Super Moon 2022: ಇಂದು ರಾತ್ರಿ ಗೋಚರಿಸಲಿದೆ ಈ ವರ್ಷದ ಅತಿದೊಡ್ಡ ಸೂಪರ್​ ಮೂನ್, ವೈಶಿಷ್ಠ್ಯವೇನು?

| Updated By: ನಯನಾ ರಾಜೀವ್

Updated on: Jul 13, 2022 | 12:20 PM

ಈ ವರ್ಷದ ಅತಿದೊಡ್ಡ ಸೂಪರ್ ಮೂನ್ ಇಂದು ರಾತ್ರಿ ಗೋಚರಿಸಲಿದ್ದು, ಇದು ಅತಿ ದೊಡ್ಡ ಖಗೋಳ ಘಟನೆಗಳಲ್ಲಿ ಒಂದಾಗಿದೆ. ಚಂದ್ರನು ತನ್ನ ಕಕ್ಷೆಯಲ್ಲಿ ಭೂಮಿಗೆ ಹತ್ತಿರದಲ್ಲಿದ್ದಾಗ ಸೂಪರ್ ಮೂನ್ ಕಾಣಿಸಿಕೊಳ್ಳುತ್ತದೆ.

Super Moon 2022: ಇಂದು ರಾತ್ರಿ ಗೋಚರಿಸಲಿದೆ ಈ ವರ್ಷದ ಅತಿದೊಡ್ಡ ಸೂಪರ್​ ಮೂನ್, ವೈಶಿಷ್ಠ್ಯವೇನು?
Super Moon
Follow us on

ಈ ವರ್ಷದ ಅತಿದೊಡ್ಡ ಸೂಪರ್ ಮೂನ್ ಇಂದು ರಾತ್ರಿ ಗೋಚರಿಸಲಿದ್ದು, ಇದು ಅತಿ ದೊಡ್ಡ ಖಗೋಳ ಘಟನೆಗಳಲ್ಲಿ ಒಂದಾಗಿದೆ.
ಚಂದ್ರನು ತನ್ನ ಕಕ್ಷೆಯಲ್ಲಿ ಭೂಮಿಗೆ ಹತ್ತಿರದಲ್ಲಿದ್ದಾಗ ಸೂಪರ್ ಮೂನ್ ಕಾಣಿಸಿಕೊಳ್ಳುತ್ತದೆ. ಇಂದು, ಗುರು ಪೂರ್ಣಿಮೆಯ ದಿನದಂದು, ನೀವು ಆಕಾಶದಲ್ಲಿ ಸೂಪರ್‌ಮೂನ್‌ನ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಚಂದ್ರನು ಪ್ರತಿದಿನಕ್ಕಿಂತ ದೊಡ್ಡದಾಗಿ, ಪ್ರಕಾಶಮಾನವಾಗಿ ಮತ್ತು ಕೆಂಪು ಬಣ್ಣದಲ್ಲಿ ಗೋಚರಿಸುತ್ತಾನೆ. ಇದಲ್ಲದೇ, ಸೂಪರ್ ಮೂನ್ ಸಂಭವಿಸಿ ಕೆಲವು ಗಂಟೆಗಳ ನಂತರ ಹುಣ್ಣಿಮೆ ಕಾಣಿಸಲಿದ್ದು, ಎರಡರಿಂದ ಮೂರು ದಿನಗಳ ಕಾಲ ಇದನ್ನು ನೋಡಬಹುದಾಗಿದೆ. ವಾಸ್ತವವಾಗಿ ಇದು ಹುಣ್ಣಿಮೆಯಾಗಿರುವುದಿಲ್ಲ, ಆದರೆ ಚಂದ್ರನ ಗಾತ್ರದಿಂದಾಗಿ, ಅದು ಅದೇ ರೀತಿಯಲ್ಲಿ ಗೋಚರಿಸುತ್ತದೆ.

ಇದಲ್ಲದೆ, ಈ ಸಮಯದಲ್ಲಿ ಚಂದ್ರನ ಮೇಲೆ ನೆರಳು ಪಟ್ಟಿಯು ತುಂಬಾ ತೆಳುವಾಗಿ ಕಾಣಿಸುತ್ತದೆ. ಚಂದ್ರನಲ್ಲಿನ ಬದಲಾವಣೆಯು ತುಂಬಾ ನಿಧಾನವಾಗಿರುತ್ತದೆ, ಇದರಿಂದಾಗಿ ಅದು ಹುಣ್ಣಿಮೆಯಂತೆ ಕಾಣುತ್ತದೆ. ಈ ಪ್ರಕ್ರಿಯೆಯನ್ನು ಬರಿ ಕಣ್ಣುಗಳಿಂದ ನೋಡುವುದು ಸ್ವಲ್ಪ ಕಷ್ಟ.

