AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Happiness Strategies: ಸದಾ ಖುಷಿಯಾಗಿರಲು ಈ ಮೂರು ನಿಯಮಗಳನ್ನು ಅಳವಡಿಸಿಕೊಳ್ಳಿ: ನಗುತ್ತಿರಿ

ಲೈಫ್​ ಈಸ್​ ಬ್ಯೂಟಿಫುಲ್. ಅಂದುಕೊಂಡ ಹಾಗೇ ಎಲ್ಲವೂ  ನಡೆಯಬೇಕು ಎಂದಾಗಲ್ಲ. ಕೈಮೀರಿದ ಘಟನೆಗಳಿಗೂ ಹೊಂದಿಕೊಂಡಾಗ ಬದುಕು ಸುಂದರ ಎನಿಸುವುದು. ಹೀಗಾಗಿ ಸಣ್ಣ ಸಣ್ಣ ಕಿರಿಕಿರಿಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಅದರ ಬದಲು ಖುಷಿಯ ವಿಚಾರಗಳನ್ನು ಹುಡುಕಿ.

Happiness Strategies: ಸದಾ ಖುಷಿಯಾಗಿರಲು ಈ ಮೂರು ನಿಯಮಗಳನ್ನು ಅಳವಡಿಸಿಕೊಳ್ಳಿ: ನಗುತ್ತಿರಿ
ಪ್ರಾತಿನಿಧಿಕ ಚಿತ್ರ
TV9 Web
| Updated By: Pavitra Bhat Jigalemane|

Updated on:Dec 30, 2021 | 6:21 PM

Share

ಎಲ್ಲಾ ದಿನವೂ ಒಂದೇ ರೀತಿ ಇರುವುದಿಲ್ಲ. ಕಿರಿಕಿರಿ, ಒತ್ತಡದ ಬದುಕು, ಕೆಲವು ಸನ್ನಿವೇಷಗಳು ನಗುವುದನ್ನೇ ಮರೆಸಿಬಿಡುತ್ತವೆ. ಬೆಳಗ್ಗೆ ನಡೆದ ಯಾವುದೋ ಘಟನೆಗೆ  ಇಡೀ ದಿನ ಕೊರಗುತ್ತೇವೆ ಇದು ಮನಸ್ಸಿನ ಆರೋಗ್ಯಕ್ಕೂ ಒಳ್ಳೆಯದಲ್ಲ. ಸಮಸ್ಯೆಗಳು ನೂರಿದ್ದರೂ ಮುಖದಲ್ಲೊಂದು ಮುಗುಳ್ನಗೆ ಇದ್ದರೆ ನೋವನ್ನು ಮರೆಸಲು ಸಹಾಯ ಮಾಡುತ್ತದೆ. ಕೆಲವೊಮ್ಮೆ ಸಂತೋಷವಾಗಿರುವುದು ಕಷ್ಟ. ಅಂತಹ ಸಂದರ್ಭಗಳಲ್ಲಿ ಯೋಚಿಸುವ ವಿಷಯಗಳನ್ನು ಬದಲಾಯಿಸಿಕೊಂಡರೆ ಅಥವಾ ಅದೇ ವಿಷಯದ ಧನಾತ್ಮಕ ಅಂಶವನ್ನು ಪರಿಗಣಿಸಿ ಯೋಚಿಸಿದರೆ ನೆಮ್ಮದಿಯಿಂದ ಬದುಕಬಹುದು. ಹೀಗಾಗಿ ಖುಷಿಯ ಬದುಕು ನಮ್ಮ ಕೈನಲ್ಲೇ ಇದೆ. ಜೀವನದಲ್ಲಿ ಎದುರಾಗುವ ಸಮಸ್ಯೆಗಳು, ಸವಾಲುಗಳನ್ನು ಎದುರಿಸಿಯೂ ಸಂತೋಷವಾಗಿರಬಹುದು. ಇದಕ್ಕೆ ಹಾರ್ವರ್ಡ್​ ಮೆಡಿಕಲ್​ ಸ್ಕೂಲನ್​ನ ತಜ್ಞರು ಸರಳವಾದ ಮೂರು ನಿಯಮಗಳನ್ನು ತಿಳಿಸಿದ್ದಾರೆ. ಅವುಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಂತೋಷವಾಗಿರಬಹುದು ಎಂದು ಸಲಹೆ ನೀಡಿದ್ದಾರೆ.

