Immunity Power: ನಿಮ್ಮ ದೇಹದಲ್ಲಿ ಈ ಲಕ್ಷಣಗಳು ಕಂಡುಬಂದರೆ ರೋಗ ನಿರೋಧಕ ಶಕ್ತಿ ಕುಂದಿದೆ ಎಂದರ್ಥ
ಸಣ್ಣ ಹವಾಮಾನ ಬದಲಾವಣೆಗೂ ಅನಾರೋಗ್ಯಕ್ಕೆ ಒಳಗಾಗುವುದು ಹೀಗೆ ಹಲವು ರೀತಿಯ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಲ್ಬಣಗೊಳುತ್ತಿವೆ. ಇದಕ್ಕೆ ಮುಖ್ಯ ಕಾರಣ ರೋಗ ನಿರೋಧಕ ಶಕ್ತಿಯ ಕೊರತೆ.
ದೇಹದ ಆರೋಗ್ಯ ಉತ್ತಮಗೊಳ್ಳಲು ರೋಗ ನಿರೋಧಕ ಶಕ್ತಿ ಅವಶ್ಯಕವಾಗಿದೆ. ಬದಲಾದ ಜೀವನ ಶೈಲಿ, ಒತ್ತಡದ ಬದುಕಿಗೆ ಸಿಲುಕಿ ಸರಿಯಾದ ಆಹಾರವನ್ನು ಸೇವಿಸದೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯ ಕುಂಠಿತವಾಗುತ್ತಿದೆ. ಇದಕ್ಕೆ ಉತ್ತಮ ನಿದರ್ಶನ ಎಂದರೆ ಇಂದಿನ ಯುವ ಜನತೆಯಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಕಾಣಿಸಕೊಳ್ಳುತ್ತಿರುವ ದೀರ್ಘಕಾಲದ ಸಮಸ್ಯೆಗಳು, ಸಣ್ಣ ಹವಾಮಾನ ಬದಲಾವಣೆಗೂ ಅನಾರೋಗ್ಯಕ್ಕೆ ಒಳಗಾಗುವುದು ಹೀಗೆ ಹಲವು ರೀತಿಯ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಲ್ಬಣಗೊಳುತ್ತಿವೆ. ಇದಕ್ಕೆ ಮುಖ್ಯ ಕಾರಣ ರೋಗ ನಿರೋಧಕ ಶಕ್ತಿಯ ಕೊರತೆ. ಇತ್ತೀಚೆಗಂತೂ ಚಳಿಗಾಲದಲ್ಲಿ ಕಾಡುವ ಸಮಸ್ಯೆಗಳು, ಕೊರೋನಾದಂತಹ ಸಾಂಕ್ರಾಮಿಕ ಕಾಯಿಲೆಗಳು ಸುಲಭವಾಗಿ ದೇಹವನ್ನು ಹೊಕ್ಕು ಅಸ್ವಸ್ಥಗೊಳಿಸುತ್ತಿವೆ. ಹಾಗಾದರೆ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ ಎಂದು ತಿಳಿಯುವುದಾದರೂ ಹೇಗೆ? ಈ ಲಕ್ಷಣಗಳನ್ನು ಕಾಣಿಸಿಕೊಂಡರೆ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂದಿದೆ ಎಂದರ್ಥ.
ಆಗಾಗ ಶೀತ,ಕೆಮ್ಮು ಮುಖ್ಯವಾಗಿ ನೀವು ನಿರಂತರವಾಗಿ ಶೀತ, ಕೆಮ್ಮು, ಕಫದಿಂದ ಬಳಲುತ್ತಿದ್ದರೆ ಮತ್ತು ಪ್ರತಿದಿನ ಬದಲಾಗುವ ಹವಾಮಾನ ನಿಮ್ಮ ದೇಹದ ಮೇಲೆ ಪರಿಣಾಮ ಬೀರಿ ಅಸ್ವಸ್ಥತೆಯನ್ನು ಉಂಟುಮಾಡುತ್ತಿದೆ ಎಂದರೆ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ ಎಂದರ್ಥ.
