AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೌಷ್ಟಿಕಾಂಶಗಳ ಆಗರ ಗೆಣಸಿನ ಬಳಕೆಯಿರಲಿ: ಚಳಿಗಾಲದಲ್ಲಿ ಪರಿಪೂರ್ಣ ಆಹಾರವಾಗಲಿದೆ

750BC ಯಿಂದಲೂ ಬಳಕೆಯಲ್ಲಿರುವ ಆಹಾರ ಗೆಣಸು. ಆದಿಮಾನವ ಕಾಡಿನಲ್ಲಿ ಹುಡುಕಿ ತಿನ್ನುತ್ತಿದ್ದು ಇದೇ ಗೆಣಸು. ಸಿಹಿ ಪೊಟಾಟೋ ಪೌಷ್ಟಿಕಾಂಶದ ಆಗರ ಎನ್ನುತ್ತಾರೆ ತಜ್ಞರು.  ಹಸಿಯಾಗಿಯೂ ಸೇವಿಸಬಹುದಾದ ತರಕಾರಿ ಈ ಗೆಣಸು

ಪೌಷ್ಟಿಕಾಂಶಗಳ ಆಗರ ಗೆಣಸಿನ ಬಳಕೆಯಿರಲಿ: ಚಳಿಗಾಲದಲ್ಲಿ ಪರಿಪೂರ್ಣ ಆಹಾರವಾಗಲಿದೆ
ಪ್ರಾತಿನಿಧಿಕ ಚಿತ್ರ
TV9 Web
| Updated By: Pavitra Bhat Jigalemane|

Updated on: Dec 29, 2021 | 9:00 AM

Share

ಅನಾದಿ ಕಾಲದಿಂದಲೂ ಗೆಣಸು ಪೌಷ್ಟಿಕ ಆಹಾರ ಎನಿಸಿಕೊಂಡು ಬಂದಿದೆ. ಆದಿ ಮಾನವರೂ ಕೂಡ ಕಾಡುಗಳಲ್ಲಿ ಸಿಗುತ್ತಿದ್ದ ಗಡ್ಡೆಯ ಗೆಣಸನ್ನು ತಿಂದು ಬದುಕು ನಡೆಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಗೆಣಸು ತಿಂದರೆ ಗ್ಯಾಸ್ಟ್ರಿಕ್​ ಸಮಸ್ಯೆ ಕಾಡಬಹುದು ಎಂದು ಗೆಣಸಿನಿಂದ ದೂರ ಓಡುವವರೇ ಹೆಚ್ಚು. ಆದರೆ ಅದನ್ನು ಸರಿಯಾದ ಪ್ರಮಾಣದಲ್ಲಿ, ಸರಿಯಾದ ರೀತಿಯಲ್ಲಿ ಸೇವಸಿದರೆ ಪರಿಪೂರ್ಣ ಆಹಾರವಾಗಿಲಿದೆ.  ಚಳಿಗಾಲದಲ್ಲಿ ದೇಹಕ್ಕೆ ಪೌಷ್ಟಿಕಾಂಶ ನೀಡುವ ಆಹಾರದ ಸೇವನೆ ಅಗತ್ಯ. ಹೀಗಾಗಿ ಅದಕ್ಕೆ ಸಿಹಿ ಆಲೂಗಡ್ಡೆ ಅಥವಾ ಗೆಣಸು ಉತ್ತಮ ಆಹಾರವಾಗಿದೆ. ಇದರಲ್ಲಿ ಯಥೇಚ್ಛವಾದ ಕಾರ್ಬೋಹೈಡ್ರೇಟ್​,  ಕೊಲೆಸ್ಟ್ರಾಲ್​ ಸೋಡಿಯಮ್​ನಂತಹ ಅಂಶಗಳು ಇರುತ್ತವೆ. ಇವು ದೇಹವನ್ನು ಬೆಚ್ಚಗಿರಿಸಿ, ಚಳಿಗಾಲದಲ್ಲಿ ಕಾಡುವ ಸುಸ್ತು ಹಾಗೂ ಇನ್ನಿತರ ಕಾಯಿಲೆಗಳಿಂದ ರಕ್ಷಿಸುತ್ತದೆ.

