Taapsee Pannu: ಮದುವೆಗೆ ಸಿದ್ಧವಾಗಿರುವ ತಾಪ್ಸಿ ಪನ್ನು ಫಿಟ್​ನೆಸ್​ ಗುಟ್ಟು ಇಲ್ಲಿದೆ

|

Updated on: Feb 28, 2024 | 7:14 PM

ಬಾಲಿವುಡ್ ನಟಿ ತಾಪ್ಸಿ ಪನ್ನು ಮದುಮಗಳಾಗಲು ಸಿದ್ಧತೆ ನಡೆಸಿದ್ದಾರೆ. ಸದ್ಯದಲ್ಲೇ ಅವರು ತಮ್ಮ ಬಹುಕಾಲದ ಪ್ರಿಯಕರ ಅವರೊಂದಿಗೆ ಮದುವೆಯಾಗಲಿದ್ದಾರೆ. 37 ವರ್ಷವಾದರೂ ತಮ್ಮ ದೇಹ ಸೌಂದರ್ಯವನ್ನು ಮೊದಲಿನಂತೆಯೇ ಕಾಪಾಡಿಕೊಂಡಿರುವ ತಾಪ್ಸಿ ಪನ್ನು ಅವರ ಫಿಟ್​ನೆಸ್​ ರಹಸ್ಯ ಇಲ್ಲಿದೆ.

Taapsee Pannu: ಮದುವೆಗೆ ಸಿದ್ಧವಾಗಿರುವ ತಾಪ್ಸಿ ಪನ್ನು ಫಿಟ್​ನೆಸ್​ ಗುಟ್ಟು ಇಲ್ಲಿದೆ
ತಾಪ್ಸಿ ಪನ್ನು
Image Credit source: facebook
Follow us on

ತಾಪ್ಸೀ ಪನ್ನು ಬಾಲಿವುಡ್ ಮಾತ್ರವಲ್ಲದೆ ತೆಲುಗು ಮತ್ತು ತಮಿಳು ಚಲನಚಿತ್ರಗಳಲ್ಲಿ ಕೂಡ ನಟಿಸಿರುವ ನಟಿ. ಫಿಲ್ಮ್‌ಫೇರ್ ಪ್ರಶಸ್ತಿಗಳು ಸೇರಿದಂತೆ ಹಲವು ಅವಾರ್ಡ್​ಗಳನ್ನು ಪಡೆದಿರುವ ತಾಪ್ಸಿ ಪನ್ನು ಮಾಡೆಲಿಂಗ್​ನೊಂದಿಗೆ ತಮ್ಮ ವೃತ್ತಿಯನ್ನು ಆರಂಭಿಸಿದರು. 2010ರ ತೆಲುಗು ಚಲನಚಿತ್ರ ಜುಮ್ಮಂಡಿ ನಾದಂ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು. ಬಳಿಕ ಸಾಲು ಸಾಲಾಗಿ ತಮಿಳು, ಹಿಂದಿ ಸಿನಿಮಾಗಳಲ್ಲಿ ಕೂಡ ನಟಿಸಿದರು. ಈ ಮುದ್ದು ಚೆಲುವೆ ಈಗ ಮದುವೆಗೆ ರೆಡಿಯಾಗಿದ್ದಾರೆ. ತಾಪ್ಸಿ ಪನ್ನು ನೀಡಿರುವ ಫಿಟ್​ನೆಸ್ ಸಲಹೆಗಳು ಇಲ್ಲಿವೆ…

ತಾಪ್ಸೀ ಪನ್ನು ಮುಂಜಾನೆ ಬೇಗ ಏಳುತ್ತಾರೆ. ಮೊದಲು ಸೂರ್ಯ ನಮಸ್ಕಾರ ಮತ್ತು ಪ್ರಾಣಾಯಾಮದೊಂದಿಗೆ ತನ್ನ ದಿನವನ್ನು ಪ್ರಾರಂಭಿಸುತ್ತಾರೆ. ಬಳಿಕ ವ್ಯಾಯಾಮ, ಜಾಗಿಂಗ್ ಮಾಡುತ್ತಾರೆ. ರಜೆ ಇದ್ದರೆ ದೀರ್ಘ ಜಾಗಿಂಗ್ ಮಾಡುತ್ತಾರೆ. ಶೂಟಿಂಗ್ ಇತ್ಯಾದಿ ಕೆಲಸಗಳಿದ್ದರೆ ಚುರುಕಾದ ವಾಕಿಂಗ್ ಸೆಷನ್‌ಗಳನ್ನು ಮಾಡುತ್ತಾರೆ.

ಇದನ್ನೂ ಓದಿ: ಲೇಡಿ ಸೂಪರ್ ಸ್ಟಾರ್ ನಯನತಾರಾ ಫಿಟ್‌ನೆಸ್ ರಹಸ್ಯವೇನು?