ಯೋಚನೆಗಳಿಂದ ಹೊರಗೆ ಬನ್ನಿ, ಸಕ್ರಿಯರಾಗಿರಿ ಕೆಲವು ಕೆಟ್ಟ ಘಟನೆಗಳು ಆಳದ ಯೋಚನೆಗೆ ತಳ್ಳಿಬಿಡುತ್ತವೆ. ಅಂತಹ ಯೋಚನೆಗಳಿಗೆ ದಾಸರಾಗದೆ ಅವುಗಳಿಂದ ಹೊರಬಂದು ಸಕ್ರಿಯರಾಗಿರಬೇಕು. ಮಾನಸಿಕ ಖಿನ್ನತೆಯಿಂದ ಯಾವ ಸಮಸ್ಯೆಗಳೂ ಪರಿಹಾರವಾಗಲು ಸಾಧ್ಯವಿಲ್ಲ. ಅದೇ ರೀತಿ ಖಿನ್ನತೆಗೆ ಒಳಗಾದ ವ್ಯಕ್ತಿಗೆ ಯಾವ ವೈದ್ಯರ ಮಾತ್ರೆಯೂ ಗುಣಮುಖರನ್ನಾಗಿ ಮಾಡಲು ಸಾಧ್ಯವಿಲ್ಲ. ಯೋಚನೆಯಲ್ಲಿ ಸಿಲುಕಿ  ಪರದಾಡುವುದಕ್ಕಿಂತ ಅದರಿಂದ ಹೊರಬಂದು ಸಕ್ರಿಯರಾಗಿರಿ. ನಿಮ್ಮನ್ನು ನೀವು ನಿಮಿಷ್ಟದ ಯಾವುದಾದರೂ ಹವ್ಯಾಸಕ್ಕೆ ಒಡ್ಡಿಕೊಳ್ಳಿ. ಈಜು, ಆಟ, ಸ್ನೇಹಿತರೊಂದಿಗಿನ ಮಾತುಕತೆ, ಪೇಟಿಂಗ್​ ಹೀಗೆ ನಿಮಗೆ ಇಷ್ಟವಾದ ಕೆಲಸದಲ್ಲಿ ತೊಡಗಿಕೊಳ್ಳಿ ಇದು ನಿಮಗೆ ಬೇಸರಿಸಿದ, ಅಸಮಧಾನ ಮೂಡಿಸಿದ ಯೋಚನೆಯಿಂದ ದೂರತಳ್ಳಲು ಸಹಾಯ ಮಾಡುತ್ತದೆ.  ಪ್ರತಿದಿನ ವ್ಯಾಯಾಮ ಅಥವಾ ಏರೋಬಿಕ್ಸ್​ ಅಭ್ಯಾಸ ಮಾಡಿಕೊಳ್ಳಿ ಇದು ನಿಮ್ಮನ್ನು ಒತ್ತಡದಿಂದ ಮುಕ್ತಗೊಳಿಸುತ್ತದೆ. ನಿಮ್ಮ ಮಾನಸಿಕ, ದೈಹಿಕ ಆರೋಗ್ಯವನ್ನೂ ಉತ್ತಮಗೊಳಿಸುತ್ತದೆ. ಮುಖ್ಯವಾಗಿ ಅತಿಯಾಗಿ ಯಾವ ವಿಷಯಗಳಿಗೂ ಒತ್ತು ನೀಡಿ ಯೋಚಿಸಬೇಡಿ. ಅತಿ ಎನ್ನುವುದು ಎಂದಿಗೂ ಅಪಾಯವೇ. ಇದು ನಿಮ್ಮ ಮೆದುಳಿನ ಮೇಲೆಯೂ ಪರಿಣಾಮ ಬೀರಲಿದೆ. ಹೀಗಾಗಿ ಕೆಟ್ಟ, ಅಸಮಧಾನ ಮೂಡಿಸುವ ಯೋಚನೆಗಳಿಂದ ಹೊರಬಂದು, ಯಾವುದಾದರೊಂದು ಕೆಲಸದಲ್ಲಿ ತೊಡಗಿಸಿಕೊಂಡು ಖುಷಿಯಾಗಿರಿ. ನಡೆದು ಹೋದ ವಿಷಯಗಳಿಗೆ ವಿಷಾದಿಸಬೇಡಿ.

