AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Travel: ಕರ್ನಾಟಕದ ಈ ಭಾಗಕ್ಕೆ ನೀವು ಪ್ರವಾಸ ಮಾಡಿದ್ದೀರಾ? ಹಾಗಿದ್ದರೆ ಈ ವಿಕೇಂಡ್​ನಲ್ಲಿ ಪ್ಲಾನ್ ಮಾಡಿ

ನಿಮಗೆ ಕರ್ನಾಟಕದಲ್ಲಿರುವ ಹಾಗೂ ಹೆಚ್ಚಿನ ಪ್ರವಾಸಿಗರಿಗೆ ತಿಳಿಯದ ಕೆಲವೊಂದು ಪ್ರವಾಸಿ ಸ್ಥಳಗಳ ಬಗ್ಗೆ ತಿಳಿಸಿಕೊಡುತ್ತೇವೆ. ಈ ಪ್ರವಾಸಿ ಸ್ಥಳಗಳಿಗೆ ನೀವು ಕೂಡ ಪ್ರವಾಸವನ್ನು ಕೈಗೊಳ್ಳುವ ಮೂಲಕ ಹೊಸ ಸ್ಥಳದ ಅನ್ವೇಷಣೆ ಮಾಡಬಹುದು.

Travel: ಕರ್ನಾಟಕದ ಈ ಭಾಗಕ್ಕೆ ನೀವು ಪ್ರವಾಸ ಮಾಡಿದ್ದೀರಾ? ಹಾಗಿದ್ದರೆ ಈ ವಿಕೇಂಡ್​ನಲ್ಲಿ ಪ್ಲಾನ್ ಮಾಡಿ
ಅಕ್ಷಯ್​ ಪಲ್ಲಮಜಲು​​
|

Updated on:Feb 17, 2023 | 2:50 PM

Share

ನಿಮಗೆ ಕರ್ನಾಟಕದಲ್ಲಿರುವ ಹಾಗೂ ಹೆಚ್ಚಿನ ಪ್ರವಾಸಿಗರಿಗೆ ತಿಳಿಯದ ಕೆಲವೊಂದು ಪ್ರವಾಸಿ ಸ್ಥಳಗಳ ಬಗ್ಗೆ ತಿಳಿಸಿಕೊಡುತ್ತೇವೆ. ಈ ಪ್ರವಾಸಿ ಸ್ಥಳಗಳಿಗೆ ನೀವು ಕೂಡ ಪ್ರವಾಸವನ್ನು ಕೈಗೊಳ್ಳುವ ಮೂಲಕ ಹೊಸ ಸ್ಥಳದ ಅನ್ವೇಷಣೆ ಮಾಡಬಹುದು. ಈ ವಿಕೇಂಡ್ ಈ ಪ್ರದೇಶಗಳಿಗೆ ಹೋಗಲು ಪ್ಲಾನ್ ಮಾಡಿಕೊಳ್ಳಬಹುದು.

ಗುಮ್ಮನಾಯಕ ಕೋಟೆ ಚಿಕ್ಕಬಳ್ಳಾಪುರ:

ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಪಟ್ಟಣದಲ್ಲಿರುವ ಈ ಗುಮ್ಮ ನಾಯಕ ಕೋಟೆಯು ಪ್ರವಾಸಿಗರಿಗೆ ಭೇಟಿ ನೀಡಲು ಯೋಗ್ಯವಾದ ಸ್ಥಳವಾಗಿದೆ. 1350೦ರಲ್ಲಿ ಗುಮ್ಮನಾಯಕ ಎಂಬ ಸಾಮಂತ ನಾಯಕನಿಂದ ಸ್ಥಾಪಿಸಲ್ಪಟ್ಟ ಈ ಕೋಟೆಯು ಪ್ರವಾಸಿಗರು ಭೇಟಿ ನೀಡಲೇಬೇಕಾದ ಐತಿಹಾಸಿಕ ಸ್ಥಳವಾಗಿದೆ. ಗುಡ್ಡಗಾಡು ಪ್ರದೇಶದಿಂದ ಆವೃತವಾಗಿರುವ ಈ ಕೋಟೆ ಸುಮಾರು 150 ಅಡಿ ಎತ್ತರದಲ್ಲಿದೆ ಹಾಗೂ ಇದನ್ನು ವೃತ್ತಾಕಾರದ ಬಂಡೆಯಿಂದ ರಚಿಸಲಾಗಿದೆ. ನೀವು ಟ್ರೆಕ್ಕಿಂಗ್ ಪ್ರಿಯರಾಗಿದ್ದರೆ, ಈ ಅದ್ಭುತ ಐತಿಹಾಸಿಕ ಸ್ಥಳಕ್ಕೆ ಒಮ್ಮೆಯಾದರೂ ಭೇಟಿ ನೀಡಲೇಬೇಕು.

ಗುಮ್ಮನಾಯಕನ ಕೋಟೆಗೆ ಹಲವು ಹಂತದ ಪ್ರವೇಶ ದ್ವಾರಗಳಿವೆ. ಮೊದಲ ಪ್ರವೇಶವು ನಿಮ್ಮನ್ನು ಹನುಮಂತ ಮತ್ತು ಗಣಪತಿ ದೇವಸ್ಥಾನಕ್ಕೆ ಕರೆದೊಯ್ಯುತ್ತದೆ. ಮುಂದಿನ ಹಂತದಲ್ಲಿ ಪಾಳುಬಿದ್ದ ಕೋಟೆಯನ್ನು ನೋಡಬಹುದು. ನಂತರ ಅದು ನಿಮ್ಮನ್ನು ನೆರವಾಗಿ ಬೆಟ್ಟದ ತುದಿಗೆ ಕರೆದೊಯ್ಯುತ್ತದೆ. ಇದು ಚಾರಣಕ್ಕೆ (ಟ್ರಕಿಂಗ್) ಕೂಡಾ ಉತ್ತಮ ಸ್ಥಳವಾಗಿದೆ.

ಗುಮ್ಮನಾಯಕನ ಕೋಟೆಗೆ ಭೇಟಿ ನೀಡಲು ಯಾವುದೇ ಸಮಯ ನಿರ್ಬಂಧವಿಲ್ಲ. ನೀವು ಯಾವಾಗ ಬೇಕಾದರೂ ಈ ಸ್ಥಳಕ್ಕೆ ಭೇಟಿ ನೀಡಬಹುದು. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುತ್ತಾರೆ. ಚಳಿಗಾಲದ ಸಮಯವಾದ ಡಿಸೆಂಬರ್ ನಿಂದ ಫೆಬ್ರವರಿ ತಿಂಗಳ ನಡುವೆ ಈ ಸ್ಥಳಕ್ಕೆ ಭೇಟಿ ನೀಡುವುದು ಉತ್ತಮ. ಯಾಕೆಂದರೆ ಈ ಸಮಯದಲ್ಲಿ ಹವಾಮಾನವು ಸಾಕಷ್ಟು ಆಹ್ಲಾದಕರವಾಗಿರುತ್ತದೆ. ಮತ್ತು ಹಚ್ಚ ಹಸಿರಿನ ಪರಿಸರವನ್ನು ಕಣ್ಣುತುಂಬಿಕೊಳ್ಳಬಹುದು.

ತಲುಪುವುದು ಹೇಗೆ: ಬೆಂಗಳೂರಿನಿಂದ ಸುಮಾರು ಎರಡು ತಾಸುಗಳ ಪ್ರಯಾಣ ಮಾಡಿದರೆ ಚಿಕ್ಕಬಳ್ಳಾಪುರದ ಗುಮ್ಮನಾಯಕನ ಕೋಟೆಯನ್ನು ತಲುಪಬಹುದು. ಹಾಗೂ ಬಾಗೇಪಲ್ಲಿಯಿಂದ 8 ಕಿಮೀ ದೂರದಲ್ಲಿ ಈ ಕೋಟೆಯಿದೆ. ಬೆಂಗಳೂರಿನಿಂದ ಕೇವಲ 2 ಗಂಟೆಗಳ ದಾರಿಯ ಮೂಲಕ ಇಲ್ಲಿಗೆ ತಲುಪಬಹುದು.