ತಾಪ್ಸೀ ಪನ್ನು ಅವರು ಮುಂಬೈನಲ್ಲಿ ಪ್ರತಿದಿನ ಸ್ಕ್ವ್ಯಾಷ್ ಆಡುತ್ತಾರೆ ಎನ್ನುವ ಸಂಗತಿ ಅನೇಕ ಜನರಿಗೆ ತಿಳಿದಿಲ್ಲ. ವಾರಕ್ಕೆ 2 ಅಥವಾ 3 ಬಾರಿ ಈಜುವ ಅಭ್ಯಾಸವನ್ನು ಕೂಡ ಇಟ್ಟುಕೊಂಡಿದ್ದಾರೆ. ಒಟ್ಟಾರೆ ತಮ್ಮ ದೇಹವನ್ನು ಸದಾ ಸಕ್ರಿಯವಾಗಿ ಇಟ್ಟುಕೊಂಡಿರುತ್ತಾರೆ. ತುರ್ತು ಕಾರಣ ಇಲ್ಲದಿದ್ದರೆ ಅಥವಾ ರಾತ್ರಿ ಶೂಟಿಂಗ್ ಇಲ್ಲದಿದ್ದರೆ ತಾಪ್ಸಿ ಪನ್ನು ರಾತ್ರಿ ಬೇಗನೆ ಮಲಗುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ದಿನವೂ 7ರಿಂದ 9 ಗಂಟೆಗಳ ಕಾಲ ನಿದ್ರೆ ಮಾಡಲು ಪ್ರಯತ್ನಿಸುತ್ತಾರೆ. ದಿನವೂ ಒಂದೇ ಸಮಯಕ್ಕೆ ಏಳಲು ಪ್ರಯತ್ನಿಸುತ್ತಾರೆ.

ತಾಪ್ಸಿ ಪನ್ನು ಪ್ರತಿದಿನ ಜಿಮ್‌ಗೆ ಹೋಗುತ್ತಾರೆ. ದೇಹದ ಎಲ್ಲ ಭಾಗದ ಮೇಲೆ ತೀವ್ರವಾಗಿ ಕೇಂದ್ರೀಕರಿಸುವ ವರ್ಕ್​ಔಟ್ ಮಾಡುತ್ತಾರೆ. ಜಿಮ್​ನಲ್ಲಿ ಪ್ರತಿದಿನ 1 ಗಂಟೆ ವರ್ಕ್​ಔಟ್ ಮಾಡುತ್ತಾರೆ. ವಾರದಲ್ಲಿ 6 ದಿನ ಕೆಲಸ ಮಾಡುತ್ತಾರೆ. ಹಗ್ಗದ ವ್ಯಾಯಾಮದಿಂದ ಹಿಡಿದು ವೈಮಾನಿಕ ಭಂಗಿಗಳವರೆಗೆ ತಾಪ್ಸಿ ಪನ್ನುಗೆ ಎಲ್ಲವೂ ತಿಳಿದಿದೆ. ಅವರು ಕಾರ್ಡಿಯೋ ವ್ಯಾಯಾಮಗಳ ದೊಡ್ಡ ಅಭಿಮಾನಿ.

ಇದನ್ನೂ ಓದಿ: Raw Milk Face Packs: ಕಾಂತಿಯುಕ್ತ ತ್ವಚೆಗೆ ಹಸಿ ಹಾಲಿನ ಈ 5 ಫೇಸ್​ಪ್ಯಾಕ್ ಬಳಸಿ

ದಿನವೂ ಮೆಂತ್ಯ, ಅರಿಶಿನ ಮತ್ತು ಶುಂಠಿಯೊಂದಿಗೆ ಫಿಲ್ಟರ್ ಮಾಡದ ಆಪಲ್ ಸೈಡರ್ ವಿನೆಗರ್ ಅನ್ನು ಸೇವಿಸುತ್ತಾರೆ. ಏಕೆಂದರೆ ಇದು ಸ್ನಾಯು ನೋವಿನ ಸಮಸ್ಯೆಗಳನ್ನು ಎದುರಿಸಲು ಸಹಾಯ ಮಾಡುವ ಶಕ್ತಿಯುತ ಏಜೆಂಟ್‌ಗಳನ್ನು ಹೊಂದಿದೆ. ಅವರು ಮನೆಯಲ್ಲಿ ಮಾಡಿದ ಆಹಾರವನ್ನು ಸೇವಿಸಲು ಹೆಚ್ಚು ಇಷ್ಟ ಪಡುತ್ತಾರೆ. ಬೆಳಗಿನ ಉಪಾಹಾರ ಮತ್ತು ಊಟಕ್ಕೆ ಆಯಾ ಸೀಸನ್​ನಲ್ಲಿ ಸಿಗುವ ತರಕಾರಿಗಳೊಂದಿಗೆ ಮೊಟ್ಟೆ, ಜೋಳದ ರೊಟ್ಟಿ ಮತ್ತು ರಾತ್ರಿಯ ಊಟಕ್ಕೆ ಅನ್ನ ಅಥವಾ ತರಕಾರಿಗಳೊಂದಿಗೆ ರೊಟ್ಟಿ ಹಾಗೂ ದಾಲ್ ಅನ್ನು ಸೇವಿಸುತ್ತಾರೆ.

ಅಂದಹಾಗೆ, ತಾಪ್ಸಿ ಪನ್ನು ತಮ್ಮ ದೀರ್ಘಕಾಲದ ಗೆಳೆಯ ಮಥಿಯಾಸ್ ಬೋ ಅವರೊಂದಿಗೆ ಮಾರ್ಚ್‌ನಲ್ಲಿ ಮದುವೆಯಾಗಲಿದ್ದಾರೆ. ಮದುವೆಯು ಕ್ರಿಶ್ಚಿಯನ್ ಮತ್ತು ಸಿಖ್ ಆಚರಣೆಗಳ ಮಿಶ್ರಣವಾಗಿರಲಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