ನಿರಂತರ ಆಯಾಸ ಕೆಲವರಿಗೆ ಸಣ್ಣ ಕೆಲಸ ಮಾಡಿದರೂ ಆಯಾಸವಾಗುತ್ತದೆ. 10 ಮೆಟ್ಟಿಲನ್ನು ಹತ್ತಿದರೂ ಏದುಸಿರು ಬಿಡುತ್ತಾ ಸುಸ್ತು ಎನ್ನುತ್ತಾರೆ. ಈ ರೀತಿಯ ಲಕ್ಷಣ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂದಿದೆ ಎಂದು ತೋರಿಸುತ್ತದೆ. ನಿಮ್ಮ ದೇಹ ಆಂತರಿಕವಾಗಿ ರೋಗದ ವಿರುದ್ಧ ಹೋರಾಡಲು ಅಶಕ್ತವಾದಾಗ ನೀವು ಮಾಡುವ ಸಣ್ಣ ಕೆಲಸವೂ ನಿಮಗೆ ಸುಸ್ತು ಎನಿಸುತ್ತದೆ.
ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳು ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ ಎನ್ನುವುದನ್ನು ನಿಮ್ಮ ಹೊಟ್ಟೆಯೂ ಹೇಳುತ್ತದೆ. ಕೆಲವರಿಗೆ ಪ್ರತಿದಿನ ತಿನ್ನುವುದಕ್ಕಿಂತ ಸ್ವಲ್ಪ ಬೇರೆಯಾವುದಾದರೂ ಆಹಾರ ತಿಂದರೂ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಒಂದು ದಿನದ ಆಹಾರ ವ್ಯತ್ಯಾಸವನ್ನೂ ಅರಗಿಸಿಕೊಳ್ಳದ್ದಷ್ಟು ದೇಹ ದುರ್ಬಲಗೊಳ್ಳುತ್ತದೆ. ಆಗಾಗ ಕಾಣಿಸಿಕೊಳ್ಳುವ ಹೊಟ್ಟೆ ನೋವು, ವಾಂತಿ ಅಥವಾ ವಾಕರಿಕೆಯ ಅನುಭವ, ಮಲಬದ್ಧತೆ ಈ ರೀತಿಯ ಲಕ್ಷಣಗಳು ನಿಮಗೆ ರೋಗ ನಿರೋಧಕ ಶಕ್ತಿ ಕುಂದಿದೆ ಎನ್ನುವುದನ್ನು ತೋರಿಸುತ್ತದೆ.
ಕೆಲವರಿಗೆ ಇನ್ನೂ ಬೇರೆ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಅಥವಾ ಮೇಲೆ ತಿಳಿಸಿದ ಲಕ್ಷಣಗಳು ಬೇರೆ ರೀತಿಯ ಅನಾರೋಗ್ಯದ ಲಕ್ಷಣಗಳೂ ಆಗಿರಬಹುದು. ಆದ್ದರಿಂದ ಈ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು.
ಆದರೆ ನೆನಪಿಡಿ ಸರಿಯಾದ ನಿದ್ದೆ, ಪೌಷ್ಠಿಕ ಆಹಾರ, ನಿಯಮಿತ ಯೋಗಾಭ್ಯಾಸ ನಿಮ್ಮ ದೇಹವನ್ನು ಆರೋಗ್ಯಯುತವಾಗಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ, ಜತೆಗ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.
ಇದನ್ನೂ ಓದಿ:
Health Care Tips: ಸೀತಾಫಲ ತಿಂದರೆ ಆರೋಗ್ಯದಲ್ಲಿ ಅನೇಕ ಬದಲಾವಣೆಗಳಾಗುತ್ತದೆ; ಅಪಾಯದ ಬಗ್ಗೆ ಇರಲಿ ಎಚ್ಚರ
Published On - 12:40 pm, Tue, 28 December 21