ಲೈಫ್​ ಈಸ್​ ಬ್ಯೂಟಿಫುಲ್​: ಸಣ್ಣ ವಿಷಯಗಳನ್ನೂ ಆನಂದಿಸಿ ಲೈಫ್​ ಈಸ್​ ಬ್ಯೂಟಿಫುಲ್. ಅಂದುಕೊಂಡ ಹಾಗೇ ಎಲ್ಲವೂ  ನಡೆಯಬೇಕು ಎಂದಾಗಲ್ಲ. ಕೈಮೀರಿದ ಘಟನೆಗಳಿಗೂ ಹೊಂದಿಕೊಂಡಾಗ ಬದುಕು ಸುಂದರ ಎನಿಸುವುದು. ಹೀಗಾಗಿ ಸಣ್ಣ ಸಣ್ಣ ಕಿರಿಕಿರಿಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಅದರ ಬದಲು ಖುಷಿಯ ವಿಚಾರಗಳನ್ನು ಹುಡುಕಿ. ಪ್ರತಿದಿನ ಪ್ರತಿಕ್ಷಣ ನಗಲು ನೂರಾರು ವಿಷಯಗಳಿರುತ್ತವೆ. ಸಣ್ಣಸಣ್ಣ ವಿಷಯಗಳನ್ನೂ ಅನುಭವಿಸಿ ನಗುವುದನ್ನು ಅಭ್ಯಸಿಸಿಕೊಳ್ಳಿ. ಚಿಕ್ಕವರಿರುವಾಗ ರೂಡಿಸಿಕೊಂಡ ಅನೇಕ ಕೆಲಸಗಳು ನಮಗೆ ಖುಷಿ ನೀಡುತ್ತವೆ. ಅಂತಹ ಕೆಲಸಗಳೆಡೆಗೆ ಗಮನ ನೀಡಿ. ಆಗ ನಿಮ್ಮ ಮನಸ್ಸಿನ ದುಗುಡ, ಅಸಮಧಾನಕ್ಕೆ ಪೂರ್ಣವಿರಾಮ ಇಡಬಹುದು. ಉದಾಹರಣೆಗೆ ಹಕ್ಕಿಗಳಿಗೆ ನೀರು, ಕಾಳುಗಳನ್ನು ಇಡುವುದು, ಗಿಡಗಳಿಗೆ ನೀರುಣಿಸುವುದು ಹೀಗೆ ಸಣ್ಣ ಸಣ್ಣ ಕೆಲಸದಲ್ಲೂ ಖುಷಿಯನ್ನು ಕಾಣಿ. ಇದು ನಿಮ್ಮ ಒತ್ತಡದ ಬದುಕಿಗೆ ಒಂದಷ್ಟು ಖುಷಿ ನೀಡುತ್ತದೆ.  ನೀವು ಕೆಲಸಕ್ಕೆ ಹೊರಗೆ ಹೋಗುವವರಾದರೆ ಬಿಡುವಿನ ವೇಳೆಯಲ್ಲಿ ಈ ಅಭ್ಯಾಸಗಳನ್ನು ರೂಡಿಸಿಕೊಳ್ಳಿ.

ಅತಿಯಾದ ಆಸೆಗಳಿಗೆ ಕಡಿವಾಣವಿರಲಿ ಅತಿ ಎನ್ನುವುದು ಎಲ್ಲವೂ ಅಪಾಯವನ್ನೇ ತಂದೊಡ್ಡುತ್ತದೆ. ಹೀಗಾಗಿ ನಿಮ್ಮ ಅತಿಯಾದ ಆಸೆಗಳಿಗೆ ಮಿತಿಯಿರಲಿ.  ವಸ್ತುಗಳು ನೀಡುವ ಖುಷಿಗಿಂತ ನಂಬಿಕೆ, ವಿಶ್ವಾಸ, ಪ್ರೀತಿ ಜೀವನದಲ್ಲಿ ಹೆಚ್ಚು ಖುಷಿ ನೀಡುತ್ತವೆ. ಹೀಗಾಗಿ ಅದು ಬೇಕು, ಇದೂ ಬೇಕು ಎನ್ನುವ ಮಾತಿನ ಯೋಚನೆಗೆ ಕಡಿವಾಣವಿರಲಿ. ಅನಗತ್ಯ ವಸ್ತುಗಳನ್ನು ಖರೀದಿಸಿದರೆ ನಷ್ಟವೇ ಹೊರತು ಎಂದಿಗೂ ಅದು ಖುಷಿ ಕೊಡುವುದಿಲ್ಲ. ಅದೇ ಹಣವನ್ನು ಕೂಡಿಟ್ಟು ಅವಶ್ಯಕತೆಯಿದ್ದಾಗ ಬಳಸಿಕೊಳ್ಳುವಂತೆ ಮಾಡಿಕೊಳ್ಳಿ. ಇದರಿಂದ ಜೀವನದಲ್ಲಿ ಹಣದ ಭದ್ರತೆ ಇರುತ್ತದೆ. ಜೀವನದಲ್ಲಿ ಯಾವುದಕ್ಕೆ ನಿಯಂತ್ರಣವಿರುವುದಿಲ್ಲವೊ ಅವು ಯಾವಾಗಲೂ ಒತ್ತಡವನ್ನೇ ಉಂಟುಮಾಡುತ್ತದೆ. ಹೀಗಾಗಿ ಆಸೆಗಳಿಗೆ ಮಿತಿಯಿರಲಿ ಬದುಕು ಆಗ ಖುಷಿಯಾಗಿದೆ ಎನಿಸುತ್ತದೆ.

Published On - 8:30 am, Thu, 30 December 21