ತನ್ನ ಗಾತ್ರಕ್ಕಿಂತ ದೊಡ್ಡದಾಗಿ ಗೋಚರಿಸುವ ಚಂದ್ರ
ಸೂಪರ್ ಮೂನ್ ಎಂದರೆ ಚಂದ್ರನು ತನ್ನ ಗಾತ್ರಕ್ಕಿಂತ ದೊಡ್ಡದಾಗಿ ಕಾಣಿಸುತ್ತಾನೆ. ಇದರೊಂದಿಗೆ, ದಿನಕ್ಕಿಂತ ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತದೆ. ಏಕೆಂದರೆ ಈ ಸಮಯದಲ್ಲಿ ಚಂದ್ರ ಮತ್ತು ಭೂಮಿಯ ನಡುವಿನ ಅಂತರವು ತುಂಬಾ ಕಡಿಮೆ ಆಗಿರುತ್ತದೆ. ಚಂದ್ರ ಭೂಮಿಯ ಸಮೀಪ ಬರುತ್ತಾನೆ.

ಭೂಮಿ ಹಾಗೂ ಚಂದ್ರನ ನಡುವಿನ ಅಂತರ
ಭೂಮಿ ಮತ್ತು ಚಂದ್ರನ ನಡುವಿನ ಅಂತರವು 4,05,500 ಕಿ.ಮೀ. ಸೂಪರ್ ಮೂನ್ ಎಂಬ ಪದವು 1979 ರಲ್ಲಿ ಹುಟ್ಟಿಕೊಂಡಿತು. ಈ ಪದವನ್ನು ಜ್ಯೋತಿಷಿ ರಿಚರ್ಡ್ ನೋಯೆಲ್ ಸೃಷ್ಟಿಸಿದರು. ಚಂದ್ರನು ಭೂಮಿಯ ಪರಿಧಿಯ 90 ಪ್ರತಿಶತದೊಳಗೆ ಬಂದಾಗ, ಈ ಖಗೋಳ ಘಟನೆಯನ್ನು ಸೂಪರ್ ಮೂನ್ ಎಂದು ಕರೆಯಲಾಗುತ್ತದೆ.

ಸೂಪರ್‌ಮೂನ್ ಅನ್ನು ಬಕ್‌ಮೂನ್ ಎಂದೂ ಕರೆಯುತ್ತಾರೆ. ಇದರೊಂದಿಗೆ, ಪ್ರಪಂಚದಾದ್ಯಂತ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ.
ಜುಲೈ 13 ರಂದು, ಭೂಮಿ ಮತ್ತು ಚಂದ್ರನ ನಡುವಿನ ಅಂತರವು ಚಿಕ್ಕದಾಗಿರುತ್ತದೆ. ಸೂಪರ್ ಮೂನ್ ಸಮಯದಲ್ಲಿ, ಭೂಮಿಯಿಂದ ಚಂದ್ರನ ಅಂತರವು ಕೇವಲ 357,264 ಕಿಲೋಮೀಟರ್ ಆಗಿರುತ್ತದೆ.

ಸಾಗರದಲ್ಲಿ ಅಲೆಗಳ ಏರಿಳಿತ
ಸೂಪರ್ ಮೂನ್​ನ ಪರಿಣಾಮ ಸಮುದ್ರಕ್ಕೂ ಗೋಚರಿಸಲಿದೆ. ಸೂಪರ್‌ಮೂನ್‌ನಿಂದಾಗಿ, ಸಾಗರದಲ್ಲಿ ಅಲೆಗಳ ಏರಿಳಿತ ಹೆಚ್ಚಿರುತ್ತದೆ.
ಖಗೋಳಶಾಸ್ತ್ರಜ್ಞರ ಪ್ರಕಾರ, ಸೂಪರ್ ಮೂನ್ ಸಮಯದಲ್ಲಿ ಕರಾವಳಿ ಪ್ರದೇಶಗಳಲ್ಲಿ ಬಿರುಗಾಳಿಗಳು ಮತ್ತು ಪ್ರವಾಹದಂತಹ ಪರಿಸ್ಥಿತಿಗಳು ಸಂಭವಿಸಬಹುದು. ಈ ವರ್ಷ ಸೂಪರ್‌ಮೂನ್ ಅನ್ನು ಜುಲೈ 13 ರ ರಾತ್ರಿ 12:07 ಕ್ಕೆ ನೋಡಬಹುದು, ಮುಂದಿನ ವರ್ಷ ಜುಲೈ 3 ರಂದು ಕಾಣಿಸುತ್ತದೆ.

Published On - 12:14 pm, Wed, 13 July 22