ಚಳಿಗಾಲದಲ್ಲಿ ಗಡ್ಡೆಗಳ ಬಳಕೆ ದೇಹಕ್ಕೆ ಪೋಷಕಾಂಶವನ್ನು ನೀಡಿ ದೇಹದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುತ್ತದೆ. ಉದಾಹರಣೆಗೆ ಬಿಟ್ರೂಟ್​, ಕ್ಯಾರೆಟ್​ ಇತ್ಯಾದಿಗಳನ್ನು ಸೇವಿಸುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಅದರಲ್ಲಿ ಸಿಹಿ ಪೊಟಾಟೋ ಅಥವಾ ಗೆಣಸು ಕೂಡ ಹೌದು. ಈ ಕುರಿತು ಪೌಷ್ಟಿಕ ತಜ್ಞರಾದ  ರಜುತಾ ದಿವೇಕರ್​ ಎನ್ನುವವರು ಗೆಣಸಿನ ಉಪಯೋಗಗಳನ್ನು ತಿಳಿಸಿದ್ದಾರೆ.  750BC ಯಿಂದಲೂ ಬಳಕೆಯಲ್ಲಿರುವ ಆಹಾರ ಗೆಣಸು. ಆದಿಮಾನವ ಕಾಡಿನಲ್ಲಿ ಹುಡುಕಿ ತಿನ್ನುತ್ತಿದ್ದು ಇದೇ ಗೆಣಸು. ಸಿಹಿ ಪೊಟಾಟೋ ಪೌಷ್ಟಿಕಾಂಶದ ಆಗರ ಎನ್ನುತ್ತಾರೆ ತಜ್ಞರು.  ಹಸಿಯಾಗಿಯೂ ಸೇವಿಸಬಹುದಾದ ತರಕಾರಿ ಈ ಗೆಣಸು. ಅಲ್ಲದೆ  ಇದನ್ನು ವಿವಿಧ ರೀತಿಯ ಸಿಹಿತಿನಿಸುಗಳನ್ನು ತಯಾರಿಸಿಯೂ ಸೇವಿಸಬಹುದು. ಆದ್ದರಿಂದ  ಸಿಹಿ ಪೊಟಾಟೊ ಒಂದು ಪರಿಪೂರ್ಣ ಆಹಾರವಾಗಿದೆ.

ಗೆಣಸಿನ ಉಪಯೋಗಗಳು ಮಧುಮೇಹಿಗಳಿಗೆ ಗೆಣಸು ಉತ್ತಮ ಆಹಾರವಾಗಿದೆ. ಅಲ್ಲದೆ ಬೊಜ್ಜು, ಪಿಸಿಒಡಿ ಸಮಸ್ಯೆ ಇರುವವರಿಗೆ ಉತ್ತಮ ನಾರಿನ ತರಕಾರಿಯಾಗಿದೆ. ನೀವು ಜಿಮ್​ಗಳಿಗೆ ಹೋಗುವವರಾದರೆ ಅಥವಾ ಇನ್ನಿತರ ಟ್ರೈನಿಂಗ್​ಗಳಿಗೆ ತೆರಳುವವರಾದರೆ ಸಂಜೆ ಸಮಯದಲ್ಲಿ ಗೆಣಸು ಉತ್ತಮ ಸ್ನಾಕ್ಸ್​ ಆಗಲಿದೆ. ಗೆಣಸಿನ ಪರೋಟ ಅಥವಾ ಅದನ್ನು ಬೇಯಸಿ ಹಾಗೆಯೇ ತಿನ್ನಬಹುದು. ಗೆಣಸಿನಲ್ಲಿ ಯಥೇಚ್ಛವಾದ ವಿಟಮಿನ್​ ಎ ಅಂಶವಿದೆ. ವಿಟಮಿನ್​ ಎ ರೋಗದ ವಿರುದ್ಧ ಹೋರಾಡಲು ಸಹಾಯಕವಾಗಿದೆ. ಗೆಣಸು ನಿಮ್ಮ ದೇಹದ ಚರ್ಮವನ್ನು ಮೃದುಗೊಳಿಸುಲು ಸಹಾಯ ಮಾಡುತ್ತದೆ. ದೇಹ ಉಬ್ಬುವಿಕೆ, ಆಮ್ಲೀಯತೆಯಿಂದಲೂ  ಇದು ರಕ್ಷಿಸಲಿದೆ. ಗೆಣಸು ನಿಮಗೆ ನಿದ್ದೆ ಬರಲು ಸಹಾಯ ಮಾಡುತ್ತದೆ. ಹೀಗಾಗಿ ನೀವೇನಾದರೂ ನಿದ್ದೆಗಡುವ ಕೆಲಸವೇನಾದರೂ ಮಾಡಿದ್ದರೆ ಗೆಣಸಿನ ಖಾದ್ಯವನ್ನು ಸೇವಿಸಿ ಮಲಗಿ ನಿದ್ದೆ ಚೆನ್ನಾಗಿ ಬರಲಿದೆ.

ಇದನ್ನೂ ಓದಿ:

Immunity Power: ನಿಮ್ಮ ದೇಹದಲ್ಲಿ ಈ ಲಕ್ಷಣಗಳು ಕಂಡುಬಂದರೆ ರೋಗ ನಿರೋಧಕ ಶಕ್ತಿ ಕುಂದಿದೆ ಎಂದರ್ಥ