ಶರಾವತಿ ಕಾಂಡ್ಲಾ ನಡಿಗೆ (ವಾಕ್ ವೇ ಹೊನ್ನಾವರ):

ಹೊನ್ನಾವವ ಪ್ರವಾಸಿಗರು ಭೇಟಿ ನಿಡಬಹುದಾದ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಅಧ್ಭುತ ಸ್ಥಳವಾಗಿದೆ. ಹೊನ್ನಾವರದಲ್ಲಿ ವಿವಿಧ ಪ್ರವಾಸಿ ಆಕರ್ಷಣೆಗಳಿವೆ. ಇಂದು ಹೊನ್ನಾವರದಲ್ಲಿರುವ ಒಂದು ವಿಶಿಷ್ಟ ಸ್ಥಳದ ಬಗ್ಗೆ ತಿಳಿಸಿಕೊಡುತ್ತೇವೆ. ಅದು ಶರಾವತಿ ಕಾಂಡ್ಲಾ ವಾಕ್ ವೇ. ಅಳಿವಿನಂಚಿನಲ್ಲಿರುವ ಕಾಂಡ್ಲಾ ಸಸ್ಯಗಳ ಕುರಿತು ಜನರಿಗೆ ತಿಳಿಸಿಕೊಡುವುದರ ಜೊತೆಗೆ ಕಾಂಡ್ಲಾ ವನದಲ್ಲಿ ವಿಹಾರಿಸುವ ಆನಂದವನ್ನು ಪ್ರವಾಸಿಗರಿಗೆ ಒದಗಿಸಿಕೊಡುವ ಉದ್ದೇಶದಿಂದಲೇ ಅರಣ್ಯ ಇಲಾಖೆ ಈ ಕಾಂಡ್ಲಾ ವಾಕ್ ವೇಯನ್ನು ಸ್ಥಾಪಿಸಿದೆ. ಶರಾವತಿ ಕಾಂಡ್ಲಾ ಕಾಲುದಾರಿಯು ಸುಸಜ್ಜಿತವಾದ ಮರದ ಕಾಲುದಾರಿಯಾಗಿದ್ದು, ಮ್ಯಾಂಗ್ರೋವ್ ಕಾಡು ಮತ್ತು ಶರಾವತಿ ನದಿಯ ಮಧ್ಯದಲ್ಲಿ ಇದನ್ನು ರಚಿಸಲಾಗಿದೆ. ಈ ಕಾಲುದಾರಿಯಲ್ಲಿ ನಡೆದಾಡುತ್ತಾ ಪ್ರಕೃತಿಯ ಸೌಂದರ್ಯವನ್ನು ಸವಿಯಬಹುದು. ಹಾಗೂ ಮ್ಯಾಂಗ್ರೋವ್ ಕಾಡುಗಳನ್ನು ಬಹಳ ಹತ್ತಿರದಿಂದ ನೋಡಬಹುದು.

ಸಪ್ಟೆಂಬರ್‌ನಿಂದ ಮಾರ್ಚ್​​ವರೆಗೆ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ. ಪ್ರತಿದಿನ ಬೆಳಗ್ಗೆ 6 ರಿಂದ ಸಂಜೆ 6.30ರ ವರೆಗೆ ಇಲ್ಲಿ ಭೇಟಿಗೆ ಅವಕಾಶವಿದೆ. ಹಾಗೂ ಇಲ್ಲಿನ ಪ್ರವೇಶ ಶುಲ್ಕ ಒಬ್ಬರಿಗೆ ೧೦ ರೂಪಾಯಿ.

