ನೀವು ಬಹಳ ಹೊತ್ತಿನಿಂದಲೂ ಹಾಸಿಗೆಯ ಮೇಲೆ ನಿದ್ದೆ ಬಾರದಿರುವುದು ಆಥವಾ ತಡವಾಗಿ ನಿದ್ದೆ ಬರುವುದು, ಬೆನ್ನುನೋವು ಇನ್ನಿತರ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಮ್ಮ ಹಾಸಿಗೆಯನ್ನು ಬದಲಾಯಿಸುವ ಸಮಯ ಬಂದಿದೆ ಎಂದರ್ಥ.
ನಿಮ್ಮ ಹಾಸಿಗೆ ಎಷ್ಟು ಹಳೆಯದು?
ಮೊದಲಿಗೆ, ನಿಮ್ಮ ಹಾಸಿಗೆ ಎಷ್ಟು ಹಳೆಯದು ಎಂಬುದನ್ನು ನೀವೇ ತಿಳಿದುಕೊಳ್ಳವುದು ಅತ್ಯಂತ ಅಗತ್ಯವಾಗಿದೆ. ನೀವು ಹಾಸಿಗೆಯನ್ನು ಖರೀದಿಸಿ ಹತ್ತು ವರ್ಷಗಳು ಕಳೆದಿದ್ದರೆ ಅದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಕನಿಷ್ಟ ಏಳು ವರ್ಷಗಳ ಕಾಲ ಒಂದೇ ಹಾಸಿಗೆಯನ್ನು ಬಳಸುವುದು ಸೂಕ್ತ.
ವರ್ಷಗಳು ಕಳೆದಂತೆ ನೀವು ಬಳಸುವ ಹಾಸಿಗೆಯ ಗುಣಮಟ್ಟವು ಕಳೆದು ಹೋಗುವುದರಿಂದ ನಿಮ್ಮ ದೇಹದ ಭಾಗಗಳಲ್ಲಿ ತೋಳುಗಳು, ಕಾಲುಗಳು ನೋವು ಬರುವ ಸಾಧ್ಯತೆ ಹೆಚ್ಚಿದೆ. ಇದರಿಂದಾಗಿ ನಿದ್ರಾಹೀನತೆಯು ಉಂಟಾಗುತ್ತದೆ.
ಕಲೆಗಳು ಅಥವಾ ವಾಸನೆ:
ನಿಮ್ಮ ಹಾಸಿಗೆ ಕಲೆಗಳು ಅಥವಾ ಅಸಹ್ಯ ವಾಸನೆಯನ್ನು ಹೊಂದಿದೆಯೇ? ಒಂದು ನೀವು ನಿಮ್ಮ ಹಾಸಿಗೆಯನ್ನು ಸ್ವಚ್ಚಗೊಳಿಸಬೇಕು. ಹಾಸಿಗೆ ತುಂಬಾ ಹಳೆಯದಾಗಿದ್ದರೆ ಬದಲಾಯಿಸಿ. ಯಾಕೆಂದರೆ ಬಹಳಷ್ಟು ಬ್ಯಾಕ್ಟೀರಿಯಾ, ಧೂಳು ಮತ್ತು ದೇಹದ ದ್ರವಗಳನ್ನು ಹಾಸಿಗೆ ಹೀರಿಕೊಂಡಿರುತ್ತದೆ. ಇದು ನಿಮ್ಮ ದೇಹದಲ್ಲಿ ಸೋಂಕು ಹರಡಲು ಕಾರಣವಾಗಬಹುದು.
ಬ್ಯಾಕ್ಟೀರಿಯಾ:
ಇದಲ್ಲದೆ, ಒದ್ದೆಯಾದ ಕೂದಲಿನೊಂದಿಗೆ ಮಲಗುವುದು ತುಂಬಾ ಅನೈರ್ಮಲ್ಯ. ಯಾಕೆಂದರೆ ನಿಮ್ಮ ಒದ್ದೆ ಕೂದಲಿನ ನೀರನ್ನು ದಿಂಬು ಹಾಗೂ ಹಾಸಿಗೆ ಹೀರಿಕೊಳ್ಳುತ್ತದೆ. ಇದರಿಂದಾಗಿ ಬ್ಯಾಕ್ಟೀರಿಯಾಗಳ ಸಂತಾನೋತ್ಪತ್ತಿಗೆ ಕಾರಣವಾಗಬಹುದು. ಬೆವರು, ಸತ್ತ ಚರ್ಮದ ಕೋಶಗಳು ಮತ್ತು ತೈಲಗಳು ನಿಮ್ಮ ಹಾಸಿಗೆಯಲ್ಲಿ ಉಳಿದುಕೊಳ್ಳುತ್ತದೆ. ಇದರಿಂದಾಗಿ ವಾಸನೆಯ ಜೊತೆಗೆ ಬ್ಯಾಕ್ಟೀರಿಯಾಗಳು ಉಂಟಾಗಲು ಕಾರಣವಾಗುತ್ತದೆ.
ಇದನ್ನು ಓದಿ: ರಾತ್ರಿ ವೇಳೆ ಒದ್ದೆ ಕೂದಲಿನೊಂದಿಗೆ ಎಂದಿಗೂ ಮಲಗಬೇಡಿ
ಬೆನ್ನು ನೋವು:
ಮೆತ್ತನೆಯ ಹಾಸಿಗೆಯು ಒಳ್ಳೆಯ ನಿದ್ದೆಯನ್ನು ನೀಡುತ್ತದೆ. ಅದರಿಂದ ಉತ್ತಮ ಗುಣ ಮಟ್ಟದ ಮೆತ್ತನೆಯ ಮೃದುವಾದ ಹಾಸಿಗೆಯನ್ನು ಆಯ್ಕೆ ಮಾಡುವುದು ಅತ್ಯಂತ ಅಗತ್ಯವಾಗಿದೆ. ಇಲ್ಲದಿದ್ದರೆ ಸರಿಯಾಗಿ ನಿದ್ದೆ ಬರದೇ ಇರುವುದು ಹಾಗೂ ಬೆನ್ನು ನೋವಿನಂತಹ ಕಾಯಿಲೆಗೆ ಕಾರಣವಾಗಬಹುದು.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:11 pm, Sun, 4 December 22