್​​ ಧರಿಸುವುದು ಎಷ್ಟು ಮುಖ್ಯ? ಇಲ್ಲಿದೆ ತಜ್ಞರ ಅಭಿಪ್ರಾಯ
ಕಣ್ಣಿನ ಆರೋಗ್ಯ
Image Credit source: The Healthy

Updated on: Feb 17, 2023 | 3:47 PM

ಸನ್​​ಗ್ಲಾಸ್(sunglass)​​​​ ಕೇವಲ ಫ್ಯಾಷನ್​​ ಆಗಿ ಮಾತ್ರ ಧರಿಸುವುದಲ್ಲ, ಬದಲಾಗಿ ಬಿಸಿಲಿನಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳಲು ಸನ್​​​ ಗ್ಲಾಸ್ ಧರಿಸುವುದು ಅತ್ಯಂತ ಅಗತ್ಯವಾಗಿದೆ. ಕೇವಲ ಹೊರಗಡೆ ಬಿಸಿಲಿನಿಂದ ಮಾತ್ರವಲ್ಲದೇ ಧೂಳು ಮಾಲಿನ್ಯಗಳಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸುತ್ತದೆ. ಮಾರುಕಟ್ಟೆಯಲ್ಲಿ ವಿವಿಧ ಶೈಲಿಗಳ ಸನ್​​​ ಗ್ಲಾಸ್​​ಗಳು ಲಭ್ಯವಿದೆ. ಇದು ನಿಮ್ಮ ಕಣ್ಣುಗಳಿಗೆ ರಕ್ಷಣೆ ನೀಡುವುದು ಮಾತ್ರವಲ್ಲದೇ ನಿಮಗೆ ಟ್ರೆಂಡಿ ಲುಕ್​​ ನೀಡುತ್ತದೆ. ಫರಿದಾಬಾದ್‌ನ ಅಮೃತಾ ಆಸ್ಪತ್ರೆಯ ನೇತ್ರಶಾಸ್ತ್ರ ವಿಭಾಗದ ಹಿರಿಯ ಸಲಹೆಗಾರರಾದ ಡಾ ಅಮೃತಾ ಕಪೂರ್ ಅವರ ಪ್ರಕಾರ, ಸನ್‌ಗ್ಲಾಸ್ ಧರಿಸುವುದು ಕಣ್ಣಿನ ಆರೋಗ್ಯಕ್ಕೆ ಮುಖ್ಯವಾಗಿದೆ. ವಿಶೇಷವಾಗಿ ತಮ್ಮ ದಿನದ ಹೆಚ್ಚಿನ ಸಮಯವನ್ನು ಹೊರಗಡೆ ಬಿಸಿಲಿನಲ್ಲಿ ಕಳೆಯುವವರಿಗೆ ಎಂದು ಸಲಹೆ ನೀಡುತ್ತಾರೆ.

ಸೂರ್ಯನ ಬೆಳಕಿನಲ್ಲಿರುವ ನೇರಳಾತೀತ ವಿಕಿರಣದ ಹಾನಿಕಾರಕ ವಸ್ತುಗಳಿಂದ ರಕ್ಷಣೆಯನ್ನು ಪಡೆಯಲು ಸಹಾಯಕವಾಗಿದೆ. ವಿಶೇಷವಾಗಿ ಹೆಚ್ಚು ಸಮಯ ಹೊರಗಡೆ ಉಳಿದುಕೊಳ್ಳುವರು, ಕೃಷಿ, ಮೀನುಗಾರಿಕೆ ಮತ್ತು ಕ್ರೀಡಾ ಚಟುವಟಿಕೆಗಳಂತಹ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿರುವವರು ಹೆಚ್ಚಾಗಿ ಕಣ್ಣಿನ ಸಮಸ್ಯೆಯನ್ನು ಹೊಂದಿರುತ್ತಾರೆ ಎಂದು ಹೇಳುತ್ತಾರೆ. ಜೊತೆಗೆ ಸೂರ್ಯನ ಬಿಸಿಲಿಗೆ ಹೆಚ್ಚು ಒಗ್ಗಿಕೊಂಡಷ್ಟು ಕಣ್ಣಿನ ತೇವಾಂಶವನ್ನು ಒಣ ಕಣ್ಣಿಗೆ ಕಾರಣವಾಗಬಹುದು. ಕಾಲಾನಂತರದಲ್ಲಿ, ಕಣ್ಣಿನಲ್ಲಿ ಪೊರೆಗಳು ಉಂಟಾಗಲು ಕಾರಣವಾಗುತ್ತದೆ ಆದರಿಂದ ಪ್ರಾರಂಭದಲ್ಲಿಯೇ ಎಚ್ಚರ ವಹಿಸುವುದು ಅಗತ್ಯ ಎಂದು ಹೇಳುತ್ತಾರೆ.