ತಲುಪುವುದು ಹೇಗೆ: ರೈಲು ಅಥವಾ ಬಸ್ ಮೂಲಕ ನೀವು ಹೊನ್ನಾವರಕ್ಕೆ ಬಂದಿಳಿಯಬೇಕು. ಹಾಗೂ ನೀವು ನೋಡ ಬಯಸುವ ಶರಾವತಿ ಕಾಂಡ್ಲಾ ವಾಕ್‌ವೇ ಹೊನ್ನಾವರದಿಂದ ಸುಮಾರು 3 ಕಿಮೀ ದೂರದಲ್ಲಿದೆ. ಹಾಗೂ ಇಕೋ-ಬೀಚ್ ಸಮೀಪದಲ್ಲಿದೆ.

ಕೂರ್ಮಗಡ ದ್ವೀಪ:

ಕೂರ್ಮಗಡ ದ್ವೀಪವು ಅರಬ್ಬೀ ಸಮುದ್ರದಲ್ಲಿರುವ ಆಮೆಯಾಕಾದರ ದ್ವೀಪವಾಗಿದೆ. ಕಾರವಾರದ ಕಾಳಿ ನದಿಯ ಹಿನ್ನೀರಿನ ಸದಾಶಿವಗಡ ಬೋಟ್ ಜೆಟ್ಟಿಯಿಂದ 4ಕಿಮೀ ದೋಣಿ ಸವಾರಿಯ ಮೂಲಕ ಕೂರ್ಮಗಡ ದ್ವೀಪವನ್ನು ತಲುಪಬಹುದು. ಈ ದ್ವೀಪದಲ್ಲಿ ಪ್ರಮುಖವಾದ ಆಕರ್ಷಣೆಗಳೆಂದರೆ ನರಸಿಂಹಸ್ವಾಮಿ ದೇವಾಲಯ ಹಾಗೂ ಕುರುಮ್‌ಘಡ್ ಬೀಚ್.

ಇಲ್ಲಿನ ವಿನೋದಮಯ ಚಟುವಟಿಕೆಗಳು ಪ್ರವಾಸಿಗರನ್ನು ರೋಮಾಂಚನಗೊಳಿಸುತ್ತದೆ. ಟ್ರೆಕ್ಕಿಂಗ್, ಮೀನುಗಾರಿಕೆ, ಸ್ನಾರ್ಕ್ಲಿಂಗ್ ಹೀಗೆ ಇನ್ನೂ ಅನೆಕ ಚಟುವಟಿಕೆಗಳನ್ನು ಮಾಡಬಹುದು. ಹಾಗೂ ರಾತ್ರಿ ದೂರದರ್ಶಕದ ಸಹಾಯದಲ್ಲಿ ಇಲ್ಲಿ ನಕ್ಷತ್ರಗಳ ವೀಕ್ಷಣೆಯನ್ನು ಮಾಡಬಹುದು. ಅಕ್ಟೋಬರ್‌ನಿಂದ ಮೇ ಯವರೆಗೆ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ. ಇದು ದೇವಬಾಗ್ ಬೀಚ್‌ನಿಂದ ಸುಮಾರು 1 ಕಿಮೀ ದೂರದಲ್ಲಿದೆ.

ತಲುಪುವುದು ಹೇಗೆ: ಗೋವಾ, ಬೆಳಗಾವಿ ಹಾಗೂ ಮಂಗಳೂರು ಮೂಲಕ ವಿಮಾನಯಾನದಲ್ಲಿ ಇಲ್ಲಿಗೆ ಭೇಟಿ ನೀಡಬಹುದು. ಹತ್ತಿರದ ರೈಲು ಮಾರ್ಗವಾದ ಶಿರವಾಡದ ಮೂಲಕವೂ ಇಲ್ಲಗೆ ಭೇಟಿ ನೀಡಬಹುದು,

Published On - 2:50 pm, Fri, 17 February 23

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?