ಇದನ್ನೂ ಓದಿ: ಆರೋಗ್ಯಕರ ಜೀರ್ಣಕ್ರಿಯೆಗಾಗಿ ಈ ಗಿಡಮೂಲಿಕೆಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ರೂಢಿಸಿಕೊಳ್ಳಿ

ಸೂರ್ಯನ ಕಿರಣಗಳು ನೇರವಾಗಿ ಅಥವಾ ನೀರಿನ ಪ್ರತಿಬಿಂಬದ ಮೂಲಕ ಕಣ್ಣಿಗೆ ಬೀಳುವುದರಿಂದ ಕಣ್ಣಿನ ರೆಟಿನಾದ ಅತ್ಯಂತ ಸೂಕ್ಷ್ಮ ಭಾಗಗಳು ಹಾನಿಗೊಳಗಾಗುತ್ತದೆ. ಇದು ಅನೇಕರ ಜನರ ಕಣ್ಣಿನ ಬಿಳಿಭಾಗಗಳು ಹಳದಿ ಬಣ್ಣಕ್ಕೆ ಅಥವಾ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಆದ್ದರಿಂದ ಲೆನ್ಸ್‌ನಲ್ಲಿ ಯುವಿ ಫಿಲ್ಟರ್ ಹೊಂದಿರುವ ಸನ್‌ಗ್ಲಾಸ್‌ಗಳನ್ನು ಆರಿಸಿಕೊಳ್ಳಬೇಕು ಎಂದು ಹೇಳುತ್ತಾರೆ.
ಸನ್ ಗ್ಲಾಸ್​​​ ಧರಿಸುವುದರಿಂದ ಕಣ್ಣುಗಳು ಆರೋಗ್ಯವಾಗಿರುವುದಲ್ಲದೆ, ಆರಂಭಿಕ ಕಣ್ಣಿನ ಪೊರೆ, ಕಾರ್ನಿಯಲ್ ಹಾನಿ, ಒಣ ಕಣ್ಣುಗಳು, ರೆಟಿನಾದ ಹಾನಿ ಮತ್ತು ಕಣ್ಣಿನ ಸುತ್ತ ಚರ್ಮದ ಕ್ಯಾನ್ಸರ್ ಬರುವ ಅಪಾಯವನ್ನು ಕಡಿಮೆ ಮಾಡಬಹುದು ಎಂದು ನೇತ್ರವಿಜ್ಞಾನದ ಹಿರಿಯ ಸಲಹೆಗಾರ ಡಾ ಅರವಿಂದ್ ಕುಮಾರ್ ಹೇಳುತ್ತಾರೆ. ಜೊತೆಗೆ ನೀವು ಸನ್​​ ಗ್ಲಾಸ್​​ಗಳನ್ನು ಆಯ್ಕೆ ಮಾಡುವಾಗ ನಿಮ್ಮ ಕಣ್ಣಿಗಿಂತ ಸ್ವಲ್ಪ ದೊಡ್ಡ ಗಾತ್ರದಲ್ಲಿ ಇರಲಿ. ಯಾಕೆಂದರೆ ಇದು ಕಣ್ಣಿನ ಸುತ್ತಲಿನ ಪ್ರದೇಶವನ್ನು ಕೂಡ ಬಿಸಿಲಿನಿಂದ ರಕ್ಷಿಸುವಲ್ಲಿ ಸಹಾಯಕವಾಗಿದೆ ಎಂದು ತಜ್ಞರು ಹೇಳುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 3:44 pm, Fri, 17 February 23